ಚಂದ್ರಾವತಿ

ಬಂಗಾಳದ ಜನಪ್ರಿಯ ಕವಿಯಿತ್ರಿ ಚಂದ್ರಾವತಿ.

ಕವಿಯಿತ್ರಿಯ ಹಿನ್ನಲೆ

ಈಕೆ ಪೂರ್ವ ಬಂಗಾಳಕ್ಕೆ ಸೇರಿದವಳು. ಚಂದ್ರಾವತಿಯು ಬಂಗಳದ ಖ್ಯಾತ ಲೇಖಕ ಬನ್ಸಿದಾಸನ ಮಗಳಾಗಿದ್ದುದು, ಈಕೆಯ ದುರಂತ ಪ್ರೇಮ ಪ್ರಕರಣ,ಪರಿಶುದ್ದ ನದಡುವಳಿಕೆ ಮತ್ತು ಕರುಣಾಜನಕ ಅಂತ್ಯ ಈ ಎಲ್ಲ ಅಂಶಗಳಿಂದಾಗಿ ಈಕೆಯ ಬದುಕು,ಬರಹ ಸಹಿತ್ಯ ಪ್ರಿಯರನ್ನು ಹೆಚಾಗಿ ಆಕರ್ಷಿಸಿದೆ. ಬಹಳ ಕಲಾದವರೆಗೆ ಈಕೆಯ ಹೆಸರು ವಿದ್ಯಾವಂತ ವರ್ಗದಲ್ಲಿ ಪ್ರಚಾರ ಪಡೆದಿರಲಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಈಕೆಯ ಜನಪ್ರಿಯತೆ ಅಪಾರ. ಮಿಮೆನ್ ಸಿಂಗ್ ಜಿಲ್ಲೆಯ ದೋಣಿಕರರು ಆಕೆಯ ಹಾಡುಗಳನ್ನು ಇಂದಿಗೂ ಮರೆತಿಲ್ಲ. ಬಂಗಾಳದಲ್ಲಿ ಹಬ್ಬ ಹರಿದಿನ್ನಗಳಲ್ಲಿ ಎಲ್ಲರ ನಾಲಗೆಯ ಮೇಲು ಚಂದ್ರಾವತಿಯ ಹಾಡುಗಳಿರುತ್ತವೆ, ಬಂಗಾಳದ ಮದುವೆಗಳು ಚಂದ್ರವತಿಯ ಹಾಡುಗಳಿಲದೆ ಶೋಭಿಸುವುದಿಲ್ಲ ಎಂಬ ಮತುಗಳು ಚಂದ್ರಾವತಿಯ ಸಹಿತ್ಯಕ್ಕೆ ಇಂದಿಗು ಇರುವ ಜನಪ್ರಿಯತೆ ಅನ್ನು ಸೂಚಿಸುತವೆ. ಬಾಬು ಚಂದ್ರಾಕುಮಾರ ಡೆ ಹೇಳುವಂತೆ ಆಕೆಯ ಹಾ ಡುಗಳು ಸಂಪೂರ್ಣ ಮಿಮೆನ್ ಸಿಂಗ್ ಜಿಲ್ಲೆಯನ್ನು ಆಕ್ರಮಿಸಿಕೊಂಡಿವೆ. ಮಿಮೆನ್ ಸಿಂಗ್ ಜಿಲ್ಲೆಯ ಪಟವಾರಿ ಎಂಬ ಚಿಕ್ಕ ಹಳ್ಳಿ ಬನ್ಸಿದಾಸನ ಸ್ಥಳ.ಜಾದವಾನಂದ ಮತ್ತು ಅಂಜನಾ ಆತನ ತಾಯಿ ತಂದೆಯರು. ಬಡತನ ಬನ್ಸಿದಾಸನನ್ನು ಕಾಡುತ್ತಿತ್ತು. ಮಾನಸದೇವಿಯನ್ನು ಕುರಿತು ಹಾಡುವುದರಿಂದಲೇ ಅವನು ತನ್ನ ಕುಟುಂಬವನ್ನು ಸಾಕಬೇಕಾಗಿತ್ತು. ಮಾನಸದೇವಿಯ ಮೇಲೆ ಈತ ರಚಿಸಿರುವ ಕೃತಿ ಬಂಗಾಳದಾದ್ಯಂತ ಪ್ರಸಿದ್ದವಾಗಿದೆ. ಈ ಮಹಾಕೃತಿಯನ್ನು ರಚಿಸಿರುವ ಚಂದ್ರಾವತಿ ತನ್ನ ತಂದೆಗೆ ಸಹಾಯಮಾಡಿದಳೆಂದು ತಿಳಿದು ಬರುತ್ತದೆ. ಚಂದ್ರಾವತಿ ಬೆಳೆದ ಆವರಣ ಆಕೆಯ ಸಾಹಿತ್ಯಕ ಅಭಿರುಚಿಯ ಬೆಳವಣಿಗೆಗೆ ಪೂರಕನವಾಗಿತ್ತು. ಈಕೆ ಪೂರ್ವ ಬಂಗಾಳಕ್ಕೆ ಸೇರಿದವಳು. ಚಂದ್ರಾವತಿಯು ಬಂಗಳದ ಖ್ಯಾತ ಲೇಖಕ ಬನ್ಸಿದಾಸನ ಮಗಳಾಗಿದ್ದುದು, ಈಕೆಯ ದುರಂತ ಪ್ರೇಮ ಪ್ರಕರಣ,ಪರಿಶುದ್ದ ನದಡುವಳಿಕೆ ಮತ್ತು ಕರುಣಾಜನಕ ಅಂತ್ಯ ಈ ಎಲ್ಲ ಅಂಶಗಳಿಂದಾಗಿ ಈಕೆಯ ಬದುಕು,ಬರಹ ಸಹಿತ್ಯ ಪ್ರಿಯರನ್ನು ಹೆಚಾಗಿ ಆಕರ್ಷಿಸಿದೆ. ಬಹಳ ಕಲಾದವರೆಗೆ ಈಕೆಯ ಹೆಸರು ವಿದ್ಯಾವಂತ ವರ್ಗದಲ್ಲಿ ಪ್ರಚಾರ ಪಡೆದಿರಲಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಈಕೆಯ ಜನಪ್ರಿಯತೆ ಅಪಾರ. ಮಿಮೆನ್ ಸಿಂಗ್ ಜಿಲ್ಲೆಯ ದೋಣಿಕರರು ಆಕೆಯ ಹಾಡುಗಳನ್ನು ಇಂದಿಗೂ ಮರೆತಿಲ್ಲ. ಬಂಗಾಳದಲ್ಲಿ ಹಬ್ಬ ಹರಿದಿನ್ನಗಳಲ್ಲಿ ಎಲ್ಲರ ನಾಲಗೆಯ ಮೇಲು ಚಂದ್ರಾವತಿಯ ಹಾಡುಗಳಿರುತ್ತವೆ, ಬಂಗಾಳದ ಮದುವೆಗಳು ಚಂದ್ರವತಿಯ ಹಾಡುಗಳಿಲದೆ ಶೋಭಿಸುವುದಿಲ್ಲ ಎಂಬ ಮತುಗಳು ಚಂದ್ರಾವತಿಯ ಸಹಿತ್ಯಕ್ಕೆ ಇಂದಿಗು ಇರುವ ಜನಪ್ರಿಯತೆ ಅನ್ನು ಸೂಚಿಸುತವೆ. ಬಾಬು ಚಂದ್ರಾಕುಮಾರ ಡೆ ಹೇಳುವಂತೆ ಆಕೆಯ ಹಾ ಡುಗಳು ಸಂಪೂರ್ಣ ಮಿಮೆನ್ ಸಿಂಗ್ ಜಿಲ್ಲೆಯನ್ನು ಆಕ್ರಮಿಸಿಕೊಂಡಿವೆ.

ವಯ್ಯಕ್ತಿಕ ಜೀವನ

ಮಿಮೆನ್ ಸಿಂಗ್ ಜಿಲ್ಲೆಯ ಪಟವಾರಿ ಎಂಬ ಚಿಕ್ಕ ಹಳ್ಳಿ ಬನ್ಸಿದಾಸನ ಸ್ಥಳ.ಜಾದವಾನಂದ ಮತ್ತು ಅಂಜನಾ ಆತನ ತಾಯಿ ತಂದೆಯರು. ಬಡತನ ಬನ್ಸಿದಾಸನನ್ನು ಕಾಡುತ್ತಿತ್ತು. ಮಾನಸದೇವಿಯನ್ನು ಕುರಿತು ಹಾಡುವುದರಿಂದಲೇ ಅವನು ತನ್ನ ಕುಟುಂಬವನ್ನು ಸಾಕಬೇಕಾಗಿತ್ತು. ಮಾನಸದೇವಿಯ ಮೇಲೆ ಈತ ರಚಿಸಿರುವ ಕೃತಿ ಬಂಗಾಳದಾದ್ಯಂತ ಪ್ರಸಿದ್ದವಾಗಿದೆ. ಈ ಮಹಾಕೃತಿಯನ್ನು ರಚಿಸಿರುವ ಚಂದ್ರಾವತಿ ತನ್ನ ತಂದೆಗೆ ಸಹಾಯಮಾಡಿದಳೆಂದು ತಿಳಿದು ಬರುತ್ತದೆ. ಚಂದ್ರಾವತಿ ಬೆಳೆದ ಆವರಣ ಆಕೆಯ ಸಾಹಿತ್ಯಕ ಅಭಿರುಚಿಯ ಬೆಳವಣಿಗೆಗೆ ಪೂರಕವಾಗಿತ್ತು,ಪೌರಾಣಿಕ ಸಾಹಿತ್ಯದಲ್ಲಿ ಆಕೆಗೆ ಶಿಕ್ಷಣವನ್ನು ಕೊಟ್ಟವರು ತಾಯಿ ಸುಲೋಚನ ತಂದೆ ಬನ್ಸಿ.ಮಾನಸದೇವಿಯ ಉಪಾಸನೆ ಕೂಡ ಆಕೆಯ ಮನೆತನದಲ್ಲಿ ಹರಿದು ಬಂದಿತ್ತು.೧೫೭೫ರಲ್ಲಿ ಪೂರ್ಣವಾದ ಮಾನಸದೇವಿಯನ್ನು ಕುರಿತ ಬನ್ಸಿದಾಸನ ರಚನೆಯಲ್ಲಿ ಚಂದ್ರಾವತಿ ಸಹಕರಿಸಿರುವದನ್ನು ಗಮನಿಸಿ ಪ್ರಾಯಃ ೧೫೪೫ ವೇಳೆಗೆ ಈಕೆ ಜನಸಿದ್ದಿರಬಹುದು ಎನ್ನಲಾಗಿದೆ.ಚಂದ್ರಾವತಿಯ ಪ್ರತಿಭೆ ಹಾಗು ಸೌಂದರ್ಯದ ಖ್ಯಾತಿ ಬಹಳ ದೂರದವರೆಗೆ ಹರಡಿತ್ತು.ಅನೇಕರು ಆಕೆಯನ್ನು ಮದುವೆಯಾಗಲು ಮೊಂದೆ ಬಂದರು.ಆದರೆ ಚಂದ್ರಾವತಿ ಪ್ರತಿಭಾವಂತ ಯುವಕನಾದ ಜಯಚಂದ್ರನಿಗೆ ತನ್ನ ಮನಸ್ಸನ್ನು ತೆತ್ತಿದಳು.ಅವರಿಬ್ಬರು ಚಿಕ್ಕಂದಿನಲ್ಲಿ ಸಹಪಾಟಿಗಳಾಗಿದ್ದರು.ಜಯಚಂದ್ರನೂ ಕವಿತಾಶಕ್ತಿಯನ್ನು ಪಡೆದಿದ್ದನು.ಬನ್ಸಿದಾಸ ರಚಿತ ಪದ್ಮಪುರಾಣದಲ್ಲಿ ಈ ಇಬ್ಬರಿಂದಲೂ ರಚಿತವಾದ ಪದ್ಯಗಳಿವೆ.ಬನ್ಸಿದಾಸನು ಈ ಇಬ್ಬರ ಪ್ರಣಯಭಾವಕ್ಕೆ ನೀರೆರೆದಿದೆ.ಚಂದ್ರಾವತಿ ಹಾಗು ಜಯಚಂದ್ರರ ವಿವಾಹ ನಿಶ್ಚಯವಾಯಿತು.ಅನಂತರ ಜಯಚಂದ್ರನ ಚಂಚಲ ಸ್ವಭಾವ ಬೆಳಕಿಗೆ ಬಂದಿತು.ತೋರಿಕೆಗೆ ಚಂದ್ರಳನ್ನು ಪ್ರೀತಿಸಿದರೂ ಆತ ಒಬ್ಬ ಮಹಾಮದೀಯ ಕನ್ಯೆಯಲ್ಲಿ ಆಸಕ್ತನಾಗಿದ್ದ.ಆಕೆಯ ಸೌಂದರ್ಯ ಎಷ್ಟರ ಮಟ್ಟಿಗೆ ಜಯಚಂದ್ರನನ್ನು ಮರಳುಮಾಡಿತ್ತು ಎಂದರೆ ಮದುವೆಗೆ ನಿಶ್ಚಿತವಾಗಿದ್ದ ದಿನಕ್ಕೆ ಕೆಲವು ದಿನ ಮುಂಚೆ ಆತ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಆಕೆಯನ್ನು ವರಿಸಿದ.

ವಿಧಿಯಾಟ

ಇದು ಚಂದ್ರಾಳ ವ್ಯಕ್ತಿತ್ವಕ್ಕೆ ಬಿದ್ದ ಬಲವಾದ ಪೆಟ್ಟು .ಬದುಕಿನ ಗತಿ ಹೀಗಾದ ಮೇಲೆ ಚಂದ್ರಾ ಆ ಜೀವ ಕನ್ಯಾವ್ರತವನ್ನು ಸ್ವೀಕರಿಸಿ ಪೂಲೆಚಿವಾರಿ ನದಿತ ದಂಡೆಯ ಮೇಲೆ ತನ್ನ ತಂದೆ ಕಟ್ಟಿದ್ದ ಶಿವದೇವಾಲಯದಲ್ಲಿ ಪೂಜೆಯಲ್ಲಿ ನಿರತಳಾಗಿ ತನ್ನ ಬಹುಪಾಲು ಕಾಲವನ್ನು ಕಳೆದಳು.ಬಹಳ ಅಲ್ಪ ಕಾಲದಲ್ಲೇ ಜನಪ್ರೀಯತೆ ಗಳಿಸಿದ ರಾಮಾಯಣವನ್ನು ಆಕೆ ಇಲ್ಲಿ ಬರೆಯಲು ಪ್ರಾರಂಭಿಸಿದಳು.ಬದುಕಿನಲ್ಲಿ ಆಕೆ ದುಃಖ,ನಿರಾಶೆಗಳನ್ನು ಅನುಭವಿಸಿದರಿಂದ ಸೀತೆಯ ದುಃಖವನ್ನು ಚಿತ್ರಿಸುವಲ್ಲಿ ಆರ್ದ್ರತೆ,ಸಹಜತೆ ಇದೆ.ಸೇತೆಯ ದುರಂತ ಕಥೆಗೆ ತನ್ನ ಮನಸ್ಸನ್ನೇ ತೆತ್ತಿದಾಳೆ.ಹಳೆಯದಾದ ಕಥೆಯನ್ನೆ ಈ ಕೃತಿ ಹೇಳಿದರೂ ಆಕೆಯ ನಿರೂಪಣೆಯಲ್ಲಿ ವಿಶಿಷ್ಟ ಕೋಮಲತೆ ಇದೆ ಎಂಬುದನ್ನು ಈಗಾಗಲೆ ವಿಮರ್ಶಕರು ಗಮನಿಸಿದ್ದಾರೆ.ದೃಢಭಕ್ತಿ,ಕಠಿಣವಾದ ಕನ್ಯಾವ್ರತದ ಅನೇಕ ವರ್ಷಗಳು ಕೆಲಮಟ್ಟಿಗೆ ಆಕೆಯ ಮನಸ್ಸಿಗೆ ಶಾಂತಿಯನ್ನು ತಂದವು.ಆದರೆ ಇನ್ನೂ ದುಃಖಕರವಾದ ಒಂದು ಘಟನೆ ಆಕೆಯ ಬದುಕಿನಲ್ಲಿ ಘಟಿಸಿತು.ಜಯಚಂದ್ರನು ಪಶ್ಚಾತಾಪಗೊಂಡ ಆಕೆಯ ಕ್ಷಮೆಯಾಚಿಸಿ ಹಾಗೂ ಒಮ್ಮೆ ಆಕೆಯನ್ನು ಕಾಣಲು ಅನುಮತಿಗಾಗಿ ಬೇಡಿ ಒಂದು ಪತ್ರವನ್ನು ಬರೆದ.ಚಂದ್ರಾವತಿಯನ್ನು ಕುರಿತ ಲಾವಣಿ ಆ ಪತ್ರವನ್ನು ಹೀಗೆ ನಮ್ಮ ಮುಂದಿಡುತ್ತದೆ."ನನ್ನ ಪ್ರೀತಿಯ ಚಂದ್ರಾ,ದಯವಿಟ್ಟು ನನ್ನ ಮಾತು ಕೇಳು,ತೀವ್ರ ಮಾನಸಿಕ ವ್ಯಥೆಯಿಂದ ತೊಳಲಿ ಬೂದಿಯಾಗಿದ್ದೇನೆ...ಒಂದೇ ಒಂದು ಸಾರಿ ನಿನ್ನನ್ನೊಮ್ಮೆ ಕಾಣಬೇಕು.ನಿನ್ನ ಪ್ರೇಮಪೂರ್ಣ ನೋಟವನ್ನೊಮ್ಮೆ ಕಾಣಬೇಕು.ಕೊನೆಯ ಬಾರಿಗೆ ನಿನ್ನ ಮಧುರ ಕಂಠವನ್ನು ಒಮ್ಮೆ ಕೇಳಬೇಕು.ನನ್ನ ಕಣೀರಿಂದ ನಿನ್ನ ಕಾಲನ್ನೊಮ್ಮೆ ತೊಳೆಯಬೇಕು.ನಿನ್ನನ್ನು ಮುಟ್ಟುವುದಿಲ್ಲ ;ಅಪಾಯಕಾರಿಯಲ್ಲದೆ ದೂರದಿಂದೊಮ್ಮೆ ಒಂದು ಕ್ಷಣ ನಿನ್ನನ್ನು ನೋಡುತ್ತೇನೆ."ಈ ಪತ್ರ ಚಂದ್ರಾವತಿಯನ್ನು ಸಂಕಟದಿಂದ ಬೇಯುವಂತೆ ಮಾಡಿತು.ಆಕೆಯನ್ನು ಕಾಣುವ ಅವಕಾಶವನ್ನು ನಿರಾಕರಿಸಬೇಕೆಂಬುದು ತಂದೆಯ ಸೂಚನೆ.ತನ್ನ ಪ್ರೇಮಿಯ ಬಗ್ಗೆ ಇಷ್ಟು ಕಾಠಿಣ್ಯವನ್ನು ತೋರುವುದು ಚಂದ್ರಾವತಿಗೇನು ಸುಲಭವಾಗಿರಲಿಲ್ಲ.ಆದರೆ ಪರಿಸ್ಥಿತಿ ಹಾಗಿತ್ತು.ತಂದೆಯ ಸೂಚನೆಯ ಮೇರೆಗೆ ಅಪೂರ್ವ ಸಂಯಮದಿಂದ ಉತ್ತರಿಸಿದಳು.ಚಂದ್ರಳನ್ನು ಕಾಣಲು ಅನುಮತಿಯಿಲ್ಲದಿದ್ದರೂ ಆಕೆಯನ್ನು ಕಾಣುವ ಹುಚ್ಚಿನಿಂದ ಜಯಚಂದ್ರನುಪಟವಾರಿ ಗ್ರಾಮದಲ್ಲಿ ಆಕೆಯಿದ್ದ ಶಿವದೇವಲಯಕ್ಕೆ ಬಂದ. ಆಗ ದೇವಾಲಯದ ಬಾಗಿಲು ಮುಚ್ಚಿತ್ತು. ಕೂಗಿ ಬಾಗಿಲನ್ನು ತೆರೆಯುವಂತೆ ಕೇಳುವ ದೈರ್ಯವನ್ನು ಆ ಉದ್ವಿಗ್ನ ಪ್ರೇಮ ಮಾಡಲಿಲ್ಲ. ದೇವಾಲಯದ ಆವರಣದಲ್ಲಿ ಸಂಧ್ಯಾಮಾಲತಿಯ ಹೂವಿನ ನೇರಳೆಬಣ್ಣದ ರಸದಿಂದ ಆ ದೇವಾಲಯದ ಬಾಗಿಲ ಮೇಲೆ ಕೆಲವು ಪದ್ಯಗಳನ್ನು ಬರೆದನು.

ಕೃತಿಗಳು ಹಾಗೂ ಜೀವನ

ಆನಂತರ ಜಯಚಂದ್ರ ನಿರಾಶೆಯಿಂದ ಪೂಲೆಚಿವಾರಿ ನದಿಗೆ ಹಾರಿದ. ಈ ದುರಂತದ ನಂತರ ಕಾವ್ಯವನ್ನು ಬರೆಯುವ ಮನಸ್ಸು ಚಂದ್ರಳಿಗಿರಲಿಲ್ಲ. ಹೀಗಾಗಿ ಅವಳ ರಾಮಾಯಣ ಅಪೂರ್ಣವಾಗಿ ಉಳಿದಿದೆ. ಸೀತಾಪರಿತ್ಯಾಗದವರೆಗೆ ಬಂದು ಕಾವ್ಯ ನಿಂತಿದೆ .ಮಾನಸಿಕ ವ್ಯಥೆಯಿಂದಾಗಿ ಅನಂತರ ಆಕೆ ಹೆಚ್ಚು ಕಾಲ ಬದುಕಲಿಲ್ಲ.ಚಂದ್ರಾವತಿಯೇ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಷಯಗಳಿಂದ ಹಾಗೂ ಆನಂತರ ಆಕೆಯನ್ನು ಕುರಿತು ಬಂದ ಸಾಹಿತ್ಯದಿಂದ ಈ ಮೇಲಿನ ಆಕೆಯ ಜೀವನಚಿತ್ರವನ್ನು ರೂಪಿಸಲಾಗಿದೆ. ಆಕೆಯ ದಾರುಣಪ್ರೇಮವನ್ನು ಕುರಿತ ಜನಪದಗೀತೆಗಳು ಮಿಮೆನ್ ಸಿಂಗ್ ಜಿಲ್ಲೆಯಲ್ಲಿ ಈಗಲೂ ಪ್ರಚಾರದಲ್ಲಿವೆ.ರಾಮಯಣವೇ ಅಲ್ಲದೆ ಮಾನಸದೇವಿಯ ಮೇಲಿನ ಹಲವು ಪದ್ಯಗಳು, ಕೇನ ರಾಮನನ್ನು ಕುರಿತ ಲಾವಣಿ, 'ಕಾಜಿರ್ ಬಿಚಾರ', 'ಬಾದಸಾರ್ ಶಾಸನಾ', 'ದಿವಾನ್ ಬಾದಾ', ಮೊದಲಾದ ಅನೇಕ ಕೃತಿಗಳನ್ನು ಈಕೆ ರಚಿಸಿದ್ದಾಳೆ. ಇವುಗಳಲ್ಲೆಲಾ ರಾಮಾಯಣವೇ ದೊಡ್ದದು.ಈಕೆಯ ಶೈಲಿಯ ಸರಳ ಸುಭಗ ಗುಣ, ವಿಷಾದಾತ್ಮಕ ಭಾವಾಭಿವ್ಯಕ್ತಿಯಲ್ಲಿನ ನೈಪುಣ್ಯ , ಭಾವಪರವಶವಾಗಿಸುವ ನಿರೂಪಣಾ ರೀತಿ_ಇವುಗಳನ್ನು ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಚಂದ್ರಾವತಿಯ ಕೃತಿಗಳಲ್ಲಿ ಕಾಣುವ ಹಳ್ಳಿಯ ಜೀವನ ಸೌಂದರ್ಯ ಅನೇಕರನ್ನು ಆಕರ್ಶಿಸಿದೆ. ಪೂರ್ವ ಮಿಮೆನ್ ಸಿಂಗ್ ಜಿಲ್ಲೆಯಲ್ಲಿ ಸೂರ್ಯಪೂಜೆಯ ದಿನ ಹೆಂಗಸರು ಚಂದ್ರಾವತಿಯ ರಾಮಾಯಣವನ್ನು ಸೂರ್ಯಾಸ್ತದವರೆಗೆ ಹಾಡುತ್ತಾರಂತೆ. ಹೀಗೆ ನಂಜುಂಡು, ಕತ್ತಲನ್ನೇ ಹೆಚ್ಚಾಗಿ ಕಂಡು ಬದುಕೊಂದು ನಾಳಿನ ಬೆಳಕಿಗೆ ತನ್ನ ಪ್ರತಿಭೆಯ ಕಿರಣಗಳನ್ನು ಸೇರಿಸಿ ಒಂದು ಜನಾಂಗ ಸ್ಮೃತಿಯಲ್ಲಿ ಜೀವಂತನವಾಗಿ ಉಳಿಯಿತು.

Tags:

ಚಂದ್ರಾವತಿ ಕವಿಯಿತ್ರಿಯ ಹಿನ್ನಲೆಚಂದ್ರಾವತಿ ವಯ್ಯಕ್ತಿಕ ಜೀವನಚಂದ್ರಾವತಿ ವಿಧಿಯಾಟಚಂದ್ರಾವತಿ ಕೃತಿಗಳು ಹಾಗೂ ಜೀವನಚಂದ್ರಾವತಿ

🔥 Trending searches on Wiki ಕನ್ನಡ:

ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗುರುಪ್ರಜಾಪ್ರಭುತ್ವಯೋಗಅರ್ಥಶಾಸ್ತ್ರಕುರುಜಗದೀಶ್ ಶೆಟ್ಟರ್ಆದಿ ಶಂಕರಅನ್ವಿತಾ ಸಾಗರ್ (ನಟಿ)ಕನ್ನಡ ಸಾಹಿತ್ಯ ಪ್ರಕಾರಗಳುಗುಡಿಸಲು ಕೈಗಾರಿಕೆಗಳುಶರಣಬಸವೇಶ್ವರ ದೇವಸ್ಥಾನ ಕಲಬುರಗಿಲಿನಕ್ಸ್ಗೌತಮಿಪುತ್ರ ಶಾತಕರ್ಣಿಭರತ-ಬಾಹುಬಲಿಕರ್ನಾಟಕ ಐತಿಹಾಸಿಕ ಸ್ಥಳಗಳುಭರತನಾಟ್ಯಚುನಾವಣೆಮದುವೆರಮ್ಯಾಕವಿಗಳ ಕಾವ್ಯನಾಮಪಠ್ಯಪುಸ್ತಕಭಾರತದ ಸಂವಿಧಾನಸಾಮಾಜಿಕ ತಾಣಏಡ್ಸ್ ರೋಗಕೈಲಾಸನಾಥಕರ್ನಾಟಕ ಪೊಲೀಸ್ವೃತ್ತಪತ್ರಿಕೆಕೃಷ್ಣವಿ. ಕೃ. ಗೋಕಾಕಪಂಪ ಪ್ರಶಸ್ತಿಕರ್ನಾಟಕ ಹೈ ಕೋರ್ಟ್ಭಾರತದಲ್ಲಿ ಮೀಸಲಾತಿಭಾರತೀಯ ಜನತಾ ಪಕ್ಷಸಿದ್ಧರಾಮರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಿಗ್ಮಂಡ್‌ ಫ್ರಾಯ್ಡ್‌ಮರಾಠಾ ಸಾಮ್ರಾಜ್ಯವಿಭಕ್ತಿ ಪ್ರತ್ಯಯಗಳುಮಳೆಬಿಲ್ಲುಸಾರಾ ಅಬೂಬಕ್ಕರ್ಚಾಲುಕ್ಯಬಳ್ಳಾರಿಕದಂಬ ಮನೆತನಲಕ್ಷ್ಮಣತೆಲುಗುಗುಪ್ತ ಸಾಮ್ರಾಜ್ಯಜಾನಪದಬಾದಾಮಿ ಗುಹಾಲಯಗಳುವಿಧಾನ ಸಭೆಅಂಕಗಣಿತಹಾವೇರಿಅನಸುಯ ಸಾರಾಭಾಯ್ಗೂಬೆರವಿ ಡಿ. ಚನ್ನಣ್ಣನವರ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗರ್ಭಕಂಠದ ಕ್ಯಾನ್ಸರ್‌ಘಾಟಿ ಸುಬ್ರಹ್ಮಣ್ಯಲಕ್ಷ್ಮಿಗೋಲ ಗುಮ್ಮಟಸಿದ್ದರಾಮಯ್ಯಯಕೃತ್ತುವ್ಯಂಜನರಾಷ್ಟ್ರಕವಿಬಾಳೆ ಹಣ್ಣುಗೋತ್ರ ಮತ್ತು ಪ್ರವರಮಂಡ್ಯಕಬ್ಬುಶಾಮನೂರು ಶಿವಶಂಕರಪ್ಪಕೆ. ಸುಧಾಕರ್ (ರಾಜಕಾರಣಿ)ಚಂದ್ರಗುಪ್ತ ಮೌರ್ಯಮದ್ಯದ ಗೀಳುಗಾಂಡೀವಗುರುರಾಜ ಕರಜಗಿಕಿರುಧಾನ್ಯಗಳುಚಂದ್ರ (ದೇವತೆ)ಕರ್ನಾಟಕದ ಮುಖ್ಯಮಂತ್ರಿಗಳು🡆 More