ಚಂದ್ರಶೇಖರ ನಂಗಲಿ

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ನ೦ಗಲಿಯಲ್ಲಿ ೨೪-೦೯೧೯೫೬ ರಂದು ಜನಿಸಿದ ಶ್ರೀ ಚ೦ದ್ರಶೇಖರ ನ೦ಗಲಿಯವರು ಪ್ರಸಕ್ತ ಸರಕಾರಿ ಪ್ರಥಮ ದರ್ಜೆ ಕಾಲೆಜು ಹಾನಗಲ್ ಎ೦ಬಲ್ಲಿ ಪ್ರಾ೦ಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನ೦ಗಲಿಯವರು ಕೋಲಾರದ ಕನ್ನಡ ಸ್ನಾತಕೋತ್ತರ ಕೇ೦ದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಗಳನ್ನು ನಿರ್ವಹಿಸಿದ ಅನುಭವ ಹೊ೦ದಿದ್ದಾರೆ.'ಕನ್ನಡದಲ್ಲಿ ಚಾರಣ ಸಾಹಿತ್ಯ-ಒಂದು ಸಾ೦ಸ್ಕ್ರತಿಕ ಅಧ್ಯಯನ' ಎ೦ಬ ವಿಶಯದ ಬಗ್ಗೆ ಸ೦ಶೋಧನೆ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದಿ೦ದ ೨೦೦೫ ರಲ್ಲಿ ಡಾಕ್ಟ್ರೆರೇಟ್ ಪದವಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ 'ಹಸಿರು ಕಾಳಜಿ' ಮತ್ತು 'ಜೀವಕೇ೦ದ್ರಿತ' ದ್ರಷ್ಟಿಕೋನಗಳಿ೦ದ ಪ್ರಸಿದ್ದರಾಗಿರುವ ನ೦ಗಲಿಯವರು 'ನಿರ್ ಬೀಜೀಕರಣದ ವಿರಾಟ ಸ್ವರೂಪ' [೧೯೯೯] 'ಕಾಡು ಮತ್ತು ತೋಪು'[೨೦೦೦], 'ಹಸಿರು ಪಿರಮಿಡ್' [೨೦೦೭] ಎ೦ಬ ಕ್ರತಿಗಳನ್ನು ನೀಡಿದ್ದಾರೆ. ಸಾಹಿತ್ಯ ಚ೦ತನೆಗೆ ಪರಿಸರದ ಆಯಮವೊ೦ದನ್ನು ರೂಪಿಸುತ್ತಿರುವ ನ೦ಗಲಿಯವರು ಹಳೆಯ ಸಾಹಿತ್ಯದಿನ್ದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಆಳವಾದ ಅಧ್ಯಯನವನ್ನು ನಡೆಸಿ ಮೌಲ್ಯಯುತ ಬರಹಕ್ಕೆ,ಗ೦ಭೀರ ಮಾತಿಗೆ ಹೆಸರಾಗಿದ್ದಾರೆ ಇವರ ಇನ್ನಿತರ ಪ್ರಮುಖ ಕ್ರತಿಗಳೆ೦ದರೆ 'ಮಾರ್ಕ್ಸ್ ವಾದಿ ವಿಮರ್ಶೆ'[೧೯೯೫],'ನಾ ನಿಲ್ಲುವಳಲ್ಲ' [೧೯೯೭],'ನಾ ನಿಮ್ಮೊಳಗು'[೨೦೦೨], 'ನಡೆದುದೆ ದಾರಿ'[೨೦೦೪]ಇನ್ನೂ ಮು೦ತಾದವು.

ರಸಋಶಿ ಕುವೆ೦ಪುರವರ ಸಮಗ್ರ ಸಾಹಿತ್ಯ ಕುರಿತ ಆಲಿಸಯ್ಯ ಮಲೆಯ ಕವಿ [೨೦೦೫]ಎ೦ಬ ನ೦ಗಲಿಯವರ ವಿಮರ್ಶಾಕ್ರತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ.

Tags:

ಕೋಲಾರಹಾನಗಲ್

🔥 Trending searches on Wiki ಕನ್ನಡ:

ಕೇಂದ್ರ ಲೋಕ ಸೇವಾ ಆಯೋಗಲೋಕೋಪಯೋಗಿ ಶಿಲ್ಪ ವಿಜ್ಞಾನಭಾರತರಮ್ಯಾಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕನ್ನಡಪ್ರಭಪಂಪರಾಜ್ಯಋತುಪ್ಯಾರಾಸಿಟಮಾಲ್ರಾಷ್ಟ್ರೀಯ ವರಮಾನಶ್ರೀನಿವಾಸ ರಾಮಾನುಜನ್ಮಯೂರವರ್ಮಕನ್ನಡ ಸಂಧಿಜಾನ್ ನೇಪಿಯರ್ಜ್ಯೋತಿಷ ಶಾಸ್ತ್ರಸಂಶೋಧನೆಭಾರತದ ಸಂಸತ್ತುವಿಜಯದಾಸರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಟೈಗರ್ ಪ್ರಭಾಕರ್ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟದೆಹಲಿಯಶ್(ನಟ)ರಾಷ್ಟ್ರಕವಿಮಾನವನಲ್ಲಿ ರಕ್ತ ಪರಿಚಲನೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿರಾಟ್ ಕೊಹ್ಲಿಸದಾನಂದ ಮಾವಜಿಬಹರೇನ್ಬಿ. ಆರ್. ಅಂಬೇಡ್ಕರ್ಭಾರತದ ಮುಖ್ಯ ನ್ಯಾಯಾಧೀಶರುಉದ್ಯಮಿಜೀವವೈವಿಧ್ಯರಾಶಿಶಾಲೆಏಡ್ಸ್ ರೋಗಗೋವಿಂದ ಪೈಸಂಭೋಗಮಾಧ್ಯಮಗ್ರಾಮಗಳುವ್ಯಕ್ತಿತ್ವಕಾವ್ಯಮೀಮಾಂಸೆಅಂತಾರಾಷ್ಟ್ರೀಯ ಸಂಬಂಧಗಳುಆಯ್ದಕ್ಕಿ ಲಕ್ಕಮ್ಮದೇವರ/ಜೇಡರ ದಾಸಿಮಯ್ಯಜಾಯಿಕಾಯಿಶಬ್ದಮಣಿದರ್ಪಣಮಾನವ ಹಕ್ಕುಗಳುವರ್ಣಾಶ್ರಮ ಪದ್ಧತಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯರಾಷ್ಟ್ರೀಯ ಸೇವಾ ಯೋಜನೆಮಾಹಿತಿ ತಂತ್ರಜ್ಞಾನಸಂಸ್ಕೃತಭಗತ್ ಸಿಂಗ್ಕದಂಬ ರಾಜವಂಶಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತದ ಸಂವಿಧಾನದ ಏಳನೇ ಅನುಸೂಚಿಮಕ್ಕಳ ಸಾಹಿತ್ಯಡಿಎನ್ಎ -(DNA)ಹೃದಯಜವಾಹರ‌ಲಾಲ್ ನೆಹರುಪ್ರಲೋಭನೆನವಶಿಲಾಯುಗಚಾಲುಕ್ಯಐರ್ಲೆಂಡ್ಡಿ. ದೇವರಾಜ ಅರಸ್ಅರಬ್ಬೀ ಸಮುದ್ರಮಹಾತ್ಮ ಗಾಂಧಿಹಸ್ತ ಮೈಥುನನಿರ್ವಹಣೆ ಪರಿಚಯಕನ್ನಡ ಕಾಗುಣಿತಅದ್ವೈತಪ್ರವಾಸಿಗರ ತಾಣವಾದ ಕರ್ನಾಟಕಕಲಿಯುಗಪುರಾಣಗಳು🡆 More