ಚಂದ್ರನಾಥ ಸ್ವಾಮಿ ಬಸದಿ, ವಿಟ್ಲ

'''ಚಂದ್ರನಾಥ ಸ್ವಾಮಿ ಬಸದಿ, ವಿಟ್ಲ'''

ಸ್ಥಳ

ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಪೇಟೆಯಲ್ಲಿ ಈ ಬಸದಿಯಿದ್ದು, ಶ್ರೀ ಚಂದ್ರನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲಿ ಇಂದ್ರರ ಮನೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನವಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ವಿಟ್ಲದ ಖಾಸಗಿ ಬಸ್ಸು ತಂಗುದಾಣದಿಂದ ಪುತ್ತೂರು ರಸ್ತೆಯಲ್ಲಿ ನೂರು ಮೀಟರ್ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು. ಇದು ತಾಲೂಕು ಕೇಂದ್ರದಿಂದ ಸುಮಾರು ಹದಿನೇಳು ಕಿ.ಮೀ. ದೂರದಲ್ಲಿದೆ. ಇಲ್ಲಿ ಗರ್ಭಗುಡಿ ಮತ್ತು ಅದರ ಎದುರಿನ ಮಂಟಪವು ಶಿಲಾಮಯಗೊಂಡಿದ್ದು, ತಾಮ್ರದ ಹೊದಿಕೆ ಮತ್ತು ಹೊರಗಿನ ಜಗಲಿಗೆ ಹಂಚಿನ ಮಾಡನ್ನು ಮಾಡಲಾಗಿದೆ. ಈ ಬಸದಿಗೆ ಮೇಗಿನ ನೆಲೆ ಇದೆ.

ವಿಗ್ರಹಗಳು

24ನೇ ತೀರ್ಥಂಕರನಾದ ವರ್ಧಮಾನ ಅಥವಾ ಮಹಾವೀರನ ಪ್ರತಿಮೆಯಿದೆ. ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿ ದೇವಿಯ ಮೂರ್ತಿಗಳಿವೆ.

ನಿರ್ಮಾಣ

ಈ ಬಸದಿಯನ್ನು ಪೂಜ್ಯ ಮಂಜಯ್ಯ ಹೆಗ್ಗಡೆಯವರ ಪೂರ್ವಜರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದರೆಂದು ಹೇಳಲಾಗುತ್ತದೆ.

ಆಚರಣೆ

24ನೇ ತೀರ್ಥಂಕರನಾದ ವರ್ಧಮಾನ ಅಥವಾ ಮಹಾವೀರನ ಪ್ರತಿಮೆಯಿದ್ದು, ನಿತ್ಯವೂ ಪೂಜೆ ನಡೆಯುತ್ತದೆ. ಇಲ್ಲಿ ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿ ದೇವಿಯ ಮೂರ್ತಿಗಳಿವೆ. ಇದಕ್ಕೆ ಮಾನಸ್ತಂಭ ಇಲ್ಲ. ಬಸದಿಯ ಹಿಂಭಾಗದಲ್ಲಿ ಒಂದು ಪಾರಿಜಾತ ಹೂವಿನ ಗಿಡವಿದ್ದು, ಉಳಿದ ಹೂವಿನ ಗಿಡಗಳನ್ನೂ ಬೆಳೆಸಲಾಗಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಇಕ್ಕೆಲಗಳ ಗೋಪುರವನ್ನು ಶ್ರಾವಕರಿಗೆ ವಿಶ್ರಾಂತಿ ಪಡೆಯಲು ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಎಡ ಬದಿಯ ಗೋಪುರದ ಗೋಡೆಯಲ್ಲಿ ಎಲೆಕ್ಟ್ರಾನಿಕ್ ಡೋಲನ್ನು ಇರಿಸಲಾಗಿದೆ. ಈ ಬಸದಿಯನ್ನು ಪ್ರವೇಶಿಸುವಾಗ ದ್ವಾರಪಾಲಕರ ಕಲ್ಲಿನ ಮೂರ್ತಿ ಅಥವಾ ವರ್ಣಚಿತ್ರಗಳು ಕಂಡು ಬರುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದ್ದು ಜಯಘಂಟೆ, ಜಾಗಟೆಗಳನ್ನು ಒಳಗೆ ಒಳಗಿನ ಮಂಟಪದಲ್ಲಿ ತೂಗಿ ಹಾಕಲಾಗಿದೆ. ಇಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪವೆಂದು ಕರೆಯುತ್ತಾರೆ.

ಶ್ರುತ, ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿಯನ್ನು ಯಕ್ಷಿಯರನ್ನಾಗಿ ಪೂಜಿಸಲಾಗುತ್ತದೆ. ಮಾತೆ ಪದ್ಮಾವತಿ ದೇವಿಯ ಮೂರ್ತಿಯು ಈಗ ಪಶ್ಚಿಮಕ್ಕೆ ಮುಖ ಮಾಡಿಕೊಂಡಿದೆ. ಆದರೆ ಅದನ್ನು ಉತ್ತರಕ್ಕೆ ಮುಖ ಮಾಡುವ ಪ್ರಸ್ತಾಪ ಇದೆ. ಇವುಗಳಿಗೆ ನಿತ್ಯವೂ ಅಲಂಕಾರ ಮಾಡಿ ಪೂಜೆ ನಡೆಸಲಾಗತ್ತಿದ್ದು, ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಇಲ್ಲಿ ಅಮ್ಮನವರೆದುರು ಹೊಂಬುಚ್ಚದಂತೆ ಹೂಹಾಕಿ ನೋಡುವ ಕ್ರಮವಿದೆ. ಹಾಗೂ ಹರಕೆ ಹೇಳಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆಂಬ ನಂಬಿಕೆ ಜನರಲ್ಲಿದೆ. ಇಲ್ಲಿನ ಜಿನಬಿಂಬದ ಮೇಲೆ ಓದಲು ಸಾಧ್ಯವಾಗದ ಅಸ್ಪಷ್ಟ ಬರವಣಿಗೆ ಇದೆ. ಪದ್ಮಾಸನ ಭಂಗಿಯಲ್ಲಿರುವ ಇಲ್ಲಿನ ಮೂಲಬಿಂಬವು ಬಿಳಿಶಿಲೆಯಿಂದ ಮಾಡಲ್ಪಟ್ಟಿದ್ದು, ಸುಮಾರು ಎರಡೂವರೆ ಅಡಿ ಎತ್ತರವಿದೆ. ಮೂಲ ಸ್ವಾಮಿಯ ಸುತ್ತಲೂ ಮಾಲೆದೀಪದ ಅಲಂಕಾರ ಇದೆ. ಮೂಲಸ್ವಾಮಿಗೆ ನಿತ್ಯವೂ ಕ್ಷೀರಾಭೀಷೇಕ, ಜಲಾಭಿಷೇಕ, ಯಾರಾದರೂ ಹೇಳಿದರೆ ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತದೆ. ಮೂಲಸ್ವಾಮಿಯ ಬಿಂಬಕ್ಕೆ ಒಮ್ಮೆ ವಜ್ರಲೇಪನ ಮಾಡಲಾಗಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಏನಾದರೂ ಹರಕೆ ಹೇಳಿದರೆ ವಿಶೇಷ ಪೂಜೆ ನಡೆಸಲಾಗುತ್ತದೆ. ವಿಶೇಷ ಹಬ್ಬಗಳಾದ ನವರಾತ್ರಿ, ಜೀವದಯಾಷ್ಟಮಿ, ನೂಲಹುಣ್ಣಿಮೆ ಹಾಗೂ ವಿಜಯದಶಮಿಯಂದು ಭತ್ತದ ತೆನೆ ಕಟ್ಟುವ ಕ್ರಮಗಳನ್ನು ಆಚರಿಸಲಾಗುತ್ತದೆ. ಬಸದಿಯ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದ್ದು ಅಲ್ಲಿ ನಾಗನಕಲ್ಲು, ತ್ರಿಶೂಲಗಳನ್ನು ಬೇರೆ ಬೇರೆ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಹಿಂಭಾಗದಲ್ಲಿ ಒಂದು ಶೀಲಾಶಾಸನವಿದೆ . ಇಲ್ಲಿ ಅಷ್ಟದಿಕ್ಪಾಲಕರ ಕಲ್ಲುಗಳು ಕಂಡು ಬರುವುದಿಲ್ಲ. ಬಸದಿಯ ಮೂರು ಬದಿಗಳಲ್ಲಿ ಮಾತ್ರ ಮುರಕಲ್ಲಿನಿಂದ ಕಟ್ಟಿದ ಭದ್ರವಾದ ಪ್ರಾಕಾರ ಗೋಡೆಯಿದೆ.

ಉಲ್ಲೇಖಗಳು

Tags:

ಚಂದ್ರನಾಥ ಸ್ವಾಮಿ ಬಸದಿ, ವಿಟ್ಲ ಸ್ಥಳಚಂದ್ರನಾಥ ಸ್ವಾಮಿ ಬಸದಿ, ವಿಟ್ಲ ವಿಗ್ರಹಗಳುಚಂದ್ರನಾಥ ಸ್ವಾಮಿ ಬಸದಿ, ವಿಟ್ಲ ನಿರ್ಮಾಣಚಂದ್ರನಾಥ ಸ್ವಾಮಿ ಬಸದಿ, ವಿಟ್ಲ ಆಚರಣೆಚಂದ್ರನಾಥ ಸ್ವಾಮಿ ಬಸದಿ, ವಿಟ್ಲ ಉಲ್ಲೇಖಗಳುಚಂದ್ರನಾಥ ಸ್ವಾಮಿ ಬಸದಿ, ವಿಟ್ಲ

🔥 Trending searches on Wiki ಕನ್ನಡ:

ಊಳಿಗಮಾನ ಪದ್ಧತಿಭಾರತದ ತ್ರಿವರ್ಣ ಧ್ವಜಚದುರಂಗ (ಆಟ)ಕಾವ್ಯಮೀಮಾಂಸೆಪಿತ್ತಕೋಶಭಾರತದ ರಾಜಕೀಯ ಪಕ್ಷಗಳುಸ್ತ್ರೀಈಡನ್ ಗಾರ್ಡನ್ಸ್ದೆಹಲಿಯ ಇತಿಹಾಸಮಲೈ ಮಹದೇಶ್ವರ ಬೆಟ್ಟಯೋಗಿ ಆದಿತ್ಯನಾಥ್‌ಯು.ಆರ್.ಅನಂತಮೂರ್ತಿವಿಶ್ವ ಕನ್ನಡ ಸಮ್ಮೇಳನಕರ್ನಾಟಕ ಐತಿಹಾಸಿಕ ಸ್ಥಳಗಳುಕ್ರೀಡೆಗಳುಅಲೆಕ್ಸಾಂಡರ್ಬೀದರ್ಭಾರತದ ರಾಷ್ಟ್ರೀಯ ಉದ್ಯಾನಗಳುಮಹಾಭಾರತಮಳೆಬಿಲ್ಲುತೇಜಸ್ವಿ ಸೂರ್ಯಜಾಗತಿಕ ತಾಪಮಾನಅತ್ತಿಮಬ್ಬೆಎಸ್. ಬಂಗಾರಪ್ಪಭೌಗೋಳಿಕ ಲಕ್ಷಣಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರಾಷ್ಟ್ರಕೂಟಜಾಗತಿಕ ತಾಪಮಾನ ಏರಿಕೆಮೂಲಧಾತುಗಳ ಪಟ್ಟಿವ್ಯವಹಾರಸಿಗ್ಮಂಡ್‌ ಫ್ರಾಯ್ಡ್‌ಹಂಪೆನೈಲ್ರನ್ನಕೃಷ್ಣಾ ನದಿಅಶ್ವಗಂಧಾಭಗೀರಥಟೆನಿಸ್ ಕೃಷ್ಣಶಿಕ್ಷೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರೌಲತ್ ಕಾಯ್ದೆಜನಪದ ಕಲೆಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಜನ್ನರಾಘವಾಂಕರತ್ನತ್ರಯರುದೆಹಲಿಅಕ್ಕಮಹಾದೇವಿದಲಿತಭೂಮಿಐಹೊಳೆಸರ್ವಜ್ಞಯಲಹಂಕಹೆಳವನಕಟ್ಟೆ ಗಿರಿಯಮ್ಮಭಾರತೀಯ ರೈಲ್ವೆಚಂಪೂಎಸ್.ಎಲ್. ಭೈರಪ್ಪಶಿವರಾಮ ಕಾರಂತರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಭಾರತೀಯ ಜನತಾ ಪಕ್ಷಪೊನ್ನರೈತವಾರಿ ಪದ್ಧತಿತಾಜ್ ಮಹಲ್ಹದ್ದುಪುರಂದರದಾಸಅಲಾವುದ್ದೀನ್ ಖಿಲ್ಜಿಗೋಪಾಲಕೃಷ್ಣ ಅಡಿಗಸರ್ಪ ಸುತ್ತುಭಾರತದಲ್ಲಿ ಮೀಸಲಾತಿಷಟ್ಪದಿಕಲಬುರಗಿಸಂಧಿ೨೦೧೬ಅಂತರಜಾಲ🡆 More