ಗಾಂಧಾರಿ

ಗಾಂಧಾರಿ ಎಂಬುದು ಮಹಾಭಾರತ ಮಹಾಕಾವ್ಯದಲ್ಲಿ ಬರುವ ಒಂದು ಪಾತ್ರ.

ಗಾಂಧಾರ ದೇಶದ (ಈಗಿನ ಕಾಂದಹಾರ್, ಅಫ್ಘಾನಿಸ್ಥಾನ)ರಾಜನಾದ ಸುಬಲನ ಪುತ್ರಿಯಾದ ಈಕೆ ಕುರುವಂಶದ ಮಹಾರಾಜನಾದ ಧೃತರಾಷ್ಟ್ರನನ್ನು ವರಿಸುತ್ತಾಳೆ. ಹುಟ್ಟು ಕುರುಡನಾದ ತನ್ನ ಪತಿ ಧೃತರಾಷ್ಟ್ರನಿಗೆ ಕಾಣದ ಹೊರಜಗತ್ತು ತನಗೂ ಸಹ ಕಾಣುವುದು ಬೇಡವೆಂದು ನಿರ್ಧರಿಸಿ ತನ್ನ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾಳೆ. ದುರ್ಯೋಧನ, ದುಶ್ಯಾಸನರು ಸೇರಿದಂತೆ ೧೦೦ ಮಂದಿ ಕೌರವರು ಹಾಗೂ ದುಶ್ಯಲೆ ಈಕೆಯ ಮಕ್ಕಳು.

ಗಾಂಧಾರಿ
ಮಹಾಭಾರತ character
ವ್ಯಾಸ ಮನಿಗಳಿಂದ ವರವನ್ನು ಸ್ವೀಕರಿಸುತ್ತಿರುವ ಗಾಂಧಾರಿ
Information
ಕುಟುಂಬಸುಬಲ(ತಂದೆ) ,ಸುಧರ್ಮ (ತಾಯಿ) ಶಕುನಿ (ಹಿರಿಯ ಸಹೋದರ)
ಅರ್ಷಿ(ನಾದಿನಿ ಶಕುನಿಯ ಹೆಂಡತಿ)
ಗಂಡ/ಹೆಂಡತಿಧೃತರಾಷ್ಟ್ರ
ಮಕ್ಕಳುದುರ್ಯೋಧನ, ದುಶ್ಯಾಸನ, ವಿಕರ್ಣ, ೯೭ ಇತರ ಮಕ್ಕಳು ದುಶ್ಯಲಾ(ಮಗಳು)
ಗಾಂಧಾರಿ
ಗಾಂಧಾರಿ ಮತ್ತು ಧೃತರಾಷ್ಟ್ರನನ್ನು ವಾನಪ್ರಸ್ಥಕ್ಕೆ ಕರೆದೊಯ್ಯುತ್ತಿರುವ ಕುಂತಿ

ಆರಂಭಿಕ ಜೀವನ

ಕನ್ಯೆಯಾಗಿ, ಗಾಂಧಾರಿ ಅವರ ಧರ್ಮನಿಷ್ಠೆ ಮತ್ತು ಸದ್ಗುಣಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಗಾಂಧಾರಿಯನ್ನು ಬುದ್ಧಿವಂತಿಕೆಯ ದೇವತೆಯಾದ ಮಾತಿಯ ಅವತಾರವೆಂದು ಪರಿಗಣಿಸಲಾಗಿದೆ. ಗಾಂಧಾರ ರಾಜನಾದ ಸುಬಲನ ಮಗಳಾಗಿ ಅವಳು ಭೂಮಿಯಲ್ಲಿ ಜನಿಸಿದಳು ಮತ್ತು ಅವಳ ತಂದೆಯಿಂದ 'ಗಾಂಧಾರಿ' ಎಂದು ನಾಮಕರಣ ಮಾಡಲಾಯಿತು. ಅವಳನ್ನು ಯಾವಾಗಲೂ ಗಾಂಧಾರಿ ಎಂದು ಕರೆಯಲಾಗುತ್ತದೆ ಮತ್ತು ಮಹಾಕಾವ್ಯದಲ್ಲಿ ಅವಳ ಗುರುತನ್ನು ಸಂಕೇತಿಸುವ ಮಹಾಕಾವ್ಯದಲ್ಲಿ ಬೇರೆ ಯಾವುದೇ ಹೆಸರುಗಳನ್ನು (ಸತ್ಯವತಿ, ಕುಂತಿ ಅಥವಾ ದ್ರೌಪದಿಗಿಂತ ಭಿನ್ನವಾಗಿ) ಉಲ್ಲೇಖಿಸಲಾಗಿಲ್ಲ. ಧೃತರಾಷ್ಟ್ರನನ್ನು ಮದುವೆಯಾಗುವ ಮೊದಲು, ಅವಳನ್ನು ಗಾಂಧಾರ-ರಾಜ-ದುಹಿತಾ (ಗಾಂಧಾರ ರಾಜನ ಮಗಳು), ಸೌಬಲೇಯಿ, ಸೌಬಲಿ, ಸುಬಲಜ, ಸುಬಲ-ಪುತ್ರಿ ಮತ್ತು ಸುಬಲಾತ್ಮಜ (ಎಲ್ಲಾ ಅರ್ಥ 'ಸುಬಾಲರ ಮಗಳು') ಎಂದು ಕರೆಯಲಾಗುತ್ತತ್ತು.

ಧೃತರಾಷ್ಟ್ರ ಜೊತೆ ವಿವಾಹ

ದೆಹಲಿ ಮತ್ತು ಹರಿಯಾಣ ಪ್ರದೇಶದ ಕುರು ಸಾಮ್ರಾಜ್ಯದ ಹಿರಿಯ ರಾಜಕುಮಾರನಾದ ಧೃತರಾಷ್ಟ್ರನ ಜೊತೆ ಗಾಂಧಾರಿಯ ವಿವಾಹವನ್ನು ಏರ್ಪಡಿಸಲಾಯಿತು. ಮಹಾಭಾರತ ಕಾವ್ಯವು ಅವಳನ್ನು ಸುಂದರ ಮತ್ತು ಸದ್ಗುಣಶೀಲ ಮಹಿಳೆ ಮತ್ತು ತುಂಬಾ ಸಮರ್ಪಿತ ಹೆಂಡತಿ ಎಂದು ಚಿತ್ರಿಸಿದೆ. ಅವರ ಮದುವೆಯನ್ನು ಭೀಷ್ಮ ಏರ್ಪಡಿಸಿದ್ದನು. ತನ್ನ ಗಂಡ ಕುರುಡನಾಗಿ ಜನಿಸಿದನೆಂದು ತಿಳಿದಾಗ, ಅವಳು ತನ್ನ ಗಂಡನಂತೆ ಇರಲು ತನ್ನ ಗಂಡನಂತೆ ಅಜೀವನ ಕಣ್ಣನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲು ನಿರ್ಧರಿಸಿದಳು.

ಮಹಾಭಾರತದಲ್ಲಿ ಗಾಂಧಾರಿಯ ಚಿತ್ರಣ

  • ಮಹಾಭಾರತವು ಕೌರವರನ್ನು ಖಳನಾಯಕರಂತೆ ಚಿತ್ರಿಸಿದ್ದರೂ ಗಾಂಧಾರಿಗೆ ಮಾತ್ರ ಮಹತ್ವದ ಸ್ಥಾನವನ್ನು ನೀಡಿದೆ. ತನ್ನ ಪುತ್ರರಾದ ಕೌರವರಿಗೆ ಬುಧ್ಧಿಹೇಳಿ ಯುಧ್ಧವನ್ನು ತಪ್ಪಿಸಿಪಾಂಡವರೊಂದಿಗೆ ರಾಜಿ ಮಾಡಿಸಲು ಪದೇ ಪದೇ ಯತ್ನಿಸಿ ವಿಫಲಳಾಗುತ್ತಾಳೆ. ಪುರಾಣದ ಪ್ರಕಾರ ಆಕೆ ಶಿವನ ಭಕ್ತೆಯಾಗಿದ್ದು ಪತಿಗೋಸ್ಕರ ತಾನು ಮಾಡಿದ ತ್ಯಾಗದಿಂದಾಗಿ ಆಕೆ ವಿಶೇಷವಾದ ಶಕ್ತಿಯನ್ನು ಪಡೆದಿರುತ್ತಾಳೆ. ಸದಾ ಮುಚ್ಚಿಕೊಂದೇ ಇರುವ ಆಕೆಯ ಚಕ್ಷುಗಳಿಗೆ ಅಗಾಧವಾದ ಶಕ್ತಿಯಿತ್ತು ಎಂಬುದಾಗಿ ಕಥೆ ಹೇಳುತ್ತದೆ.
  • ಮಹಾಭಾರತದ ಪ್ರಕಾರ ಮದುವೆಯ ನಂತರ ಕೇವಲ ಒಂದೇ ಒಂದು ಬಾರಿ ಮಾತ್ರ ಗಾಂಧಾರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚುತ್ತಾಳೆ. ಅದು ಕುರುಕ್ಷೇತ್ರ ಮಹಾಸಮರದ ಸಂದರ್ಭದಲ್ಲಿ. ವಿಶೇಷ ಶಕ್ತಿಯನ್ನು ಹೊಂದಿರುವ ತನ್ನ ಕಣ್ಣುಗಳಿಂದ ದುರ್ಯೋಧನನ ದೇಹವನ್ನು ವಜ್ರಕಾಯವನ್ನಾಗಿಸುವ ಸಲುವಾಗಿ ತನ್ನ ಮುಂದೆ ನಿರ್ವಸ್ತ್ರನಾಗಿ ಬಂದು ನಿಲ್ಲಲು ಮಗನಿಗೆ ಹೇಳುತ್ತಾಳೆ.
  • ಇದನ್ನರಿತ ಕೃಷ್ಣನು ನಗ್ನನಾಗಿ ಹೋಗುವ ದುರ್ಯೋಧನನನ್ನು ಕಂಡು ನಕ್ಕು ಆತನು ನಾಚಿಕೆಪಡುವಂತೆ ಮಾಡುತ್ತಾನೆ. ನಾಚಿಕೆಗೊಂಡ ದುರ್ಯೋಧನನು ಸಂಪೂರ್ಣ ವಿವಸ್ತ್ರನಾಗಿ ಹೋಗುವ ಬದಲು ಸೊಂಟದಿಂದ ತೊಡೆಯವರೆಗೂ ಮುಚ್ಚಿಕೊಂಡು ಹೋಗಿ ತನ್ನ ತಾಯಿ ಗಾಂಧಾರಿಯ ಎದುರಿಗೆ ನಿಲ್ಲುತ್ತಾನೆ. ಗಾಂಧಾರಿಯು ಹಾಗಾಗಿ ಆತನ ತೊಡೆಯ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ವಿವಸ್ತ್ರವಾಗಿ ನೋಡುತ್ತಾಳೆ.
  • ಈ ರಹಸ್ಯವನ್ನರಿತಿದ್ದ ಶ್ರೀಕೃಷ್ಣನು ಗದಾಯುಧ್ಧದ ಸಂದರ್ಭದಲ್ಲಿ ಭೀಮನಿಗೆ ತನ್ನ ತೊಡೆಯನ್ನು ತಟ್ಟಿ ತೋರಿಸಿ ಆತನು ದುರ್ಯೋಧನನ ತೊಡೆಗೆ ಪ್ರಹಾರ ಮಾಡುವಂತೆ ಮಾಡುತ್ತಾನೆ ಎಂಬುದಾಗಿ ತಿಳಿಯಲಾಗಿದೆ. ಮಹಾಭಾರತ ಯುಧ್ದದಲ್ಲಿ ತನ್ನೆಲ್ಲಾ ಕುವರರ ಸಾವಿಗೆ ಕೃಷ್ಣನೇ ಕಾರಣನೆಂಬ ಕೋಪದಿಂದ ಗಾಂಧಾರಿಯು ಯದುವಂಶವೂ ಸಹ ಸರ್ವನಾಶವಾಗಲಿ ಎಂದು ಕೃಷ್ಣನನ್ನು ಶಪಿಸುತ್ತಾಳೆ.

ಮರಣ

ಕೌರವರ ಅಂತ್ಯದ ತರುವಾಯ ತನ್ನ ಪತಿ ಮತ್ತು ಕುಂತಿಯೊಡನೆ ವಾನಪ್ರಸ್ಥಕ್ಕೆ ತೆರಳುವ ಗಾಂಧಾರಿಯು ನಂತರ ಅಲ್ಲಿ ಉಂಟಾಗುವ ಕಾಳ್ಗಿಚ್ಚಿನಿಂದ ತನ್ನ ಅಂತ್ಯವನ್ನು ಕಾಣುತ್ತಾಳೆಂಬುದು ಪುರಾಣದ ಅಂಬೋಣ.

Tags:

ಗಾಂಧಾರಿ ಆರಂಭಿಕ ಜೀವನಗಾಂಧಾರಿ ಧೃತರಾಷ್ಟ್ರ ಜೊತೆ ವಿವಾಹಗಾಂಧಾರಿ ಮಹಾಭಾರತದಲ್ಲಿ ಯ ಚಿತ್ರಣಗಾಂಧಾರಿ ಮರಣಗಾಂಧಾರಿಕುರುವಂಶಕೌರವರುದುರ್ಯೋಧನದುಶ್ಯಾಸನಧೃತರಾಷ್ಟ್ರಮಹಾಭಾರತ

🔥 Trending searches on Wiki ಕನ್ನಡ:

ಗುರುರಾಜ ಕರಜಗಿಒಗಟುಶ್ರವಣಬೆಳಗೊಳಏಡ್ಸ್ ರೋಗಭಾರತೀಯ ಶಾಸ್ತ್ರೀಯ ನೃತ್ಯಹನುಮ ಜಯಂತಿವಿರೂಪಾಕ್ಷ ದೇವಾಲಯಭಾರತದ ಸಂವಿಧಾನ ರಚನಾ ಸಭೆಬ್ಲಾಗ್ಆದಿ ಗೋದ್ರೇಜ್ದೆಹಲಿ ಸುಲ್ತಾನರುಆಯುರ್ವೇದನೀರುನಿರಂಜನವಿನಾಯಕ ಕೃಷ್ಣ ಗೋಕಾಕಬಾಗಲಕೋಟೆ ಲೋಕಸಭಾ ಕ್ಷೇತ್ರಪೂರ್ಣಚಂದ್ರ ತೇಜಸ್ವಿಶಾಸನಗಳುದಾಸ ಸಾಹಿತ್ಯವಜ್ರಮುನಿಹೃದಯಬಾಂಗ್ಲಾದೇಶಭಾರತೀಯ ಧರ್ಮಗಳುಜೋಡು ನುಡಿಗಟ್ಟುರಾಜಧಾನಿಗಳ ಪಟ್ಟಿಕರ್ಮಧಾರಯ ಸಮಾಸಪುರಂದರದಾಸಭಾರತೀಯ ಅಂಚೆ ಸೇವೆಸಿಂಧೂತಟದ ನಾಗರೀಕತೆರೈತವಾರಿ ಪದ್ಧತಿಕಲಬುರಗಿಸುಮಲತಾಭಾರತದ ರಾಜ್ಯಗಳ ಜನಸಂಖ್ಯೆಪಂಚತಂತ್ರಆಸ್ಪತ್ರೆಬಾಗಲಕೋಟೆಭಾರತೀಯ ಮೂಲಭೂತ ಹಕ್ಕುಗಳುಕುವೆಂಪುಗಾದೆಕರ್ನಾಟಕದ ಜಾನಪದ ಕಲೆಗಳುಒಂದು ಮುತ್ತಿನ ಕಥೆಚಿಕ್ಕಬಳ್ಳಾಪುರಅರವಿಂದ ಘೋಷ್ಸ್ವರಾಜ್ಯಸಚಿನ್ ತೆಂಡೂಲ್ಕರ್ಕನಕದಾಸರುದರ್ಶನ್ ತೂಗುದೀಪ್ಸಮಾಜ ವಿಜ್ಞಾನಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶಬರಿಕೃಷಿದೇವರ ದಾಸಿಮಯ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ವಸಾಹತುಚೋಳ ವಂಶಕರ್ನಾಟಕದ ಇತಿಹಾಸಹಸ್ತಪ್ರತಿಅಶ್ವಮೇಧಜಾಗತೀಕರಣಮೇಲುಮುಸುಕುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡ ಅಕ್ಷರಮಾಲೆಜೀವನಭಾರತದಲ್ಲಿನ ಜಾತಿ ಪದ್ದತಿನೀರಿನ ಸಂರಕ್ಷಣೆಅಶ್ವತ್ಥಾಮದಶಾವತಾರಸಿಂಧನೂರುಮಲೈ ಮಹದೇಶ್ವರ ಬೆಟ್ಟಮಂತ್ರಾಲಯಕಾಲೆರಾಬಹಮನಿ ಸುಲ್ತಾನರುಶಿವರಾಜ್‍ಕುಮಾರ್ (ನಟ)ಸರ್ವೆಪಲ್ಲಿ ರಾಧಾಕೃಷ್ಣನ್ಆಮ್ಲಕಾರ್ಮಿಕರ ದಿನಾಚರಣೆ🡆 More