ಕ್ಲೈಡ್ ವಿಲಿಯಮ್ ಟಾಂಬೋ

ಕ್ಲೈಡ್ ವಿಲಿಯಮ್ ಟಾಂಬೋ (1906 –1997) -ಅಮೆರಿಕ ದೇಶದ ಖಗೋಳವಿಜ್ಞಾನಿ.

ಪ್ಲೂಟೊಗ್ರಹದ ಆವಿಷ್ಕರ್ತೃ (1930). ( ಆದರೆ ಈ ಪ್ಲೂಟೋ ಅನ್ನು ಗ್ರಹದ ಬದಲಾಗಿ ಕ್ಷುದ್ರಗ್ರಹವೆಂದು ೨೦೦೬ ರಲ್ಲಿ ವರ್ಗೀಕರಿಸಲಾಯಿತು)

ಕ್ಲೈಡ್ ವಿಲಿಯಮ್ ಟಾಂಬೋ
ತಾನೇ ತಯಾರಿಸಿದ ಟೆಲಿಸ್ಕೋಪ್ ಜತೆಗೆ

ಬದುಕು ಮತ್ತು ಸಾಧನೆ

ಕನ್ಸಾಸ್ ವಿಶ್ವವಿದ್ಯಾಲಯದಿಂದ ಪದವೀಧರನಾಗಿ ತನ್ನ ಬಾಲ್ಯದ ಹವ್ಯಾಸವಾದ ಖಗೋಳ ವೀಕ್ಷಣೆಯನ್ನು ವೃತ್ತಿಯನ್ನಾಗಿ ಆಯ್ದುಕೊಂಡ. ಸ್ವತಃ ಮೂರು ಪ್ರತಿಫಲನ ದೂರದರ್ಶಕಗಳನ್ನು ಈತ ತನ್ನ ವಿದ್ಯಾರ್ಥಿದೆಸೆಯಲ್ಲಿ ರಚಿಸಿದ್ದ. ಸ್ವಂತ ವೀಕ್ಷಣೆಗಳನ್ನು ಆಧರಿಸಿ ಬಿಡಿಸಿದ ಗ್ರಹಗಳ ಚಿತ್ರಣವನ್ನು ಅರಿಝೋನದಲ್ಲಿರುವ ಲೋವೆಲ್ ವೀಕ್ಷಣಾಲಯಕ್ಕೆ ಕಳಿಸಿದ (1929). ಇದರ ಆಧಾರದ ಮೇಲೆ ಈತನಿಗೆ ಅಲ್ಲಿ ಉದ್ಯೋಗ ದೊರೆಯಿತು. ಮುಂದೆ 1946 ರಲ್ಲಿ ಎಬರ್ಡೀನ್ ಬ್ಯಾಲಿಸ್ಟಿಕ್ ಲ್ಯಾಬೊರೆಟರಿಯಲ್ಲಿ ಟಾಂಬ ಖಗೋಳವಿಜ್ಞಾನಿಯಾಗಿ ನೇಮಕ ಪಡೆದ. ಅಲ್ಲದೆ 1955ರಿಂದಲೇ ಈತ ನ್ಯೂ ಮೆಕ್ಸಿಕೊ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ತೊಡಗಿದ. ಟಾಂಬೋ ಪ್ರಸಿದ್ಧನಾಗಿರುವುದು. ಈ ಹಿಂದೆ ಹೇಳಿದಂತೆ, ಪ್ಲೊಟೊ ಗ್ರಹದ ಆವಿಷ್ಕರ್ತೃ ಎಂದು. ಪರ್‍ಸಿವೆಲ್ ಲೋವೆಲ್ (1855-1916) ಎಂಬಾತ ಯುರೇನಸ್ ಗ್ರಹದ ಚಲನೆಯು ನೆಪ್ಚೂನ್ ಆಚೆಗಿನ ಗ್ರಹವೊಂದರ ಬಗ್ಗೆ ಪುರಾವೆಗಳನ್ನು ನೀಡುತ್ತದೆ ಎಂದು ಮನಗಂಡು, ಅದರ ಶೋಧನೆಗಾಗಿ ವ್ಯವಸ್ಥಿತ ಶೋಧನ ಕ್ರಮವನ್ನು ನಿರೂಪಿಸಿದ. ಈ ಪ್ರಯೋಗಗಳಲ್ಲಿ ಪಾಲುದಾರರನಾಗಿದ್ದ ಟಾಂಬೋ 1930ರ ಜನವರಿ 23 ಮತ್ತು 29ರಂದು ತೆಗೆದ ಛಾಯಚಿತ್ರಗಳೆರಡನ್ನು ಹೋಲಿಸಿ ಮುಂದಿನ ಫೆಬ್ರುವರಿ 18ರಂದು ಪ್ಲೂಟೋ ಗ್ರಹದ ಇರವನ್ನು ಘೋಷಿಸಿದ. ಹಲವು ನಕ್ಷತ್ರ ಪುಂಜಗಳನ್ನೂ ಚಂಚಲ ನಕ್ಷತ್ರಗಳನ್ನೂ ಕ್ಷುದ್ರಗ್ರಹ ಮತ್ತು ನೀಹಾರಿಕೆಗಳನ್ನೂ ಟಾಂಬೋ ಶೋಧಿಸಿದ್ದಾನೆ. ಅಲ್ಲದೆ ಭೂ ಉಪಗ್ರಹಗಳ ಮತ್ತು ರಾಕೆಟ್ ಕ್ಷಿಪಣಿಗಳ ವಿಚಾರವಾಗಿ ಕೂಡ ಈತ ಸಂಶೋಧನೆ ನಡೆಸಿದ್ದಾನೆ. ಲಂಡನ್‍ನ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ ಜೇಕ್‍ಸನ್ - ಗ್ವಿಲೆಟ್ ಬಹುಮಾನ ಮತ್ತು ಕಂಚಿನ ಪದಕಗಳನ್ನಿತ್ತು ಟೋಂಬವನ್ನು ಗೌರವಿಸಿದೆ.

Tags:

ಅಮೇರಿಕ ಸಂಯುಕ್ತ ಸಂಸ್ಥಾನಪ್ಲುಟೊ

🔥 Trending searches on Wiki ಕನ್ನಡ:

ಮರಾಠಾ ಸಾಮ್ರಾಜ್ಯಜೂಜುಮೂಲಭೂತ ಕರ್ತವ್ಯಗಳುಸಂಸ್ಕಾರಗಾಳಿಪಟ (ಚಲನಚಿತ್ರ)ಶಿವಮೊಗ್ಗಮಾಸ್ತಿ ವೆಂಕಟೇಶ ಅಯ್ಯಂಗಾರ್ಪ್ರಜಾಪ್ರಭುತ್ವಸುದೀಪ್ಕೋಲಾಟತ್ರಿಪದಿಒಗಟುಟೈಗರ್ ಪ್ರಭಾಕರ್ಹೊಯ್ಸಳ ವಾಸ್ತುಶಿಲ್ಪಅನಸುಯ ಸಾರಾಭಾಯ್ಕ್ಯುಆರ್ ಕೋಡ್ಕೈಗಾರಿಕೆಗಳುಒಪ್ಪಂದರಾಣೇಬೆನ್ನೂರುಲೋಪಸಂಧಿಜಿ.ಎಸ್.ಶಿವರುದ್ರಪ್ಪಭಾರತೀಯ ಸಂಸ್ಕೃತಿಶಿವಕುಮಾರ ಸ್ವಾಮಿಕರ್ನಾಟಕ ಸರ್ಕಾರಎಸ್. ಬಂಗಾರಪ್ಪಹಳೆಗನ್ನಡಜಿ.ಪಿ.ರಾಜರತ್ನಂದೇವತಾರ್ಚನ ವಿಧಿನೊಬೆಲ್ ಪ್ರಶಸ್ತಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮತದಾನಉಡುಪಿ ಜಿಲ್ಲೆದಾಳಿಂಬೆವಿಜಯನಗರ ಜಿಲ್ಲೆಚಂದ್ರಶೇಖರ ವೆಂಕಟರಾಮನ್ಚಾಮರಾಜನಗರಬಳ್ಳಾರಿರಾಮ್ ಮೋಹನ್ ರಾಯ್ಪಶ್ಚಿಮ ಬಂಗಾಳದೇವರ/ಜೇಡರ ದಾಸಿಮಯ್ಯಭಾರತದಲ್ಲಿ ಕೃಷಿವಿಜ್ಞಾನಓಂತೀರ್ಥಹಳ್ಳಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಆಲಿವ್ಶಿವನ ಸಮುದ್ರ ಜಲಪಾತಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕರ್ನಾಟಕದ ಮುಖ್ಯಮಂತ್ರಿಗಳುಕರ್ನಾಟಕ ಹೈ ಕೋರ್ಟ್ಮಾಟ - ಮಂತ್ರಛಂದಸ್ಸುಮಂಡ್ಯಕೊಬ್ಬಿನ ಆಮ್ಲಪಂಚಾಂಗವಾಸ್ತುಶಾಸ್ತ್ರಭಾರತದ ರಾಷ್ಟ್ರಪತಿಪ್ರಶಸ್ತಿಗಳುಪಾಂಡವರುಭಾರತದ ಉಪ ರಾಷ್ಟ್ರಪತಿವೇದವಿಮರ್ಶೆಶಿಕ್ಷೆಶಿವಪ್ಪ ನಾಯಕಕರ್ನಾಟಕದ ಸಂಸ್ಕೃತಿಮೌರ್ಯ ಸಾಮ್ರಾಜ್ಯಮಾಧ್ಯಮಮಾವುಆಯುಷ್ಮಾನ್ ಭಾರತ್ ಯೋಜನೆಜೆಕ್ ಗಣರಾಜ್ಯಕಾನೂನುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಜಾಹೀರಾತುಬೇಲೂರುಕುವೆಂಪುಕೆಳದಿ ನಾಯಕರು🡆 More