ಕೆ.ವಿ.ಸುಬ್ಬಣ್ಣ

ಕೆ.ವಿ.ಸುಬ್ಬಣ್ಣ (ಫೆಬ್ರವರಿ ೨೦, ೧೯೩೨ - ಜುಲೈ ೧೬, ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.

ಕೆ.ವಿ.ಸುಬ್ಬಣ್ಣ
ಕೆ.ವಿ.ಸುಬ್ಬಣ್ಣ
ಜನನ೨೦ ಫೆಬ್ರವರಿ ೧೯೩೨
ಹೆಗ್ಗೋಡು, ಸಾಗರ, ಕರ್ನಾಟಕ, ಭಾರತ
ಮರಣ೧೬ ಜುಲೈ ೨೦೦೫ (ವರ್ಷ ೭೩)
ಹೆಗ್ಗೋಡು, ಸಾಗರ, ಕರ್ನಾಟಕ, ಭಾರತ
ವೃತ್ತಿನಾಟಕಕಾರ, ರಂಗಭೂಮಿ, ಬರಹಗಾರ
ಪ್ರಕಾರ/ಶೈಲಿಕಾದಂಬರಿ
ಸಾಹಿತ್ಯ ಚಳುವಳಿನವ್ಯ
ಮಕ್ಕಳುಕೆ. ವಿ. ಅಕ್ಷರ

ಜೀವನ

ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು.

ಕೃತಿಗಳು

  • ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು

ನಾಟಕಗಳು

  • ಗಾರ್ಗಿಯ ಕಥೆಗಳು
  • ರಾಜಕೀಯದ ಮಧ್ಯೆ ಬಿಡುವು
  • ಅಭಿಜ್ಞಾನ ಶಾಕುಂತಲ
  • ಸೂಳೆ ಸನ್ಯಾಸಿ

ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ, ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು. ಇವರು ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂದ ಪ್ರಶಸ್ತಿಗಳು

ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಇದು ಅತ್ಯಂತ ಮಹತ್ವದ ಕೃತಿ. ಕರ್ನಾಟಕದ ಸಮಾಜವಾದಿ ಚಳವಳಿಯ ಹಿರಿಯ ನಾಯಕ ಶಾಂತವೇರಿ ಗೋಪಾಲ ಗೌಡರ ಪ್ರಭಾವದಿಂದ ಸುಬ್ಬಣ್ಣ ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಪ್ರತಿ ವರ್ಷ ಅವರು ನಡೆಸುತ್ತಿರುವ "ಸಂಸ್ಕೃತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಸಂಸ್ಕೃತಿಯ ಪರಿಚಯವನ್ನು, ಚಿಂತಕರ ಸಂಪರ್ಕವನ್ನೂ ಮಾಡಿಸಿದ್ದಾರೆ. ಇತರ ಭಾಷೆಗಳ ನಾಟಕಗಳ ಅನುವಾದಗಳನ್ನು ಒಳಗೊಂಡಿರುವ ರಂಗಭೂಮಿಗೆ ಸಂಬಂಧಿಸಿದ ಸಾಹಿತ್ಯವನ್ನು ಕನ್ನಡದಲ್ಲಿ ಪ್ರಕಟಿಸಲು ಅವರು ಅಕ್ಷರ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಅವರ ಮಗ ಕೆ.ವಿ.ಅಕ್ಷರ ಕೂಡ ನಾಟಕಕಾರ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಕೆ.ವಿ.ಸುಬ್ಬಣ್ಣ ಜೀವನಕೆ.ವಿ.ಸುಬ್ಬಣ್ಣ ಕೃತಿಗಳುಕೆ.ವಿ.ಸುಬ್ಬಣ್ಣ ಸಂದ ಪ್ರಶಸ್ತಿಗಳುಕೆ.ವಿ.ಸುಬ್ಬಣ್ಣ ಉಲ್ಲೇಖಗಳುಕೆ.ವಿ.ಸುಬ್ಬಣ್ಣ ಬಾಹ್ಯ ಕೊಂಡಿಗಳುಕೆ.ವಿ.ಸುಬ್ಬಣ್ಣಕರ್ನಾಟಕಜುಲೈ ೧೬ಫೆಬ್ರವರಿ ೨೦೧೯೩೨೨೦೦೫

🔥 Trending searches on Wiki ಕನ್ನಡ:

ಭಾರತದ ನದಿಗಳುಜಾಗತಿಕ ತಾಪಮಾನಜಲ ಮಾಲಿನ್ಯಜಾನಪದಕಾದಂಬರಿಭೂಮಿ ದಿನಶಾಂತಲಾ ದೇವಿವಿಕಿಪೀಡಿಯವಾರ್ಧಕ ಷಟ್ಪದಿಹದಿಬದೆಯ ಧರ್ಮಗೋವಿಂದ ಪೈಸಮಾಜಶಾಸ್ತ್ರಕರ್ನಾಟಕದ ಅಣೆಕಟ್ಟುಗಳುಕುಬೇರಆದೇಶ ಸಂಧಿಸಾವಿತ್ರಿಬಾಯಿ ಫುಲೆಭಾರತದ ಆರ್ಥಿಕ ವ್ಯವಸ್ಥೆತೆಲುಗುಗೋತ್ರ ಮತ್ತು ಪ್ರವರಅಕ್ಕಮಹಾದೇವಿಗುಪ್ತ ಸಾಮ್ರಾಜ್ಯತಂತ್ರಜ್ಞಾನದ ಉಪಯೋಗಗಳುಜಿಪುಣಶ್ರೀ ರಾಮಾಯಣ ದರ್ಶನಂಕರ್ನಾಟಕದ ಜಿಲ್ಲೆಗಳುಹಲ್ಮಿಡಿಮಲೈ ಮಹದೇಶ್ವರ ಬೆಟ್ಟಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹೈನುಗಾರಿಕೆಕುತುಬ್ ಮಿನಾರ್ಜುಂಜಪ್ಪಕುಕ್ಕೆ ಸುಬ್ರಹ್ಮಣ್ಯ ದೇವಾಲಯಚದುರಂಗ (ಆಟ)ಹರಪ್ಪಭಾರತದ ಬುಡಕಟ್ಟು ಜನಾಂಗಗಳುಭಾರತೀಯ ಜನತಾ ಪಕ್ಷಭಾರತಚಂಪೂರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಕರ್ನಾಟಕದ ಮಹಾನಗರಪಾಲಿಕೆಗಳುಕುವೆಂಪುಕೃಷಿ ಉಪಕರಣಗಳುಬ್ಯಾಂಕ್ಇಮ್ಮಡಿ ಪುಲಕೇಶಿಭಾರತೀಯ ಸಮರ ಕಲೆಗಳುಹೊಯ್ಸಳ ವಾಸ್ತುಶಿಲ್ಪನಾಗರೀಕತೆಹಂಪೆಪ್ರಬಂಧ ರಚನೆಮೈಸೂರು ದಸರಾಶಾತವಾಹನರುಶಾಲೆಭಾರತೀಯ ರಿಸರ್ವ್ ಬ್ಯಾಂಕ್ಸಿದ್ಧರಾಮಕಾರ್ಮಿಕರ ದಿನಾಚರಣೆಆದಿ ಶಂಕರಮಣ್ಣುಸರ್ಪ ಸುತ್ತುನೇಮಿಚಂದ್ರ (ಲೇಖಕಿ)ರನ್ನಸರ್ವಜ್ಞಹಾವುಹುಲಿವಿಷ್ಣುವರ್ಧನ್ (ನಟ)ವಚನಕಾರರ ಅಂಕಿತ ನಾಮಗಳುಕಲ್ಪನಾಗಿಡಮೂಲಿಕೆಗಳ ಔಷಧಿಹಕ್ಕ-ಬುಕ್ಕಆತ್ಮಚರಿತ್ರೆರಕ್ತ ದಾನಶಬರಿವಡ್ಡಾರಾಧನೆಗುರು (ಗ್ರಹ)ಒಗಟುಹಿಂದೂ ಮಾಸಗಳುಗೂಗಲ್ಸೂರ್ಯವ್ಯೂಹದ ಗ್ರಹಗಳು🡆 More