ಕಾರ್ನೀಲಿಯಸ್ ಟ್ಯಾಸಿಟಸ್

ಕಾರ್ನೀಲಿಯಸ್ ಟ್ಯಾಸಿಟಸ್ (ಸು.

56-ಸು. 120). ರೋಮನ್ ವಾಗ್ಮಿ, ರಾಜಕಾರಣಿ, ಇತಿಹಾಸಕಾರ.

ಕಾರ್ನೀಲಿಯಸ್ ಟ್ಯಾಸಿಟಸ್
ಟ್ಯಾಸಿಟಸ್ ನ ಆಧುನಿಕ ಶಿಲ್ಪ

ಬದುಕು

ಈತ ಬಹುಶಃ ಕಾರ್ನೀಲಿಯನ್ ಶ್ರೀಮಂತ ಮನೆತನದವನಲ್ಲ. ಸಿಸ್‍ಆಲ್ಪೈನ್ ಗಾಲ್ ಮನೆತನಕ್ಕೋ ಗಾಲಿಯ ನಾರ್ಬೊನೆನ್ಸಿಸ್ ಮೆನೆತನಕ್ಕೋ ಸೇರಿದವನಾಗಿದ್ದಿರಬೇಕು. ರೋಮನ್ ಪೌರತ್ವ ಪಡೆದಮೇಲೆ ಕಾರ್ನೀಲಿಯಸ್ ಎಂಬ ಹೆಸರು ತಳೆದಿರಬೇಕು. ಇವನು ಸು. 56ರಲ್ಲಿ ಹುಟ್ಟಿದ. ಈತನ ಮೊದಲ ಹೆಸರು ಪಬ್ಲಿಯಸ್ ಅಥವಾ ಗೈಯಸ್ ಆಗಿದ್ದಿರಬೇಕು. ಈತನ ಮನೆತನದ ವಾತಾವರಣ, ಸಾಮಥ್ರ್ಯ ಇವುಗಳಿಂದಾಗಿ ಈತ ಒಳ್ಳೆಯ ಶಿಕ್ಷಣ ಪಡೆದು, ಒಳ್ಳೆಯ ವಿವಾಹಸಂಬಂಧ ಬೆಳಸಿ, ಅಧಿಕಾರ ಸಂಪಾದಿಸುವುದು ಸುಲಭವಾಯಿತು. ಟ್ಯಾಸಿಟನ್ ವಾಗ್ಮಿಕಲೆಯನ್ನು ಅಭ್ಯಾಸಮಾಡಿ ಇಬ್ಬರು ಪ್ರಮುಖ ವಾಗ್ಮಿಗಳ ಅಡಿಯಲ್ಲಿ ವಾದವೃತ್ತಿಯನ್ನಾರಂಭಿಸಿದ. ಅಗ್ರಿಕೋಲನ ಮಗಳನ್ನು ವಿವಾಹವಾದ. ಈ ಸಂಬಂಧದಿಂದಾಗಿ ಇವನಿಗೆ ಪ್ರಭಾವಶಾಲಿಗಳ ಬೆಂಬಲ ಸಿಕ್ಕಿತು. ಈತ ಸರ್ಕಾರಿ ಹುದ್ದೆ ಗಳಿಸಿದ. ನ್ಯಾಯಾಧಿಕಾರಿಯಾಗಿ, ದಂಡಾಧಿಕಾರಿಯಾಗಿ, 81ರಲ್ಲಿ ಕ್ವೆಸ್ಟರ್ ಆದ. 88ರಲ್ಲಿ ನ್ಯಾಯಾಧೀಶನಾಗಿ (ಪ್ರೆಟರ್) ಪುರೋಹಿತ ವರ್ಗದ ಸದಸ್ಯನಾದ. ಮಾವನಾದ ಅಗ್ರಿಕೋಲ ಮರಣಹೊಂದಿದಾಗ (93) ಇವನು ರೋಮಿನಿಂದ ಹೊರಗೆ ಇದ್ದ. ಅನಂತರ ರೋಮಿಗೆ ಹಿಂದಿರುಗಿದ. ವಾಗ್ಮಿಯಾಗಿ ಹೆಸರು ಗಳಿಸಿದ. ಆದರೆ ಕ್ರಮೇಣ ಇವನ ಮನಸ್ಸು ಸಾಹಿತ್ಯದ ಕಡೆಗೆ ತಿರುಗಿತು.

ಸಾಹಿತ್ಯ

ಇವನು ಅನೇಕ ಗ್ರಂಥಗಳನ್ನು ರಚಿಸಿದ. ವಿಷಯಕ್ಕೆ ತಕ್ಕ ಶೈಲಿಯನ್ನು ಬಳಸುವ ಸಾಮಥ್ರ್ಯ ಇವನಿಗೆ ಇತ್ತು. ಇವನ ರಾಜಕೀಯ ಅನುಭವದ ಹಿನ್ನಲೆಯಲ್ಲಿ ಇತಿಹಾಸಪ್ರಜ್ಞೆ ಎಲ್ಲ ಕೃತಿಗಳಲ್ಲೂ ಅಭಿವ್ಯಕ್ತಿ ಪಡೆಯಿತು. ಇವನ ಮುಖ್ಯ ಕೃತಿಗಳು ಇವು : 1 ಅಗ್ರಿಕೋಲ-ಮಾವ ಅಗ್ರಿಕೋಲನ ಜೀವನ ಚರಿತ್ರೆ (98); 2 ಜರ್ಮೇನಿಯ-ಜರ್ಮನಿಯ ಭೂವಿವರಣೆ ಮತ್ತು ವಿವಿಧ ಪಂಗಡಗಳ ಪದ್ಧತಿ (98); 3 ಡೈಯಲೋಗಸ್ ಡಿ ಆರೆಟೋರಿಬಸ್-ಕವಿಜೀವನದ ಆನಂದ, ಶ್ರೇಷ್ಠತೆ ಮತ್ತು ವಾಗ್ಮಿತೆಗಳ ತೌಲನಿಕ ವಿವೇಚನೆ; ಭಾಷಣಕಲೆ ಇಳಿಮುಖವಾದ್ದರ ಕಾರಣಗಳ ಪರಿಶೀಲನೆ ಸು. (102); 4 ಹಿಸ್ಟೊರೀಸ್-69 ರಿಂದ 96ರ ವರೆಗಿನ ಇತಿಹಾಸ (ಇದರ ರಚನೆ ಸು.109ರಲ್ಲಿ ಮುಗಿಯಿತು); 5 ಅನಾಲ್ಸ್-ಹಿಸ್ಟೊರೀಸ್‍ನ ಹಿಂದಿನ ಅವಧಿಯ (14-68) ಇತಿಹಾಸ.

ಟ್ಯಾಪಿಟಸ್ ತನ್ನ ಕೃತಿಗಳನ್ನು ರಚಿಸಲು ಅನೇಕ ಆಕರಗಳನ್ನು ಉಪಯೋಗಿಸಿಕೊಂಡಿದ್ದಾನೆ. ಹಿಂದೆಯೋ ರಚಿತವಾಗಿದ್ದ ಕೆಲವು ಗ್ರಂಥಗಳನ್ನು ಉಪಯೋಗಿಸಿ ಕೊಂಡಿರುವುದಲ್ಲದೆ ಸೆನೇಟಿನ ಮತ್ತು ಸರ್ಕಾರಿ ದಾಖಲೆಗಳೇ ಮುಂತಾದವನ್ನು ಅವಲೋಕಿಸಿದ್ದಾನೆ. ತನ್ನ ಸ್ವಂತ ಮತ್ತು ಸ್ನೇಹಿತರ ಅನುಭವಗಳನ್ನೂ ಆಧಾರವಾಗಿಟ್ಟುಕೊಂಡಿದ್ದಾನೆ. ಟ್ಯಾಸಿಟಸನ ಇತಿಹಾಸದೃಷ್ಟಿ ನಿಷ್ಪಕ್ಷಪಾತವಾದ್ದು. ಇವನು ರೋಮನ್ ಸಾಂಪ್ರದಾಯಿಕ ವರ್ತನೆಯನ್ನೇ ಆಧಾರವಾಗಿಟ್ಟುಕೊಂಡಿದ್ದ; ಇತಿಹಾಸವು ವ್ಯಕ್ತಿ ಪ್ರಧಾನವಾದ್ದೆಂದೇ ಇವನ ಭಾವನೆಯಾಗಿತ್ತು. ಟ್ಯಾಸಿಟಸನಿಗೆ ಇತಿಹಾಸಕಾರನಿಗಿರಬೇಕಾದ ಎಲ್ಲ ಗುಣಗಳೂ ಇದ್ದುವು. ಇವನ ಕಲ್ಪನಾಶಕ್ತಿ ಅಗಾಧವಾದ್ದು. ಇವನ ಗ್ರಂಥಗಳಲ್ಲಿ ವಿಷಯವೈವಿಧ್ಯವನ್ನೂ ವಿಮರ್ಶಾತ್ಮಕವಾದ ಮತ್ತು ವೈಜ್ಞಾನಿಕವಾದ ದೃಷ್ಟಿಯನ್ನೂ ಕಾಣಬಹುದು. ಒಂದು ಸಾವಿರ ವರ್ಷಗಳ ಅನಂತರ, ಪುನರುಜ್ಜೀವನ ಕಾಲದಲ್ಲಿ, ಇವನ ಶೈಲಿಯನ್ನು ಸಾಹಿತಿಗಳು ಸ್ಪಷ್ಟವಾಗಿ ಅಭ್ಯಸಿಸಿದರು. ಫ್ರಾನ್ಸಿನ ಕ್ರಾಂತಿಗಿಂತಲೂ ಹಿಂದೆಯೇ ಇವನ ಇತಿಹಾಸ ಗ್ರಂಥಗಳು ಫ್ರೆಂಚರ ಸಾಹಿತ್ಯದ ಮೇಲೆ ಪ್ರಭಾವ ಬೀರಿದ್ದುವು. ಆಧುನಿಕ ವಿದ್ವಾಂಸರು ಇವನ ಕೃತಿಗಳನ್ನು, ಶೈಲಿಯನ್ನು ಮತ್ತು ಐತಿಹಾಸಿಕ ದೃಷ್ಟಿಯನ್ನು ವಿವರವಾಗಿ ಪರೀಕ್ಷಿಸಿ, ಇವನು ರೋಮಿನ ವಿಮಾರ್ಶಾತ್ಮಕ ದೃಷ್ಟಿಯ ಇತಿಹಾಸಕಾರನೆಂದು ಪರಿಗಣಿಸಿದ್ದಾರೆ. ರೋಮನ್ ಇತಿಹಾಸಕಾರರಲ್ಲಿ ಟ್ಯಾಸಿಟಸ್ ಅಮರನಾಗುತ್ತಾನೆ.


Tags:

ರೋಮನ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಕೈಗಾರಿಕೆಗಳ ಸ್ಥಾನೀಕರಣಮರಣದಂಡನೆರಾಸಾಯನಿಕ ಗೊಬ್ಬರಭಾರತದ ನದಿಗಳುಗಣರಾಜ್ಯೋತ್ಸವ (ಭಾರತ)ಉಪ್ಪಿನ ಸತ್ಯಾಗ್ರಹಪೃಥ್ವಿರಾಜ್ ಚೌಹಾಣ್ಹಾಲು2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹರಿಹರ (ಕವಿ)ರಾಷ್ಟ್ರೀಯ ವರಮಾನಚಂದ್ರಯಾನ-೩ಕರ್ನಾಟಕದಲ್ಲಿ ಸಹಕಾರ ಚಳವಳಿಚಂಡಮಾರುತವಿಧಾನ ಪರಿಷತ್ತುತತ್ಪುರುಷ ಸಮಾಸಚಾಮುಂಡರಾಯರೋಮನ್ ಸಾಮ್ರಾಜ್ಯಅಷ್ಟಾವಕ್ರಶಬ್ದಅಲ್ಲಮ ಪ್ರಭುಪಂಚಾಂಗಅಕ್ಬರ್ಇಂಡಿಯಾನಾಬಿ. ಎಂ. ಶ್ರೀಕಂಠಯ್ಯಏಲಕ್ಕಿಕರ್ಣಾಟ ಭಾರತ ಕಥಾಮಂಜರಿಲೆಕ್ಕ ಪರಿಶೋಧನೆಜನಪದ ಕಲೆಗಳುಅಲೋಹಗಳುಭೌಗೋಳಿಕ ಲಕ್ಷಣಗಳುಭಾರತದ ವಿಭಜನೆಹಳೆಗನ್ನಡಸಂತಾನೋತ್ಪತ್ತಿಯ ವ್ಯವಸ್ಥೆಸಿದ್ಧಯ್ಯ ಪುರಾಣಿಕರಕ್ತಯೋನಿನೈಸರ್ಗಿಕ ವಿಕೋಪಅರವಿಂದ ಘೋಷ್ಕೃಷ್ಣಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುವಸ್ತುಸಂಗ್ರಹಾಲಯಪುತ್ತೂರುಕರ್ನಾಟಕದ ಜಲಪಾತಗಳುಅಲಾವುದ್ದೀನ್ ಖಿಲ್ಜಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗೊರೂರು ರಾಮಸ್ವಾಮಿ ಅಯ್ಯಂಗಾರ್ಕಿತ್ತೂರು ಚೆನ್ನಮ್ಮವಾಣಿಜ್ಯ ಪತ್ರಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಮೌರ್ಯ ಸಾಮ್ರಾಜ್ಯಮಾಲಿನ್ಯಉತ್ಕರ್ಷಣ - ಅಪಕರ್ಷಣಪ್ರತಿಫಲನಗರ್ಭಧಾರಣೆಅಶ್ವತ್ಥಮರಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಜಾತಿಮಾಧ್ಯಮಕುಟುಂಬಸುರಪುರದ ವೆಂಕಟಪ್ಪನಾಯಕಗ್ರೀಸ್ದಶಾವತಾರಚಾಲುಕ್ಯದಿಯಾ (ಚಲನಚಿತ್ರ)ಪೂರ್ಣಚಂದ್ರ ತೇಜಸ್ವಿಸುಭಾಷ್ ಚಂದ್ರ ಬೋಸ್ಶ್ರವಣಾತೀತ ತರಂಗಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಮೇರಿ ಕೋಮ್ಮೊದಲನೆಯ ಕೆಂಪೇಗೌಡನಾಗಮಂಡಲ (ಚಲನಚಿತ್ರ)ಪಾಟಲಿಪುತ್ರಕುಮಾರವ್ಯಾಸಜೀವಕೋಶಕ್ರೀಡೆಗಳು🡆 More