ಕಲ್ಬಾಗಿ

ಕಲ್ಬಾಗಿ ಕಾಲಕಾಲಕ್ಕೆ ಉದುರಿ ಹೋಗುವ ಎಲೆಗಳನ್ನು ಪಡೆದ ಅಗಲವಾಗಿ ಹರಡುವ ತುದಿಯುಳ್ಳ ದೊಡ್ಡ ಮರ.

ಕಲ್ಬಾಗಿ
ಕಲ್ಬಾಗಿ
Bark of Albizia chinensis
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Fabales
ಕುಟುಂಬ:
Fabaceae
ಕುಲ:
Albizia
ಪ್ರಜಾತಿ:
A. chinensis
Binomial name
Albizia chinensis

ಸಸ್ಯಶಾಸ್ತ್ರೀಯ ಹೆಸರು

ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ಆಲ್ಬಿಜಿûಯ ಚೈನೆನ್ಸಿಸ್ ಎಂಬ ಹೆಸರಿದೆ.ಹೊಟ್ಟೆ ಬಾಗೆ ಪರ್ಯಾಯನಾಮ.

ಗುಣ ಲಕ್ಷಣಗಳು

ಕಲ್ಬಾಗಿ 
ಕಲ್ಬಾಗಿಯ ಬೀಜಗಳು

ಸಾಧಾರಣವಾಗಿ ೩೦" ಎತ್ತರ ಹಾಗೂ ೮" ವ್ಯಾಸವುಳ್ಳ ಸ್ತಂಭಾಕಾರದ ಕಾಂಡವಿದೆ. ಈ ಮರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ೪,೦೦೦" ಎತ್ತರದವರೆಗೂ ಕಂಡುಬರುತ್ತದೆ. ಹಾಗೆಯೇ ಬಂಗಾಳ,ಅಸ್ಸಾಂ, ದಕ್ಷಿಣ ಭಾರತದ, ಅಂಡಮಾನ್, ನಿಕೋಬಾರ್ ದ್ವೀಪಗಳು, ಮಯನ್ಮಾರ್, ಶ್ರೀಲಂಕಗಳಲ್ಲೂ ಸಾಮಾನ್ಯವಾಗಿದೆ.

ಉಪಯೋಗಗಳು

ಕಾಫಿ ಮತ್ತು ಟೀ ತೋಟಗಳಲ್ಲಿ ಇದನ್ನು ಒಂದು ಅತ್ಯುತ್ತಮ ನೆರಳಿನ ಮರವಾಗಿ ಬೆಳೆಸುತ್ತಾರೆ. ಬಹುಶಃ ಇದರ ಒಣ ಎಲೆಗಳು ಟೀ ಗಿಡಗಳಿಗೆ ಬಹಳ ಉತ್ತಮ ಗೊಬ್ಬರವೂ ಹೌದು. ಇದರ ಚೌಬೀನೆ ಇತರ ಆಲ್ಬಿಜಿûಯಗಳಂತೆಯೆ ಇದ್ದರೂ ಬಣ್ಣದಲ್ಲಿ ಹೆಚ್ಚು ಗಾಢವಾದುದೂ ಒಳ್ಳೆಯ ಹೊಳಪಿನಿಂದ ಕೂಡಿದುದೂ ಮೃದುವಾದುದೂ ಆಗಿದೆ. ಇದರ ಒಣಭಾರ ಘನ ಅಡಿಗೆ ಸು. ೨೨-೪೬ ಪೌಂ. ಆದರೆ ಇದು ಬೇಗನೆ ಕೀಟಗಳ ಆಕ್ರಮಣಕ್ಕೆ ಗುರಿಯಾಗುತ್ತದೆ. ಆದರೂ ಪೆಟ್ಟಿಗೆ, ಹಲಗೆ, ತೋಡು ದೋಣಿ, ಬಾವಿಯ ಚೌಕಟ್ಟುಗಳು, ಪೀಠೋಪಕರಣಗಳು, ಗಾಡಿಚಕ್ರ, ಮರದ ಗಂಟೆಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಬಂಗಾಳದಲ್ಲಿ ಚಹಪೆಟ್ಟೆಗೆಗಳನ್ನು ಮಾಡುವುದಕ್ಕೂ ಇದ್ದಲಿನ ತಯಾರಿಕೆಯಲ್ಲೂ ಬಳಸುತ್ತಾರೆ. ಕೆಲವೆಡೆ ಸೌದೆಯಾಗಿಯೂ ಉಪಯೋಗದಲ್ಲಿದೆ. ಕಲ್ಬಾಗಿಯ ಕಾಂಡದಿಂದ ಪಡೆಯಲಾಗುವ ಒಂದು ತರದ ಅಂಟನ್ನು ನೇಪಾಳಿಗಳು ಡ್ಯಾಘ್ನೆ ಎಂಬ ಕಾಗದಕ್ಕೆ ಹೊಳಪು ಕೊಡಲು ಉಪಯೋಗಿಸುತ್ತಾರೆ. ಇದರ ತರಗೆಲೆಗಳು, ರೆಂಬೆಗಳು ದನಕರುಗಳಿಗೆ ಆಹಾರ. ತೊಗಟೆಯ ಕಷಾಯ ಕಜ್ಜಿ ಮೊದಲಾದ ಚರ್ಮರೋಗಗಳಿಗೆ ಔಷಧಿ

ಬಾಹ್ಯ್ಸ ಸಂಪರ್ಕಗಳು

ಉಲ್ಲೇಖಗಳು

ಕಲ್ಬಾಗಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕಲ್ಬಾಗಿ ಸಸ್ಯಶಾಸ್ತ್ರೀಯ ಹೆಸರುಕಲ್ಬಾಗಿ ಗುಣ ಲಕ್ಷಣಗಳುಕಲ್ಬಾಗಿ ಉಪಯೋಗಗಳುಕಲ್ಬಾಗಿ ಬಾಹ್ಯ್ಸ ಸಂಪರ್ಕಗಳುಕಲ್ಬಾಗಿ ಉಲ್ಲೇಖಗಳುಕಲ್ಬಾಗಿ

🔥 Trending searches on Wiki ಕನ್ನಡ:

ಇಂದಿರಾ ಗಾಂಧಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪರಿಸರ ರಕ್ಷಣೆಪಿ.ಲಂಕೇಶ್ದ್ವಿರುಕ್ತಿಮಲೈ ಮಹದೇಶ್ವರ ಬೆಟ್ಟಗಣೇಶ್ (ನಟ)ಜೈ ಕರ್ನಾಟಕದಾಳಿಂಬೆಸೀತೆಭೂಶಾಖದ ಶಕ್ತಿಮೈಸೂರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ತತ್ಸಮ-ತದ್ಭವಕರ್ನಾಟಕದ ಆರ್ಥಿಕ ಪ್ರಗತಿಚೋಳ ವಂಶದಯಾನಂದ ಸರಸ್ವತಿಮಧ್ವಾಚಾರ್ಯರಾಮಾಯಣಹಟ್ಟಿ ಚಿನ್ನದ ಗಣಿಮಂಡ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬುಟ್ಟಿಸುಮಲತಾಸಂಸ್ಕೃತ ಸಂಧಿಆದಿ ಕರ್ನಾಟಕಶಂಕರ್ ನಾಗ್ಆಯ್ದಕ್ಕಿ ಲಕ್ಕಮ್ಮವೇದಷಟ್ಪದಿವ್ಯಾಪಾರಹೊನಗೊನ್ನೆ ಸೊಪ್ಪುಇಂಡಿಯನ್ ಪ್ರೀಮಿಯರ್ ಲೀಗ್ಗೀಳು ಮನೋರೋಗಮೇರಿ ಕೋಮ್ಅರ್ಥ ವ್ಯವಸ್ಥೆವ್ಯಕ್ತಿತ್ವ ವಿಕಸನಜಾಗತೀಕರಣಚಂದ್ರಬೇವುಆಸ್ಟ್ರೇಲಿಯರನ್ನಸತಿ ಪದ್ಧತಿಆತ್ಮಚರಿತ್ರೆಹೃದಯವಸಾಹತುಕಲ್ಹಣಹಂಪೆಕ್ರೀಡೆಗಳುಉಡಜಲ ಮಾಲಿನ್ಯದಿಕ್ಕುಬಾದಾಮಿಅಮ್ಮಭಾರತದಲ್ಲಿ ಮೀಸಲಾತಿಶಬ್ದಮಣಿದರ್ಪಣಸೌರಮಂಡಲಭಾರತದ ಮುಖ್ಯಮಂತ್ರಿಗಳುಜಿ.ಪಿ.ರಾಜರತ್ನಂಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗ್ರಾಮ ಪಂಚಾಯತಿಕರ್ನಾಟಕದ ಮುಖ್ಯಮಂತ್ರಿಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸರ್ವೆಪಲ್ಲಿ ರಾಧಾಕೃಷ್ಣನ್ವಿಶಿಷ್ಟಾದ್ವೈತಶನಿಗಿರೀಶ್ ಕಾರ್ನಾಡ್ಸಂಸದೀಯ ವ್ಯವಸ್ಥೆಜಾತ್ರೆಸೂಳೆಕೆರೆ (ಶಾಂತಿ ಸಾಗರ)ಅಕ್ಷಾಂಶ ಮತ್ತು ರೇಖಾಂಶಆಲಮಟ್ಟಿ ಆಣೆಕಟ್ಟುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದಿಯಾ (ಚಲನಚಿತ್ರ)ಕರ್ನಾಟಕ ರತ್ನನಾಗಚಂದ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ🡆 More