ಕರ್ನೂಲ್ ಕೋಟೆ

ಕರ್ನೂಲ್ ಕೋಟೆ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿದೆ.

ಅದನ್ನು ಅಚ್ಯುತ ದೇವರಾಯರು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಅದು ವಿಜಯನಗರದ ಆಸ್ಥಾನಕ್ಕೆ ಸೇರಿದ್ದು. ಈ ಕಾಲದಲ್ಲೂ ವಿಜಯನಗರದ ವಾಸ್ತುಶಿಲ್ಪಕ್ಕೆ ಈ ಕಟ್ಟಡ ತೇಜಸ್ಸಿನ ಉದಾಹರಣೆಯಾಗಿದೆ. ಕೃಷ್ಣಾ ನದಿ ಮತ್ತು ಅಲಂಪೂರಿನ ಮಧ್ಯೆದಲ್ಲಿ ಒಂದು ಸುರಂಗವಿದೆ, ಈ ಸುರಂಗವನ್ನು ಈಗಲೂ ಸಹ ಕಾಣಬಹುದು. ಈ ಕೋಟೆಯನ್ನು ಸೆರೆಮನೆ ಎಂದು ಭಾವಿಸಲಾಗಿದೆ ಏಕೆಂದರೆ ಈ ಸೆರೆಮನೆಯಲ್ಲಿಯೇ ಕೊಂಡಾ ರೆಡ್ಡಿಯವರು ತಮ್ಮ ಕೊನೆ ಉಸಿರೆಳೆದರು. ಆದ್ದರಿಂದ ಈ ಗೋಪುರವನ್ನು ಅವರ ನೆನಪಿನಲ್ಲಿ ಕೊಂಡಾ ರೆಡ್ಡಿ ಬುರುಜು ಎಂದೇ ಕರೆಯುತ್ತಾರೆ.

ಕರ್ನೂಲ್ ಕೋಟೆ
ಕರ್ನೂಲ್ ಕೋಟೆ
ಕೊಂಡಾ ರೆಡ್ಡಿ ಬುರುಜು(ಕರ್ನೂಲ್ ಕೋಟೆ)

ಇತಿಹಾಸ

ವಿಜಯನಗರ ಸಾಮ್ರಾಜ್ಯದಲ್ಲಿ ಇದೊಂದು ಪ್ರಮುಖವಾದ ಕೋಟೆಯಾಗಿ ಹೊರಹೊಮ್ಮಿದೆ. ಅಲಂಪೂರು ಸಾಮ್ರಾಜ್ಯದ ಕೊನೆಯ ನಾಯಕನಾಗಿ ಕೊಂಡಾ ರೆಡ್ಡಿಯವರು ನವಾಬರನ್ನು ಸೋಲಿಸಿದರು. ಇತಿಹಾಸದಲ್ಲಿ, ಕ್ರಾಂತಿಕಾರನಾದ ಕೊಂಡಾ ರೆಡ್ಡಿಯವರು ನವಾಬರ ವಿರುದ್ಧ ಪ್ರತಿಭಟಿಸಿದಕ್ಕಾಗಿ ಮತ್ತು ಅವರು ತಮ್ಮ ಶೌರ್ಯ ಮತ್ತು ಸಾಹಸವನ್ನು ಮುಸಲ್ಮಾನರೊಡನೆ ಯುದ್ಧ ಮಾಡಲು ಪ್ರದರ್ಶಿಸುತ್ತಿದಕ್ಕಾಗಿ ಕೊಂಡಾ ರೆಡ್ಡಿಯವರನ್ನು ಬಂಧಿಸಲಾಯಿತು. ಈ ಘೋರ ಯದ್ಧದ ನಂತರ ಕೊಂಡಾ ರೆಡ್ಡಿಯವರನ್ನು ಕೋಟೆಯ ಸೆರೆಮನೆಯಲ್ಲಿ ಬಂಧಿಸಿದರು. ಆದ್ಧರಿಂದ ಈ ಕೋಟೆಯನ್ನು ಕೊಂಡಾ ರೆಡ್ಡಿ ಬುರುಜು ಎಂದು ಕರೆಯಲಾಗಿದೆ. ಕೋಟೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೃಷ್ಣಾ ನದಿಯ ಮತ್ತು ಅಲಂಪೂರಿನ ಬಳಿ ಒಂದು ಸುರಂಗವನ್ನು ಅಗೆದರು.

ಕೊಂಡಾ ರೆಡ್ಡಿ ಬುರುಜು
ಕರ್ನೂಲ್ ಕೋಟೆ 
ಕರ್ನೂಲ್ ಕೋಟೆ

ಶಿಲ್ಪಕಲೆ

ಈ ಕೋಟೆಯ ಬುರುಜಿನ ರೂಪವು ಒಂದು ದೊಡ್ಡ ಸ್ತಂಭದ ರೂಪವನ್ನು ಹೊಂದಿದೆ. ಈ ಕೋಟೆಯಲ್ಲಿ ಎರಡು ಮಹಡಿಗಳಿವೆ. ಕೆಳಗಿನ ಮಳಿಗೆಯಿಂದ ೨೫ ಕಿ. ಮಿ ವರೆಗೆ ಸಾಗಬಹುದಾದ ರಹಸ್ಯದಾರಿಯೊಂದು ಅಲಂಪೂರು ಜಿಲ್ಲೆಯ ಮೊಹಮ್ಮದ್ ನಗರಕ್ಕೆ ಸೇರುತ್ತದೆ. ಬೇಟೆಗಾರರು ನಿಧಿಯನ್ನು ವಶಪಡಿಸಿಕ್ಕೊಳಲು ಈ ದಾರಿಯನ್ನು ಅಗೆಯಲು ಪ್ರಯತ್ನಿಸಿದರು, ಕೆಲವರು ಯಶಸನ್ನು ಪಡೆದರು ಮತ್ತು ಕೆಲವರಿಗೆ ಅದು ಹಾಗಲಿಲ್ಲ. ಇತ್ತೀಚೆಗೆ, ಕರ್ನೂಲಿನ ಸುಪ್ರಸಿದ್ಧವಾದ ಒಬ್ಬ ವ್ಯಕ್ತಿಯು ಆ ನಿಧಿಯನ್ನು ತೆಗೆದುಕೊಳ್ಳಲು ಮುಂದುವರೆದಾಗ ಈ ದಾರಿಯನ್ನು ಶಾಶ್ವತವಾಗಿ ಮುಚ್ಚಲಾಯಿತು. ಕೋಟೆಯು ಬಹಳ ಎತ್ತರವಾದ ಬಿಂದುವನ್ನು ಸೇರಿದಾಗ ಅದ್ಭುತವಾದ ಸರ್ವತೋಮುಖ ದೃಶ್ಯವನ್ನು ನೋಡಬಹುದು. ಈಗ ಈ ಕೋಟೆಯ ಕೆಲವು ಭಾಗಗಳು ಬಲವಾಗಿ ನಿಂತಿದೆ ಜೊತೆಗೆ ನಾಶವಾಗುವ ಸ್ಥಿತಿಯಲ್ಲಿಯೂ ಇದೆ. ಅಂತಹ ಭಾಗಗಳಲ್ಲಿ ಈ ಎರ್ರ ಬುರುಜಿನ ಗೋಡೆಯ ಮೇಲೆ ಕೆಲವು ತೇಜಸ್ಸಿನ ಚಿಹ್ನೆಗಳು ಪುರಾಣವನ್ನು ಬಿಂಬಿಸುತ್ತವೆ. ಆಗ್ನೇಯ ದಿಕ್ಕಿನ ಗೋಡೆಯ ಮೇಲೆ ನಾವು ಪುರಾತನವಾದ ಸಿಂಹವನ್ನು ಮತ್ತು ಕುರಿಯ ಕೆತ್ತನವನ್ನು ನೋಡಬಹುದು. ಇದೇ ದಿಕ್ಕಿನಲ್ಲಿ ದೇವೇಂದ್ರನ ವಾಹನವಾದ ಐರಾವತ ಮತ್ತು ಪವಿತ್ರವಾದ ಕಲ್ಪವೃಕ್ಷದ ಮರವನ್ನು ಸಹ ಕಾಣಬಹುದು.

ಇದೇ ಗೋಡೆಯ ಮೇಲೆ ನಾವು ಕಪ್ಪೆಯನ್ನು ಆವರಿಸುವ ಸರ್ಪ, ಎಮ್ಮೆ, ಜೋಡಿ ಆನೆಗಳು, ಮಂಗಗಳು ಮರವನ್ನು ಹತ್ತುವುದು ಮತ್ತು ಒಂದು ಕುದುರೆಯು ರಥವನ್ನು ಆಕರ್ಷಿಸುವಂತೆ, ಆನೆ ಮತ್ತು ಕುದುರೆ ಕದನವಾಗುತ್ತಿದ್ದಂತೆ ಕೆತ್ತನೆ ಮಾಡಿದ್ದರೆ. ಶ್ರೀರಾಮ, ಸೋದರ ಲಕ್ಷ್ಮಣ, ಸತಿ ಸೀತಾ ದೇವಿಯ ಸಮೇತ ಇರುವ ಚಿತ್ರಗಳನ್ನು ಸಹ ಕಾಣಬಹುದು.

ಉಲ್ಲೇಖಗಳು

Tags:

ಆಂಧ್ರ ಪ್ರದೇಶಕೃಷ್ಣಾ ನದಿವಿಜಯನಗರ

🔥 Trending searches on Wiki ಕನ್ನಡ:

ವಿಕ್ರಮಾದಿತ್ಯ ೬ಜಾಯಿಕಾಯಿಶಿಲ್ಪಾ ಶಿಂಧೆಅಸಹಕಾರ ಚಳುವಳಿರಕ್ತಪೂರಣಕಾರವಾರನಿರ್ಮಲಾ ಸೀತಾರಾಮನ್ಭಾರತೀಯ ಮೂಲಭೂತ ಹಕ್ಕುಗಳುದಯಾನಂದ ಸರಸ್ವತಿಭಾರತದ ಚುನಾವಣಾ ಆಯೋಗಚಾಲುಕ್ಯನೇಮಿಚಂದ್ರ (ಲೇಖಕಿ)ಅಲಂಕಾರಅಕ್ಕಮಹಾದೇವಿಮಾರಾಟ ಪ್ರಕ್ರಿಯೆಮೊಘಲ್ ಸಾಮ್ರಾಜ್ಯಮಲೆನಾಡುಗುವಾಮ್‌‌‌‌ಚುನಾವಣೆಪಕ್ಷಿನಾಗಮಂಡಲ (ಚಲನಚಿತ್ರ)ಕರ್ನಾಟಕ ಲೋಕಸೇವಾ ಆಯೋಗಸಜ್ಜೆದೇವತಾರ್ಚನ ವಿಧಿಅಪಕೃತ್ಯಭಾರತೀಯ ಅಂಚೆ ಸೇವೆಕನ್ನಡ ಪತ್ರಿಕೆಗಳುಅಷ್ಟಾಂಗ ಯೋಗಕರ್ನಾಟಕದ ಮುಖ್ಯಮಂತ್ರಿಗಳುಶ್ರೀ. ನಾರಾಯಣ ಗುರುಮಯೂರ (ಚಲನಚಿತ್ರ)ರಾಘವಾಂಕಚೋಳ ವಂಶಮುಂಬಯಿ ವಿಶ್ವವಿದ್ಯಾಲಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಹರಿಶ್ಚಂದ್ರಕಾರ್ಯಾಂಗಜಾತ್ಯತೀತತೆಯೋಗ ಮತ್ತು ಅಧ್ಯಾತ್ಮಶ್ಯೆಕ್ಷಣಿಕ ತಂತ್ರಜ್ಞಾನ೧೯೭೧ರ ಭಾರತ-ಪಾಕಿಸ್ತಾನ ಯುದ್ಧಹಿಂದೂ ಧರ್ಮಹೋಲೋಕಾಸ್ಟ್ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಧೂಮಕೇತುಕೊಪ್ಪಳಚಿನ್ನದ ಗಣಿಗಾರಿಕೆಸ್ತನ್ಯಪಾನಯಕೃತ್ತುಕಲೆಅಕ್ಟೋಬರ್ಬ್ರಾಹ್ಮಣಭರತನಾಟ್ಯಹಬ್ಬಭಾರತದಲ್ಲಿ ಕೃಷಿಭಾರತದ ನಿರ್ದಿಷ್ಟ ಕಾಲಮಾನದ್ವೈತ ದರ್ಶನವ್ಯಕ್ತಿತ್ವದರ್ಶನ್ ತೂಗುದೀಪ್ಸಮಾಜ ವಿಜ್ಞಾನವಿಜ್ಞಾನಹೊಯ್ಸಳ ವಾಸ್ತುಶಿಲ್ಪಕ್ರೀಡೆಗಳುಭಾರತ ರತ್ನಕಲ್ಯಾಣ ಕರ್ನಾಟಕಮೌರ್ಯ ಸಾಮ್ರಾಜ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಅರ್ಥಶಾಸ್ತ್ರರಾಬರ್ಟ್ (ಚಲನಚಿತ್ರ)ಕನ್ನಡ ಕಾವ್ಯವಿನಾಯಕ ಕೃಷ್ಣ ಗೋಕಾಕವೇದಶಾಂತರಸ ಹೆಂಬೆರಳುಭೂಶಾಖದ ಶಕ್ತಿಅಣ್ಣಯ್ಯ (ಚಲನಚಿತ್ರ)ಲಕ್ಷ್ಮೀಶಮಲೇರಿಯಾ🡆 More