ಓಲೆ

ಓಲೆಯು ಹಾಲೆಯಲ್ಲಿ ಅಥವಾ ಕಿವಿಯ ಮತ್ತೊಂದು ಬಾಹ್ಯ ಭಾಗದಲ್ಲಿ ಚುಚ್ಚುವಿಕೆ ಮೂಲಕ ಕಿವಿಗೆ ಲಗತ್ತಿಸಲಾದ ಒಂದು ಆಭರಣ.

ಓಲೆಗಳನ್ನು ಎರಡೂ ಲಿಂಗದವರು ತೊಡುತ್ತಾರೆ, ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಓಲೆಗಳನ್ನು ವಿಭಿನ್ನ ಕಾಲಗಳಲ್ಲಿ ವಿಭಿನ್ನ ನಾಗರಿಕತೆಯ ಜನರು ಬಳಸಿದ್ದಾರೆ. ಕಿವಿಯ ಹಾಲೆಯನ್ನು ಹೊರತುಪಡಿಸಿ ಚುಚ್ಚುವಿಕೆಗೆ ಅನ್ಯ ಸ್ಥಳಗಳಲ್ಲಿ ರೂಕ್, ಟ್ರ್ಯಾಗಸ್, ಹೊರಗಿವಿಯ ಅಂಚಿನ ಸುತ್ತಲಿನ ಸ್ಥಳ ಸೇರಿವೆ. ಸರಳ ಪದವಾದ "ಕಿವಿ ಚುಚ್ಚುವಿಕೆ"ಯು ಸಾಮಾನ್ಯವಾಗಿ ಹಾಲೆಯ ಚುಚ್ಚುವಿಕೆಯನ್ನು ಸೂಚಿಸುತ್ತದೆ. ಬಾಹ್ಯ ಕಿವಿಯ ಮೇಲಿನ ಭಾಗದಲ್ಲಿನ ಚುಚ್ಚುವಿಕೆಗಳನ್ನು ಹಲವುವೇಳೆ "ಮೃದ್ವಸ್ಥಿ ಚುಚ್ಚುವಿಕೆ"ಗಳೆಂದು ಸೂಚಿಸಲಾಗುತ್ತದೆ. ಮೃದ್ವಸ್ಥಿ ಚುಚ್ಚುವಿಕೆಗಳು ಹಾಲೆಯ ಚುಚ್ಚುವಿಕೆಗಳಿಗೆ ಹೋಲಿಸಿದರೆ ಕೈಗೊಳ್ಳಲು ಹೆಚ್ಚು ಸಂಕೀರ್ಣವಾಗಿರುತ್ತವೆ ಮತ್ತು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ಓಲೆ
ಓಲೆ
ಓಲೆ

ಓಲೆಯ ಘಟಕಗಳನ್ನು ಅನೇಕ ಸಂಖ್ಯೆಯ ವಸ್ತುಗಳಿಂದ ತಯಾರಿಸಬಹುದು. ಇವುಗಳಲ್ಲಿ ಲೋಹ, ಪ್ಲಾಸ್ಟಿಕ್, ಗಾಜು, ರತ್ನದ ಕಲ್ಲು, ಮಣಿಗಳು, ಕಟ್ಟಿಗೆ, ಮೂಳೆ, ಮತ್ತು ಇತರ ವಸ್ತುಗಳು ಸೇರಿವೆ. ವಿನ್ಯಾಸಗಳು ಸಣ್ಣ ಕುಣಿಕೆಗಳು ಮತ್ತು ಗುಬಟುಗಳಿಂದ ಹಿಡಿದು ದೊಡ್ಡ ತಟ್ಟೆಗಳು ಮತ್ತು ಜೋತಾಡುವ ವಸ್ತುಗಳವರೆಗೆ ವ್ಯಾಪಿಸುತ್ತವೆ. ಗಾತ್ರವು ಅಂತಿಮವಾಗಿ ಹಾಲೆಯು ಹರಿಯದೆ ಓಲೆಯನ್ನು ಹಿಡಿದಿಡುವ ಭೌತಿಕ ಸಾಮರ್ಥ್ಯದಿಂದ ಸೀಮಿತವಾಗಿರುತ್ತದೆ. ಆದರೆ, ವಿಸ್ತೃತ ಕಾಲಾವಧಿಗಳವರೆಗೆ ಧರಿಸಲಾದ ಭಾರವಾದ ಓಲೆಗಳು ಹಾಲೆ ಮತ್ತು ಚುಚ್ಚುರಂಧ್ರದ ವಿಸ್ತರಿಸುವಿಕೆಗೆ ಕಾರಣವಾಗಬಹುದು.

ಕಿವಿ ಚುಚ್ಚುವಿಕೆಯು ದೇಹದ ಮಾರ್ಪಾಡಿನ ಪರಿಚಿತವಾದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾಗಿದೆ. ವಿಶ್ವದ ಸುತ್ತಲಿನ ಸಂಸ್ಕೃತಿಗಳಿಂದ ಇದರ ಕಲಾತ್ಮಕ ಮತ್ತು ಲಿಖಿತ ಉಲ್ಲೇಖಗಳು ಮುಂಚಿನ ಇತಿಹಾಸದಷ್ಟು ಹಿಂದಿನ ಕಾಲಮಾನದ್ದಾಗಿವೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ದುಂಡುಕಟ್ಟಿನ ಓಲೆಗಳು ಮಿನೋವನ್ ನಾಗರಿಕತೆಯಲ್ಲಿ (ಕ್ರಿ.ಪೂ. ೨೦೦೦-೧೬೦೦) ಪ್ರಚಲಿತವಾಗಿದ್ದವು ಮತ್ತು ಉದಾಹರಣೆಗಳನ್ನು ಗ್ರೀಸ್‍ನ ಏಜಿಯನ್ ದ್ವೀಪದ ಮೇಲಿನ ಹಸಿಚಿತ್ರಗಳ ಮೇಲೆ ಕಾಣಬಹುದು. ಕಂಚಿನ ಯುಗದ ಗ್ರೀಸ್‍ನ ಮಿನೋವನ್ ಅವಧಿಯ ಪೂರ್ವಾರ್ಧ ಮತ್ತು ಮೈಸಿನೇಯನ್ ಅವಧಿಯ ಮುಂಚಿನಲ್ಲಿ ಶಂಕುವಿನಾಕಾರದ ಲೋಲಕಗಳಿರುವ ದುಂಡುಕಟ್ಟಿನ ಓಲೆಗಳ ಶೈಲಿ ರೂಢಿಯಲ್ಲಿತ್ತು. ಪುರುಷರು ಓಲೆಗಳನ್ನು ಧರಿಸುತ್ತಿದ್ದುದರ ಮುಂಚಿನ ಸಾಕ್ಷ್ಯವನ್ನು ಪ್ರಾಚೀನ ಪರ್ಷಿಯಾದಲ್ಲಿನ ಪರ್ಸೆಪೋಲಿಸ್‍ನ ಪುರಾತತ್ವ ಸಾಕ್ಷ್ಯದಲ್ಲಿ ಕಾಣಬಹುದು. ಅರಮನೆಯ ಉಳಿದುಕೊಂಡಿರುವ ಕೆಲವು ಗೋಡೆಗಳ ಮೇಲೆ ಪ್ರದರ್ಶನಗೊಂಡ ಪರ್ಷಿಯನ್ ಸಾಮ್ರಾಜ್ಯದ ಸೈನಿಕರ ಕೆತ್ತಲ್ಪಟ್ಟ ವಿಗ್ರಹಗಳು, ಓಲೆಗಳನ್ನು ಧರಿಸಿರುವುದನ್ನು ತೋರಿಸುತ್ತವೆ.

ಉಲ್ಲೇಖಗಳು

Tags:

ಆಭರಣಗಳು

🔥 Trending searches on Wiki ಕನ್ನಡ:

ಕ್ರಿಕೆಟ್ಕೊಬ್ಬಿನ ಆಮ್ಲಮನುಸ್ಮೃತಿಜಯಮಾಲಾಬಾಲ್ಯ ವಿವಾಹಛತ್ರಪತಿ ಶಿವಾಜಿಬೌದ್ಧ ಧರ್ಮಶಾತವಾಹನರುಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ರಾಷ್ಟ್ರಪತಿಕನ್ನಡ ಚಿತ್ರರಂಗರಮ್ಯಾಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕಕೈಗಾರಿಕೆಗಳುರಾಘವಾಂಕತಿರುಪತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹೈದರಾಬಾದ್‌, ತೆಲಂಗಾಣಭಾರತೀಯ ಮೂಲಭೂತ ಹಕ್ಕುಗಳುಆರ್ಯಭಟ (ಗಣಿತಜ್ಞ)ಗುಬ್ಬಚ್ಚಿಕೇಂದ್ರಾಡಳಿತ ಪ್ರದೇಶಗಳುಶಿಶುನಾಳ ಶರೀಫರುಕನ್ನಡದಲ್ಲಿ ಮಹಿಳಾ ಸಾಹಿತ್ಯಸುಮಲತಾಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿಜ್ಞಾನವೆಂಕಟೇಶ್ವರಧರ್ಮಭೋವಿಸಿಂಧೂತಟದ ನಾಗರೀಕತೆಕ್ರೀಡೆಗಳುಸಾಲುಮರದ ತಿಮ್ಮಕ್ಕಶಾಸನಗಳುಸಮಯದ ಗೊಂಬೆ (ಚಲನಚಿತ್ರ)ಯೋಗಭಾಮಿನೀ ಷಟ್ಪದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪ್ರಾಥಮಿಕ ಶಾಲೆಹಾಸನನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕದ ಮಹಾನಗರಪಾಲಿಕೆಗಳುಪರಿಸರ ಶಿಕ್ಷಣತಂತ್ರಜ್ಞಾನದ ಉಪಯೋಗಗಳುತಾಳೀಕೋಟೆಯ ಯುದ್ಧಅರವಿಂದ ಘೋಷ್ಸಹಕಾರಿ ಸಂಘಗಳುಗಣೇಶ ಚತುರ್ಥಿಚಿಕ್ಕೋಡಿಚಾಲುಕ್ಯರವೀಂದ್ರನಾಥ ಠಾಗೋರ್ದೇವರಾಜ್‌ಗೋವಿನ ಹಾಡುಯೋಗ ಮತ್ತು ಅಧ್ಯಾತ್ಮಮಂಡ್ಯಗಾಳಿ/ವಾಯುವಿರಾಟ್ ಕೊಹ್ಲಿಕಲ್ಯಾಣ ಕರ್ನಾಟಕಜನಪದ ಕಲೆಗಳುಮೈಗ್ರೇನ್‌ (ಅರೆತಲೆ ನೋವು)ಸೆಲರಿಜೋಡು ನುಡಿಗಟ್ಟುಪರಿಸರ ರಕ್ಷಣೆಕಿತ್ತೂರು ಚೆನ್ನಮ್ಮಹೆಚ್.ಡಿ.ದೇವೇಗೌಡಮಾದರ ಚೆನ್ನಯ್ಯಭಾರತದ ತ್ರಿವರ್ಣ ಧ್ವಜವಿಕಿಪೀಡಿಯಸಮಾಜ ವಿಜ್ಞಾನಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಹದಿಬದೆಯ ಧರ್ಮಕಬ್ಬುಕಂಪ್ಯೂಟರ್ಮೆಂತೆಕುರಿಶುಕ್ರವಿಷ್ಣುವರ್ಧನ್ (ನಟ)ಸುಗ್ಗಿ ಕುಣಿತ🡆 More