ಓದುವಿಕೆ

ಓದುವಿಕೆಯು (ಓದುವುದು) ಅರ್ಥವನ್ನು ನಿರ್ಮಿಸುವ ಅಥವಾ ಪಡೆಯುವ (ಓದಿನ ಗ್ರಹಿಕೆ) ಸಲುವಾಗಿ ಸಂಕೇತಗಳನ್ನು ವಿಸಂಕೇತಿಸುವ ಒಂದು ಸಂಕೀರ್ಣವಾದ ಅರಿವು ಸಂಬಂಧಿ ಪ್ರಕ್ರಿಯೆ.

ಓದುವುದು ಭಾಷಾರ್ಜನೆ, ಸಂವಹನ, ಮತ್ತು ಮಾಹಿತಿ ಹಾಗೂ ವಿಚಾರಗಳನ್ನು ಹಂಚಿಕೊಳ್ಳುವ ಸಾಧನವಾಗಿದೆ. ಎಲ್ಲ ಭಾಷೆಗಳಂತೆ, ಇದು ಪಠ್ಯ ಮತ್ತು ಓದುಗನ ನಡುವಿನ ಒಂದು ಸಂಕೀರ್ಣವಾದ ಪಾರಸ್ಪರಿಕೆ ಕ್ರಿಯೆಯಾಗಿದೆ ಮತ್ತು ಓದುಗನ ಹಿಂದಿನ ಜ್ಞಾನ, ಅನುಭವಗಳು, ಮನೋಭಾವ, ಮತ್ತು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಸ್ಥಿತವಾಗಿರುವ ಭಾಷಾ ಸಮುದಾಯದಿಂದ ರೂಪ ಪಡೆಯುತ್ತದೆ. ಓದುವ ಪ್ರಕ್ರಿಯೆಗೆ ನಿರಂತರ ಅಭ್ಯಾಸ, ಬೆಳವಣಿಗೆ ಮತ್ತು ಪರಿಷ್ಕರಣ ಬೇಕಾಗುತ್ತದೆ. ಜೊತೆಗೆ, ಓದಿಗೆ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯು ಬೇಕಾಗುತ್ತದೆ. ಸಾಹಿತ್ಯದ ಉಪಭೋಗಿಗಳು ಪ್ರತಿ ವಿಭಾಗದೊಂದಿಗೆ ಸಾಹಸಗಳನ್ನು ಕೈಗೊಳ್ಳುತ್ತಾರೆ, ಮತ್ತು ಪಠ್ಯಗಳು ವಿವರಿಸುವ ಅಪರಿಚಿತ ಸ್ಥಳಗಳಲ್ಲಿ ತಮಗೆ ತಿಳಿಯುವ ಚಿತ್ರಗಳನ್ನು ಸೃಷ್ಟಿಸಲು ಅಕ್ಷರಶಃ ಶಬ್ದಗಳಿಂದ ಸಹಜವಾಗಿ ವಿಪಥಗೊಳ್ಳುತ್ತಾರೆ. ಓದುವಿಕೆಯು ಅಷ್ಟೊಂದು ಸಂಕೀರ್ಣವಾದ ಪ್ರಕ್ರಿಯೆಯಾಗಿರುವುದರಿಂದ, ಅದನ್ನು ನಿಯಂತ್ರಿಸಲಾಗದು ಅಥವಾ ಒಂದು ಅಥವಾ ಎರಡು ವ್ಯಾಖ್ಯಾನಗಳಿಗೆ ಸೀಮಿತವಾಗಿಸಲು ಆಗುವುದಿಲ್ಲ. ಓದಿನಲ್ಲಿ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ, ಬದಲಾಗಿ ಅದು ಓದುಗರಿಗೆ ತಮ್ಮ ಸ್ವಂತದ ಉತ್ಪನ್ನಗಳನ್ನು ಆತ್ಮಪರೀಕ್ಷಣದ ರೀತಿಯಲ್ಲಿ ಉತ್ಪತ್ತಿಮಾಡಲು ಒಂದು ಬಿಡುಗಡೆಗೆ ಅವಕಾಶ ನೀಡುತ್ತದೆ. ಇದು ಅರ್ಥ ವಿವರಣೆಯ ಅವಧಿಯಲ್ಲಿ ಪಠ್ಯಗಳ ಆಳದ ಅನ್ವೇಷಣೆಯನ್ನು ಉತ್ತೇಜಿಸುತ್ತದೆ. ಓದುಗರು ತಮಗೆ ವಿಸಂಕೇತೀಕರಣ (ಸಂಕೇತಗಳನ್ನು ಶಬ್ದಗಳು ಅಥವಾ ಮಾತಿನ ದೃಶ್ಯ ನಿರೂಪಣೆಗಳಾಗಿ ಅನುವಾದಿಸಲು) ಮತ್ತು ಗ್ರಹಿಕೆಗೆ ನೆರವಾಗುವಲ್ಲಿ ಅನೇಕ ಒದು ತಂತ್ರಗಳನ್ನು ಬಳಸುತ್ತಾರೆ. ಅಪರಿಚಿತ ಶಬ್ದಗಳ ಅರ್ಥವನ್ನು ಗುರುತಿಸಲು ಓದುಗರು ಸಂದರ್ಭ ಸುಳಿವುಗಳನ್ನು ಬಳಸಬಹುದು. ಓದುಗರು ತಾವು ಓದಿದ ಶಬ್ದಗಳನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನ ಅಥವಾ ರೂಪರೇಖೆಯ ಚೌಕಟ್ಟಿನಲ್ಲಿ ಏಕೀಕರಿಸಿಕೊಳ್ಳುತ್ತಾರೆ.

ಓದುವಿಕೆ

ಪ್ರಸ್ತುತವಾಗಿ ಬಹುತೇಕ ಓದುವಿಕೆಯು ಕಾಗದದ ಮೇಲೆ ಶಾಯಿ ಅಥವಾ ಟೋನರ್‌ನಿಂದ ಮುದ್ರಿತ ಶಬ್ದದ್ದು, ಉದಾಹರಣೆಗೆ, ಪುಸ್ತಕ, ನಿಯತಕಾಲಿಕ, ವೃತ್ತಪತ್ರಿಕೆ, ಕರಪತ್ರ, ಅಥವಾ ನೋಟ್‍ಬುಕ್‍ನಲ್ಲಿ, ಅಥವಾ ವಿದ್ಯುನ್ಮಾನ ಮುದ್ರಣಗಳದ್ದು, ಉದಾಹರಣೆಗೆ ಕಂಪ್ಯೂಟರ್ ಪ್ರದರ್ಶಕಗಳು, ದೂರದರ್ಶನ, ಮೊಬೈಲ್ ಫ಼ೋನುಗಳು ಅಥವಾ ಇ-ರೀಡರ್‌ಗಳು. ಗ್ರಾಫ಼ೈಟ್ ಪೆನ್ಸಿಲ್ ಅಥವಾ ಲೇಖನಿ ಬಳಸಿ ಕೈಬರಹದ ಪಠ್ಯವನ್ನು ಕೂಡ ಸೃಷ್ಟಿಸಬಹುದು. ಒಂದು ವಸ್ತುವಿನ ಮೇಲೆ ಲಘು ಪಠ್ಯಗಳನ್ನು ಬರೆಯಬಹುದು ಅಥವಾ ಬಿಡಿಸಬಹುದು.

ಉಲ್ಲೇಖಗಳು

Tags:

ಮಾತು

🔥 Trending searches on Wiki ಕನ್ನಡ:

ಹುಣಸೆಕ್ಯಾರಿಕೇಚರುಗಳು, ಕಾರ್ಟೂನುಗಳುಪಠ್ಯಪುಸ್ತಕಕೆ. ಎಸ್. ನರಸಿಂಹಸ್ವಾಮಿಶ್ರುತಿ (ನಟಿ)ಹದಿಬದೆಯ ಧರ್ಮವೈದಿಕ ಯುಗರಾಷ್ಟ್ರೀಯತೆಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಹೃದಯಾಘಾತಚಕ್ರವ್ಯೂಹಸಿದ್ದಲಿಂಗಯ್ಯ (ಕವಿ)ಜನತಾ ದಳ (ಜಾತ್ಯಾತೀತ)ಕೃಷ್ಣಅರ್ಥಶಾಸ್ತ್ರಕನ್ನಡ ಜಾನಪದಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಶಬ್ದವೇಧಿ (ಚಲನಚಿತ್ರ)ಜಯಪ್ರಕಾಶ ನಾರಾಯಣವಾಯು ಮಾಲಿನ್ಯಮಿಥುನರಾಶಿ (ಕನ್ನಡ ಧಾರಾವಾಹಿ)ಫೇಸ್‌ಬುಕ್‌ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕರ್ನಾಟಕದ ಜಲಪಾತಗಳುಒಗಟುಸವದತ್ತಿಗೋಲ ಗುಮ್ಮಟದಂತಿದುರ್ಗವಿವಾಹರಾಜ್‌ಕುಮಾರ್ವಿಕ್ರಮಾರ್ಜುನ ವಿಜಯಸಂವಿಧಾನಅಶ್ವತ್ಥಮರವೃದ್ಧಿ ಸಂಧಿದೂರದರ್ಶನಮಲ್ಲಿಕಾರ್ಜುನ್ ಖರ್ಗೆಶಿವರೋಮನ್ ಸಾಮ್ರಾಜ್ಯಸಂಸ್ಕಾರಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗುರುಭಾರತೀಯ ಕಾವ್ಯ ಮೀಮಾಂಸೆವಿಜಯಪುರರಾಮಕೃಷ್ಣ ಪರಮಹಂಸಕೊಡಗಿನ ಗೌರಮ್ಮಭಾರತದ ಮುಖ್ಯಮಂತ್ರಿಗಳುಅಭಿಮನ್ಯುರಚಿತಾ ರಾಮ್ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಮಾನವನ ವಿಕಾಸಜಗನ್ನಾಥದಾಸರುದೀಪಾವಳಿಸ್ಟಾರ್‌ಬಕ್ಸ್‌‌ಕಾರ್ಲ್ ಮಾರ್ಕ್ಸ್ಕಪ್ಪೆ ಅರಭಟ್ಟಏಕರೂಪ ನಾಗರಿಕ ನೀತಿಸಂಹಿತೆಮೂಳೆಹವಾಮಾನಹೈದರಾಲಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಡಾ ಬ್ರೋಮಳೆನೀರು ಕೊಯ್ಲುಶಾಂತಲಾ ದೇವಿಮುದ್ದಣಕೆಂಪು ಕೋಟೆಭಗವದ್ಗೀತೆಪ್ರಾಥಮಿಕ ಶಾಲೆಎಲೆಕ್ಟ್ರಾನಿಕ್ ಮತದಾನಕರ್ಣಬೆಳಗಾವಿಸಂಧಿವಿನಾಯಕ ಕೃಷ್ಣ ಗೋಕಾಕಮಾಟ - ಮಂತ್ರಮದಕರಿ ನಾಯಕಅನಂತ್ ನಾಗ್ಪಿತ್ತಕೋಶಕಲ್ಯಾಣ ಕರ್ನಾಟಕ🡆 More