ಏಕಾದಶಿ

ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(೧೧).ಹಿಂದೂ ಪಂಚಾಂಗದ ೧೨ ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ.ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ,ಉಪವಾಸ ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ ಪಾರಣೆ(ಊಟ)ಮಾಡುವ ಸಂಪ್ರದಾಯವಿದೆ.

ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ.ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ (ದೇವಾಲಯದ ಹೊರ ಭಾಗದಿಂದ ಒಳ ಭಾಗಕ್ಕೆ ದ್ವಾರದ ಮೂಲಕ ಪ್ರವೇಶಿಸಿದರೆ) ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ..

ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.

ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ ’ಉತ್ಥಾನ’ದ್ವಾದಶಿಯಂದು. ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು .ಚಾತುರ್ಮಾಸ್ಯ ಎನ್ನಲಾಗುತ್ತದೆ.

ಏಕಾದಶಿ ಕ್ರಮವು

ವರ್ಷದ ಪ್ರತಿ ತಿಂಗಳದ ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯ ಹೆಸರುಗಳು ಕೆಳಗಿನ ಪಟ್ಟಿಕದಲ್ಲಿನೇಡಿದವೇ.

ವೈದಿಕ ಮಾಸ ಪಾಲಕ ದೇವತ ಶುಕ್ಲ ಪಕ್ಷ ಏಕಾದಶಿ ಕೃಷ್ಣಪಕ್ಷ ಏಕಾದಶಿ
ಚೈತ್ರ (March–April) ವಿಷ್ಣು ಕಾಮದಾ ವರೂಥಿನಿ
ವೈಶಾಖ (April–May) ಮಧುಸೂದನ ಮೋಹಿನೀ ಅಪರಾ
ಜ್ಯೇಷ್ಠ (May–June) ತ್ರಿವಿಕ್ರಮ ನಿರ್ಜಲಾ ಯೋಗಿನೀ
ಆಷಾಢ (June–July) ವಾಮನ ಶಯನೀ/ಪ್ರಥಮಾ ಕಾಮಿಕಾ
ಶ್ರಾವಣ (July-August) ಶ್ರೀಧರ ಪುತ್ರದಾ ಅಜ
ಭಾದ್ರಪದ (August–September) ಹೃಷೀಕೇಶ ಪಾರ್ಶ್ವ/ಪರಿವರ್ತಿನೀ ಇಂದಿರಾ
ಆಶ್ವಯುಜ (September–October) ಪದ್ಮನಾಭ ಪಾಶಾಂಕುಶಾ ರಮಾ
ಕಾರ್ತೀಕ (October–November) ದಾಮೋದರ ಪ್ರಬೋಧಿನೀ ಉತ್ಪತ್ತಿ
ಮಾರ್ಗಶಿರ (November–December) ಕೇಶವ ಮೋಕ್ಷದಾ ಸಫಲಾ
ಪುಷ್ಯ (December–January) ನಾರಾಯನಣ ಪುತ್ರದಾ ಷಟ್ತಿಲಾ
ಮಾಘ (January–February) ಮಾಧವ ಜಯ ವಿಜಯ
ಫಾಲ್ಗುಣ (February–March) ಗೋವಿಂದ ಆಮಲಕೀ ಪಾಪಮೊಚನಿ
ಅಧಿಕ (3 ವರ್ಷಕ್ಕೆ ಓಂದು ಸಾರಿ) ಪುರುಷೋತ್ತಮ ಪದ್ಮಿನೀ ಪರಮಾ

ಹೊರಗಿನ ಸಂಪರ್ಕಗಳು

Tags:

ಉಪವಾಸಸಂಸ್ಕೃತ

🔥 Trending searches on Wiki ಕನ್ನಡ:

ವಿಜಯದಾಸರುಅಕ್ಬರ್ಯೋನಿಸರಸ್ವತಿಬಹಮನಿ ಸುಲ್ತಾನರುರಮ್ಯಾಹರಪ್ಪತಾಜ್ ಮಹಲ್ಕರ್ನಾಟಕ ವಿಧಾನ ಸಭೆದ್ಯುತಿಸಂಶ್ಲೇಷಣೆಅಮೃತಧಾರೆ (ಕನ್ನಡ ಧಾರಾವಾಹಿ)ಚದುರಂಗದ ನಿಯಮಗಳುವಿಜಯನಗರ ಸಾಮ್ರಾಜ್ಯರವಿಚಂದ್ರನ್ಉಪೇಂದ್ರ (ಚಲನಚಿತ್ರ)ಅನುನಾಸಿಕ ಸಂಧಿಭಾರತದ ಸ್ವಾತಂತ್ರ್ಯ ಚಳುವಳಿಪ್ರಿನ್ಸ್ (ಚಲನಚಿತ್ರ)ಕೃಷಿಹಾಸನ ಜಿಲ್ಲೆಕರ್ನಾಟಕ ಲೋಕಾಯುಕ್ತಗೌತಮ ಬುದ್ಧಜಾನಪದಶಬ್ದಕೊಪ್ಪಳಮಣ್ಣುಭೂಮಿಸಿದ್ದಪ್ಪ ಕಂಬಳಿರಾಜಕುಮಾರ (ಚಲನಚಿತ್ರ)ಕನ್ನಡತಿ (ಧಾರಾವಾಹಿ)ಅಮೇರಿಕ ಸಂಯುಕ್ತ ಸಂಸ್ಥಾನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆತಾಳೀಕೋಟೆಯ ಯುದ್ಧಹಲ್ಮಿಡಿ ಶಾಸನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅಷ್ಟ ಮಠಗಳುಕಾಗೋಡು ಸತ್ಯಾಗ್ರಹಸಮಾಜಶಾಸ್ತ್ರಮಧುಮೇಹಋತುಮೋಳಿಗೆ ಮಾರಯ್ಯವಿಕಿಪೀಡಿಯದಿಕ್ಸೂಚಿಕರ್ನಾಟಕ ಐತಿಹಾಸಿಕ ಸ್ಥಳಗಳುಬಿ.ಎಸ್. ಯಡಿಯೂರಪ್ಪಮೊಘಲ್ ಸಾಮ್ರಾಜ್ಯವಿರಾಟ್ ಕೊಹ್ಲಿಸಂಪ್ರದಾಯಶಿವಡಾ ಬ್ರೋರತನ್ ನಾವಲ್ ಟಾಟಾಕನ್ನಡ ಸಾಹಿತ್ಯ ಪರಿಷತ್ತುಮಳೆಹೆಚ್.ಡಿ.ದೇವೇಗೌಡಕೇಶಿರಾಜಆವಕಾಡೊಸಂಧಿಕುಟುಂಬಸುಮಲತಾಮಲ್ಲಿಗೆಕರ್ನಾಟಕದ ಮುಖ್ಯಮಂತ್ರಿಗಳುದೇವಸ್ಥಾನಮಾನವ ಅಭಿವೃದ್ಧಿ ಸೂಚ್ಯಂಕಸಂಸ್ಕೃತ ಸಂಧಿಧರ್ಮರಾಯ ಸ್ವಾಮಿ ದೇವಸ್ಥಾನಮೋಕ್ಷಗುಂಡಂ ವಿಶ್ವೇಶ್ವರಯ್ಯಕಾವ್ಯಮೀಮಾಂಸೆನಗರದುಶ್ಯಲಾಕರ್ನಾಟಕಒಡೆಯರ್ಸೂರ್ಯವ್ಯೂಹದ ಗ್ರಹಗಳುಸಾಲ್ಮನ್‌ಶಾಂತಲಾ ದೇವಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಬುಧಎಲೆಕ್ಟ್ರಾನಿಕ್ ಮತದಾನಸಾಮಾಜಿಕ ಸಮಸ್ಯೆಗಳು🡆 More