ಮಹಾಭಾರತ ಉತ್ತರ

ಮಹಾಭಾರತ ಮಹಾಕಾವ್ಯದಲ್ಲಿ, ಉತ್ತರ ಮತ್ಸ್ಯ ರಾಜ್ಯದ ರಾಜಕುಮಾರ ಮತ್ತು ವಿರಾಟ ರಾಜನ ಪುತ್ರ, ಇವರ ಆಸ್ಥಾನದಲ್ಲೇ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಗೌಪ್ಯತೆಯಲ್ಲಿ ಒಂದು ವರ್ಷ ಕಳೆದರು.

ಅವನು ಉತ್ತರೆಯ ಸಹೋದರ ಮತ್ತು ಶ್ರೀಲಾಜನ್ ರಾಜನ ಮಗಳು ಕೀಸವಿಯ ಪತಿ. ಪಾಂಡವರ ಅಜ್ಞಾತವಾಸದ ಕೊನೆಯ ದಿನಗಳಲ್ಲಿ ದುರ್ಯೋಧನನು ಮತ್ಸ್ಯ ರಾಜ್ಯದ ಮೇಲೆ ದಾಳಿ ಮಾಡಿದಾಗ ಉತ್ತರನು ಬೃಹನ್ನಳೆಯೊಂದಿಗೆ ದುರ್ಯೋಧನನ ಸೇನೆಯನ್ನು ಎದುರಿಸಲು ಹೋಗಿದ್ದನು. ದ್ರೌಪದೀ ಸ್ವಯಂವರ ಕಾಲದಲ್ಲಿ ಈತ ಪಾಂಚಾಲ ದೇಶಕ್ಕೂ ಹೋಗಿದ್ದ. ಭೂಮಿಂಜಯ, ವಿರಾಟಪುತ್ರ, ಮತ್ಸ್ಯಪುತ್ರ ಎಂಬ ಹೆಸರುಗಳೂ ಈತನಿಗೆ ಇದ್ದವು. ಕೌರವರು ಉತ್ತರದ ದಿಕ್ಕಿನಲ್ಲಿ ಗೋಹರಣ ಮಾಡಿದ್ದನ್ನು ತಿಳಿದ ಉತ್ತರ ಕುಮಾರ ಅವರ ಮೇಲೆ ಯುದ್ಧಕ್ಕೆ ಹೋಗಲು ತನಗೆ ಸರಿಯಾದ ಸಾರಥಿಯಿಲ್ಲವೆಂದು ಚಡಪಡಿಸುತ್ತಾನೆ. ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ಸಾರಥಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ಸೈರಂಧ್ರಿ ಸೂಚಿಸುತ್ತಾಳೆ. ಬೃಹನ್ನಳೆಯನ್ನು ಸಾರಥಿಯಾಗೆಂದು ಕೇಳಿದಾಗ ಬೇಕೆಂದೇ ಬೃಹನ್ನಳೆ ಯುದ್ಧಭೂಮಿಯಲ್ಲಿ ಸಾರಥಿಯಾಗಲು ತನ್ನ ಅಸಮರ್ಥತೆಯನ್ನು ಹೇಳಿಕೊಂಡಾಗ ಉತ್ತರ ಕುಮಾರ ತನ್ನಲ್ಲಿ ಇಲ್ಲದ ಪೌರುಷವನ್ನು ಅರಮನೆಯ ಹೆಂಗೆಳೆಯರ ಮುಂದೆ ಕೊಚ್ಚಿಕೊಳ್ಳುವುದು ಮಹಾಭಾರತದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ಈ ಪ್ರಸಂಗವನ್ನು ಕುಮಾರವ್ಯಾಸ ತನ್ನ ಗದುಗಿನ ಭಾರತದಲ್ಲಿ ರಸಪೂರ್ಣವಾಗಿ ಚಿತ್ರಿಸಿದ್ದಾನೆ. ಅನಂತರ ಬೃಹನ್ನಳೆಯ ಸಾರಥ್ಯವನ್ನು ಪಡೆದ ಉತ್ತರ ಕುಮಾರ ಯುದ್ಧ ಭೂಮಿಯನ್ನು ನೋಡಿದ ಕೂಡಲೇ ಹೆದರಿ ನಿಲ್ಲುತ್ತಾನೆ. ಆತನಿಗೆ ಧೈರ್ಯ ತುಂಬಿ ಅರ್ಜುನ ತಾನೇ ಯುದ್ಧ ಮಾಡುತ್ತಾನೆ. ಆ ಸಮಯದಲ್ಲಿ ಉತ್ತರಕುಮಾರ ಅರ್ಜುನನ ಸಾರಥಿಯಾಗಿ ರಥವನ್ನು ನಡೆಸುತ್ತಾನೆ. ಮುಂದೆ ಮಹಾಭಾರತ ಯುದ್ಧದಲ್ಲಿ ಶಲ್ಯನಿಂದ ಹತನಾಗುತ್ತಾನೆ. ಶೌರ್ಯವಿಲ್ಲದೆ ಬಡಾಯ ಕೊಚ್ಚುವವರನ್ನು ಸಾಮಾನ್ಯವಾಗಿ ಉತ್ತರಕುಮಾರನೆನ್ನುವುದು ರೂಢಿ. ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ಎಲೆಯ ಮುಂದೆ ಎನ್ನುವುದು ಗಾದೆ ಮಾತಾಗಿದೆ.

ಮಹಾಭಾರತ ಉತ್ತರ
ಮಹಾಭಾರತ ಉತ್ತರ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅರ್ಜುನಕುಮಾರವ್ಯಾಸಗದುಗಿನ ಭಾರತಪಾಂಡವಮತ್ಸ್ಯ ರಾಜ್ಯಮಹಾಭಾರತವಿರಾಟಶಲ್ಯ

🔥 Trending searches on Wiki ಕನ್ನಡ:

ಜ್ಯೋತಿಬಾ ಫುಲೆಬಾದಾಮಿ ಶಾಸನಪೀನ ಮಸೂರಇಮ್ಮಡಿ ಪುಲಿಕೇಶಿಮಕ್ಕಳ ದಿನಾಚರಣೆ (ಭಾರತ)ಕುಮಾರವ್ಯಾಸಪಂಪಆರೋಗ್ಯಸೋಮೇಶ್ವರ ಶತಕಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುತಂತ್ರಜ್ಞಾನಕೇಂದ್ರ ಪಟ್ಟಿವಾಯು ಮಾಲಿನ್ಯವಿಷ್ಣುಶರ್ಮಆದೇಶ ಸಂಧಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದುರ್ಯೋಧನರಾಣಿ ಅಬ್ಬಕ್ಕಭಾವಗೀತೆಹೆಚ್.ಡಿ.ಕುಮಾರಸ್ವಾಮಿಬಾಗಲಕೋಟೆನಾಮಪದಫುಟ್ ಬಾಲ್ವಿದ್ಯುತ್ ವಾಹಕಬುದ್ಧಕಯ್ಯಾರ ಕಿಞ್ಞಣ್ಣ ರೈಪ್ರಾಣಾಯಾಮವಿಕ್ರಮಾದಿತ್ಯಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುದೊಡ್ಡರಂಗೇಗೌಡಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿದ್ಯುತ್ ಮಂಡಲಗಳುಸನ್ನತಿಸಮಾಸಬೆಸಗರಹಳ್ಳಿ ರಾಮಣ್ಣಎಚ್‌.ಐ.ವಿ.ಬಾದಾಮಿಭರತೇಶ ವೈಭವನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡಯಶವಂತರಾಯಗೌಡ ಪಾಟೀಲಹಸಿರು ಕ್ರಾಂತಿಸರ್ ಐಸಾಕ್ ನ್ಯೂಟನ್ವಿಜಯನಗರ ಜಿಲ್ಲೆಮಂಜುಳಇಮ್ಮಡಿ ಪುಲಕೇಶಿಶ್ರವಣಬೆಳಗೊಳವೇದ (2022 ಚಲನಚಿತ್ರ)ಭಾರತೀಯ ಭೂಸೇನೆಪಶ್ಚಿಮ ಘಟ್ಟಗಳುಭಾರತದ ಸಂಸತ್ತುಅಕ್ಷಾಂಶ ಮತ್ತು ರೇಖಾಂಶಉತ್ತರ (ಮಹಾಭಾರತ)ಭರತ-ಬಾಹುಬಲಿಶ್ರೀ ಭಾರತಿ ತೀರ್ಥ ಸ್ವಾಮಿಗಳುಕದಂಬ ರಾಜವಂಶರೋಮನ್ ಸಾಮ್ರಾಜ್ಯಸಮಾಜವಾದಮಹಾಭಾರತರಸ್ತೆಕನ್ನಡ ಸಾಹಿತ್ಯ ಪರಿಷತ್ತುಸತೀಶ ಕುಲಕರ್ಣಿದೇವರ ದಾಸಿಮಯ್ಯಹದಿಬದೆಯ ಧರ್ಮನೀರುಜಿ.ಪಿ.ರಾಜರತ್ನಂಹಿಂದೂ ಮಾಸಗಳುಭಾರತೀಯ ವಿಜ್ಞಾನ ಸಂಸ್ಥೆವಾಣಿವಿಲಾಸಸಾಗರ ಜಲಾಶಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗಿಳಿಅಂತರಜಾಲವ್ಯಾಪಾರಆಕೃತಿ ವಿಜ್ಞಾನಗಾಂಧಾರಸೇತುವೆಚೋಮನ ದುಡಿಸತಿ ಪದ್ಧತಿವಸುಧೇಂದ್ರ🡆 More