ಈಟಿ

ಉದ್ದವಾದ ಕೋಲಿನ ತುದಿಗೆ ಮೊನಚಾದ ಉಕ್ಕಿನ ಅಲಗನ್ನು ಸಿಕ್ಕಿಸಿರುವ ಭರ್ಜಿಯಂಥ ಒಂದು ಆಯುಧ (ಲ್ಯಾನ್ಸ್).

ಇದನ್ನು ಬಲುಮಟ್ಟಿಗೆ ಕುದುರೆ ಸವಾರರು ಹಿಡಿದಿರುತ್ತಾರೆ. ಆಯುಧವಾಗಿ ಇದು ಪರಿಣಾಮಕಾರಿಯೇ ಎಂಬ ಬಗ್ಗೆ ವಿವಾದವಿದೆ. ಕತ್ತಿ ಇದಕ್ಕಿಂತ ಹೆಚ್ಚು ಉಪಯುಕ್ತವೆಂದೂ ಕೊಲ್ಲಲು ಹೆಚ್ಚು ಶಕ್ತವೆಂದೂ ಪರಿಗಣಿತವಾಗಿದೆ. ಈಟಿ ತಲ್ಲಣಗೊಳಿಸುವ ಶಸ್ತ್ರ. ಆದರೆ ಕ್ಷಿಪ್ರ ಪ್ರಯೋಗಕ್ಕೆ ಕತ್ತಿಯೇ ಲೇಸು. ಆಧುನಿಕ ಯುದ್ಧಕ್ರಮದಲ್ಲಿ ಈಟಿ ಅನುಪಯುಕ್ತ ಆಯುಧ. ಈಗ ಅದನ್ನು ಕುದುರೆ ಸವಾರರು ಉತ್ಸವ ಸಮಾರಂಭಗಳಲ್ಲಿ ಅಲಂಕಾರ ಸಂಕೇತವಾಗಿ ಹಿಡಿದಿರುತ್ತಾರೆ. ಈಟಿಯ ಉದ್ದ ಪ್ರಾರಂಭದಲ್ಲಿ ೧೬' ಇದ್ದು ಈಗ ೧೯' ೧" ಆಗಿದೆ. ಅದರ ತುದಿ ಮೊನಚು ಮತ್ತು ಕತ್ತಿಯಂತೆ ಅಗಲವಾಗಿ ಅಥವಾ ಎಲೆಯಾಕಾರದಲ್ಲಿ ಇದೆ. ಮೊದಮೊದಲು ಈಟಿಯ ಕೋಲನ್ನು ಬೂದಿ ಮರದಿಂದ ಮಾಡುತ್ತಿದ್ದರು. ಈಗ ಗಟ್ಟಿ ಬಿದಿರಿನ ಗಳೆಯನ್ನು ಉಪಯೋಗಿಸುತ್ತಾರೆ. ಈಟಿಗೆ ಚರ್ಮದಿಂದ ಮಾಡಿದ ತೂಗಾಸರೆಯುಂಟು. ಸವಾರಿ ಮಾಡುವಾಗ ಅದರ ಬುಡ ಒಂದು ಸಣ್ಣ ಚರ್ಮಕೋಶದಲ್ಲಿ ತಂಗಿರುತ್ತದೆ.

ಈಟಿಯ ಇತಿಹಾಸ

ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಈ ಆಯುಧ ಎಂದು ಹುಟ್ಟಿತೆಂಬುದು ಗೊತ್ತಾಗಿಲ್ಲ. ಅಸ್ಸೀರಿಯ, ಗ್ರೀಕ್ ಮತ್ತು ರೋಮ್ ದೇಶಗಳಲ್ಲಿ ಇದು ಉಪಯೋಗದಲ್ಲಿತ್ತು. ೧೬೫೫ರಲ್ಲಿ ಈ ಆಯುಧವುಳ್ಳ ಕೆಲವೇ ಸ್ಪೇನ್ ಸೈನಿಕರು ಸ್ಯಾನ್ ಡಾಮಿಂಗೊ ಎಂಬ ಪ್ರದೇಶದಲ್ಲಿ, ಇದನ್ನು ಹೊಂದಿರದ ಬ್ರಿಟಿಷ್ ಯೋಧರನ್ನು ಸೋಲಿಸಿದರೆಂದು ತಿಳಿದುಬಂದಿದೆ. ೧೮೧೧ರಲ್ಲಿ ನೆಪೋಲಿಯನ್ ವಾಟರ್ಲು ಎಂಬಲ್ಲಿ ಈಟಿ ಹಿಡಿದ ತನ್ನ ಸವಾರರ ಮೂಲಕ ಬ್ರಿಟಿಷರನ್ನು ಸೋಲಿಸಿ ಪ್ರಶಂಸಾರ್ಹ ಜಯಗಳಿಸಿದ. ಇದರಿಂದ ಪಾಠ ಕಲಿತ ಬ್ರಿಟಿಷರು ತಮ್ಮ ಅನೇಕ ದಳಗಳನ್ನು ಈಟಿ ಪಡೆಗಳನ್ನಾಗಿ ಮಾರ್ಪಡಿಸಿದರು. ಭಾರತ ಸೇನೆಯ ಚರಿತ್ರೆಯಲ್ಲಿ ಈಟಿ ದಳದವರು ಬಹಳ ಹಿರಿಮೆಯ ಪಾತ್ರವನ್ನು ವಹಿಸಿದ್ದಾರೆ. ೧೯೧೬ರಲ್ಲಿ ಇಪ್ಪತ್ತೊಂದನೆಯ ಈಟಿ ಪಡೆಯವರು ವಾಯವ್ಯ ಪ್ರದೇಶದ ಮಹಮಂಡ್ ಎಂಬ ಜನರಲ್ಲಿ ಬಹಳ ಹಾವಳಿ ನಡೆಸಿದರು. ಎಸ್‍ಡ್ರಿಲಾನ್ ಎಂಬ ಬಯಲಿನಲ್ಲಿ ಮುಂದುವರಿಯುತ್ತಿದ್ದಾಗ್ಗೆ ಲೆಜ್ಜುನ್ ಎಂಬ ಸ್ಥಳದಲ್ಲಿ ಭಾರತದ ಎರಡನೆಯ ಈಟಿ ಪಡೆ ತುರ್ಕಿಯವರನ್ನು ಓಡಿಸಿತು.

ಉಲ್ಲೇಖ

http://www.indifferentlanguages.com/translate/kannada-english/%E0%B2%88%E0%B2%9F%E0%B2%BF https://www.duhoctrungquoc.vn/dict/kn/%E0%B2%88%E0%B2%9F%E0%B2%BF_%E0%B2%8E%E0%B2%B8%E0%B3%86%E0%B2%A4

Tags:

ಆಯುಧಕುದುರೆಚರ್ಮಮರ

🔥 Trending searches on Wiki ಕನ್ನಡ:

ಸಂತಾನೋತ್ಪತ್ತಿಯ ವ್ಯವಸ್ಥೆಬ್ಯಾಂಕ್ಗೊರೂರು ರಾಮಸ್ವಾಮಿ ಅಯ್ಯಂಗಾರ್ನಿರುದ್ಯೋಗಶೈಕ್ಷಣಿಕ ಮನೋವಿಜ್ಞಾನಶುಕ್ರರಾಜಕೀಯ ವಿಜ್ಞಾನಜನ್ನಜಾನಪದನೈಟ್ರೋಜನ್ ಚಕ್ರಜೈನ ಧರ್ಮ ಇತಿಹಾಸಒಲಂಪಿಕ್ ಕ್ರೀಡಾಕೂಟತತ್ಸಮ-ತದ್ಭವಕ್ರಿಕೆಟ್ಲೋಹತಲಕಾಡುಸಿ. ಎನ್. ಆರ್. ರಾವ್ಕೇಂದ್ರ ಲೋಕ ಸೇವಾ ಆಯೋಗಕರ್ನಾಟಕದ ವಾಸ್ತುಶಿಲ್ಪರತನ್ ನಾವಲ್ ಟಾಟಾಕಾಮನಾಡ ಗೀತೆಭಾರತದಲ್ಲಿ ಮೀಸಲಾತಿದಿಕ್ಸೂಚಿಓಂ (ಚಲನಚಿತ್ರ)ಪುನೀತ್ ರಾಜ್‍ಕುಮಾರ್ವಿಜಯನಗರ ಸಾಮ್ರಾಜ್ಯಶ್ರೀ. ನಾರಾಯಣ ಗುರುಬಾಲಕಾರ್ಮಿಕಅಲರ್ಜಿರಕ್ತಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶಿವಪ್ಪ ನಾಯಕಅಂತಾರಾಷ್ಟ್ರೀಯ ಸಂಬಂಧಗಳುಶಿವಕೋಟ್ಯಾಚಾರ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯ೧೭೮೫ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ಜಾನಪದ ಕಲೆಗಳುಹಣಭೋವಿವಾಟ್ಸ್ ಆಪ್ ಮೆಸ್ಸೆಂಜರ್ಕೈಗಾರಿಕಾ ಕ್ರಾಂತಿಆಯ್ದಕ್ಕಿ ಲಕ್ಕಮ್ಮಭಾರತದ ರಾಜಕೀಯ ಪಕ್ಷಗಳುಹಿಂದೂ ಧರ್ಮಭಾರತದ ಸಂಸತ್ತುಚಂದ್ರಗುಪ್ತ ಮೌರ್ಯಕೊರಿಯನ್ ಯುದ್ಧಲೆಕ್ಕ ಪರಿಶೋಧನೆಕಾರ್ಲ್ ಮಾರ್ಕ್ಸ್ಎಚ್.ಎಸ್.ಶಿವಪ್ರಕಾಶ್ಸೂರ್ಯನಾಥ ಕಾಮತ್ಬಿ.ಜಯಶ್ರೀಮೈಸೂರು ಅರಮನೆನವಣೆಗಿರೀಶ್ ಕಾರ್ನಾಡ್ವಿಮರ್ಶೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಲ್ಲಮ ಪ್ರಭುರೇಡಿಯೋಪಂಚವಾರ್ಷಿಕ ಯೋಜನೆಗಳುಒಂದನೆಯ ಮಹಾಯುದ್ಧಆಲ್‌ಝೈಮರ್‌‌ನ ಕಾಯಿಲೆಭಾರತ ರತ್ನಉದ್ಯಮಿಸಂವಹನಗೀತಾ ನಾಗಭೂಷಣಹೊಯ್ಸಳ ವಿಷ್ಣುವರ್ಧನನವೋದಯಸಿದ್ದಲಿಂಗಯ್ಯ (ಕವಿ)ಪ್ಲೇಟೊಪುಸ್ತಕಶಾಸನಗಳುಆಯತ (ಆಕಾರ)ಬರಗೂರು ರಾಮಚಂದ್ರಪ್ಪ2017ರ ಕನ್ನಡ ಚಿತ್ರಗಳ ಪಟ್ಟಿ🡆 More