ಉತ್ತರೀಯ

ಉತ್ತರೀಯ ಎಂದರೆ ಭಾರತದ ಒಂದು ಕೊರಳವಸ್ತ್ರದಂತಹ ಬಟ್ಟೆಯ ತುಂಡು.

ಇದು ಒಂದು ಶಾಲಿನಂತೆ ಇರುತ್ತದೆ ಮತ್ತು ಎರಡೂ ತೋಳುಗಳ ಸುತ್ತ ಸುತ್ತಿಕೊಳ್ಳುವಂತೆ ಕುತ್ತಿಗೆಯ ಹಿಂಭಾಗದಿಂದ ಇಳಿಯುತ್ತದೆ, ಮತ್ತು ದೇಹದ ಮೇಲ್ಭಾಗವನ್ನು ಹೊದಿಸಲು ಇದನ್ನು ಬಳಸಬಹುದು. ಇದನ್ನು ಸಾಮಾನ್ಯವಾಗಿ ನವುರಾದ ಹತ್ತಿ ಅಥವಾ ರೇಷ್ಮೆಯಿಂದ ತಯಾರಿಸಲಾಗುತ್ತಿತ್ತು, ಆದರೆ ನವುರಾದ ಚಕ್ಕಳದಿಂದಲೂ ತಯಾರಿಸಬಹುದು. ಈ ಉಡುಪನ್ನು ಚಿತ್ರಿಸುವ ಕೆತ್ತನೆಗಳು ಬಹಳ ಹಿಂದಿನ ಕಾಲದ್ದೆಂದು ನಿರ್ಧರಿಸಲಾಗಿದೆ ಆದರೆ ಇದರ ಉಳಿದುಕೊಂಡಿರುವ ಉದಾಹರಣೆಗಳು ಕಡಿಮೆ ಇರುವುದರಿಂದ ಫ಼್ಯಾಷನ್ ಇತಿಹಾಸಕಾರರು ಉಬ್ಬುಕೆತ್ತನೆಗಳನ್ನು ಅಧ್ಯಯನ ಮಾಡುತ್ತಾರೆ.

ಉತ್ತರೀಯ
ಅಂತರೀಯ ಮತ್ತು ಉತ್ತರೀಯ ತೊಟ್ಟಿರುವ ಪುರುಷರನ್ನು ಚಿತ್ರಿಸುವ ಉಬ್ಬುಕೆತ್ತನೆ, ಕ್ರಿ.ಶ. ೧ನೇ ಶತಮಾನ

ದುಪಟ್ಟಾ ಉತ್ತರೀಯದ ಒಂದು ವಿಕಸಿತ ರೂಪವಾಗಿದೆ.

ಇದನ್ನು ಈಗಲೂ ಭಾರತೀಯ ಉಪಖಂಡದಾದ್ಯಂತ ಧರಿಸಲಾಗುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಕುರ್ತಾ, ಅಚ್ಕನ್ ಅಥವಾ ಶೇರ್ವಾನಿ ಮೇಲೆ ಧರಿಸಲಾಗುತ್ತದೆ.ಇದನ್ನು ಸಾಮಾನ್ಯವಾಗಿ ಅಂತರೀಯದ ಜೊತೆಗೆ ಬಳಸಲಾಗುತ್ತಿತ್ತು. ಅಂತರೀಯ ಎಂದರೆ ಪಂಚೆಯ ಒಂದು ಪ್ರಾಚೀನ ಸ್ವರೂಪವಾಗಿತ್ತು. ಸೊಂಟವಸ್ತ್ರ ಅಥವಾ ಕಾಯಾಬಂಧ್ ಇದನ್ನು ಭದ್ರವಾಗಿ ಹಿಡಿದಿಡುತ್ತಿತ್ತು. ಉತ್ತರೀಯವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ರುಮಾಲಾಗಿ ಬಳಸುತ್ತಿದ್ದರು.

ಬೌದ್ಧ ಸಮುದಾಯದ ಕಾಯಕ ಸಹೋದರರು ಸಾಮಾನ್ಯವಾಗಿ ಕೇಸರಿ ಬಣ್ಣದ ಅಂತರೀಯ, ಜೊತೆಗೆ ಉತ್ತರೀಯ ಮತ್ತು ಹೆಚ್ಚು ದೊಡ್ಡ ಚಾದರವನ್ನು ಧರಿಸುತ್ತಿದ್ದರು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಸ್ವಾಮಿ ವಿವೇಕಾನಂದತತ್ಪುರುಷ ಸಮಾಸರೋಸ್‌ಮರಿನಟಸಾರ್ವಭೌಮ (೨೦೧೯ ಚಲನಚಿತ್ರ)ಜೋಗಪ್ಯಾರಾಸಿಟಮಾಲ್ರೇಣುಕಬಿಳಿ ರಕ್ತ ಕಣಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹೈನುಗಾರಿಕೆತಲಕಾಡುಸ.ಉಷಾಪಂಪನವೋದಯಶ್ರೀಲಂಕಾ ಕ್ರಿಕೆಟ್ ತಂಡಕೋಲಾರಅನುಭವ ಮಂಟಪಮೈಸೂರು ಸಂಸ್ಥಾನಮಾನವನ ವಿಕಾಸತುಮಕೂರುಜ್ಞಾನಪೀಠ ಪ್ರಶಸ್ತಿವಜ್ರಮುನಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚಿಕ್ಕಮಗಳೂರುಸಾಮಾಜಿಕ ತಾಣಒಂದು ಮುತ್ತಿನ ಕಥೆಮಹಿಳೆ ಮತ್ತು ಭಾರತವಿಜಯನಗರಶಿವರಾಮ ಕಾರಂತಹಳೇಬೀಡುದೇವರ/ಜೇಡರ ದಾಸಿಮಯ್ಯಎಚ್.ಎಸ್.ಶಿವಪ್ರಕಾಶ್ಬೇಲೂರುಅಕ್ಷಾಂಶ ಮತ್ತು ರೇಖಾಂಶಕಲಿಕೆಸೀತೆಮಹಾಕವಿ ರನ್ನನ ಗದಾಯುದ್ಧಗುರು (ಗ್ರಹ)ಕ್ರಿಯಾಪದಭಾರತದ ಸಂಸತ್ತುಜೀವನಉದಯವಾಣಿಅವಲುಮ್ ಪೆನ್ ತಾನೆಹಸ್ತ ಮೈಥುನವಿಷ್ಣುಕುಂಬಳಕಾಯಿನಿರುದ್ಯೋಗವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮರಾಜಕೀಯ ವಿಜ್ಞಾನರಾಷ್ಟ್ರೀಯ ಶಿಕ್ಷಣ ನೀತಿಶಿವಮೊಗ್ಗಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂಪ್ರದಾಯದಯಾನಂದ ಸರಸ್ವತಿಮತದಾನಹೆಚ್.ಡಿ.ಕುಮಾರಸ್ವಾಮಿಬಾಬು ರಾಮ್ಪರಿಣಾಮಭಾರತದ ರಾಷ್ಟ್ರಪತಿಗಳ ಪಟ್ಟಿಅರವಿಂದ ಘೋಷ್ಬ್ಯಾಂಕ್ಜನಪದ ಕಲೆಗಳುಇನ್ಸ್ಟಾಗ್ರಾಮ್ಆಣೆಸಿದ್ದಲಿಂಗಯ್ಯ (ಕವಿ)ಆಟಿಸಂಖಾಸಗೀಕರಣಸಿರಿ ಆರಾಧನೆಭರತ-ಬಾಹುಬಲಿಐಸಿಐಸಿಐ ಬ್ಯಾಂಕ್ಉಡಗೊಮ್ಮಟೇಶ್ವರ ಪ್ರತಿಮೆದ.ರಾ.ಬೇಂದ್ರೆಕನ್ನಡದಲ್ಲಿ ಸಣ್ಣ ಕಥೆಗಳು🡆 More