ಉಚ್ಚೆ

ಉಚ್ಚೆಯು (ಮೂತ್ರ) ಮಾನವರಲ್ಲಿ ಮತ್ತು ಅನೇಕ ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆಯ ದ್ರವ ಉಪ-ಉತ್ಪನ್ನವಾಗಿದೆ.

ಉಚ್ಚೆಯು ಮೂತ್ರನಾಳದ ಮೂಲಕ ಮೂತ್ರಕೋಶಕ್ಕೆ ಮೂತ್ರಪಿಂಡಗಳಿಂದ ಹರಿಯುತ್ತದೆ. ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಮೂತ್ರವನ್ನು ನಾಳದ ಮೂಲಕ ವಿಸರ್ಜಿಸಲಾಗುತ್ತದೆ.

ಜೀವಕೋಶೀಯ ಚಯಾಪಚಯವು ಸಾರಜನಕದಿಂದ ಸಮೃದ್ಧವಾದ ಅನೇಕ ಉಪ-ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಯೂರಿಯಾ, ಯೂರಿಕ್ ಆಮ್ಲ, ಮತ್ತು ಕ್ರೀಯಾಟ್ನಿನ್‍ನಂತಹ ಈ ಉಪ-ಉತ್ಪನ್ನಗಳನ್ನು ರಕ್ತದಿಂದ ತೆಗೆದು ಹಾಕಬೇಕಾಗುತ್ತದೆ. ಈ ಉಪ-ಉತ್ಪನ್ನಗಳನ್ನು ಮೂತ್ರ ವಿಸರ್ಜನೆಯ ಅವಧಿಯಲ್ಲಿ ದೇಹದಿಂದ ಹೊರಹಾಕಲಾಗುತ್ತದೆ. ಮೂತ್ರ ವಿಸರ್ಜನೆಯು ದೇಹದಿಂದ ನೀರಿನಲ್ಲಿ ಕರಗುವ ರಾಸಾಯನಿಕಗಳನ್ನು ವಿಸರ್ಜಿಸುವ ಪ್ರಧಾನ ವಿಧಾನವಾಗಿದೆ. ಮೂತ್ರ ಪರೀಕ್ಷೆಯು ಸಸ್ತನಿ ದೇಹದ ಸಾರಜನಕಯುಕ್ತ ತ್ಯಾಜ್ಯಗಳನ್ನು ಪತ್ತೆ ಹಚ್ಚಬಲ್ಲದು.

ಮೂತ್ರವು ಭೂಮಿಯ ಸಾರಜನಕ ಚಕ್ರದಲ್ಲಿ ಪಾತ್ರ ಹೊಂದಿದೆ. ಸಂತುಲಿತ ಪರಿಸರ ವ್ಯವಸ್ಥೆಗಳಲ್ಲಿ ಮೂತ್ರವು ಮಣ್ಣನ್ನು ಫಲವತ್ತಾಗಿಸುತ್ತದೆ ಮತ್ತು ಹಾಗಾಗಿ ಸಸ್ಯಗಳು ಬೆಳೆಯುವುದಕ್ಕೆ ನೆರವಾಗುತ್ತದೆ. ಹಾಗಾಗಿ, ಮೂತ್ರವನ್ನು ರಸಗೊಬ್ಬರವಾಗಿ ಬಳಸಬಹುದು. ಕೆಲವು ಪ್ರಾಣಿಗಳು ತಮ್ಮ ಪ್ರದೇಶವನ್ನು ಗುರುತು ಮಾಡಲು ತಮ್ಮ ಮೂತ್ರವನ್ನು ಬಳಸುತ್ತವೆ. ಐತಿಹಾಸಿಕವಾಗಿ, ಮೂತ್ರವನ್ನು ಸಿಡಿಮದ್ದು ಉತ್ಪಾದನೆ, ಸ್ವಚ್ಛಗೊಳಿಸುವಿಕೆ, ಚಕ್ಕಳ ಸಂಸ್ಕರಣ ಮತ್ತು ಬಟ್ಟೆಗಳಿಗೆ ಬಣ್ಣಹಾಕುವಿಕೆಯಲ್ಲಿ ಕೂಡ ಬಳಸಲಾಗಿತ್ತು.

ಮಾನವ ಮೂತ್ರ ಮತ್ತು ಮಲವನ್ನು ಒಟ್ಟಾರೆಯಾಗಿ ಮಾನವ ತ್ಯಾಜ್ಯ ಎಂದು ಸೂಚಿಸಲಾಗುತ್ತದೆ, ಮತ್ತು ಇವನ್ನು ನಿರ್ಮಲೀಕರಣ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತದೆ. ಜಾನುವಾರುಗಳ ಜನಸಂಖ್ಯಾ ಸಾಂದ್ರತೆ ಹೆಚ್ಚಿದ್ದರೆ ಜಾನುವಾರುಗಳ ಮೂತ್ರ ಮತ್ತು ಮಲಕ್ಕೂ ಸರಿಯಾದ ನಿರ್ವಹಣೆ ಅಗತ್ಯವಿದೆ.

ಬಹುತೇಕ ಪ್ರಾಣಿಗಳು ಕರಗಬಲ್ಲ ವಿಷಪೂರಿತ ತ್ಯಾಜ್ಯಗಳ ನಿರ್ಮೂಲನೆಗೆ ವಿಸರ್ಜನಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಮಾನವರಲ್ಲಿ, ಕರಗಬಲ್ಲ ತ್ಯಾಜ್ಯಗಳನ್ನು ಪ್ರಧಾನವಾಗಿ ಮೂತ್ರ ವ್ಯವಸ್ಥೆಯ ಮೂಲಕ ವಿಸರ್ಜಿಸಲಾಗುತ್ತದೆ. ಸ್ವಲ್ಪ ಮಟ್ಟಿಗೆ ಯೂರಿಯಾದ ರೂಪದಲ್ಲಿ, ಬೆವರುವಿಕೆ ಮೂಲಕವೂ ವಿಸರ್ಜಿಸಲಾಗುತ್ತದೆ. ಮೂತ್ರ ವ್ಯವಸ್ಥೆಯು ಮೂತ್ರಪಿಂಡಗಳು, ಮೂತ್ರನಾಳ, ಮೂತ್ರಕೋಶ, ಮತ್ತು ಮೂತ್ರ ವಿಸರ್ಜನಾ ನಾಳವನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಯು ಸೋಸುವಿಕೆ, ಮರುಹೀರಿಕೆ, ಮತ್ತು ನಾಳೀಯ ಸ್ರವಿಸುವಿಕೆ ಪ್ರಕ್ರಿಯೆಯ ಮೂಲಕ ಮೂತ್ರವನ್ನು ಉತ್ಪಾದಿಸುತ್ತದೆ. ಮೂತ್ರಪಿಂಡಗಳು ರಕ್ತದಿಂದ ಕರಗಬಲ್ಲ ತ್ಯಾಜ್ಯಗಳು, ಜೊತೆಗೆ ಹೆಚ್ಚುವರಿ ನೀರು, ಸಕ್ಕರೆಗಳು, ಮತ್ತು ಅನೇಕ ಇತರ ಸಂಯುಕ್ತಗಳನ್ನು ತೆಗೆಯುತ್ತವೆ.

ಉಲ್ಲೇಖಗಳು

Tags:

ಮೂತ್ರಕೋಶಮೂತ್ರಪಿಂಡ

🔥 Trending searches on Wiki ಕನ್ನಡ:

ಬಂಜಾರಅಷ್ಟ ಮಠಗಳುಕರ್ನಾಟಕದ ಜಿಲ್ಲೆಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿಶೈಕ್ಷಣಿಕ ಮನೋವಿಜ್ಞಾನವ್ಯವಹಾರಜೀನುಹೊಯ್ಸಳ ವಿಷ್ಣುವರ್ಧನನೀರಿನ ಸಂರಕ್ಷಣೆ1935ರ ಭಾರತ ಸರ್ಕಾರ ಕಾಯಿದೆಹನುಮಂತಬಿ.ಎಫ್. ಸ್ಕಿನ್ನರ್ಅಯೋಧ್ಯೆಭೂತಕೋಲಶ್ರೀ ರಾಘವೇಂದ್ರ ಸ್ವಾಮಿಗಳುಫೇಸ್‌ಬುಕ್‌ಧರ್ಮಸ್ಥಳವಸ್ತುಸಂಗ್ರಹಾಲಯಹೊನ್ನಾವರರವೀಂದ್ರನಾಥ ಠಾಗೋರ್ಮಹೇಂದ್ರ ಸಿಂಗ್ ಧೋನಿಗೀತಾ (ನಟಿ)ಸಮುಚ್ಚಯ ಪದಗಳುಗುರುರಾಜ ಕರಜಗಿಪಾಕಿಸ್ತಾನಹೊಂಗೆ ಮರಕಾಂತಾರ (ಚಲನಚಿತ್ರ)ಬಿ.ಎಸ್. ಯಡಿಯೂರಪ್ಪಸಿದ್ದರಾಮಯ್ಯಭಾರತೀಯ ರೈಲ್ವೆಸಾಮ್ರಾಟ್ ಅಶೋಕಶಿಶುನಾಳ ಶರೀಫರುಪೂರ್ಣಚಂದ್ರ ತೇಜಸ್ವಿಸರಾಸರಿಅಶ್ವತ್ಥಮರಭೀಮಸೇನವಿರಾಟ್ ಕೊಹ್ಲಿಗಿಡಮೂಲಿಕೆಗಳ ಔಷಧಿವಿರಾಟಗುರು (ಗ್ರಹ)ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮುದ್ದಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುದಕ್ಷಿಣ ಕನ್ನಡಭಾರತೀಯ ಸಂಸ್ಕೃತಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ತೀ. ನಂ. ಶ್ರೀಕಂಠಯ್ಯಇನ್ಸ್ಟಾಗ್ರಾಮ್ಕಲಿಯುಗಮಿಲಾನ್ಜನಪದ ಕಲೆಗಳುಧರ್ಮಇತಿಹಾಸಅರಿಸ್ಟಾಟಲ್‌ಶ್ರುತಿ (ನಟಿ)ಸರ್ವಜ್ಞಕುವೆಂಪುಸಾಮಾಜಿಕ ಸಮಸ್ಯೆಗಳುಸಾಹಿತ್ಯಭಾಷಾ ವಿಜ್ಞಾನಶಬರಿಬಡ್ಡಿ ದರನೀನಾದೆ ನಾ (ಕನ್ನಡ ಧಾರಾವಾಹಿ)ಜೀವವೈವಿಧ್ಯಸಲಿಂಗ ಕಾಮಮೂಲಧಾತುಕನ್ನಡ ರಂಗಭೂಮಿಗೊಮ್ಮಟೇಶ್ವರ ಪ್ರತಿಮೆಆವಕಾಡೊಕರ್ನಾಟಕ ವಿಧಾನ ಸಭೆಕೊಡವರುಛತ್ರಪತಿ ಶಿವಾಜಿವಿಭಕ್ತಿ ಪ್ರತ್ಯಯಗಳುಅ.ನ.ಕೃಷ್ಣರಾಯಕೇಶಿರಾಜ೧೬೦೮ಕರ್ನಾಟಕದ ಅಣೆಕಟ್ಟುಗಳು🡆 More