ಮಾತು

ಮಾತು ಎಂದರೆ ಮಾನವರು ಮತ್ತು ಕೆಲವು ಪ್ರಾಣಿಗಳು ಬಳಸುವ ಸಂವಹನದ ಧ್ವನಿರೂಪ. ಇದು ಪದಕೋಶದಿಂದ ಪಡೆದ ಘಟಕಗಳ ಪದ ಸಂಬಂಧಿ ಸಂಯೋಜನೆ ಮೇಲೆ ಆಧಾರಿತವಾಗಿದೆ.

ಮಾತನಾಡಲಾದ ಪ್ರತಿ ಶಬ್ದವು ಸೀಮಿತ ಸಂಖ್ಯೆಯ ಸ್ವರ ಮತ್ತು ವ್ಯಂಜನ ಧ್ವನಿ ಘಟಕಗಳ (ಧ್ವನಿಮಾಗಳು) ಧ್ವನಿ ಸಂಯೋಜನೆಯಿಂದ ಸೃಷ್ಟಿಯಾಗಿರುತ್ತದೆ. ಈ ಶಬ್ದಕೋಶಗಳು, ಅವುಗಳನ್ನು ಜೋಡಿಸುವ ವಿನ್ಯಾಸ, ಮತ್ತು ಅವುಗಳ ಧ್ವನಿ ಘಟಕಗಳ ಸಮೂಹಗಳು ಬದಲಾಗುತ್ತವೆ, ಮತ್ತು ಸಾವಿರಾರು ವಿಭಿನ್ನ, ಮತ್ತು ಪರಸ್ಪರವಾಗಿ ಗ್ರಹಿಸಲಾಗದ ಮಾನವ ಭಾಷೆಗಳ ಸೃಷ್ಟಿಯಾಗುತ್ತದೆ. ಮಾನವರಿಗೆ ಮಾತನ್ನು ಉತ್ಪತ್ತಿಮಾಡುವುದನ್ನು ಸಾಧ್ಯವಾಗಿಸುವ ವಾಕ್ ಸಾಮರ್ಥ್ಯಗಳು ಅವರಿಗೆ ಹಾಡಲೂ ಸಾಧ್ಯಮಾಡುತ್ತದೆ.

ಮಾತಿನ ಉತ್ಪತ್ತಿ (ಆಂಗ್ಲ)

ಸನ್ನೆ ಭಾಷೆಯ ರೂಪದಲ್ಲಿ ಕಿವುಡರಿಗಾಗಿ ಮಾನವ ಸಂವಹನದ ಸನ್ನೆಯ ರೂಪ ಅಸ್ತಿತ್ವದಲ್ಲಿದೆ. ಕೆಲವು ಸಂಸ್ಕೃತಿಗಳಲ್ಲಿ ಮಾತು ಲಿಖಿತ ಭಾಷೆಯ ಆಧಾರವಾಗಿದೆ, ಮತ್ತು ಹಲವುವೇಳೆ ಇದು ಇದಕ್ಕೆ ಸಂಬಂಧಿಸಿದ ಮಾತನಾಡುವ ಭಾಷೆಯಿಂದ ಶಬ್ದಕೋಶ, ಪದವಿನ್ಯಾಸ ಹಾಗೂ ಧ್ವನಿಶಾಸ್ತ್ರದಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಿತಿಯನ್ನು ದ್ವಿಭಾಷತೆ ಎಂದು ಕರೆಯಲಾಗುತ್ತದೆ. ಸಂವಹನದಲ್ಲಿ ಅದರ ಬಳಕೆಯ ಜೊತೆಗೆ ಮಾತನ್ನು ಆಂತರಿಕವಾಗಿ ಒಳಗಿನ ಸ್ವಗತದ ರೂಪದಲ್ಲಿ ಗ್ರಹಿಕೆಯನ್ನು ಹೆಚ್ಚಿಸಲು ಮತ್ತು ಸಂಘಟಿಸಲು ಮಾನಸಿಕ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ ಎಂದು ವಿಗಾಟ್‍ಸ್ಕಿಯಂತಹ ಕೆಲವು ಮನೋವಿಜ್ಞಾನಿಗಳು ಸೂಚಿಸಿದ್ದಾರೆ.

ವಾಕ್ ಭಾಷೆಯಲ್ಲಿ ಬಳಸಲಾದ ಶಬ್ದಗಳ ವಾಕ್ ಉತ್ಪತ್ತಿ ಮತ್ತು ವಾಕ್ ಗ್ರಹಿಕೆಯ ರೂಪದಲ್ಲಿ ಮಾತನ್ನು ಸಂಶೋಧಿಸಲಾಗುತ್ತದೆ. ಇತರ ಸಂಶೋಧನಾ ವಿಷಯಗಳು ವಾಕ್ ಪುನರಾವರ್ತನೆಗೆ ಸಂಬಂಧಿಸಿವೆ. ವಾಕ್ ಪುನರಾವರ್ತನೆ ಎಂದರೆ ಕೇಳಿದ ಮಾತನಾಡಿದ ಶಬ್ದಗಳನ್ನು ಅವುಗಳನ್ನು ಪುನಃಸೃಷ್ಟಿಸಲು ಬೇಕಾದ ಉಚ್ಚಾರಣೆಯಲ್ಲಿ ಫಲನ ಮಾಡುವ ಸಾಮರ್ಥ್ಯ. ಇದು ಮಕ್ಕಳಲ್ಲಿ ಶಬ್ದಕೋಶದ ವಿಸ್ತರಣೆ ಹಾಗೂ ವಾಕ್ ದೋಷಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಲವಾರು ಶೈಕ್ಷಣಿಕ ವಿಭಾಗಗಳು ಇವನ್ನು ಅಧ್ಯಯನಿಸುತ್ತವೆ; ಧ್ವನಿಶಾಸ್ತ್ರ, ಮನೋವಿಜ್ಞಾನ, ವಾಕ್ ರೋಗಶಾಸ್ತ್ರ, ಭಾಷಾವಿಜ್ಞಾನ, ಜ್ಞಾನಗ್ರಹಣ ವಿಜ್ಞಾನ, ಸಂವಹನ ಅಧ್ಯಯನಗಳು, ಕಿವಿ ಗಂಟಲು ಶಾಸ್ತ್ರ, ಗಣಕ ವಿಜ್ಞಾನ ಮುಂತಾದವು. ಮಾನವ ಮಿದುಳು ತನ್ನ ವಿಭಿನ್ನ ಪ್ರದೇಶಗಳಲ್ಲಿ ಮಾತಿಗೆ ಹೇಗೆ ಅಡಿಪಾಯ ರಚಿಸುತ್ತದೆ ಎಂಬುವುದು ಸಂಶೋಧನೆಯ ಮತ್ತೊಂದು ಕ್ಷೇತ್ರವಾಗಿದೆ.

ಮಾನವರ ಮಾತು ಎಷ್ಟು ಪ್ರಮಾಣದಲ್ಲಿ ಅನನ್ಯವಾಗಿದೆ ಎಂಬುದು ವಿವಾದಾತ್ಮಕವಾಗಿದೆ; ಏಕೆಂದರೆ ಪ್ರಾಣಿಗಳು ಕೂಡ ಶಬ್ದೋಚ್ಚಾರಣೆಗಳ ಮೂಲಕ ಸಂವಹನ ನಡೆಸುತ್ತವೆ. ಕಾಡಿನಲ್ಲಿರುವ ಯಾವ ಪ್ರಾಣಿಯೂ ತುಲನಾತ್ಮಕವಾಗಿ ದೊಡ್ಡ ಶಬ್ದಕೋಶಗಳನ್ನು ಹೊಂದಿಲ್ಲವಾದರೂ, ಸಂಶೋಧನೆಯು ಪ್ರಾಣಿಗಳಿಗೆ ಮಾತಾಡುವ ಸಾಮರ್ಥವಿರುವ ಸಾಧ್ಯತೆಯನ್ನು ಪ್ರಕಟಗೊಳಿಸುತ್ತದೆ. ಮಾತಿನ ವಿಕಾಸಾತ್ಮಕ ಮೂಲಗಳು ಅಜ್ಞಾತವಾಗಿವೆ ಮತ್ತು ಬಹಳ ಚರ್ಚೆ ಹಾಗೂ ಊಹಾಪೋಹದ ವಿಷಯವಾಗಿವೆ.

Tags:

ಭಾಷೆಸಂವಹನ

🔥 Trending searches on Wiki ಕನ್ನಡ:

ಪು. ತಿ. ನರಸಿಂಹಾಚಾರ್ಹಂಪೆಜನಪದ ಕಲೆಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಲಕ್ಷ್ಮೀಶಸಜ್ಜೆಮೂಲಧಾತುಗಳ ಪಟ್ಟಿಸೆಸ್ (ಮೇಲ್ತೆರಿಗೆ)ಬಂಡಾಯ ಸಾಹಿತ್ಯಐಹೊಳೆಕನಕದಾಸರುಕರಗಎಂ ಚಿನ್ನಸ್ವಾಮಿ ಕ್ರೀಡಾಂಗಣನವೋದಯಗ್ರಂಥ ಸಂಪಾದನೆಗೌತಮ ಬುದ್ಧಭಾರತದಲ್ಲಿನ ಶಿಕ್ಷಣಮುಟ್ಟುಮೂಲಭೂತ ಕರ್ತವ್ಯಗಳುಚಾಮುಂಡರಾಯಪ್ಲೇಟೊಕಲ್ಯಾಣಿಬಸವೇಶ್ವರಬರಮೂಳೆ ಮುರಿತ(Bone fracture)ಜವಾಹರ‌ಲಾಲ್ ನೆಹರುದ್ರೌಪದಿ ಮುರ್ಮುಶಿಕ್ಷಣಜಾನಪದ ವಿಶ್ವವಿದ್ಯಾಲಯದೇವನೂರು ಮಹಾದೇವದೇವತಾರ್ಚನ ವಿಧಿಕೃಷ್ಣರಾಜಯೋಗಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ಚುನಾವಣಾ ಆಯೋಗಶಾಸನಗಳುಮಂತ್ರಾಲಯಪಿ.ಲಂಕೇಶ್ರಾಜಕುಮಾರ (ಚಲನಚಿತ್ರ)ಭಾರತದ ರಾಜ್ಯಗಳ ಜನಸಂಖ್ಯೆಸರ್ಪ ಸುತ್ತುಕನ್ನಡ ಅಂಕಿ-ಸಂಖ್ಯೆಗಳುಆಸ್ಪತ್ರೆ೧೮೩೪ಪ್ರಜಾವಾಣಿಅಡಿಕೆಸೂರ್ಯವ್ಯೂಹದ ಗ್ರಹಗಳುಕರ್ನಾಟಕ ಪೊಲೀಸ್ಕಾಂತಾರ (ಚಲನಚಿತ್ರ)ಮಾನವನ ವಿಕಾಸಯಯಾತಿ(ನಾಟಕ)ಬೆಂಗಳೂರಿನ ಇತಿಹಾಸಅರಿಸ್ಟಾಟಲ್‌ಹೊಯ್ಸಳ ವಿಷ್ಣುವರ್ಧನಕಾದಂಬರಿದೇವರ/ಜೇಡರ ದಾಸಿಮಯ್ಯಚುನಾವಣೆಉತ್ತರ ಕನ್ನಡಜಾಗತೀಕರಣಮೊದಲನೆಯ ಕೆಂಪೇಗೌಡಜಾತಿಜ್ಯೋತಿಷ ಶಾಸ್ತ್ರವಿಧಾನಸೌಧವಿಶಿಷ್ಟಾದ್ವೈತಯಜಮಾನ (ಚಲನಚಿತ್ರ)ಡಿ.ಕೆ ಶಿವಕುಮಾರ್ಕುರಿಪಾಂಡವರುಇಮ್ಮಡಿ ಪುಲಿಕೇಶಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಸತ್ಯವತಿಸೀತಾ ರಾಮರತ್ನಾಕರ ವರ್ಣಿಅಮೃತಧಾರೆ (ಕನ್ನಡ ಧಾರಾವಾಹಿ)ನಿರಂಜನಡೊಳ್ಳು ಕುಣಿತ೧೬೦೮ಯೇಸು ಕ್ರಿಸ್ತಸಾಮ್ರಾಟ್ ಅಶೋಕ🡆 More