ಅಲ್ಟ್ರಾಮರೀನ್

ಹಸುರು ಮತ್ತು ಊದಾಬಣ್ಣದ ಹರಳುಗಳ ರೂಪದಲ್ಲಿ ದೊರೆಯುವ ಖನಿಜ.

ಸ್ವಲ್ಪಾಂಶ ಗಂಧಕ ಇರುವ ಅಲ್ಯೂಮಿನಿಯಂ ಸೋಡಿಯಂ ಸಿಲಿಕೇಟ್ ಇದು ಎಂದು ಭಾವಿಸಲಾಗಿದೆ. ಕೃತಕ ಅಲ್ಟ್ರಾಮರೀನ್ ನೀಲಿಬಣ್ಣದ ವರ್ಣದ್ರವ್ಯ (ಪಿಗ್ಮೆಂಟ್). ಬಿಳಿ ಜೇಡಿಮಣ್ಣು, ಸೋಡ, ಇದ್ದಲು ಮತ್ತು ಗಂಧಕಗಳನ್ನು ಗಾಳಿ ಸಂಪರ್ಕವಿಲ್ಲದಂತೆ ಕಾಸಿದಾಗ ಒಂದು ಹಸಿರು ಬಣ್ಣದ ಪದಾರ್ಥ ಉತ್ಪನ್ನವಾಗುತ್ತದೆ. ಇದನ್ನು ನೀರಿನಲ್ಲಿ ತೊಳೆದು ಒಣಗಿಸಿ ಮತ್ತೆ ಗಂಧಕವನ್ನು ಸೇರಿಸಿ ಬೇಕಾದ ಬಣ್ಣದ ಛಾಯೆ ಬರುವವರೆಗೂ ಗಾಳಿಯಲ್ಲಿ ಕಾಸುತ್ತಾರೆ. ಈ ಪದಾರ್ಥವನ್ನು ನೀಲಿ ಎಂಬ ಹೆಸರಿನಲ್ಲಿ ಬಟ್ಟೆ ಒಗೆದು ಅಲುಬುವಾಗ ಬಳಸುತ್ತಾರೆ. ಪೇಂಟ್ ಲಾಕ್ಕರ್, ಕ್ಯಾಲ್ಸಿಮೈನ್, ಲಿನೋಲಿಯಂ, ಕಾಗದ ತಯಾರಿಕೆ ಇಲ್ಲೆಲ್ಲ ಇದರ ಉಪಯೋಗವಿದೆ. ಯುರೋಪ್ ರಾಷ್ಟ್ರಗಳಿಗೆ ಈ ವಸ್ತುವನ್ನು ಕಡಲಾಚೆಯಿಂದ ಆಮದು ಮಾಡುತ್ತಿದ್ದುದ ರಿಂದ ಅಲ್ಟ್ರಾ (ಆಚೆಯಿಂದ) ಮರೀನ್ (ಕಡಲು) ಎಂಬ ಹೆಸರು ಬಂದಿತು. ಇದರ ಕೃತಕ ತಯಾರಿಕೆ ಯಶಸ್ವಿಯಾದದ್ದು 1820ರಲ್ಲಿ. ಅಲ್ಟ್ರಾಮರೀನಿನ ರಾಸಾಯನಿಕ ರಚನೆ ಸಮಸ್ಯಾತ್ಮಕವಾಗಿತ್ತು. 1929ರಲ್ಲಿ ಎಕ್ಸ್‌-ಕಿರಣಗಳ ಬಳಕೆಯಿಂದ ಇದನ್ನು ನಿರ್ಧರಿಸಿದರು. ಒಂದು ಘನರೂಪದ ಮತ್ತು ವಿಕೃತಶೃಂಗಗಳಿರುವ ಲ್ಯಾಟಿಸ್ ಇದರ ಆಕಾರ. ಅಲ್ಯೂಮಿನಿಯಂ ಮತ್ತು ಸಿಲಿಕಾನ್ ಪರಮಾಣುಗಳು ಇಲ್ಲಿ ಆಕ್ಸಿಜನ್ ಪರಮಾಣುಗಳ ನೆರವಿನಿಂದ ಬಂಧಿತ ವಾಗಿವೆ. ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಗಳ ನಿಷ್ಪತ್ತಿ ಮಿತಿಗಳೊಳಗೆ ಬದಲಾಗಬಹುದು; ಆದರೆ ಅವುಗಳ ಒಟ್ಟು ಮೊತ್ತ ಸದಾ 12. ಸಿಲಿಕಾನ್ ಪರಮಾಣುಗಳು ಅಲ್ಯೂಮಿನಿಯಂ ಪರಮಾಣುಗಳ ಸಂಖ್ಯೆಗಿಂತ ಸಾಮಾನ್ಯವಾಗಿ ಅಧಿಕ. ಇವುಗಳನ್ನು ಬಂಧಿಸುವ ಆಕ್ಸಿಜನ್ ಪರಮಾಣು ಸಂಖ್ಯೆ 24. ಲ್ಯಾಟಿಸ್‌ನ ಒಳಗೂ ಒತ್ತೊತ್ತಿಗೆ ಇರುವ ಲ್ಯಾಟ್ಟಿಸ್‌ಗಳ ವಿಕೃತಶೃಂಗ ಗಳು ಒದಗಿಸುವ ಪ್ರದೇಶಗಳಲ್ಲಿಯೂ ಸೋಡಿಯಂ ಮತ್ತು ಗಂಧಕದ ಪರಮಾಣುಗಳಿವೆ. ಇವುಗಳ ಸಂಖ್ಯೆ ಅಥವಾ ಸ್ಥಾನ ನಿರ್ದಿಷ್ಟವಾಗಿಲ್ಲ. ಈ ಮೂಲವಸ್ತುಗಳ ಪ್ರಮಾಣ ಕೆಳಗೆ ತೋರಿಸಿದೆ.

ಸಿಲಿಕಾನ್ 17.75%-20.0% ಭಾರದಲ್ಲಿ
ಅಲ್ಯೂಮಿನಿಯಂ 12.30%-15.5% ಭಾರದಲ್ಲಿ
ಸೋಡಿಯಂ 12.80%-15.3% ಭಾರದಲ್ಲಿ
ಗಂಧಕ 10.00%-14.0% ಭಾರದಲ್ಲಿ

ಆಕ್ಸಿಜನ್ ಉಳಿದ ಅಂಶ (ಅತ್ಯಲ್ಪಾಂಶ ನೀರು ಮತ್ತು ಕಲ್ಮಷಗಳೂ ಸೇರಿವೆ) ಮೂಲವಸ್ತುಗಳ ಪ್ರಮಾಣದಲ್ಲಿ ವ್ಯತ್ಯಾಸ ಸಾಧ್ಯವಾಗಿರುವುದರಿಂದ ಭಿನ್ನ ಗುಣಗಳ ಅಲ್ಟ್ರಾಮರೀನ್‌ಗಳು ಉಂಟಾಗುತ್ತವೆ.

ಅಲ್ಟ್ರಾಮರೀನ್
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಕೃತಕ ಬುದ್ಧಿಮತ್ತೆತೀ. ನಂ. ಶ್ರೀಕಂಠಯ್ಯಚಂದ್ರಕರ್ನಾಟಕ ಸರ್ಕಾರಖ್ಯಾತ ಕರ್ನಾಟಕ ವೃತ್ತದ್ರೌಪದಿ ಮುರ್ಮುಕರ್ನಾಟಕದ ಮಹಾನಗರಪಾಲಿಕೆಗಳುಗೌತಮ ಬುದ್ಧರಾಜ್ಯಸಭೆಧರ್ಮಭಾರತದ ಬಂದರುಗಳುಶಂಕರ್ ನಾಗ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕನ್ನಡ ಸಾಹಿತ್ಯ ಸಮ್ಮೇಳನಆಂಧ್ರ ಪ್ರದೇಶಭಾರತದ ರಾಷ್ಟ್ರೀಯ ಉದ್ಯಾನಗಳುಕೊಡಗುಬಾದಾಮಿಮುದ್ದಣಭಾರತದ ಚಲನಚಿತ್ರೋದ್ಯಮಕೊಬ್ಬಿನ ಆಮ್ಲಮಂಡಲ ಹಾವುಬೆಳಗಾವಿಕನ್ನಡದಲ್ಲಿ ವಚನ ಸಾಹಿತ್ಯಬೇವುರಾಷ್ಟ್ರಕೂಟಅತ್ತಿಮಬ್ಬೆಪ್ರಜಾಪ್ರಭುತ್ವದ ಲಕ್ಷಣಗಳುಮಂಗಳ (ಗ್ರಹ)ಕರ್ನಾಟಕದ ವಾಸ್ತುಶಿಲ್ಪಹೊಯ್ಸಳೇಶ್ವರ ದೇವಸ್ಥಾನಸಿಂಧೂತಟದ ನಾಗರೀಕತೆಜೋಳನೊಬೆಲ್ ಪ್ರಶಸ್ತಿಮುಖ್ಯ ಪುಟಟೈಗರ್ ಪ್ರಭಾಕರ್ವೇದವ್ಯಾಸವಿಷ್ಣುವರ್ಧನ್ (ನಟ)ಗಸಗಸೆ ಹಣ್ಣಿನ ಮರಕನ್ನಡದಲ್ಲಿ ಮಹಿಳಾ ಸಾಹಿತ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಶನಿಭಾರತೀಯ ಮೂಲಭೂತ ಹಕ್ಕುಗಳುಅಂಬಿಗರ ಚೌಡಯ್ಯಯೋಗಿ ಆದಿತ್ಯನಾಥ್‌ಪಪ್ಪಾಯಿಇನ್ಸಾಟ್ಶಿವಕುಮಾರ ಸ್ವಾಮಿಕನ್ನಡ ನ್ಯೂಸ್ ಟುಡೇಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಅಂತಿಮ ಸಂಸ್ಕಾರದೆಹಲಿಯ ಇತಿಹಾಸಕುಮಾರವ್ಯಾಸಎಚ್. ತಿಪ್ಪೇರುದ್ರಸ್ವಾಮಿಭಾರತದಲ್ಲಿ ಪಂಚಾಯತ್ ರಾಜ್ಮೈಗ್ರೇನ್‌ (ಅರೆತಲೆ ನೋವು)ಗರುಡ ಪುರಾಣರೋಹಿತ್ ಶರ್ಮಾಆಗುಂಬೆಭಾರತದ ಆರ್ಥಿಕ ವ್ಯವಸ್ಥೆರಾಸಾಯನಿಕ ಗೊಬ್ಬರಎಂ.ಬಿ.ಪಾಟೀಲಪಾಂಡವರುದಲಿತತಾಜ್ ಮಹಲ್ಕೇಂದ್ರ ಸಾಹಿತ್ಯ ಅಕಾಡೆಮಿಭಾರತದಲ್ಲಿ ಮೀಸಲಾತಿಭರತನಾಟ್ಯರಾಣೇಬೆನ್ನೂರುಬಾಲ್ಯ ವಿವಾಹರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಹೈದರಾಲಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕದ ಏಕೀಕರಣಪಂಚಾಂಗಸಜ್ಜೆಕರುಳುವಾಳುರಿತ(ಅಪೆಂಡಿಕ್ಸ್‌)ಬಿಲ್ಲು ಮತ್ತು ಬಾಣವಾಯು ಮಾಲಿನ್ಯ🡆 More