ಸ. ಸ. ಮಾಳವಾಡ

ಪ್ರೊ.

ಸ. ಸ. ಮಾಳವಾಡ (ನವೆಂಬರ್ ೧೪, ೧೯೧೦ - ಆಗಸ್ಟ್ ೩೦, ೧೯೮೭) ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು ಈ ದಂಪತಿಗಳು ತಮ್ಮ ಮಹತ್ವದ ಕೊಡುಗೆಗಳಿಗಾಗಿ ಕನ್ನಡ ನಾಡಿನ ಪ್ರಾತಃಸ್ಮರಣೀಯರೆನಿಸಿದ್ದಾರೆ.

ಸ. ಸ. ಮಾಳವಾಡ
ಜನನನವೆಂಬರ್ ೧೪, ೧೯೧೦
ಧಾರವಾಡ ಜಿಲ್ಲೆಯ ಮೆಣಸಗಿ
ಮರಣಆಗಸ್ಟ್ ೩೦, ೧೯೮೭
ವೃತ್ತಿಪ್ರಾಧ್ಯಾಪಕರು, ಸಾಹಿತ್ಯ ವಿಮರ್ಶಕರು, ಬರಹಗಾರರು
ಬಾಳ ಸಂಗಾತಿಶಾಂತಾದೇವಿ ಮಾಳವಾಡ

ಜೀವನ

ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ನವೆಂಬರ್ ೧೪, ೧೯೧೦ರ ವರ್ಷದಲ್ಲಿ ಜನಿಸಿದರು. ತಂದೆ ಸಂಗನ ಬಸಪ್ಪನವರು ಮತ್ತು ತಾಯಿ ಕಾಳಮ್ಮನವರು.

ಮಾಳವಾಡರ ಪ್ರಾರಂಭಿಕ ಶಿಕ್ಷಣವು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ನೆರವೇರಿತು. ಉನ್ನತ ವ್ಯಾಸಂಗವನ್ನು ಧಾರವಾಡದಲ್ಲಿ ನಡೆಸಿದ ಅವರು ಎಂ. ಎ ಪದವೀಧರರಾದ ಮೇಲೆ ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು.

ಶೈಕ್ಷಣಿಕ ಕೊಡುಗೆ

ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿ, ನಿವೃತ್ತರಾಗುವವರೆವಿಗೂ ಸೇವೆ ಸಲ್ಲಿಸಿದ ಮಾಳವಾಡರು ನಿವೃತ್ತಿಯ ನಂತರದಲ್ಲಿ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ, ರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು

ಸಾಹಿತ್ಯ ಕೃತಿಗಳು

‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ಮಾಳವಾಡರ ಮೊಟ್ಟ ಮೊದಲ ಕೃತಿ. ನಂತರದಲ್ಲಿ ಸಾಹಿತ್ಯ ಸಮಾಲೋಚನೆ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಸಾಹಿತ್ಯ ಸಂಗಮ, ಷಡಕ್ಷರಿ, ಸಾಹಿತ್ಯ ದೃಷ್ಟಿ, ಹರಿಹರ-ರಾಘವಾಂಕರು ಮುಂತಾದ ಹಲವಾರು ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದರು.

ಮಾಳವಾಡರ ಸಂಪಾದಿತ ಕೃತಿಗಲ್ಲಿ ಕನ್ನಡ ಗದ್ಯಮಾಲೆ, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ ಮುಂತಾದವು ಸೇರಿವೆ.

ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ ಮುಂತಾದವು ಮಾಳವಾಡರ ವೈಚಾರಿಕ ಬರಹಗಳು. ಪಯಣದ ಕತೆ, ಸಂಚಾರ ಸಂಗಮ ಪ್ರವಾಸ ಕಥನಗಳು. ಸ್ವಾದಿ ಅರಸು ಮನೆತನ, ಉತ್ತಂಗಿ ಚನ್ನಪ್ಪ, ಮಧುರ ಚೆನ್ನ, ಬಸವಣ್ಣನವರು, ನಾಗ ಮಹಾಶಯ, ಶಿಶುನಾಳ ಶರೀಫರು ಮುಂತಾದವು ವ್ಯಕ್ತಿಚಿತ್ರಗಳು. ಹಳ್ಳಿಯ ಹುಡುಗ, ದಾರಿ ಸಾಗಿದೆ ಅವರ ಆತ್ಮಕೃತಿಗಳು. ಅಭಿನಂದನ ಗ್ರಂಥ ವ್ಯಾಸಂಗ. ಹೀಗೆ ಅವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಮಾಳವಾಡರು ವಿದ್ಯಾರ್ಥಿ ದೆಸೆಯಲ್ಲಿಯೇ ಮಂಗ ಮಠ ಎಂಬ ಸಾಹಿತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದರು. ಮಾಳವಾಡರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ನಾಡು, ನುಡಿ, ಭಾಷೆ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದವರು.

ಪ್ರಶಸ್ತಿ ಗೌರವಗಳು

ಸ. ಸ. ಮಾಳವಾಡರಿಗೆ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೮೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.

ವಿದಾಯ

ಪ್ರೊ. ಮಾಳವಾಡರು ಆಗಸ್ಟ್ ೩೦, ೧೯೮೭ರ ವರ್ಷದಲ್ಲಿ ಈ ಲೋಕವನ್ನಗಲಿದರರು.

ಮಾಹಿತಿ ಕೃಪೆ

  1. ಕಣಜ Archived 2015-01-02 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಸ. ಸ. ಮಾಳವಾಡ ಜೀವನಸ. ಸ. ಮಾಳವಾಡ ಶೈಕ್ಷಣಿಕ ಕೊಡುಗೆಸ. ಸ. ಮಾಳವಾಡ ಸಾಹಿತ್ಯ ಕೃತಿಗಳುಸ. ಸ. ಮಾಳವಾಡ ಪ್ರಶಸ್ತಿ ಗೌರವಗಳುಸ. ಸ. ಮಾಳವಾಡ ವಿದಾಯಸ. ಸ. ಮಾಳವಾಡ ಮಾಹಿತಿ ಕೃಪೆಸ. ಸ. ಮಾಳವಾಡಆಗಸ್ಟ್ ೩೦ನವೆಂಬರ್ ೧೪೧೯೧೦೧೯೮೭

🔥 Trending searches on Wiki ಕನ್ನಡ:

ಕೆ. ಎಸ್. ನಿಸಾರ್ ಅಹಮದ್ಓಂದಿಕ್ಸೂಚಿಗಣರಾಜ್ಯೋತ್ಸವ (ಭಾರತ)ಚಂದ್ರಎಚ್‌.ಐ.ವಿ.ಕನ್ನಡದಲ್ಲಿ ಸಣ್ಣ ಕಥೆಗಳುವಾಸ್ತುಶಾಸ್ತ್ರಅರ್ಥಶಾಸ್ತ್ರಗೋಡಂಬಿಗುರು (ಗ್ರಹ)ಅಲ್ಲಮ ಪ್ರಭುಸಿಂಧೂತಟದ ನಾಗರೀಕತೆಕೊರೋನಾವೈರಸ್ ಕಾಯಿಲೆ ೨೦೧೯ಸಮುಚ್ಚಯ ಪದಗಳುಬಿದಿರುಮಲ್ಲಿಗೆಸ್ವಾಮಿ ರಮಾನಂದ ತೀರ್ಥಜವಹರ್ ನವೋದಯ ವಿದ್ಯಾಲಯರಾಜಾ ರವಿ ವರ್ಮಋಗ್ವೇದರಾಷ್ಟ್ರಕೂಟವಿಜಯನಗರ ಜಿಲ್ಲೆಕಾರ್ಯಾಂಗದಕ್ಷಿಣ ಕನ್ನಡರಾಧಿಕಾ ಕುಮಾರಸ್ವಾಮಿಪಪ್ಪಾಯಿಚಂದ್ರ (ದೇವತೆ)ಸಿಂಹಹಾವೇರಿಜಯಮಾಲಾಕಾಮಾಲೆಜೀವನ ಚೈತ್ರಹಸ್ತ ಮೈಥುನದೆಹಲಿಯ ಇತಿಹಾಸರೋಹಿತ್ ಶರ್ಮಾವಿಚ್ಛೇದನಶಿವಮೊಗ್ಗವಚನ ಸಾಹಿತ್ಯಕರ್ಣವಿಮರ್ಶೆಪಶ್ಚಿಮ ಘಟ್ಟಗಳುಸಮಂತಾ ರುತ್ ಪ್ರಭುತೆಲುಗುನೀರುವಿ. ಕೃ. ಗೋಕಾಕರೈತವಾರಿ ಪದ್ಧತಿದೆಹಲಿ ಸುಲ್ತಾನರುಕೂಡಲ ಸಂಗಮಭಾರತೀಯ ನದಿಗಳ ಪಟ್ಟಿಭಾರತದ ಬುಡಕಟ್ಟು ಜನಾಂಗಗಳುಗರ್ಭಧಾರಣೆರವೀಂದ್ರನಾಥ ಠಾಗೋರ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಓಂ ನಮಃ ಶಿವಾಯಬಳ್ಳಾರಿಭಾರತದ ರಾಷ್ಟ್ರೀಯ ಚಿಹ್ನೆಕೊಬ್ಬಿನ ಆಮ್ಲಹರ್ಯಂಕ ರಾಜವಂಶಜೆಕ್ ಗಣರಾಜ್ಯಪೂರ್ಣಚಂದ್ರ ತೇಜಸ್ವಿಮೋಕ್ಷಗುಂಡಂ ವಿಶ್ವೇಶ್ವರಯ್ಯವೃತ್ತಪತ್ರಿಕೆಪ್ಯಾರಾಸಿಟಮಾಲ್ಭಾರತ ರತ್ನಅಂತಿಮ ಸಂಸ್ಕಾರಕಾಮಧೇನುಪ್ರಾಥಮಿಕ ಶಿಕ್ಷಣಲಿಂಗಾಯತ ಪಂಚಮಸಾಲಿವಿಧಾನಸೌಧಮೌರ್ಯ ಸಾಮ್ರಾಜ್ಯಬಿಲ್ಲು ಮತ್ತು ಬಾಣಕುಮಾರವ್ಯಾಸ🡆 More