ಟಿ. ಎಸ್. ರಂಗಾ

ಟಿ.ಎಸ್‌.

ರಂಗಾ ಅವರು ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಸಿನೆಮಾ ನಿರ್ದೇಶಕ. ಪ್ರಸಿದ್ಧ ರಂಗಕರ್ಮಿ ಬಿ.ವಿ.ಕಾರಂತರ ಸಹವರ್ತಿಯಾಗಿ ಇವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಆಡಿದ್ದಾರೆ. ಕೆಲವು ಕನ್ನಡ ಸಿನೆಮಾಗಳನ್ನು ಹಾಗೂ ಹಿಂದಿ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಟಿ.ಎಸ್. ನಾಗಾಭರಣರೊಡಗೂಡಿ ರಚಿಸಿದ 'ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.

ಟಿ. ಎಸ್. ರಂಗಾ

ಜನನ, ಜೀವನ

ರಂಗಾ ಅವರು ೧೯೪೯ರಲ್ಲಿ ಹುಟ್ಟಿದರು. ಅವರು ರಾಜಕಾರಣದಲ್ಲಿ ಹಾಗೂ ಸಮಾಜಸೇವೆಯಲ್ಲಿ ಹೆಸರು ಮಾಡಿದ್ದ ಗಾಂಧಿವಾದಿ ಟಿ.ಎಸ್‌.ಶಾಮಣ್ಣನವರ ಪುತ್ರ. ಆದರೆ ಅವರ ಒಲವು ರಾಜಕೀಯದೆಡೆಗೆ ಇರಲಿಲ್ಲ. ರಂಗಭೂಮಿಯೇ ಆಪ್ತವಾಗಿದ್ದ ಅವರು ಧಾರವಾಡ ಮತ್ತು ವಿಜಯಪುರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ನಿರ್ದೇಶಿಸಿದ 'ಸಾವಿತ್ರಿ' ಚಿತ್ರದ ನಾಯಕಿ ಅಶ್ವಿನಿಯವರನ್ನು ಅವರು ಮದುವೆಯಾದರು. ಅವರ ಮಗಳ ಹೆಸರು ತನ್ವಿ. ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿದ್ದ ಅವರ ಕಛೇರಿಯ ಹೆಸರು 'ಕೃತಿ'.

ರಂಗಭೂಮಿ ಹಾಗೂ ಸಿನೆಮಾ ಜೀವನದ ಕೆಲವು ಸಂಗತಿಗಳು

  • ಕಾರ್ನಾಡರ 'ಹಯವದನ' ನಾಟಕದಲ್ಲಿ 'ಕಪಿಲ'ನ ಪಾತ್ರ ನಿರ್ವಹಿಸುತ್ತಿದ್ದರು.
  • 1970 ರ ದಶಕದಲ್ಲಿ ಬಿ.ವಿ.ಕಾರಂತರು ಬೆಂಗಳೂರು ನಗರದಲ್ಲಿ ಕಟ್ಟಿದ 'ಬೆನಕ' ನಾಟಕ ತಂಡದ ಸದಸ್ಯರಾಗಿದ್ದರು.
  • ನಾಗಾಭರಣ ನಿರ್ದೇಶನದ 'ಗ್ರಹಣ' ಸಿನೆಮಾಗೆ ಚಿತ್ರಕತೆ ಬರೆದರು.
  • ಆಲನಹಳ್ಳಿಯವರ 'ಗೀಜಗನ ಗೂಡು' ಕತೆಗೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದರು. ಇದು ಇವರ ಚೊಚ್ಚಲು ನಿರ್ದೇಶನದ ಸಿನಿಮಾ 'ತುಕ್ರನ ಕತೆ' ಎಂಬ ಸಿನೆಮಾ ಮಾಡಿದರು.
  • ಬೆಳಗಾವಿ ಜಿಲ್ಲೆಯ ಲೇಖಕ ರಂ.ಶಾ. ಲೋಕಾಪುರರ 'ಸಾವಿತ್ರಿ' ಕಾದಂಬರಿಯನ್ನು ನಿರ್ದೇಶಿಸಿ ಬೆಳ್ಳಿತೆರೆಗೆ ತಂದರು. 1975-76ರಲ್ಲಿ ಮಾಡಿದ ಈ ಚಿತ್ರಕ್ಕಾಗಿ ಬೆಳಗಾವಿಯ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.
  • ದೇವದಾಸಿ ಪದ್ದತಿಯ ನಿರ್ಮೂಲನೆ ಕುರಿತಂತೆ 'ಗಿದ್' ಎಂಬ ಹಿಂದಿ ಚಿತ್ರವನ್ನು ನಿರ್ದೆಶಿಸಿದರು. ಸ್ಮಿತಾ ಪಾಟೀಲ್, ಓಂಪುರಿ, ನಾನಾ ಪಾಟೇಕರ್, ನಾಸಿರುದ್ದೀನ್ ಶಾ, ಕೆ. ಕೆ. ರೈನಾ, ವಿಜಯ ಕಶ್ಯಪ್ ಮುಂತಾದ ಕಲಾವಿದರು ಇದರಲ್ಲಿ ಅಭಿನಯಿಸಿದ್ದರು. 1988 ರಲ್ಲಿ 'ಉದ್ಭವ್' ಎಂಬ ಮತ್ತೊಂದು ಹಿಂದಿ ಚಿತ್ರವನ್ನೂ ನಿರ್ದೇಶಿಸಿದ್ದರು.
  • ದೂರದರ್ಶನಕ್ಕಾಗಿ 'ಮೌನಕ್ರಾಂತಿ' ಎಂಬ ಧಾರಾವಾಹಿ ನಿರ್ಮಿಸಿದರು.
  • ಕೇಂದ್ರ ಹಾಗೂ ರಾಜ್ಯ ವಾರ್ತಾ ಇಲಾಖೆಗಳಿಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದರು.

ಕೆಲವು ಪ್ರಮುಖ ನಿರ್ವಹಣೆಗಳು

  • 2008-ಆತ್ಮೀಯ [ಗೀತಸಾಹಿತ್ಯ ರಚನೆ]
  • 1981-ಗ್ರಹಣ [ಚಿತ್ರಕತೆ]
  • 1980-ಸಾವಿತ್ರಿ [ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ]
  • 1979-ನಾಳೆಗಳನ್ನು ಮಾಡುವವರು [ನಟನೆ]
  • 1978-ಗೀಜಗನ ಗೂಡು[ನಿರ್ದೇಶನ, ಚಿತ್ರಕತೆ, ಸಂಭಾಷಣೆ]
  • 1975-ಚೋಮನ ದುಡಿ [ಕಂಠದಾನ ಹಾಗೂ ಪ್ರೊಡಕ್ಷನ್ ಮ್ಯಾನೇಜರ್]

ಪ್ರಶಸ್ತಿ, ಗೌರವಗಳು

  • 'ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿ.
  • 'ಗಿದ್' ಚಿತ್ರಕ್ಕಾಗಿ ಜ್ಯೂರಿಗಳ ವಿಶೇಷ ರಾಷ್ಟ್ರಪ್ರಶಸ್ತಿ - 1984
  • 'ಸಾವಿತ್ರಿ' ಕಾದಂಬರಿಯನ್ನು ಬೆಳ್ಳಿತೆರೆಗೆ ತಂದಿದ್ದಕ್ಕಾಗಿ ರಾಜ್ಯ ಪ್ರಶಸ್ತಿ.

ನಿಧನ

೧೮ ಏಪ್ರಿಲ್ ೨೦೧೮ರಂದು ಭಾನುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೯ ವರ್ಷ ವಯಸ್ಸಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು, ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ಟಿ. ಎಸ್. ರಂಗಾ ಜನನ, ಜೀವನಟಿ. ಎಸ್. ರಂಗಾ ರಂಗಭೂಮಿ ಹಾಗೂ ಸಿನೆಮಾ ಜೀವನದ ಕೆಲವು ಸಂಗತಿಗಳುಟಿ. ಎಸ್. ರಂಗಾ ಕೆಲವು ಪ್ರಮುಖ ನಿರ್ವಹಣೆಗಳು[೩]ಟಿ. ಎಸ್. ರಂಗಾ ಪ್ರಶಸ್ತಿ, ಗೌರವಗಳುಟಿ. ಎಸ್. ರಂಗಾ ನಿಧನಟಿ. ಎಸ್. ರಂಗಾ ಬಾಹ್ಯ ಕೊಂಡಿಗಳುಟಿ. ಎಸ್. ರಂಗಾ ಉಲ್ಲೇಖಗಳುಟಿ. ಎಸ್. ರಂಗಾಟಿ.ಎಸ್. ನಾಗಾಭರಣಬಿ.ವಿ.ಕಾರಂತ

🔥 Trending searches on Wiki ಕನ್ನಡ:

ಹಲ್ಮಿಡಿ ಶಾಸನಹಳೆಗನ್ನಡನಿರ್ವಹಣೆ ಪರಿಚಯಸಾಲುಮರದ ತಿಮ್ಮಕ್ಕಕೆ. ಅಣ್ಣಾಮಲೈಮಂಡ್ಯಅಣ್ಣಯ್ಯ (ಚಲನಚಿತ್ರ)ಕರ್ನಾಟಕದ ಸಂಸ್ಕೃತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸೂಪರ್ (ಚಲನಚಿತ್ರ)ಮುಂಗಾರು ಮಳೆಸಾವಯವ ಬೇಸಾಯಹೋಮಿ ಜಹಂಗೀರ್ ಭಾಬಾಸ್ವಾಮಿ ರಮಾನಂದ ತೀರ್ಥಗರ್ಭಕಂಠದ ಕ್ಯಾನ್ಸರ್‌ಜಯಮಾಲಾಪದಬಂಧಹಾವೇರಿಮಯೂರಶರ್ಮಭ್ರಷ್ಟಾಚಾರಬನವಾಸಿವಿಚ್ಛೇದನಶಾಲೆಜಾಹೀರಾತುಸಮಾಸಬುಡಕಟ್ಟುತುಳಸಿಕರ್ನಾಟಕ ಐತಿಹಾಸಿಕ ಸ್ಥಳಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚದುರಂಗಚದುರಂಗದ ನಿಯಮಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜಿ.ಎಸ್.ಶಿವರುದ್ರಪ್ಪಹಾಗಲಕಾಯಿದೆಹಲಿಚೆನ್ನಕೇಶವ ದೇವಾಲಯ, ಬೇಲೂರುದಾಸ ಸಾಹಿತ್ಯಮಳೆಗಾಲಸ್ಮೃತಿ ಇರಾನಿವಿವಾಹಪ್ರವಾಸಿಗರ ತಾಣವಾದ ಕರ್ನಾಟಕಕೆ. ಸುಧಾಕರ್ (ರಾಜಕಾರಣಿ)ಕೃತಕ ಬುದ್ಧಿಮತ್ತೆನೇಮಿಚಂದ್ರ (ಲೇಖಕಿ)ಇಸ್ಲಾಂ ಧರ್ಮಅಟಲ್ ಬಿಹಾರಿ ವಾಜಪೇಯಿಕಪ್ಪೆ ಅರಭಟ್ಟಹೆಣ್ಣು ಬ್ರೂಣ ಹತ್ಯೆಭಾರತದ ಬುಡಕಟ್ಟು ಜನಾಂಗಗಳುಶಿಕ್ಷೆಅಮಿತ್ ಶಾಕ್ರೀಡೆಗಳುಶಿವಪ್ಪ ನಾಯಕಕರ್ನಾಟಕದ ಮುಖ್ಯಮಂತ್ರಿಗಳುಸ್ವಾಮಿ ವಿವೇಕಾನಂದಒಪ್ಪಂದಮದುವೆಸುದೀಪ್ಹದ್ದುಗ್ರಾಮ ಪಂಚಾಯತಿತಾಳಗುಂದ ಶಾಸನಭಾರತದಲ್ಲಿ ಬ್ರಿಟಿಷ್ ಆಳ್ವಿಕೆಜನಪದ ಕಲೆಗಳುಅಲಂಕಾರಉತ್ತರ ಪ್ರದೇಶಕರ್ನಾಟಕ ಸರ್ಕಾರವೀಳ್ಯದೆಲೆದೇವರ/ಜೇಡರ ದಾಸಿಮಯ್ಯಮಲೈ ಮಹದೇಶ್ವರ ಬೆಟ್ಟಶ್ರೀ ರಾಘವೇಂದ್ರ ಸ್ವಾಮಿಗಳುಹೊಯ್ಸಳ ವಾಸ್ತುಶಿಲ್ಪಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುತ್ರಿಪದಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿತಿಪಟೂರುಕುಮಾರವ್ಯಾಸಮಲೆನಾಡು🡆 More