ಗುನ್ನಾರ್ ಗುನ್ನಾರ್ಸ್ಸನ್

ಗುನ್ನಾರ್ ಗುನ್ನಾರ್ಸ್ಸನ್ (18 ಮೇ 1889 – 21 ನವಂಬರ್ 1975) ಐಸ್ಲೆಂಡಿನ ಪ್ರಸಿದ್ಧ ಕಾದಂಬರಿಕಾರ.

ಸಮಕಾಲೀನ ಐಸ್ಲೆಂಡಿನ ಸಾಹಿತ್ಯ ಪ್ರಪಂಚದಲ್ಲಿ ಹಾಲ್ಡೊರ್ ಲ್ಯಾಕ್ಸ್‌ನೆಸ್‍ನಂತೆ ಹೆಸರಾದವ.

ಗುನ್ನಾರ್ ಗುನ್ನಾರ್ಸ್ಸನ್

ಬಾಲ್ಯ ಮತ್ತು ಜೀವನ

ಈತ 1889ರ ಮೇ 18ರಂದು ಜನಿಸಿದ. ಎಳೆಯ ವಯಸ್ಸಿನಲ್ಲಿಯೆ ತಾಯಿಯನ್ನು ಕಳೆದುಕೊಂಡ. ಈತ 18 ವರ್ಷದವರೆಗೆ ಕುಟುಂಬಕ್ಕೆ ಸೇರಿದ ಜಮೀನಲ್ಲಿ ಕೆಲಸ ಮಾಡುತ್ತಾ ಹಳ್ಳಿಯ ಶಾಲೆಯಲ್ಲಿ ಅಭ್ಯಯಿಸುತ್ತಿದ್ದ. ಈತನ ಕುಟುಂಬ ಬಡತನದಲ್ಲಿ ಇದ್ದುದರಿಂದ ಸಂಪ್ರದಾಯಿಕ ಶಾಲೆಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಈತ 17ನೆಯ ವರ್ಷದಲ್ಲಿಯೇ ಪದ್ಯಗಳನ್ನು ಮತ್ತು ಸಣ್ಣ ಕಥೆಗಳನ್ನು ಪ್ರಾರಂಭಿಸಿದ. 1907ರಲ್ಲಿ ವಿದ್ಯಾರ್ಥಿಯಾಗಿ ಡೆನ್ಮಾರ್ಕಗೆ ಹೊರಟ. ವಿದ್ಯಾಭ್ಯಾಸ ಮಾಡುವಾಗ ಅಲ್ಲಿ 1912ರಲ್ಲಿ ಫ್ರಾನ್ಸ್‌ನ ಅಂತೋನಿಯಳನ್ನು ವಿವಾಹವಾದ. ಇತನ ಪತ್ನಿ ರೋಮನ್ ಕೆಥೊಲಿಕ್ ಪಂಗಡಕ್ಕೆ ಸೇರಿದವಳು. ಈತ ಪ್ರಾಟಿಸ್ಟೆಂಟ್ ಪಂಗಡದವನು. ಈತ 1938ರವರೆಗೆ ಅಲ್ಲಿಯೇ ಇದ್ದು ಐಸ್ಲೆಂಡಿಗೆ ಬಂದ. 1939ರಲ್ಲಿ ಪೂರ್ವ ಐಸ್ಲೆಂಡಿನಲ್ಲಿರುವ ಜಮೀನಿನಲ್ಲಿ ನೆಲಸಿ ಜರ್ಮನಿಯ ವಾಸ್ತುಶಿಲ್ಪಿಯ ವಿನ್ಯಾಸದಂತೆ ಮನೆಯನ್ನು ನಿರ್ಮಿಸಿದನು. ಅಲ್ಲಿ ವಾಸಿಸುತ್ತಿದ್ದನ್ನು ಅನಂತರ ಆ ಮನೆಯನ್ನು ಐಸ್ಲೆಂಡ್ ದೇಶಕ್ಕೆ ಕೊಡುಗೆಯಾಗಿ ನೀಡಿದನು. ಇದನ್ನು ಕಾದಂಬರಿಕಾರನ ನೆನಪಿನಲ್ಲಿ ಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಲಾಗಿದೆ. 1948ರಲ್ಲಿ ತನ್ನ ವಾಸಸ್ಥಳವನ್ನು ರಿಕಯವಿಕ್ಗೆ ಬದಲಾಯಿಸಿ ಅಲ್ಲಿಯೆ 1975ರವರೆಗೆ ವಾಸ ಮಾಡಿದ. 1975ರ ನವೆಂಬರ್ 21ರಂದು ನಿಧನವಾದ. 1976ರಲ್ಲಿ ಈತನ ಪತ್ನಿ ನಿಧನವಾದಳು. ಇವರಿಬ್ಬರ ಸಮಾಧಿಗಳು ಅಲ್ಲಿಯ ಕೆಥೊಲಿಕ್ ಚರ್ಚಿನ ಸ್ಮಶಾನದಲ್ಲಿದೆ. ಈತ ಡೇನಿಷ್ ಭಾಷೆಯಲ್ಲಿ ಮೊದಲು ಕಾದಂಬರಿಗಳನ್ನು ಬರೆದ. ಅವು ಅನಂತರ ಐಸ್ಲ್ಯಾಂಡಿಕ್ ಭಾಷೆಗೆ ಅನುವಾದಗೊಂಡಿವೆ. ಐಸ್ಲ್ಯಾಂಡಿಕ್ ಭಾಷೆಯಲ್ಲೂ ಕ್ವಚಿತ್ತಾಗಿ ಈತ ಬರೆದುದುಂಟು.

ಸಾಹಿತ್ಯ

ಈತನ ಶೈಶವ ಮತ್ತು ಯೌವನದ ನೆನಪುಗಳೇ ಈತನ ಕಾದಂಬರಿಯ ವಸ್ತು. ಸಾಮಾನ್ಯರ ಜೀವನ ಮತ್ತು ಜೀವನ ಸಾರ್ಥಕತೆಗಳನ್ನೂ ಈತನ ಕಾದಂಬರಿಗಳಲ್ಲಿ ಕಾಣಬಹುದಾಗಿದೆ. ಗ್ಹೆಸ್ಟ್‌ ದಿ ಒನ್-ಐಯ್ಡ್‌ (1912-14, ನಾಲ್ಕು ಸಂಪುಟ; ಇಂಗ್ಲಿಷ್ ಅನು: 1920) ಎಂಬುದರಲ್ಲಿ ಐಸ್ಲೆಂಡಿನ ಜನಜೀವನದ ಯಥಾರ್ಥ ಚಿತ್ರಣವಿದೆ. ಸೆವೆನ್ ಡೇಸ್ ಡಾರ್ಕ್ನೆಸ್ನಲ್ಲಿ (1920: ಇಂಗ್ಲಿಷ್ ಅನು : 1930) ಯುದ್ಧದಿಂದ ಉಂಟಾಗುವ ಸಮಸ್ಯೆಗಳ ನಿರೂಪಣೆ ಇದೆ. ಈತನ ಜೀವನಚರಿತ್ರೆಯಾದ ದಿ ಚರ್ಚ್ ಆನ್ ದಿ ಮೌಂಟನ್ (ಐದು ಸಂಪುಟಗಳು; 1924-28) ಎಂಬುದರ ಸ್ವಲ್ಪ ಭಾಗ ಷಿಪ್ಸ್‌ ಇನ್ ದಿ ಸ್ಕೈ (1938) ಮತ್ತು ದಿ ನೈಟ್ ಅಂಡ್ ದಿ ಡ್ರೀಮ್ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದವಾಗಿದೆ. ಈತ ಆಧುನಿಕ ಐಸ್ಲೆಂಡಿನ ಹೆಸರಾಂತ ದ್ವಿಭಾಷಿ ಎನಿಸಿಕೊಂಡಿದ್ದಾನೆ.

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಕರಗವೇದಹರಪ್ಪಎರಡನೇ ಮಹಾಯುದ್ಧನಾಡ ಗೀತೆಎಮ್.ಎ. ಚಿದಂಬರಂ ಕ್ರೀಡಾಂಗಣಗೋಪಾಲಕೃಷ್ಣ ಅಡಿಗಬೆಳವಲಶ್ರೀ ರಾಮಾಯಣ ದರ್ಶನಂಸಂಚಿ ಹೊನ್ನಮ್ಮಅರ್ಕಾವತಿ ನದಿಅರಅರಳಿಮರಪೋಕ್ಸೊ ಕಾಯಿದೆಕರ್ನಾಟಕ ಹೈ ಕೋರ್ಟ್ಜಾನಪದಗ್ರಹಣಪದಬಂಧತ. ರಾ. ಸುಬ್ಬರಾಯಆಸ್ಟ್ರೇಲಿಯಶಿವಮೊಗ್ಗರಾಜ್ಯಸಭೆಕರ್ನಾಟಕದ ಜಾನಪದ ಕಲೆಗಳುಅಶ್ವತ್ಥಾಮಹೊಂಗೆ ಮರಬೇಲೂರುಭಾರತದ ಜನಸಂಖ್ಯೆಯ ಬೆಳವಣಿಗೆರಾಮ ಮನೋಹರ ಲೋಹಿಯಾಶಾಲೆಶ್ಚುತ್ವ ಸಂಧಿಕೇಶಿರಾಜಭಾರತದಲ್ಲಿನ ಚುನಾವಣೆಗಳುಅಶೋಕನ ಶಾಸನಗಳುಕನ್ನಡ ವ್ಯಾಕರಣಭಾರತದ ಸಂವಿಧಾನ ರಚನಾ ಸಭೆಪಶ್ಚಿಮ ಘಟ್ಟಗಳುಹಾವುಚಂದ್ರಶೇಖರ ವೆಂಕಟರಾಮನ್ಪಿ.ಲಂಕೇಶ್ಬಾದಾಮಿ ಗುಹಾಲಯಗಳುಜಿಪುಣಶಿವನ ಸಮುದ್ರ ಜಲಪಾತಆದಿ ಕರ್ನಾಟಕತಿರುವಣ್ಣಾಮಲೈವಿಕ್ರಮಾರ್ಜುನ ವಿಜಯಹೈನುಗಾರಿಕೆಎಸ್. ಜಾನಕಿರಾಶಿದೇವರಾಯನ ದುರ್ಗಅಡೋಲ್ಫ್ ಹಿಟ್ಲರ್ಅಡಿಕೆಮದುವೆಚದುರಂಗಭೋವಿಭಗವದ್ಗೀತೆಭಾರತದ ರಾಷ್ಟ್ರಪತಿಗಳ ಪಟ್ಟಿಬೆಳಕುಆಂಡಯ್ಯಕದಂಬ ರಾಜವಂಶಹನುಮಂತಓಂ ನಮಃ ಶಿವಾಯಸಿ. ಆರ್. ಚಂದ್ರಶೇಖರ್ಮೆಂತೆಕನ್ನಡ ಸಾಹಿತ್ಯ ಪರಿಷತ್ತುಸೂರ್ಯ (ದೇವ)ನಯನತಾರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮೈಸೂರು ಅರಮನೆಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕದ ವಾಸ್ತುಶಿಲ್ಪಸಮರ ಕಲೆಗಳುವಿಷ್ಣು🡆 More