ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ

ಬೋಪದೇವನು .

ಏಕ ಶ್ಲೋಕೀ ಪುರಾಣಗಳು

      ಏಕ ಶ್ಲೋಕೀ ರಾಮಾಯಣ:
    ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|
    ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||
    ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ|
    ಪಶ್ಚಾದ್ರಾವಣಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||
  1. *ಹಿಂದೆ ಶ್ರೀ ರಾಮನು (ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ) ತಪೋವನಕ್ಕೆ ಹೋದನು. (ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ) ಆ ಕಾಂಚನ (ಚಿನ್ನದ) ಜಿಂಕೆಯನ್ನು ಕೊಂದನು.
  2. *ಆ ಸಮಯದಲ್ಲಿ (ರಾವಣನಿಂದ ಪರ್ಣಕುಟೀರದಲ್ಲಿದ್ದ ) ಸೀತೆಯ ಅಪಹರಣವಾಯಿತು. (ಅವಳನ್ನು ರಕ್ಷಿಸಲು ಹೋದ) ಜಟಾಯುವಿನ ಮರಣವಾಯಿತು. (ಸೀತೆಯನ್ನು ಹುಡುಕುತ್ತಾ ಲಕ್ಮಣನೊಡನೆ ಹೋದ ರಾಮನಿಗೆ) ಸುಗ್ರೀವನೊಡನೆ ಸಂಧಿ ಮಾತಾಡಿ ಸ್ನೇಹವಾಯಿತು.
  3. *(ನಂತರ ರಾಮನು ಸುಗ್ರೀವನ ಅಣ್ಣ ಮತ್ತು ಶತ್ರು) ವಾಲಿಯನ್ನು ವಧಿಸಿದನು. (ಸೀತಾನ್ವೇಶಣೆಗೆ ಹೋದ ಹನುಮಂತನು)ಸಮುದ್ರವನ್ನು ಲಂಘಿಸಿ (ಹಾರಿ, ಲಂಕೆಯಲ್ಲಿ ಸೀತಯನ್ನು ಕಂಡು ಹಿಂತಿರುಗಿ ಬರುವಾಗ ) ಲಂಕೆಯನ್ನು ದಹಿಸಿದನು(ಸುಟ್ಟನು.
  4. *(ಆಮೇಲೆ ಲಕ್ಷ್ಮಣನ ಜೊತೆಗೂಡಿ, ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ) ರಾವಣ ಕುಂಭಕರ್ಣರನ್ನು ಕೊಂದನು. (ಸೀತೆಯನ್ನು ಮರಳಿ ಪಡೆದು ಹದಿನಾಲ್ಕು ವರ್ಷ ಕಳೆದಾಗ ಅಯೋದ್ಯೆಗೆ ಮರಳಿ ಬಂದು ಪಟ್ಟಾಭಿಷಕ್ತನಾದನು)
    ಇದಕ್ಕೆ ಮಜ್ಜಿಗೆ ರಾಮಾಯಣವೆಂದೂ ಹೆಸರಿದೆ.
  • ಕಾರಣ – ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆಯ ಮುಂದೆ ಆ ಮನೆಯ ಒಬ್ಬ ಬಾಲಕಿ ನಿಂತಿರುವುದನ್ನು ಕಂಡನು. ಆಗ ಅವನು ಆ ಬಾಲಕಿಯನ್ನು ಕುರಿತು ತನಗೆ ಬಹಳ ಬಾಯಾರಿಕೆ ಯಾಗಿರುವುದಾಗಿಯೂ , ಕುಡಿಯಲು ನೀರು ಕೊಡಬೇಕೆಂದೂ ಕೇಳಿದನು. ಅದಕ್ಕೆ ಬಾಲಕಿಯು, ‘ನೀರೇಕೆ ನಿಮಗೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ ; ಆದರೆ ಒಂದು ನಿಯಮ (óಷರತ್ತು), ನೀವು ನನಗೆ ಮಜ್ಜಿಗೆ ಕುಡಿದ ನಂತರ ರಾಮಾಯಣದ ಕಥೆಯನ್ನು ಹೇಳಬೇಕು’, ಎಂದಳಂತೆ ಅದಕ್ಕೆ ಪಂಡಿತನು ಒಪ್ಪಿದನು. ಆ ಬಾಲಕಿ ಆ ಪಂಡಿತನಿಗೆ ಬಾಯಾರಿಕೆ ನೀಗುವಷ್ಟು ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟಳು. ಅವನನ್ನು ಕುರಿತು, ‘ರಾಮಾಯಣದ ಕಥೆ ಹೇಳಿ’, ಎಂದಳು . ಆಗ ಆ ಪಂಡಿತನು ಈ ಮೇಲಿನ ಶ್ಲೋಕವನ್ನು ಹೇಳಿ - ‘ಇದೇ ರಾಮಾಯಣದ ಕಥೆ’, ಎಂದನಂತೆ . ಅದಕ್ಕೆ ಈ ಏಕ ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ.

ಮಹಾಭಾರತ ::ಭಾಗವತ

      ಏಕ ಶ್ಲೋಕೀ ಮಹಾಭಾರತ:
    ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷಾಗೃಹೇ ದಾಹನಂ|
    ದ್ಯೂತೇ ಶ್ರೀ ಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಂ ||
    ಲೀಲಾ ಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾ ಜೃಂಭಣಂ|
    ಭೀಷ್ಮ ದ್ರೋಣ ಸುಯೋಧನಾದಿ ಮಥನಂ ಏತನ್ಮಹಾಭಾರತಂ ||
      ಏಕ ಶ್ಲೋಕೀ ಭಾಗವತ:
    ಆದೌ ದೇವಕೀ ದೇವೀ ಗರ್ಭ ಜನನಂ ಗೋಪೀ ಗೃಹೇ ವರ್ಧನಂ |
    ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ||
    ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಪಾಲನಂ|
    ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್||
  • (ಇದರಲ್ಲಿ ಶ್ರೀ ಕೃಷ್ಣನ ಕಥೆಯನ್ನು ಮಾತ್ರಾ ಹೇಳಿದೆ)

ಭಾಗವತದ ಬಗೆಗೆ ವಿವಾದ

  • ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ಜಯದೇವನ ಸೋದರನಾದ

ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.

    ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
    ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
  • ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
  • ಆದರೆ ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನ ಚರಿತ್ರೆಗೆ ಮಹರ್ಷಿ ದಯಾನಂದರ ಅಥವಾ ಶ್ರೀ ಬಂಕಿಮರ ಆಕ್ಷೇಪವಿಲ್ಲ. ಭಾಗವತದಲ್ಲಿ ಬರವ ಶ್ರೀ ಕೃಷ್ಣನ ಅಮಾನುಷ-ಯಾ- ಅತಿಮಾನುಷ ಅಥವಾ ಅಸಹಜ ಘಟನೆ/ಕಥೆಗಳಿಗೆ ಅವರ ವಿರೋಧವಿದೆ; ಅವುಗಳಿಂದ ಕೃಷ್ಣನ ವ್ಯಕ್ತಿತ್ವಕ್ಕೆ ಹಾನಿಯಾಗಿದೆಯೆಂದು ಹೇಳುತ್ತಾರೆ. ಅವು ಪ್ರಕ್ಷಿಪ್ತವೆಂದೂ ,ನಂತರ ಸೇರಿಸಿರುವುದೆಂದೂ ಅವರ ಅಭಿಪ್ರಾಯ.

ನೋಡಿ

ಉಲ್ಲೇಖ

Tags:

ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ ಏಕ ಶ್ಲೋಕೀ ಪುರಾಣಗಳುಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ ಮಹಾಭಾರತ ::ಭಾಗವತಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ ಭಾಗವತದ ಬಗೆಗೆ ವಿವಾದಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ ನೋಡಿಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ ಉಲ್ಲೇಖಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಸಮಾಜ ವಿಜ್ಞಾನವ್ಯಂಜನಹಿಂದೂ ಮಾಸಗಳುಕರ್ನಾಟಕ ಜನಪದ ನೃತ್ಯಧರ್ಮರೈತವಾರಿ ಪದ್ಧತಿಚದುರಂಗ (ಆಟ)ಮಾನವ ಅಭಿವೃದ್ಧಿ ಸೂಚ್ಯಂಕಅಳಿಲುಸೂರ್ಯ (ದೇವ)೧೮೬೨ಸಿಂಧನೂರುಗೂಬೆಕನ್ನಡ ಜಾನಪದರಾಜ್‌ಕುಮಾರ್ಈಸೂರುವಿವಾಹದಕ್ಷಿಣ ಕನ್ನಡಶಕ್ತಿಪು. ತಿ. ನರಸಿಂಹಾಚಾರ್ಉತ್ತರ ಕನ್ನಡಗ್ರಾಮ ಪಂಚಾಯತಿಬೇಲೂರುನಿರುದ್ಯೋಗಬಿ.ಜಯಶ್ರೀನೀರಾವರಿಮಾನವ ಸಂಪನ್ಮೂಲ ನಿರ್ವಹಣೆತ್ರಿಪದಿಖೊಖೊಶ್ರೀ ರಾಮಾಯಣ ದರ್ಶನಂಆನೆಯಕೃತ್ತುದಶಾವತಾರಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕದ ಜಾನಪದ ಕಲೆಗಳುಭಾರತದ ರೂಪಾಯಿಮಿಥುನರಾಶಿ (ಕನ್ನಡ ಧಾರಾವಾಹಿ)ಜಯಪ್ರಕಾಶ ನಾರಾಯಣಗೂಗಲ್ಜಶ್ತ್ವ ಸಂಧಿಸೂಫಿಪಂಥಚಂದ್ರಯಾನ-೩ವಾಸ್ತುಶಾಸ್ತ್ರವಿಜ್ಞಾನಕರ್ನಾಟಕ ವಿಧಾನ ಪರಿಷತ್ಕೃಷ್ಣತಾಪಮಾನಆದಿವಾಸಿಗಳುರೋಸ್‌ಮರಿರಾಜಕೀಯ ವಿಜ್ಞಾನಮಹಾತ್ಮ ಗಾಂಧಿರಾಮಾಚಾರಿ (ಕನ್ನಡ ಧಾರಾವಾಹಿ)ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗಣರಾಜ್ಯೋತ್ಸವ (ಭಾರತ)ರಾಷ್ಟ್ರಕವಿಸ್ವಚ್ಛ ಭಾರತ ಅಭಿಯಾನಬೀಚಿಕರ್ನಾಟಕದ ಏಕೀಕರಣಇಂಡಿಯನ್ ಪ್ರೀಮಿಯರ್ ಲೀಗ್ಚಂಡಮಾರುತವ್ಯಕ್ತಿತ್ವಕರ್ನಾಟಕದ ಹಬ್ಬಗಳುಧರ್ಮರಾಯ ಸ್ವಾಮಿ ದೇವಸ್ಥಾನಖ್ಯಾತ ಕರ್ನಾಟಕ ವೃತ್ತಬಾಬು ಜಗಜೀವನ ರಾಮ್ಸೀಮೆ ಹುಣಸೆಹೊಯ್ಸಳ ವಿಷ್ಣುವರ್ಧನಸಾಲ್ಮನ್‌ಮಾರೀಚವೀರೇಂದ್ರ ಪಾಟೀಲ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಚಿಕ್ಕಮಗಳೂರುಕರ್ಮಪ್ರಬಂಧಆದಿ ಶಂಕರಗೋಲ ಗುಮ್ಮಟ🡆 More