ಎರಿಡೆನಸ್

ಎರಿಡೆನಸ್ ಒರೈಯನ್ ಪುಂಜದ ರೀಗಲ್ ನಕ್ಷತ್ರದಿಂದ (ವಿಷುವದಂಶ ಚಿ=5 ಗಂ 12.1 ಮಿ, ಫಂಟಾವೃತ್ತಾಂಶ, ಜ= -80 15') ದಕ್ಷಿಣದ ಪ್ರಥಮ ಕಾಂತಿವರ್ಗದ ಉಜ್ಜ್ವಲ ನಕ್ಷತ್ರ ಏಕೆರ್ನಾರ್ (ಚಿ=1 ಗಂ.

This template is misplaced. It belongs on the talk page: ಚರ್ಚೆಪುಟ:ಎರಿಡೆನಸ್.

35.9ಮಿ, ಜ= -570 29') ವರೆಗೆ ವ್ಯಾಪಿಸಿರುವ ದಕ್ಷಿಣಾಕಾಶದ ವಿಶಾಲ ನಕ್ಷತ್ರಪುಂಜ. 4ನೆಯ ಕಾಂತಿವರ್ಗದ ನಕ್ಷತ್ರಗಳೇ (ಎಂದರೆ ಕ್ಷೀಣ ಕಾಂತಿಯ ಅಸ್ಪಷ್ಟ ನಕ್ಷತ್ರಗಳು) ಮೂವತ್ತಕ್ಕೂ ಮೀರಿ ಇರುವ ಈ ಪುಂಜದಲ್ಲಿ ಪ್ರಾಚೀನ ಬಗೆಗಣ್ಣು ಒಂದು ದೀರ್ಘ ನದೀಪಾತ್ರವನ್ನೇ ನೋಡಿತು. ಆದ್ದರಿಂದಲೇ ಇದರ ಕೊನೆಯಲ್ಲಿ (ದಕ್ಷಿಣದ ತಗ್ಗಿನಲ್ಲಿ; ಆದ್ದರಿಂದ ನದಿಯ ಮುಖದಲ್ಲಿ) ಇರುವ ಏಕೆರ್ನಾರ್ (ಚಿ-ಎರಿಡೆನಿ) ನಕ್ಷತ್ರಕ್ಕೆ ಆ ಹೆಸರು ಬಂದಿದೆ; ಏಕೆರ್ನಾರ್ ಪದದ ಅರ್ಥ ನದೀಮುಖದ ನಕ್ಷತ್ರವೆಂದು. ಎರಿಡೆನಸನ್ನು ವೈತರಣಿಯೆಂದೂ ಏಕೆರ್ನಾರನ್ನು ವೈತರಣೀಮುಖವೆಂದೂ ಕರೆಯುವುದಿದೆ. ಎರಿಡೆನಸ್ ಪುಂಜದ ಗಡಿಪುಂಜಗಳು ಒರೈಯನ್, (ಮಹಾವ್ಯಾಧ), ಲೀಪಸ್, ಕೊಲಂಬ, ಡೊರಾಡೊ, ರೆಟಿಕ್ಯುಲಂ, ‘ಹೈಡ್ರಸ್, ಫಿನಿಕ್ಸ್‌, ಸ್ಕಲ್ಪ್ಟರ್, ಸಿಟಿಸ್, ವೃಷಭ. ಬರಿಗಣ್ಣಿಗೆ ಕಾಣುವ ಅತ್ಯಂತ ಉಜ್ಜ್ವಲ ನಕ್ಷತ್ರಗಳಲ್ಲಿ ಸೂರ್ಯನ ಸ್ಥಾನ ಒಂದನೆಯದಾದರೆ ಏಕೆರ್ನಾರಿನದು ಹತ್ತು. ಇದರ ದೂರ ಭೂಮಿಯಿಂದ 70 ಜ್ಯೋತಿರ್ವರ್ಷ. ಎರಿಡೆನಸ್, ಪುಂಜದ 02-ಎರಿಡೆನಿ ಮೂರು ನಕ್ಷತ್ರಗಳಿಂದ ಕೂಡಿದೆ. ಬರಿಗಣ್ಣಿಗೆ ಹಳದಿ ಬಣ್ಣದ ಕುಬ್ಜ ನಕ್ಷತ್ರ ಒಂದು ಮತ್ತು ದೂರದರ್ಶಕಕ್ಕೆ ಕಾಣಿಸುವಂತ ನಕ್ಷತ್ರಗಳು ಎರಡು. ಗ್ರೀಕ್ ಪುರಾಣದ ಪ್ರಕಾರ ಎರಿಡೆನಸ್ ಒಂದು ನದೀದೇವತೆ. ಸೂರ್ಯನ ರಥದ ಸಾರಥ್ಯವನ್ನು ವಹಿಸಿದ್ಧ ಅಪೊಲೊ ಸ್ವೇಚ್ಛಾನುಸಾರ ಅದನ್ನು ಆಕಾಶದಲ್ಲಿ ಓಡಿಸಿದುದರಿಂದ ಜಗತ್ತಿಗೆ ಘೋರಾಪಾಯ ಸನ್ನಿಹಿತವಾಯಿತು. ಆಗ ಜ್ಯೂಸ್ ತನ್ನ ಆಯುಧದಿಂದ ಅಪೊಲೊವಿಗೆ ಹೊಡೆದು ರಥದಿಂದ ಉರುಳಿಸಿದ. ಅಪೊಲೊ ಎರಿಡೆನಸ್ (ಎಂದರೆ ಮೃತ್ಯು ನದಿಗೆ) ಬಿದ್ದ. ಟೈಕೊಬ್ರಾಹೆ ರಚಿಸಿದ ಕೋಷ್ಟಕದಲ್ಲಿ ಎರಿಡೆನಸ್ ಪುಂಜಕ್ಕೆ ಎರಿಡೆನಸ್ ಪ್ಲುವಿಯಸ್ ಎಂಬ ಹೆಸರು ಇದೆ. ಉಲುಗ್ ಬೆಗ್ ಮತ್ತು ಟಾಲೆಮಿ ರಚಿಸಿದ ಕೋಷ್ಟಕಗಳಲ್ಲಿ ಇದನ್ನು ನದಿಗಳೆಂದು ಕರೆದಿದೆ.

Tags:

ಒರೈಯನ್ನಕ್ಷತ್ರ

🔥 Trending searches on Wiki ಕನ್ನಡ:

ದೇವನೂರು ಮಹಾದೇವಆಧುನಿಕ ವಿಜ್ಞಾನಭಾರತದ ಸಂವಿಧಾನವಿದ್ಯಾರಣ್ಯಬೌದ್ಧ ಧರ್ಮಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹುಲಿಕರ್ನಾಟಕ ಲೋಕಾಯುಕ್ತಕನ್ನಡ ರಂಗಭೂಮಿಭಾರತದ ರಾಷ್ಟ್ರಗೀತೆಕನ್ನಡದಲ್ಲಿ ಸಣ್ಣ ಕಥೆಗಳುಊಟಶಿವಪ್ಪ ನಾಯಕಮಡಿಕೇರಿಪಟ್ಟದಕಲ್ಲುಹೈದರಾಬಾದ್‌, ತೆಲಂಗಾಣಬಾಹುಬಲಿಗೂಬೆಉದಯವಾಣಿದೇವರ ದಾಸಿಮಯ್ಯವಿಷ್ಣುಶಿರ್ಡಿ ಸಾಯಿ ಬಾಬಾಸವದತ್ತಿಬಿ.ಎಸ್. ಯಡಿಯೂರಪ್ಪಹೆಚ್.ಡಿ.ದೇವೇಗೌಡದ್ವಿಗು ಸಮಾಸಭಾರತೀಯ ಸ್ಟೇಟ್ ಬ್ಯಾಂಕ್೧೬೦೮ಶುಕ್ರಭಾರತದ ಚುನಾವಣಾ ಆಯೋಗಮೆಕ್ಕೆ ಜೋಳಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಪಶ್ಚಿಮ ಘಟ್ಟಗಳುಸಂಚಿ ಹೊನ್ನಮ್ಮಜೀವವೈವಿಧ್ಯಕ್ರೈಸ್ತ ಧರ್ಮಸಾರ್ವಜನಿಕ ಆಡಳಿತಚಿತ್ರದುರ್ಗಮಲ್ಲಿಕಾರ್ಜುನ್ ಖರ್ಗೆರತ್ನತ್ರಯರುಗ್ರಾಮ ಪಂಚಾಯತಿಅಕ್ಷಾಂಶ ಮತ್ತು ರೇಖಾಂಶಎಸ್.ಜಿ.ಸಿದ್ದರಾಮಯ್ಯಕಾಳಿದಾಸವಿವಾಹರೋಮನ್ ಸಾಮ್ರಾಜ್ಯಕೃತಕ ಬುದ್ಧಿಮತ್ತೆಕರ್ನಾಟಕದ ನದಿಗಳುಜ್ಯೋತಿಷ ಶಾಸ್ತ್ರಹೆಸರುಕಲಬುರಗಿಸುಗ್ಗಿ ಕುಣಿತಜೀವಕೋಶಪರಮಾಣುಕರ್ನಾಟಕ ಜನಪದ ನೃತ್ಯಶಿಕ್ಷಣಸಾಮ್ರಾಟ್ ಅಶೋಕನಚಿಕೇತಭಾರತದ ಇತಿಹಾಸಸಚಿನ್ ತೆಂಡೂಲ್ಕರ್ಶ್ರೀ ರಾಘವೇಂದ್ರ ಸ್ವಾಮಿಗಳುದಿವ್ಯಾಂಕಾ ತ್ರಿಪಾಠಿಪಿ.ಲಂಕೇಶ್ಜಯಪ್ರಕಾಶ್ ಹೆಗ್ಡೆಪುಟ್ಟರಾಜ ಗವಾಯಿಭಾರತದ ಆರ್ಥಿಕ ವ್ಯವಸ್ಥೆಭಾರತೀಯ ಸಂಸ್ಕೃತಿಬಿ. ಆರ್. ಅಂಬೇಡ್ಕರ್ಸಂವಿಧಾನಗೀತಾ (ನಟಿ)ನವಿಲುಭಾರತದ ಮಾನವ ಹಕ್ಕುಗಳುಮಹಾಕವಿ ರನ್ನನ ಗದಾಯುದ್ಧಮಾವುಕಾಂತಾರ (ಚಲನಚಿತ್ರ)ರವಿಕೆವಿಜಯ್ ಮಲ್ಯಸವರ್ಣದೀರ್ಘ ಸಂಧಿ🡆 More