ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಒಂದು.

ಅಕ್ಕಿಯ ಹಿಟ್ಟು, ತೆಂಗಿನ ತುರಿ, ತರಕಾರಿತುರಿ ಹಾಗೂ ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಈ ತಿಂಡಿಯನ್ನು ತಯಾರಿಸುತ್ತಾರೆ. 

ಈರುಳ್ಳಿ, ಕ್ಯಾರೆಟ್ ಅಕ್ಕಿ ರೊಟ್ಟಿ
ಅಕ್ಕಿ ರೊಟ್ಟಿ, ಬೆಣ್ಣೆ ಮತ್ತು ಚಟ್ನಿ ಪುಡಿ

ಬೇಕಾಗುವ ಸಾಮಾನುಗಳು

  1. ಅಕ್ಕಿ ಹಿಟ್ಟು – 1 ಬಟ್ಟಲು
  2. ತೆಂಗಿನಕಾಯಿ ತುರಿ – ½ ಬಟ್ಟಲು
  3. ಈರುಳ್ಳಿ – 1
  4. ಹಸಿಮೆಣಸಿನಕಾಯಿ – 2 ಅಥವಾ 3
  5. ಕೊತ್ತಂಬರಿ ಸೊಪ್ಪು – ಸ್ವಲ್ಪ
  6. ಜೀರಿಗೆ – ¼ ಚಮಚ
  7. ಉಪ್ಪು – ರುಚಿಗೆ ತಕ್ಕಷ್ಟು
  8. ಎಣ್ಣೆ – ಬೇಯಿಸಲು ಸಾಕಾಗುವಷ್ಟು

ಮಾಡುವ ವಿಧಾನ

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಳ್ಳಿ. ಅಕ್ಕಿಹಿಟ್ಟಿಗೆ ತೆಂಗಿನತುರಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಈಗ ತವೆಗೆ ಎಣ್ಣೆ ಸವರಿ, ಕಲಸಿದ ಹಿಟ್ಟನ್ನು ತೆಳ್ಳಗೆ ತಟ್ಟಿ. ಮೇಲೆ ಎರಡು ಚಮಚ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಮುಚ್ಚಿ ಬೇಯಿಸಿ. ರೊಟ್ಟಿ ಬೆಂದ ನಂತರ ಉರಿ ಕಡಿಮೆ ಮಾಡಿ ಗರಿಗರಿಯಾಗಲು ಬಿಡಿ. 

ಈರುಳ್ಳಿಯ ಜೊತೆಗೆ ತರಕಾರಿ ಅಥವಾ ಈರುಳ್ಳಿಯನ್ನು ಬಿಟ್ಟು ಕೇವಲ ತರಕಾರಿಯನ್ನು ಉಪಯೋಗಿಸಿ ಸಹ ರೊಟ್ಟಿ ಮಾಡಬಹುದು. ತರಕಾರಿಯನ್ನು ಹೆಚ್ಚಾಗಿ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ರೊಟ್ಟಿ ಮೆತ್ತಗೆ ಸಹ ಆಗುತ್ತದೆ. ಅವರೆಕಾಳು ರೊಟ್ಟಿ ವಿಶೇಷವಾದದ್ದಾಗಿದೆ. ಅವರೆಕಾಳನ್ನು ಬೇಯಿಸಿ ನಂತರ ಹಿಟ್ಟಿಗೆ ಸೇರಿಸಬೇಕು.

ಅಕ್ಕಿ ರೊಟ್ಟಿಯನ್ನು ತೆಂಗಿನಕಾಯಿ ಚಟ್ನಿ ಹಾಗೂ ಬೆಣ್ಣೆ/ ತುಪ್ಪ ದೊಂದಿಗೆ ಸವಿಯಬಹುದು

References

Tags:

ಉಪಹಾರದಕ್ಷಿಣ ಭಾರತ

🔥 Trending searches on Wiki ಕನ್ನಡ:

ಉಪೇಂದ್ರ (ಚಲನಚಿತ್ರ)ಸೂರ್ಯವ್ಯೂಹದ ಗ್ರಹಗಳುಹೃದಯಾಘಾತಮದಕರಿ ನಾಯಕಜಯಚಾಮರಾಜ ಒಡೆಯರ್ಜೀವವೈವಿಧ್ಯಕವಿರಾಜಮಾರ್ಗಯುಗಾದಿರಾಷ್ಟ್ರೀಯ ಮತದಾರರ ದಿನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಜಾಗತಿಕ ತಾಪಮಾನಚಿಪ್ಕೊ ಚಳುವಳಿಊಟಫುಟ್ ಬಾಲ್ನೈಸರ್ಗಿಕ ಸಂಪನ್ಮೂಲನಂಜನಗೂಡುರೈತವಿಚಿತ್ರ ವೀಣೆರಾಜಕೀಯ ವಿಜ್ಞಾನಮಲ್ಲ ಯುದ್ಧಮಂಡಲ ಹಾವುಸಾಗುವಾನಿಮಂತ್ರಾಲಯಸಹಕಾರಿ ಸಂಘಗಳುವೀಣೆಚೋಳ ವಂಶಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ಸಂಸ್ಕೃತಿವಿದ್ಯಾರಣ್ಯವಿಜಯನಗರ ಸಾಮ್ರಾಜ್ಯಭಾರತದ ರಾಷ್ಟ್ರೀಯ ಉದ್ಯಾನಗಳುಚಕ್ರವ್ಯೂಹಕರ್ನಾಟಕ ಸಂಗೀತಬಾಗಿಲುಪ್ರೇಮಾಧರ್ಮತುಳುಆರ್ಯಭಟ (ಗಣಿತಜ್ಞ)ದರ್ಶನ್ ತೂಗುದೀಪ್ದೇವರ/ಜೇಡರ ದಾಸಿಮಯ್ಯಕೆ. ಅಣ್ಣಾಮಲೈಶಬ್ದಧರ್ಮಸ್ಥಳಮದುವೆಕಲ್ಯಾಣಿಆರೋಗ್ಯದ್ವಿರುಕ್ತಿಮಹಮ್ಮದ್ ಘಜ್ನಿರಕ್ತದೊತ್ತಡಕನ್ನಡ ಕಾಗುಣಿತಭೂಕಂಪಮಣ್ಣುಹಾಸನಶಬ್ದಮಣಿದರ್ಪಣಬರವಣಿಗೆಸೂರ್ಯಭಾರತದ ಸಂಸತ್ತುಅಮೃತಬಳ್ಳಿಭೂಕುಸಿತಶ್ರೀನಿವಾಸ ರಾಮಾನುಜನ್ಕನ್ನಡ ಬರಹಗಾರ್ತಿಯರುಕ್ಯಾರಿಕೇಚರುಗಳು, ಕಾರ್ಟೂನುಗಳುಕಪ್ಪೆ ಅರಭಟ್ಟಇಮ್ಮಡಿ ಪುಲಕೇಶಿಬೃಂದಾವನ (ಕನ್ನಡ ಧಾರಾವಾಹಿ)ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮೋಕ್ಷಗುಂಡಂ ವಿಶ್ವೇಶ್ವರಯ್ಯವರ್ಗೀಯ ವ್ಯಂಜನಹೈನುಗಾರಿಕೆವೈದೇಹಿಭಾರತದ ಜನಸಂಖ್ಯೆಯ ಬೆಳವಣಿಗೆದಿಯಾ (ಚಲನಚಿತ್ರ)ಕೃಷ್ಣಾ ನದಿಇಂದಿರಾ ಗಾಂಧಿಅರವಿಂದ ಘೋಷ್ದಾಳನಾಥೂರಾಮ್ ಗೋಡ್ಸೆ🡆 More