1ನೇ ಬ್ರಿಕ್ ಶೃಂಗಸಭೆ

1ನೇ ಬ್ರಿಕ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೊದಲನೆಯ ಶೃಂಗಸಭೆ ಮತ್ತು ಇದು 16 ಜೂನ್ 2009ರಲ್ಲಿ ಯೆಕಟನ್ಬರ್ಗ್‌ನಲ್ಲಿ ನಡೆಯಿತು.

ಗೋಲ್ಡ್‌ಮನ್ ಸ್ಯಾಕ್ಸ್‌ನ 2050ರ ವೇಳೆಗೆ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನ ಪ್ರಮುಖ ಆರ್ಥಿಕತೆಗಳಾಗಿ ಹೊರಹೊಮ್ಮುತ್ತವೆ ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಸಂಘಟನೆ ರೂಪಗೊಂಡಿತು.

1ನೇ ಬ್ರಿಕ್ ಶೃಂಗಸಭೆ
1ನೇ ಬ್ರಿಕ್ ಶೃಂಗಸಭೆ
ಅಧಿಕೃತ ಲಾಂಚನ (ಲೋಗೋ)
ಅತಿಥೇಯ ದೇಶರಷ್ಯಾ
ತಾರೀಕು16 ಜೂನ್ 2009
ನಗರ(ಗಳು)ಯೆಕ್ಟರಿನ್ಬರ್ಗ್
ಭಾಗವಹಿಸಿದವರುಬ್ರಿಕ್
ಮುಂಚಿನದು-
ನಂತರದ್ದು2ನೇ ಬ್ರಿಕ್ ಶೃಂಗಸಭೆ

ಭಾಗವಹಿಸಿದವರು

1ನೇ ಬ್ರಿಕ್ ಶೃಂಗಸಭೆ 
ಮೊದಲನೆಯ ಬ್ರಿಕ್ ಶೃಂಗಸಭೆಯ ನಾಯಕರು ಎಡದಿಂದ: ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಸಿಯೊ ಲುಲ ಡ ಸಿಲ್ವ, ರಷ್ಯಾದ ಅಧ್ಯಕ್ಷ ದಿಮಿತ್ರಿ ಮೆಡ್ವಡೇವ್, ಚೀನಾದ ಅಧ್ಯಕ್ಷ ಹು ಜಿಂಟಾವೊ ಮತ್ತು ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

ನಾಲ್ಕೂ ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

1ನೇ ಬ್ರಿಕ್ ಶೃಂಗಸಭೆಯಲ್ಲಿ ಹಾಜರಾದ ರಾಷ್ಟ್ರ ನಾಯಕರು
ಸದಸ್ಯರು ಪ್ರತಿನಿಧಿ ಹುದ್ಧೆ
1ನೇ ಬ್ರಿಕ್ ಶೃಂಗಸಭೆ  ಬ್ರೆಜಿಲ್ ಲೂಯಿಜ್ ಇನಸಿಯೊ ಲುಲ ಡ ಸಿಲ್ವ ಅಧ್ಯಕ್ಷರು
1ನೇ ಬ್ರಿಕ್ ಶೃಂಗಸಭೆ  ರಶಿಯ ದಿಮಿತ್ರಿ ಮೆಡ್ವಡೇವ್ ಅಧ್ಯಕ್ಷರು
1ನೇ ಬ್ರಿಕ್ ಶೃಂಗಸಭೆ  ಭಾರತ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ
1ನೇ ಬ್ರಿಕ್ ಶೃಂಗಸಭೆ  ಚೀನಾ ಹು ಜಿಂಟಾವೊ ಅಧ್ಯಕ್ಷರು

ಚರ್ಚಾಂಶಗಳು

ಬ್ರಿಕ್ ನಾಯಕರು ಹೆಚ್ಚಿನ ಆರ್ಥಿಕ ಸುದಾರಣೆಗಳನ್ನು- "ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿನ ಅಭಿಪ್ರಾಯಗಳನ್ನು ಕೊಡುವ ಹಕ್ಕುಗಳು ಮತ್ತು ಪ್ರಾತಿನಿದ್ಯವನ್ನೂ ಹಾಗೂ ಅವುಗಳ ಅಧಿಪತಿಗಳನ್ನು ಮತ್ತು ಹಿರಿಯ ನಾಯಕತ್ವವನ್ನು ನಿಯಮಿಸುವಾಗ ಹೆಚ್ಚಿನ ಮುಕ್ತತೆ, ಪಾರದರ್ಶಕತ್ವ ಮತ್ತು ಯೋಗ್ಯತೆಯನ್ನು ಆಧಾರಿವಾಗಿಸಿ ಕೊಳ್ಳ ಬೇಕು" ಎಂಬ ಬೇಡಿಕೆಗಳನ್ನು ಇಟ್ಟರು.

ಸಂಯುಕ್ತ ರಾಷ್ಟ್ರ ಸಂಸ್ಥೆಯ ಸುಧಾರಣೆಗಳ ಬಗೆಗೆ ನಾಯಕರು ಚರ್ಚಿಸಿದರು. "ನಾವು ಅಂತರರಾಷ್ಟ್ರೀಯ ವಿಚಾರಗಳಲ್ಲಿ ಭಾರತ ಮತ್ತು ಬ್ರೆಜಿಲ್‌ಗಳ ಪ್ರಾಮುಖ್ಯತೆಯ ಬಗೆಗೆ ಒತ್ತಿ ಹೇಳುತ್ತೇವೆ ಮತ್ತು ಅವು ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಆಸಕ್ತಿಯನ್ನು ಅರ್ಥ ಮಾಡಿಕೊಂಡು ಬೆಂಬಲಿಸುತ್ತೇವೆ" ಎಂದು ಈ ರಾಷ್ಟ್ರಗಳು ಹೇಳಿವೆ.

2007-2008ರ ಜಾಗತಿ ಆಹಾರ ಬೆಲೆಗಳ ಬಿಕ್ಕಟ್ಟು (ಜಾಗತಿಕ ಆಹಾರ ಬೆಲೆಗಳು 2007ರಲ್ಲಿ ಮತ್ತು 2008ರ ಮೊದಲ ಮತ್ತು ಎರಡನೆಯ ಕಾಲು ಭಾಗದಲ್ಲಿ ತೀವ್ರವಾಗಿ ಹೆಚ್ಚಾಗಿ ರಾಜಕೀಯ ಆರ್ಥಿಕ ಅಸ್ಥಿರತೆಗೆ ಕಾರಣವಾದವು) ಬಗೆಗಿನ ಹೇಳಿಕೆಯಲ್ಲಿ ಬ್ರಿಕ್ ರಾಷ್ಟ್ರಗಳು "ಎಲ್ಲಾ ಸರಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರಿಯಾಶೀಲವಾಗ ಬೇಕೆಂತಲೂ" ಮತ್ತು "ಈ ಸಮಸ್ಯೆಯಿಂದ ಹೊರಬರಲು ತನ್ನ ಕೊಡುಗೆಯ ಕೊಡುವ ಮೂಲಕ ಬದ್ಧತೆ ತೋರುತ್ತೇವೆ" ಎಂದು ಹೇಳಿದವು.

ಉಲ್ಲೇಖ

ಆಧಾರ

Wiki English 1st BRIC Summit accessed on 2016-10-17 (ಉಲ್ಲೇಖಗಳು ಅಲ್ಲಿಯವೇ)

Tags:

ಚೀನಾಬ್ರಿಕ್ಸ್ ಸಂಘಟನೆಬ್ರೆಜಿಲ್ಭಾರತರಷ್ಯಾ

🔥 Trending searches on Wiki ಕನ್ನಡ:

ಆಡು ಸೋಗೆಸಮಾಸಮಾನ್ವಿತಾ ಕಾಮತ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆತೆರಿಗೆಒಕ್ಕಲಿಗಪೆರಿಯಾರ್ ರಾಮಸ್ವಾಮಿಕೃತಕ ಬುದ್ಧಿಮತ್ತೆಬಿ.ಎಸ್. ಯಡಿಯೂರಪ್ಪರೇಣುಕಮ್ಯಾಕ್ಸ್ ವೆಬರ್ಸಿಂಧೂತಟದ ನಾಗರೀಕತೆಯಣ್ ಸಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪುರಂದರದಾಸಭಾರತದಲ್ಲಿ ಮೀಸಲಾತಿಅಂಬಿಗರ ಚೌಡಯ್ಯಇಂಡಿಯನ್ ಪ್ರೀಮಿಯರ್ ಲೀಗ್ಕರ್ನಾಟಕ ವಿಧಾನ ಪರಿಷತ್ಸಂವತ್ಸರಗಳುಯೇಸು ಕ್ರಿಸ್ತದಿಯಾ (ಚಲನಚಿತ್ರ)ಗುಣ ಸಂಧಿಕರ್ನಾಟಕ ಜನಪದ ನೃತ್ಯಚದುರಂಗದ ನಿಯಮಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಸವ ಜಯಂತಿಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅಮೇರಿಕ ಸಂಯುಕ್ತ ಸಂಸ್ಥಾನನಗರೀಕರಣಬೈಲಹೊಂಗಲಅಲಂಕಾರತುಳಸಿಕನ್ನಡದಲ್ಲಿ ಮಹಿಳಾ ಸಾಹಿತ್ಯವಿಜಯ ಕರ್ನಾಟಕಭಾರತೀಯ ಜನತಾ ಪಕ್ಷಗೋತ್ರ ಮತ್ತು ಪ್ರವರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕ್ರಿಯಾಪದಸಂಭೋಗಸಂಗ್ಯಾ ಬಾಳ್ಯಮುಟ್ಟುಎ.ಪಿ.ಜೆ.ಅಬ್ದುಲ್ ಕಲಾಂಎಚ್.ಎಸ್.ಶಿವಪ್ರಕಾಶ್ಸಾಮಾಜಿಕ ಸಮಸ್ಯೆಗಳುಓಂ (ಚಲನಚಿತ್ರ)ಜಗನ್ನಾಥದಾಸರುಕಿತ್ತೂರು ಚೆನ್ನಮ್ಮಸಮಾಜಶಾಸ್ತ್ರಮಾದರ ಚೆನ್ನಯ್ಯಸೂರ್ಯಚಿನ್ನಅರ್ಜುನಸಂಶೋಧನೆಗೋಕಾಕ್ ಚಳುವಳಿರಾವಣಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಧರ್ಮಕಬ್ಬಿಣಅಮೃತಬಳ್ಳಿಋತುರೋಮನ್ ಸಾಮ್ರಾಜ್ಯಗೌತಮ ಬುದ್ಧಎಳ್ಳೆಣ್ಣೆತಾಳೀಕೋಟೆಯ ಯುದ್ಧಛತ್ರಪತಿ ಶಿವಾಜಿರೋಸ್‌ಮರಿಸಜ್ಜೆಶಬರಿಕಲ್ಲುಹೂವು (ಲೈಕನ್‌ಗಳು)ಮಹಮ್ಮದ್ ಘಜ್ನಿಅಂಬರೀಶ್ ನಟನೆಯ ಚಲನಚಿತ್ರಗಳುಭಾರತೀಯ ರೈಲ್ವೆದೇವರ/ಜೇಡರ ದಾಸಿಮಯ್ಯಶನಿ🡆 More