ಸಂಯುಕ್ತ ರಾಷ್ಟ್ರ ಸಂಸ್ಥೆ

ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವಾ ವಿಶ್ವಸಂಸ್ಥೆ) ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ.

ಎರಡನೆ ವಿಶ್ವ ಯುದ್ಧದ ನಂತರ ಯುದ್ಧ ವಿಜಯಿ ದೇಶಗಳಾದ ಫ್ರಾನ್ಸ್, ಯು.ಎಸ್.ಎ., ಚೀನಾ, ಸೋವಿಯಟ್ ಸಂಸ್ಥಾನ ಮತ್ತು ಯು.ಕೆ. ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬, ೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.

ಸಂಯುಕ್ತ ರಾಷ್ಟ್ರ ಸಂಸ್ಥೆ
ವಿಶ್ವಸಂಸ್ಥೆಯ ಧ್ವಜ
ಸಂಯುಕ್ತ ರಾಷ್ಟ್ರ ಸಂಸ್ಥೆ
ವಿಶ್ವಸಂಸ್ಥೆಯ ಚಿಹ್ನೆ- ಎಂಬ್ಲಮ್







  • ಪ್ರಧಾನ ಕಚೇರಿ=ನ್ಯೂಯಾರ್ಕ್ ನಗರ(ಅಂತರರಾಷ್ಟ್ರೀಯ ಪ್ರದೇಶ)
  • ಅಧಿಕೃತ ಭಾಷೆಗಳು=ಅರೇಬಿಕ್; ಚೈನೀಸ್; ಆಂಗ್ಲ; ಫ್ರೆಂಚ್; ರಷ್ಯನ್; ಸ್ಪ್ಯಾನಿಷ್
  • ಮಾದರಿ=ಅಂತರ್ ಸರ್ಕಾರಿ ಸಂಸ್ಥೆ
  • ಸದಸ್ಯತ್ವ =193 ಸದಸ್ಯ ರಾಷ್ಟ್ರಗಳು
  • ವೀಕ್ಷಕ ರಾಜ್ಯಗಳು= 2
  • ನಾಯಕರು :-
    ಕಾರ್ಯದರ್ಶಿ= ಜನರಲ್ಆಂಟೋನಿಯೊ ಗುಟೆರೆಸ್.
    ಉಪ ಪ್ರಧಾನ ಕಾರ್ಯದರ್ಶಿ= ಅಮಿನಾ ಜೆ. ಮೊಹಮ್ಮದ್.
    ಜನರಲ್ ಅಸೆಂಬ್ಲಿ ಅಧ್ಯಕ್ಷ= ಟಿಜ್ಜಾನಿ ಮುಹಮ್ಮದ್-ಬಂಡೆ.
    ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ = ಮೋನಾ ಜುಲ್
    ಭದ್ರತಾ ಮಂಡಳಿ ಅಧ್ಯಕ್ಷ = ಡ್ಯಾಂಗ್ ದಿನ್ಹ್ ಕ್ವಿ
  • -----------
  • ಸ್ಥಾಪನೆ = ಯುಎನ್ ಚಾರ್ಟರ್ ಸಹಿ ಮಾಡಿದ ದಿನ:26 ಜೂನ್ 1945 (74 ವರ್ಷಗಳ ಹಿಂದೆ)
  • ಚಾರ್ಟರ್/ ಸನ್ನದು ಜಾರಿಗೆ ಬಂದದಿನ=24 ಅಕ್ಟೋಬರ್ 1945 (74 ವರ್ಷಗಳ ಹಿಂದೆ)
  • -----------
  • [೧]=ಅಂತರ್ಜಾಲ
.

ವಿಶ್ವಸಂಸ್ಥೆಯ ಹುಟ್ಟು

ಸಂಯುಕ್ತ ರಾಷ್ಟ್ರ ಸಂಸ್ಥೆ 
ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು
  • ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸ ಲಾಗಿದ್ದ ಲೀಗ್ ಆಫ್ ನೇಷನ್ಸ್‍ನ(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಹಾಗೂ ರಷ್ಯದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು. ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸ ಲಾಯಿತು(1951). ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ ವಿಶ್ವಸಂಸ್ಥೆಯಲ್ಲಿ 193 (2011) ಸದಸ್ಯ ರಾಷ್ಟ್ರಗಳಿವೆ.

ಆಶಯ:

  • ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದತೆ; ರಾಜಕೀಯ, ಸಾಮಾಜಿಕ,ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರತತ್ತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವ ಧ್ಯೇಯೋದ್ದೇಶ ಗಳನ್ನು ಹೊಂದಿದೆ. ಎಲ್ಲ ಜನಾಂಗಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾರ್ವಭೌಮತ್ವದ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಹಲವು ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ಇದು ತನ್ನ ಬಹುಮುಖ್ಯ ಕಾರ್ಯಗಳನ್ನು ನಿರ್ವಹಿಸಲು ಆರು ಪ್ರಧಾನ ಸಮಿತಿ ಹಾಗೂ ಉಪಸಮಿತಿಗಳನ್ನು ಹೊಂದಿದೆ.
    1. ಸಾಮಾನ್ಯ ಸಭೆ: ಇದು ಇದರ ಪ್ರಧಾನ ಕಾರ್ಯಾಲಯ. ಇದು ಪ್ರಪಂಚದ ಶಾಸಕಾಂಗದ ರೀತಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಶಾಂತಿಪ್ರಿಯ ರಾಷ್ಟ್ರ ಇದರ ಸದಸ್ಯತ್ವ ಪಡೆಯಬಹುದು. ಪ್ರತಿಯೊಂದು ರಾಷ್ಟ್ರಕ್ಕೂ ಕೇವಲ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ. 1946 ಜನವರಿ 10ರಂದು ಪ್ರಥಮ ಸಾಮಾನ್ಯ ಸಭೆ ಸೇರಿತ್ತು. ಭಾರತ 1945 ಅಕ್ಟೋಬರ್ 30ರಂದು ಇದರ ಸದಸ್ಯತ್ವ ಪಡೆಯಿತು.
    2. ಭದ್ರತಾ ಮಂಡಳಿ: ಇದು ಪ್ರಪಂಚದ ಕಾರ್ಯಾಂಗದ ರೀತಿ ಕಾರ್ಯನಿರ್ವಹಿಸುತ್ತದೆ. ವಿಶ್ವಶಾಂತಿ ಹಾಗೂ ಭದ್ರತೆ ಕಾಪಾಡುವ ಮೂಲಕ ಮೂರನೆಯ ಮಹಾಯುದ್ಧ ಸಾಧ್ಯತೆಯನ್ನು ತಡೆಯುವ ಜವಾಬ್ದಾರಿ ಹೊಂದಿದೆ. ಇದು 5 ಖಾಯಮ್ ಸದಸ್ಯ ರಾಷ್ಟ್ರಗಳು ಹಾಗೂ 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಖಾಯಮ್ ಸದಸ್ಯ ರಾಷ್ಟ್ರಗಳ ಸದಸ್ಯರಿಗೆ ವಿಟೋ ಅಧಿಕಾರವಿದೆ.
    3. ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಇದು ಸದಸ್ಯ ರಾಷ್ಟ್ರಗಳಲ್ಲಿ ಶಾಂತಿ ಹಾಗೂ ಪ್ರಗತಿ ಸಾಧಿಸಲು ಸರಿಯಾದ ಆರ್ಥಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಿಸುವ ಗುರಿ ಹೊಂದಿದೆ ಹಾಗೂ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತದೆ.
    4. ಧರ್ಮದರ್ಶಿ ಮಂಡಳಿ: ಇದು ರಾಷ್ಟ್ರಸಂಘದ ಮ್ಯಾಂಡೇಟ್ ಪದ್ಧತಿಯ ಉತ್ತರಾಧಿಕಾರಿಯಾಗಿದೆ. ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಪ್ರಗತಿ ಸಾಧಿಸಲು ಯತ್ನಿಸುತ್ತದೆ.
    5. ಅಂತಾರಾಷ್ಟ್ರೀಯ ನ್ಯಾಯಾಲಯ: ಇದರ ಪ್ರಧಾನ ಕಚೇರಿ ಹಾಲೆಂಡಿನ ಹೇಗ್ ನಗರದಲ್ಲಿದೆ. ಇದು ಅಂತಾರಾಷ್ಟ್ರೀಯ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತದೆ.
    6. ಕಾರ್ಯಾಲಯ: ಕೇಂದ್ರ ಕಚೇರಿ ಅಮೆರಿಕದ ನ್ಯೂಯಾರ್ಕ್‍ನಲ್ಲಿದೆ. ಇದು ಸಂಸ್ಥೆಯ ಕಾರ್ಯಕಲಾಪಗಳನ್ನು ನಿರ್ವಹಿಸುತ್ತದೆ. ಕಾರ್ಯದರ್ಶಿ ಇದರ ಮುಖ್ಯಸ್ಥ.

ಕಾರ್ಯದರ್ಶಿಗಳು

    ಇದರ ಪ್ರಥಮ ಕಾರ್ಯದರ್ಶಿ ನಾರ್ವೆಯ ಟ್ರೈಗ್ವೆಲೀ(1945-53). ಅನಂತರ ಡ್ಯಾಗ್ ಹ್ಯಾಮರ್ ಶೀಲ್ಡ್(1953-61), ಬರ್ಮದ (ಮೈನ್ಮಾರ್) ಉ.ಥಾಂಟ್(1961-71), ಆಸ್ಟ್ರಿಯದ ಕರ್ಟ್‍ವಾಲ್ಡ್‍ಹೀಮ್(1971-81), ಪೆರು ದೇಶದ ಪೆರೇಜ್‍ಡಿಕ್ಯೂಲರ್ (1982-91), ಈಜಿಪ್ಟಿನ ಭುಟ್ರೋಸ್ ಘಾಲಿ(1992-96) ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಘಾನ ದೇಶದ ಕೋಫಿ ಅನ್ನನ್(1997 ರಿಂದ) ಕಾರ್ಯದರ್ಶಿಯಾಗಿದ್ದರು. ಅಂಟೊನಿಯೊ ಗುಟೆರಸ್‌(2013) ಜನವರಿ 1,2017 ರಿಂದ ಕಾರ್ಯದರ್ಶಿಗಳಾಗಿದ್ದಾರೆ.

ಉಪಸಮಿತಿಗಳ

    ವಿಶ್ವಸಂಸ್ಥೆ ಹಲವು ಉಪಸಮಿತಿಗಳನ್ನು ಹೊಂದಿದೆ. ಅವು ಹೀಗಿವೆ:
  1. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‍ಎಒ),
  2. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕತಿಕ ಸಂಸ್ಥೆ(ಯುನೆಸ್ಕೋ),
  3. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ),
  4. ವಿಶ್ವಕಾರ್ಮಿಕ ಸಂಸ್ಥೆ(ಐಎಲ್‍ಒ),
  5. ವಿಶ್ವಹಣಕಾಸುನಿಧಿ(ಐಎಮ್‍ಎಫ್),
  6. ವಿಶ್ವನಾಗರಿಕ ವಿಮಾನಯಾನ ಸಾರಿಗೆ ಸಂಸ್ಥೆ (ಐಸಿಎಒ),
  7. ವಿಶ್ವಅಣುಶಕ್ತಿ ಸಂಸ್ಥೆ (ಐಎಇಎ),
  8. ವಿಶ್ವಬ್ಯಾಂಕ್ ಮೊದಲಾದವು.

ಜಾಗತಿಕ ಸಮಸ್ಯೆಗಳಿಗೆ ಪರಿಹಾರ

  • ವಿಶ್ವಸಂಸ್ಥೆ ಹಲವಾರು ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಿದೆ ಮತ್ತು ಕೆಲವನ್ನು ಬಗೆಹರಿಸುತ್ತಿದೆ. ಇರಾನ್, ಇಂಡೋನೇಷ್ಯ, ಬರ್ಲಿನ್, ಬ್ಲಾಕೇಡ್, ಕೊರಿಯ ಕದನ, ಸೂಯೆಜ್ ಕಾಲುವೆ ಸಮಸ್ಯೆ, ಕಾಂಗೋಹಗರಣ, ಪ್ಯಾಲಸ್ತೀನ್ ಸಮಸ್ಯೆ, ವಿಯಟ್ನಾಮ್ ಸಮಸ್ಯೆ, ನಮೀಬಿಯ ಹಾಗೂ ಅಂಗೋಲಗಳ ಸ್ವಾತಂತ್ರ್ಯಗಳಿಕೆ, ದಕ್ಷಿಣ ಆಫ್ರಿಕದ ವರ್ಣಭೇದ ಸಮಸ್ಯೆ ಮುಂತಾದವು ಗಳನ್ನು ಬಗೆಹರಿಸಿದೆ. ಇಸ್ರೇಲ್, ಕಾಶ್ಮೀರ, ಇರಾಕ್ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಗಳು ನಡೆದಿವೆ. ತನ್ನ ಅಂಗ ಸಂಸ್ಥೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರಕ ರೋಗಗಳು, ಮಕ್ಕಳ ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕತಿ ಮತ್ತು ಪರಂಪರೆ ಸಂರಕ್ಷಣೆ, ಪರಿಸರ ಸಂರಕ್ಷಣೆ, ಆಹಾರ ಸಮಸ್ಯೆ, ಕೃಷಿ ಹಾಗೂ ಆರ್ಥಿಕಾಭಿವೃದ್ಧಿüಯಂತಹ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು

ನೋಡಿ

ಬಾಹ್ಯ ಸಂಪರ್ಕಗಳು

    Other

ಉಲ್ಲೇಖ

Tags:

ಸಂಯುಕ್ತ ರಾಷ್ಟ್ರ ಸಂಸ್ಥೆ ವಿಶ್ವಸಂಸ್ಥೆಯ ಹುಟ್ಟುಸಂಯುಕ್ತ ರಾಷ್ಟ್ರ ಸಂಸ್ಥೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರಸಂಯುಕ್ತ ರಾಷ್ಟ್ರ ಸಂಸ್ಥೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳುಸಂಯುಕ್ತ ರಾಷ್ಟ್ರ ಸಂಸ್ಥೆ ನೋಡಿಸಂಯುಕ್ತ ರಾಷ್ಟ್ರ ಸಂಸ್ಥೆ ಬಾಹ್ಯ ಸಂಪರ್ಕಗಳುಸಂಯುಕ್ತ ರಾಷ್ಟ್ರ ಸಂಸ್ಥೆ ಉಲ್ಲೇಖಸಂಯುಕ್ತ ರಾಷ್ಟ್ರ ಸಂಸ್ಥೆಎರಡನೆ ವಿಶ್ವ ಯುದ್ಧಚೀನಾಜೂನ್ ೨೬ಫ್ರಾನ್ಸ್ಯು.ಎಸ್.ಎ.ಯು.ಕೆ.ಸೋವಿಯಟ್ ಸಂಸ್ಥಾನ೧೯೪೫

🔥 Trending searches on Wiki ಕನ್ನಡ:

ರಾಶಿಭಾಷಾ ವಿಜ್ಞಾನಕಾಲಾಯ ತಸ್ಮೈ ನಮಃ (ಚಲನಚಿತ್ರ)ಬಿ.ಜಯಶ್ರೀವಚನಕಾರರ ಅಂಕಿತ ನಾಮಗಳುಸಮಾಜ ವಿಜ್ಞಾನಮಹಾವೀರ ಜಯಂತಿಪಿ.ಲಂಕೇಶ್ಭಾರತದ ವಿಜ್ಞಾನಿಗಳುಭಾರತದಲ್ಲಿ ಬಡತನಶೂದ್ರಮಾಧ್ಯಮಮದುವೆಸಮಾಜಶಾಸ್ತ್ರನವೋದಯಪ್ರಚಂಡ ಕುಳ್ಳರನ್ನಯೋಗವಾಹಸವಿತಾ ನಾಗಭೂಷಣಬಿ.ಎಸ್. ಯಡಿಯೂರಪ್ಪಚಿಕ್ಕಮಗಳೂರುಜಾಗತೀಕರಣದುರ್ಗಸಿಂಹಕಲ್ಯಾಣಿಕರ್ನಾಟಕದ ಜಿಲ್ಲೆಗಳುಭಗವದ್ಗೀತೆಭಾರತದ ತ್ರಿವರ್ಣ ಧ್ವಜವಾಯುಗುಣಕುಂದಾಪುರಶ್ರವಣಬೆಳಗೊಳರಸ(ಕಾವ್ಯಮೀಮಾಂಸೆ)ತೆಲುಗುಯೋಜಿಸುವಿಕೆಭಾರತೀಯ ರಿಸರ್ವ್ ಬ್ಯಾಂಕ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಎಕರೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಚಾಮರಾಜನಗರಕನ್ನಡ ಬರಹಗಾರ್ತಿಯರುರಾಜಕುಮಾರ (ಚಲನಚಿತ್ರ)ಕನ್ನಡ ಪತ್ರಿಕೆಗಳುವಿಹಾರಕನ್ನಡ ಛಂದಸ್ಸುಬರಗೂರು ರಾಮಚಂದ್ರಪ್ಪಚುನಾವಣೆಕರ್ಣಾಟ ಭಾರತ ಕಥಾಮಂಜರಿಭಾರತೀಯ ಅಂಚೆ ಸೇವೆಮಹಾತ್ಮ ಗಾಂಧಿಶ್ಯೆಕ್ಷಣಿಕ ತಂತ್ರಜ್ಞಾನಭಾರತದ ವಿಶ್ವ ಪರಂಪರೆಯ ತಾಣಗಳುಭಾರತೀಯ ಕಾವ್ಯ ಮೀಮಾಂಸೆಪರೀಕ್ಷೆಪ್ರಬಂಧಪಂಚತಂತ್ರಅಂತಾರಾಷ್ಟ್ರೀಯ ಸಂಬಂಧಗಳುವಿಷ್ಣುಗಾಂಧಿ ಜಯಂತಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಆಪ್ತಮಿತ್ರಕರ್ನಾಟಕದ ತಾಲೂಕುಗಳುಸುಗ್ಗಿ ಕುಣಿತಜೈನ ಧರ್ಮಆಗಮ ಸಂಧಿಕಾವೇರಿ ನದಿಜಿ.ಪಿ.ರಾಜರತ್ನಂಕರ್ನಾಟಕದ ಶಾಸನಗಳುಕೆ. ಅಣ್ಣಾಮಲೈಭಾರತದ ಸಂವಿಧಾನ ರಚನಾ ಸಭೆಮೊದಲನೆಯ ಕೆಂಪೇಗೌಡರೋಸ್‌ಮರಿಮಾನವ ಸಂಪನ್ಮೂಲ ನಿರ್ವಹಣೆಕನ್ನಡ ವ್ಯಾಕರಣಎಳ್ಳೆಣ್ಣೆಎಂ. ಕೆ. ಇಂದಿರಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮೆಂತೆಶಿರ್ಡಿ ಸಾಯಿ ಬಾಬಾಗ್ರಹಕುಂಡಲಿ🡆 More