ಸುಹಾಸಿನಿ ಮಣಿರತ್ನಮ್

ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫, ೧೯೬೧, ಹುಟ್ಟುಹೆಸರು ಸುಹಾಸಿನಿ) ದಕ್ಷಿಣ ಭಾರತದ ಚಿತ್ರನಟಿ.

ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.

ಸುಹಾಸಿನಿ ಮಣಿರತ್ನಂ
ಸುಹಾಸಿನಿ ಮಣಿರತ್ನಮ್
Born (1961-08-15) ೧೫ ಆಗಸ್ಟ್ ೧೯೬೧ (ವಯಸ್ಸು ೬೨)
Occupation(s)ನಟಿ ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ
Years active1980–present
Spouse(s)ಮಣಿರತ್ನಂ
(1988–present)
Children1

ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿರತ್ನಂ ಸುಹಾಸಿನಿ ಅವರ ಪತಿ.

"ನೆಂಜತ್ತೆ ಕಿಳ್ಳಾದೆ" ಚಿತ್ರದ ಮೂಲಕ ನಟಿಯಾದ ಸುಹಾಸಿನಿಯವರು ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿಯೂ ಅನುಭವ ಹೊಂದಿದ್ದಾರೆ.

ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಬಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ" ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

"ಸಿಂಧು ಭೈರವಿ’" ಚಿತ್ರದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ನಾಯಕನಟರು, ಎಲ್ಲಾ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ, "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ.

ಆಯ್ದ ಚಲನಚಿತ್ರಗಳ ಪಟ್ಟಿ

ಸುಹಾಸಿನಿ ಅಭಿನಯದ ಕೆಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೩ ಬೆಂಕಿಯಲ್ಲಿ ಅರಳಿದ ಹೂವು ಕೆ.ಬಾಲಚಂದರ್ ಜೈಜಗದೀಶ್, ಪವಿತ್ರಾ
೧೯೮೪ ಬಂಧನ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜೈಜಗದೀಶ್
೧೯೮೬ ಉಷಾ ರಾಘವ ರಾಮಕೃಷ್ಣ
೧೯೮೬ ಹೊಸ ನೀರು ಕೆ.ವಿ.ಜಯರಾಂ ಅನಂತ್ ನಾಗ್
೧೯೮೮ ಸುಪ್ರಭಾತ ದಿನೇಶ್ ಬಾಬು ವಿಷ್ಣುವರ್ಧನ್
೧೯೯೦ ಮುತ್ತಿನಹಾರ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್
೧೯೯೫ ಹಿಮಪಾತ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜಯಪ್ರದಾ, ಜೈಜಗದೀಶ್
೧೯೯೭ ಅಮೃತವರ್ಷಿಣಿ ದಿನೇಶ್ ಬಾಬು ರಮೇಶ್, ಶರತ್ ಬಾಬು
೧೯೯೮ ಹೆಂಡ್ತಿಗೇಳ್ತೀನಿ ದಿನೇಶ್ ಬಾಬು ವಿಷ್ಣುವರ್ಧನ್
೧೯೯೯ ವಿಶ್ವ ಶಿವಮಣಿ ಶಿವರಾಜ್ ಕುಮಾರ್, ಅನಂತ್ ನಾಗ್
೨೦೦೦ ಯಾರಿಗೆ ಸಾಲುತ್ತೆ ಸಂಬಳ ಎಂ.ಎಸ್.ರಾಜಶೇಖರ್ ಶಶಿಕುಮಾರ್
೨೦೦೦ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕೂಡ್ಲು ರಾಮಕೃಷ್ಣ ಅನಂತ್ ನಾಗ್,ರಾಮಕೃಷ್ಣ, ತಾರ
೧೯೯೦ ಎಲ್ಲರ ಮನೆ ದೋಸೆನು ಎಚ್.ಎನ್.ಪ್ರಕಾಶ್ ರಾಮ್ ಕುಮಾರ್, ಶ್ರುತಿ
೨೦೦೧ ಹಾಲು ಸಕ್ಕರೆ ಯೋಗಿಶ್ ಹುಣಸೂರು ದೇವರಾಜ್, ಶಶಿಕುಮಾರ್, ಜಗ್ಗೇಶ್, ಅರ್ಚನಾ
೨೦೦೩ ಅಣ್ಣಾವ್ರು ಓಂಪ್ರಕಾಶ್ ರಾವ್ ಅಂಬರೀಶ್, ದರ್ಶನ್
೨೦೦೭ ಮಾತಾಡ್ ಮಾತಾಡು ಮಲ್ಲಿಗೆ ನಾಗತಿಹಳ್ಳಿ ಚಂದ್ರಶೇಖರ್ ವಿಷ್ಣುವರ್ಧನ್
೨೦೧೦ ಎರಡನೇ ಮದುವೆ ದಿನೇಶ್ ಬಾಬು ಅನಂತ್ ನಾಗ್
೨೦೧೦ ಸ್ಕೂಲ್ ಮಾಸ್ಟರ್ ದಿನೇಶ್ ಬಾಬು ವಿಷ್ಣುವರ್ಧನ್
೨೦೧೧ ಮತ್ತೊಂದು ಮದುವೇನಾ ದಿನೇಶ್ ಬಾಬು ಅನಂತ್ ನಾಗ್
೨೦೧೩ "ಮೈನಾ" ನಾಗಶೇಖರ್

ಚೇತನ್ , ನಿತ್ಯಾ ಮೆನನ್

ಹಿಂದಿ/ಇಂಗ್ಲಿಷ್

ವರ್ಷ ಸಿನಿಮಾ ಪಾತ್ರ ಟಿಪ್ಪಣಿ
೨೦೧೫ ವೈಟಿಂಗ್ ಪಂಕಜ

ನಿರ್ದೇಶಕಿಯಾಗಿ

ವರ್ಷ ಸಿನಿಮಾ ನಟರು ಟಿಪ್ಪಣಿ
೧೯೯೫ ಇಂದಿರಾ ಅನು ಹಾಸನ್, ಅರ್ವಿಂದ್ ಸ್ವಾಮಿ
೧೯೯೧ ಪೆನ್ ನಟಿ ಸಹ

ಕಂಠದಾನಿಯಾಗಿ

ವರ್ಷ ಸಿನಿಮಾ ಡಬ್ ಭಾಷೆ
೧೯೯೧ ದಳಪತಿ ಶೋಬನ ತಮಿಳು
೧೯೯೩ ತೀರುದ ತೀರುದ ಹೀರ ರಾಜ್ಗೋಪಾಲ್ ತಮಿಳು
೧೯೯೮ ಉಯಿರೆ ಮನಿಷಾ ಕೊಯಿರಾಲ ತಮಿಳು

ಉಲ್ಲೇಖಗಳು

Tags:

ಸುಹಾಸಿನಿ ಮಣಿರತ್ನಮ್ ಆಯ್ದ ಚಲನಚಿತ್ರಗಳ ಪಟ್ಟಿಸುಹಾಸಿನಿ ಮಣಿರತ್ನಮ್ ಉಲ್ಲೇಖಗಳುಸುಹಾಸಿನಿ ಮಣಿರತ್ನಮ್ತಮಿಳುದಕ್ಷಿಣ ಭಾರತ

🔥 Trending searches on Wiki ಕನ್ನಡ:

ಸಂವಹನಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದ ಬಂದರುಗಳುಯೇಸು ಕ್ರಿಸ್ತಕಳಿಂಗ ಯುದ್ದ ಕ್ರಿ.ಪೂ.261ರಾಸಾಯನಿಕ ಗೊಬ್ಬರಭಾರತದ ಸರ್ವೋಚ್ಛ ನ್ಯಾಯಾಲಯಅಸಹಕಾರ ಚಳುವಳಿಪಾರ್ವತಿತತ್ಸಮ-ತದ್ಭವಕಪ್ಪೆಎಚ್ ನರಸಿಂಹಯ್ಯವೃತ್ತಪತ್ರಿಕೆಮೀನುಉತ್ಕರ್ಷಣ - ಅಪಕರ್ಷಣಅವರ್ಗೀಯ ವ್ಯಂಜನಚಿತ್ರದುರ್ಗಮಳೆನೀರು ಕೊಯ್ಲುಗುಡುಗುಒಡಲಾಳಅಸ್ಪೃಶ್ಯತೆಕಾಂತಾರ (ಚಲನಚಿತ್ರ)ಕೊರೋನಾವೈರಸ್ಪುರಂದರದಾಸತುಳಸಿಅಮೃತಧಾರೆ (ಕನ್ನಡ ಧಾರಾವಾಹಿ)ಯುನೈಟೆಡ್ ಕಿಂಗ್‌ಡಂಮಡಿವಾಳ ಮಾಚಿದೇವಮಧುಮೇಹಜೀಮೇಲ್ಗುಣ ಸಂಧಿಕರ್ನಾಟಕದ ಮುಖ್ಯಮಂತ್ರಿಗಳುಬಾಬು ಜಗಜೀವನ ರಾಮ್ಶ್ರೀ ರಾಮಾಯಣ ದರ್ಶನಂವೈದೇಹಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ವೆಂಕಟೇಶ್ವರ ದೇವಸ್ಥಾನವಾಯು ಮಾಲಿನ್ಯಮಯೂರವರ್ಮತಂಬಾಕು ಸೇವನೆ(ಧೂಮಪಾನ)ಜನ್ನಮಾನವನ ಪಚನ ವ್ಯವಸ್ಥೆಸಂಗೀತ ವಾದ್ಯಚಂಡಮಾರುತನಿರ್ವಹಣೆ ಪರಿಚಯಭಾರತದ ಬುಡಕಟ್ಟು ಜನಾಂಗಗಳುಕನ್ನಡ ಗುಣಿತಾಕ್ಷರಗಳುಸಹಕಾರಿ ಸಂಘಗಳುಲಾರ್ಡ್ ಕಾರ್ನ್‍ವಾಲಿಸ್ಚದುರಂಗದ ನಿಯಮಗಳುಹಣಪಪ್ಪಾಯಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಚನಕಾರರ ಅಂಕಿತ ನಾಮಗಳುಕ್ರೀಡೆಗಳುಟಿಪ್ಪು ಸುಲ್ತಾನ್ಕೆಂಪು ಮಣ್ಣುಚಿನ್ನಕಬೀರ್ಇತಿಹಾಸಶಬ್ದಮಣಿದರ್ಪಣಮೈಸೂರು ದಸರಾಕಲ್ಯಾಣ ಕರ್ನಾಟಕಚಾರ್ಲ್ಸ್‌‌ ಮ್ಯಾನ್ಸನ್‌‌‌ಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದ ಸಂವಿಧಾನ ರಚನಾ ಸಭೆಪಂಚ ವಾರ್ಷಿಕ ಯೋಜನೆಗಳುಅರವಿಂದ್ ಕೇಜ್ರಿವಾಲ್ಅಮೀಬಾಕಬಡ್ಡಿಪಕ್ಷಿಐಹೊಳೆಷಟ್ಪದಿಕರ್ಮಧಾರಯ ಸಮಾಸಭಾರತೀಯ ಸ್ಟೇಟ್ ಬ್ಯಾಂಕ್🡆 More