ಮನ್ನಾ ಡೆ

ಪ್ರಬೋಧ ಚಂದ್ರ ದೇ (ಅಹೋಮಿಯಾ: মান্না দে ಮನ್ನಾ ದೇ; ಮೇ ೧, ೧೯೧೯ - ಅಕ್ಟೋಬರ್ ೨೪ ೨೦೧೩) ಮನ್ನಾ ದೇ ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು.

ಮನ್ನಾ ಡೆ
ಮನ್ನಾ ಡೆ
2004 ರಲ್ಲಿ, ರವೀಂದ್ರ ಭಾರತಿ ವಿಶ್ವವಿದ್ಯಾಲಯಡಿ. ಲಿಟ್. ಪುರಸ್ಕಾರ ಪಡೆದ ಸಂದರ್ಭದಲ್ಲಿ ಮನ್ನಾ ಡೆ
Born
ಪ್ರಬೋಧ ಚಂದ್ರ ಡೇ

(1919-05-01) ೧ ಮೇ ೧೯೧೯ (ವಯಸ್ಸು ೧೦೪)
Diedಅಕ್ಟೋಬರ್ ೨೪, ೨೦೧೩
ಬೆಂಗಳೂರು
Other namesಮನ್ನಾ ಡೇ
Occupationಹಿನ್ನೆಲೆ ಗಾಯನ
Years active1929–2010
Websitewww.mannadey.in
ಮನ್ನಾ ಡೆ
'ಮನ್ನಾ ಡೆ'
ಮನ್ನಾ ಡೆ
ಮನ್ನಾಡೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದಾಗ

೧೯೬೦-೭೦ ರ ದಶಕದ ಸಮಯದಲ್ಲಿ, ದೇಶದಾದ್ಯಂತ ಹಿಂದಿ, ಬಂಗಾಳೀ ಚಿತ್ರರಂಗದ ಮಧುರಗೀತೆಗಳನ್ನು ಹಾಡಿರಂಜಿಸುತ್ತಿದ್ದ ಮನ್ನಾಡೆಯವರ ಛಾಪನ್ನು ಮೂಡಿಸುವ ಗೀತೆಗಳನ್ನು ಕೇಳಿದ ಕೂಡಲೇ ಮನ್ನಾಡೆ, ನಮಗೆ ಫಕ್ಕನೆ ನೆನೆಪಾಗುತ್ತಾರೆ. ಆಗಿನಕಾಲದಲ್ಲಿ ’ಮುಖೇಶ್’, ಒಂದು ಶೈಲಿಯ ಗಾಯಕರು. ’ಮೊಹಮ್ಮದ್ ರಫಿ,’ ಇನ್ನೊಂದು ತರಹ. ಮತ್ತೆ ’ಮನ್ನಾಡೆ’, ಹಿಂದೂಸ್ತಾನಿ ಸಂಗೀತದ ಜಾಡನ್ನು ಆಧರಿಸಿ ಹಲವಾರು ಹಾಡುಗಳನ್ನು ಹಾಡಿದ್ದಾರೆ, ’ಏ ಭಾಯ್ ಝರ ದೇಖ್ ಕೆ ಚಲೊ’, ಗೀತೆ, ರಾಜ್ ಕಪೂರ್ ರವರ ಕಾಲದ್ದು. ಆದರೆ ಅದನ್ನು ಮನ್ನಾಡೆ ಹಾಡಿದ ರೀತಿ ಅತ್ಯಂತ ರೋಚಕವಾದದ್ದು. ಆ ಹಾಡಿನಲ್ಲಿ ತಮ್ಮೆಲ್ಲಾ ಭಾವನೆ ಸಂವೇದನೆಗಳನ್ನು ತುಂಬಿ, ರಾಜಕಪೂರ್ ರವರ ಪಾತ್ರಕ್ಕೆ ತುಂಬು-ಪೋಷಣೆ ನೀಡಿದ್ದಾರೆ. ಬಹುಶಃ ಆ ಹಾಡು ಅವರಲ್ಲದೆ ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಭಾವ ಆ ಗೀತೆಯಲ್ಲಡಗಿದೆ.

’ಪಡೋಸನ್’ ಚಿತ್ರದ ’ಏಕ್ ಚತುರ ನಾರ್,’ ’ಆಶೀರ್ವಾದ್’ ಚಿತ್ರದ ’ಪೂಛೋನ ಕೈಸೆ’, ಮತ್ತು ’ಯೆ ಮೆರೆ ಪ್ಯಾರ ವತನ್’ ’ಯೇ ದೋಸ್ತಿ, ಹಮ್ ನಹಿ ಛೋಡೇಂಗೆ’, ಗಳನ್ನು ಹಾಡಿ ಹಿಂದಿಚಿತ್ರದ-ಸಿನಿ-ರಸಿಕರ ಮನವನ್ನು ತಣಿಸಿದ ’ಮನ್ನಾಡೆ’ ಯವರಿಗೆ ಸಂಗೀತದ ಬಗ್ಗೆ ತೀವ್ರ ಆಸಕ್ತಿ, ಹಾಗೂ ಪ್ರೇಮ. ತಮ್ಮ ಬಾಲ್ಯದ ದಿನಗಳಲ್ಲಿ ಗೆಳೆಯರ ಮುಂದೆ ಬೆಂಚಿನ ಮಣೆಯನ್ನು ಕುಟ್ಟಿ, ಧ್ವನಿಹೊರಡಿಸಿ ರಂಜಿಸುತ್ತಿದ್ದರು. ಕಲ್ಕತ್ತದ ಪ್ರಸಿದ್ಧ ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ವಿದ್ಯಾಸಾಗರ್ ಕಾಲೇಜ್ ನಲ್ಲಿ ವ್ಯಾಸಂಗದ ಸಮಯದಲ್ಲಿ ಸತತವಾಗಿ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ೩ ವರ್ಷ ಪ್ರಥಮ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದರು. ಬೊಂಬಾಯಿನ ’ಬಾಲಿವುಡ್ ಚಿತ್ರರಂಗ’ದಲ್ಲಿ ವರ್ಚಸ್ಸನ್ನು ಹೊಂದಿದ್ದ ಅನೇಕ ನಟರು, ನಿರ್ದೇಶಕರು, ಸಂಗೀತಗಾರರು ತುಂಬಿಕೊಂಡಿದ್ದರು. ಅವರಲ್ಲಿ ಪ್ರಮುಖರು ಸಂಗೀತ ಸಂಯೋಜಕ, ಶ್ರೀ ಕೃಷ್ಣ ಚಂದ್ರ ಡೇ. ಅವರು, ಆಗಿನ (K. C. De), ಮೇರು ಸಂಗೀತಕಾರರನ್ನು ಮನ್ನಾಡೆ ಯವರಿಗೆ ಪರಿಚಯಿಸಿದರು. ’ಉಸ್ತಾದ್ ದಬೀರ್ ಖಾನ್’, ’ಉಸ್ತಾದ್ ಅಮ ನ್ ಆಲಿ ಖಾನ್’, ’ಉಸ್ತಾದ್ ಅಬ್ದುಲ್ ರೆಹ್ಮಾನ್ ಖಾನ್’, ಮುಂತಾದವರು. ಇಂತಹ ಹೆಸರುವಾಸಿಯಾಗಿದ್ದ ಗುರುಗಳ ಶಿಕ್ಷಣದಿಂದ ಅವರು ಒಳ್ಳೆಯ ಕಂಠಶ್ರೀಯನ್ನು ಹೊಂದಿದ್ದು, ಚಿತ್ರ ರಸಿಕರ ಮನವನ್ನು ಗೆದ್ದಿದ್ದರು.

ಕನ್ನಡ ಚಿತ್ರಗೀತೆ ಹಾಗು ಕರ್ನಾಟಕದ ನಂಟು

೧೯೬೦ರ ದಶಕದಲ್ಲಿ ಬಿಡುಗಡೆಯಾದ ಉದಯಕುಮಾರ್, ಜಯಂತಿ ನಟಿಸಿದ ಕಲಾವತಿ ಚಿತ್ರದಲ್ಲಿ ರಾಷ್ಟ್ರ ಕವಿ ಕುವೆಂಪು ವಿರಚಿತ 'ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ' ಕವಿತೆಯನ್ನು ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಹಾಡಿದ್ದರು. ಈಗಲು ಸಹ ಆಕಾಶವಾಣಿಯಲ್ಲಿ ಪ್ರಸಾರವಾಗುವ ಈ ಗೀತೆ ಬಹಳ ಜನಪ್ರಿಯವಾಗಿದೆ. ೬೦-೭೦ರ ದಶಕದಲ್ಲಿ ಇನ್ನು ಕೆಲವು ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದರು. ಮನ್ನಾಡೇ- ‘ಜಯತೆ ಜಯತೆ…’ ಸೇರಿದಂತೆ ಕನ್ನಡದಲ್ಲಿ ಒಟ್ಟು ಏಳು ಹಾಡುಗಳನ್ನು ಹಾಡಿದ್ದಾರೆ. ಅವುಗಳೆಂದರೆ ‘ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಜಗವಿದು ಸೋಜಿಗ’, ‘ನೀರೆ ನೀನು ಬಾರೆ’, ಕಲಾವತಿ ಚಿತ್ರದ ‘ಕುಹು ಕುಹೂ ಎನ್ನುತ ಹಾಡುವ…’ (ರಚನೆ: ಕುವೆಂಪು), ಮಾರ್ಗದರ್ಶಿ ಚಿತ್ರದ ಎರಡು ಹಾಡುಗಳು .ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲೇ ವಾಸಿಸುತ್ತಿದ್ದಾರೆ. ಬೆಂಗಳೂರು ನಿವಾಸಿ ಮನ್ನಾಡೆ ಇತ್ತೀಚೆಗೆ ಕನ್ನಡದ ಗಾಯಕಿ ದಿವ್ಯಾ ರಾಘವನ್ ಜೊತೆ ದುಬೈ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದಾರೆ.

ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ

ಮನ್ನಾಡೆಯವರು ಬೊಂಬಾಯಿನ, ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದು, ೧೯೪೩ ರಲ್ಲಿ ’ತಮನ್ನಾ’ ಎಂಬ ಚಿತ್ರದ, ಅವರ ಸೋದರ ಮಾವ, 'ಕೆ.ಸಿ.ಡೇ' ರವರ ಸಂಗೀತ ಸಂಯೋಜನೆಯ ಮೂಲಕ, ಆ ದಿನಗಳ ಮೇರು ಸಂಗೀತಜ್ಞೆ, ಸುರೈಯ ಜೊತೆ ಹಾಡಿದರು. ಆ ಚಿತ್ರದ ಗೀತೆಗಳು ಒಳ್ಳೆಯ ಹೆಸರು ಮಾಡಿದವು. ’ಮೊಹಮ್ಮದ್ ರಫಿ’, ’ಕಿಶೋರ್ ಕುಮಾರ್’ ಮುಂತಾದ ಹಾಡುಗಾರ ಜೊತೆಯಲ್ಲಿ ಹಾಡಿನಲ್ಲಿ ಹೆಚ್ಚು ರೋಮ್ಯಾಂಟಿಕ್ ರೀತಿಯಲ್ಲಿ ಹಾಡುವುದಿಲ್ಲ ಎನ್ನುವ ಅಪವಾದವಿತ್ತು. ಒಟ್ಟು ಹಾಡಿದ ಗೀತೆಗಳ ಸಂಖ್ಯೆ, ೩,೫೦೦ ಕ್ಕು ಮಿಗಿಲು. ’ಬಂಗಾಳಿ’, ’ಮರಾಠಿ’, ಮಲಯಾಳಂ ಚಿತ್ರ ’'ಚೆಮ್ಮೀನ್'’ನಲ್ಲಿಯೂ ಅವರು ಒಂದು ಗೀತೆಯನ್ನು ಹಾಡಿದ್ದಾರೆ.

  • ’ತಮನ್ನ’ (೧೯೪೨)
  • ’ರಾಮರಾಜ್ಯ’ (೧೯೪೩)
  • ’ಜ್ವಾರ್ ಭಾಟ’ (೧೯೪೪)
  • ’ಕವಿತ’ (೧೯೪೪)
  • ’ಮಹಾಕವಿ ಕಾಲಿದಾಸ್’ (೧೯೪೪)
  • ’ವಿಕ್ರಮಾದಿತ್ಯ’ (೧೯೪೫)
  • ’ಪ್ರಭು ಕ ಘರ್’ (೧೯೪೬)
  • ’ವಾಲ್ಮೀಕಿ’ (೧೯೪೬)
  • ’ಗೀತ್ ಗೊಬಿಂದ್’ (೧೯೪೭)
  • ’ಆವಾರ’ (೧೯೫೧)
  • ’ದೊ ಬಿಘ’ ಝಮೀನ್ (೧೯೫೩)
  • ’ಹಮ್ ದರ್ದ್’ (೧೯೫೩)
  • ’ಪರಿನೀತ’ (೧೯೫೩)
  • ’ಚಿತ್ರಾಂಗದ’ (೧೯೫೩)
  • ’ಬೂಟ್ ಫಾಲಿಶ್’ (೧೯೫೪)
  • ’ಶ್ರೀ ೪೨೦ (೧೯೫೫)
  • ’ಕಾಬುಲಿವಾಲ’ (೧೯೬೧)
  • ’ವಕ್ತ್’ (೧೯೬೫)
  • ’ಲವ್ ಇನ್ ಟೊಕಿಯೊ’ (೧೯೬೬)
  • ’ತೀಸ್ರಿ ಕಸಮ್’ (೧೯೬೬)
  • ’ಪ್ಯಾರ್ ಕಿಯೆ ಜಾ’ (೧೯೬೬)
  • ’ಉಪ್ ಕಾರ್’ (೧೯೬೭)
  • ’ರಾತ್ ಔರ್ ದಿನ್’ (೧೯೬೭)
  • ’ಆಮ್ನೆ ಸಾಮ್ನೆ’ (೧೯೬೭)
  • ’ಪಾಲ್ಕಿ’
  • ’ನವಾಬ್ ಸಿರಾಜ್ ದೌಲ’
  • ’ಬೂಂದ್ ಜೊ ಬನ್ ಗಯ ಮೋತಿ’ (೧೯೬೭)
  • ’ಫಡೊಸನ್’ (೧೯೬೮)
  • ’ಮೇರೆ ಹುಝೂರ್’ (೧೯೬೮)
  • ’ನೀಲ್ ಕಮಲ್’ (೧೯೬೮)
  • ’ರ‍ಾಮ್ ಔರ್ ರ‍ಹೀಮ್’ (೧೯೬೮)
  • ’ಏಕ್ ಫೂಲ್ ದೊ ಮಾಲಿ’ (೧೯೬೯)
  • ’ಚಂದಾ ಔರ್ ಬಿಜ್ಲಿ’ (೧೯೬೯)
  • ’ಜ್ಯೋತಿ’ (೧೯೬೯)
  • ’ಮೇರೆ ನಾಮ್ ಜೋಕರ್’ (೧೯೭೦)
  • ’ಆನಂದ್ (೧೯೭೦)
  • ’ಜೋಹರ್ ಮೆಹ್ಮೂದ್ ಇನ್ ಹಾಂಗ್ ಕಾಂಗ್’ (೧೯೭೧)
  • ’ಜಾನೆ ಅಂಜಾನೆ’ (೧೯೭೧)
  • ’ಲಾಲ್ ಪತ್ಥರ್’ (೧೯೭೧)
  • ’ಬುಡ್ಢ ಮಿಲ್ ಗಯ’ (೧೯೭೧)
  • ’ಪರಾಯ ಧನ್’ (೧೯೭೧)
  • ’ರೇಷ್ಮ ಔರ್ ಶೆರ’ (೧೯೭೧)
  • ’ಚೆಮ್ಮೀನ್’ (ಮಲಯಾಳಮ್)
  • ’ಬಾವರ್ಚಿ’ (೧೯೭೨)
  • ’ಸೀತ ಔರ್ ಗೀತ’ (೧೯೭೨)
  • ’ಶೋರ್’ (೧೯೭೨)
  • ’ಝಿಂದಗಿ ಝಿಂದಗಿ’ (೧೯೭೨)
  • ’ಆವಿಷ್ಕಾರ್’ (೧೯೭೩)
  • ’ದಿಲ್ ಕಿ ರ‍ಾಹೆ’ (೧೯೭೩)
  • ’ಹಿಂದೂಸ್ತಾನ್ ಕಿ ಕಸಮ್’ (೧೯೭೩)
  • ’ಸಂಪೂರ್ಣ ರಾಮಾಯಣ್’ (೧೯೭೩)
  • ’ಸೌದಾಗರ್’ (೧೯೭೩)
  • ’ಝಂಜೀರ್’ (೧೯೭೩)
  • ’ಬಾಬಿ’ (೧೯೭೩)
  • ’ರ‍ೆಶಮ್ ಕಿ ಡೊರಿ’ (೧೯೭೪)
  • ’ಶೋಲೆ’ (೧೯೭೫)
  • ’ಉಸ್ ಪಾರ್’ (೧೯೭೪)
  • ’ಹಿಮಾಲಯ ಸೆ ಊಂಚ’ (೧೯೭೫)
  • ’ಸನ್ಯಾಸಿ’ (೧೯೭೫)
  • ’ಪೊಂಗ ಪಂಡಿತ್’ (೧೯೭೫)
  • ’ಜೈ ಸಂತೋಷಿ ಮಾ’ (೧೯೭೫)
  • ’ದಾಸ್ ಮ್ನಾಂಬತಿ’ (೧೯೭೬)
  • ’ಮೆಹ್ಬೂಬ’ (೧೯೭೬)
  • ’ಆಮರ್ ಅಕ್ಬರ್ ಆಂಥೊನಿ’ (೧೯೭೭)
  • ’ಆನುರೊಧ್’ (೧೯೭೭)
  • ’ಮೀನೂ’ (೧೯೭೭)
  • ’ಮೈ ತುಳ್ಸಿ ತೆರೆ ಆಂಗನ್ ಕಿ’ (೧೯೭೮)
  • ’ಸತ್ಯಮ್ ಶಿವಂ ಸುಂದರಮ್’ (೧೯೭೮)
  • ’ಜುರ್ಮಾನ’ (೧೯೭೮)
  • ’ಅಬ್ದುಲ್ಲಾ’ (೧೯೮೦)
  • ’ಚೋರೋಂಕಿ ಕಾರಾತ್’
  • ’ಕ್ರಾಂತಿ’
  • ’ಕರ್ಝ್’ (೧೯೮೦)
  • ’ಲಾವಾರಿಸ್’ (೧೯೮೧)
  • ’ಪ್ರಭಾರ್’ (೧೯೯೦)
  • ’ಗುರಿಯ’ (೧೯೯೭)
  • ’ಉಮರ್’ (೨೦೦೮)

'ಮನ್ನಾಡೆ'ಯವರ, 'ಜೀವನಚರಿತ್ರೆ' ಕೆಲವು ಭಾಷೆಗಳಲ್ಲಿ

ತಮ್ಮ ಜೀವನ ಚರಿತ್ರೆಯನ್ನು ಹಲವು ಭಾಷೆಗಳಲ್ಲಿ ಹೊರತರುತ್ತಿದ್ದಾರೆ.

  • ಇಂಗ್ಲೀಷ್ ನಲ್ಲಿ,’ಮೆಮೊರೀಸ್ ಕೇಮ್ ಅಲೈವ್,
  • ಹಿಂದಿಯಲ್ಲಿ,’ಯಾದೇಂ ಜೀ ಉಠಿ’,
  • ಮರಾಠಿಯಲ್ಲಿ, ’ಜಿಬೊನೇರ್ ಜಲ್ಸ್ ಘೋರೆ’

ಈಗಾಗಲೇ ಅವರ ಪುಸ್ತಕವನ್ನಾಧರಿಸಿ, ಒಂದು ’ಸಾಕ್ಷಿಚಿತ್ರ’ವೂ ಹೊರಹೊಮ್ಮಿದೆ.

ಮನ್ನಾಡೆಯವರ ವೈವಾಹಿಕ ಜೀವನ

’ಪ್ರಹಾರ್,’ ಎಂಬ ಚಿತ್ರಕ್ಕೆ ಸಂಗೀತವನ್ನು ಹಾಡುವತನಕ ಅವರು ಸಕ್ರಿಯವಾಗಿದ್ದರು. ೯೦ ವರ್ಷ ಹರೆಯದ ಮನ್ನಾಡೆ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅನೇಕ ’ಸ್ಟೇಜ್ ಶೋ’ ಹಾಗೂ ’ರಿಯಾಲಿಟಿ ಶೋ’ಗಳಲ್ಲಿ ತಪ್ಪದೆ ಭಾಗವಹಿಸುವ, ಮನ್ನಾಡೆ, ಈಗಲೂ ಸಂಗೀತವೆಂದರೆ ಬಹಳ ಇಷ್ಟಪಡುತ್ತಾರೆ. 'ಮನ್ನಾಡೆ'ಯವರು, ೧೯೫೬ ನೇ, ಡಿಸೆಂಬರ್, ೧೮ ರಂದು,ಕೇರಳದ ಮೂಲದ, 'ಸುಲೋಚನ ಕುಮಾರನ್' ರನ್ನು ಮದುವೆಯಾದರು. ಈ ದಂಪತಿಗಳಿಗೆ, 'ಶುರೋಮಾ', (ಅಕ್ಟೋಬರ್, ೧೯, ೧೯೫೬), ಹಾಗೂ 'ಸುಮಿತಾ', (ಜೂನ್, ೨೦, ೧೯೫೮), ಎಂಬ ಇಬ್ಬರು ಹೆಣ್ಣುಮಕ್ಕಳು.

ಮನ್ನಾಡೆಯವರಿಗೆ, ’ದಾದಾ ಸಾಹೇಬ್ ಫಾಲ್ಕೆ ಗೌರವ’

’ಪ್ರಬೋಧ್ ಚಂದ್ರ ಡೇ’, ಯವರನ್ನು ೨೦೦೭ ವರ್ಷದ ಸಾಲಿನ ’ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ,’ ಗೆ ಚುನಾಯಿಸಿದ್ದಾರೆ. ೯೦ ವರ್ಷದ ಹರೆಯದ ಮನ್ನಾಡೆಯವರಿಗೆ, ಇದು ಎಂದೋ ಸಲ್ಲಬೇಕಿತ್ತು.ಅವರಿಗೆ ’ಪದ್ಮಶ್ರೀ’, ’ಪದ್ಮ ಭೂಷಣ್’ ಹಾಗೂ ಅನೇಕ ಪ್ರಶಸ್ತಿಗಳು ಸಂದಿವೆ. ’ಫಾಲ್ಕೆ ಅವಾರ್ಡ್’ ಅವರ ಮುಡಿಗೆ ಒಂದು ಹೊಸ ಗರಿ ಸೇರಿಸಿದಂತಾಗಿದೆ. ಅಕ್ಟೋಬರ್ ೨೧ ರಂದು, ೫೫ ನೆಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಿನಿ-ಗಾಯಕ, ಮನ್ನಾಡೆ, ಬಾಲಿವುಡ್ ಚಿತ್ರ-ನಿರ್ಮಾಪಕ ಯಶ್ ಚೋಪ್ರಾ, ಸಹಿತ ಭಾರತೀಯ ಸಿನೆಮಾದ ಹಲವು ಪ್ರತಿಷ್ಟಿತರಿಗೆ, ರಾಷ್ಟ್ರಾಧ್ಯಕ್ಷೆ, 'ಶ್ರೀಮತಿ ಪ್ರತಿಭಾ ಪಾಟೀಲ್' ರವರು, ಪ್ರಶಸ್ತಿಗಳನ್ನು ಪ್ರದಾನಿಸಿದರು. ಅದರಲ್ಲಿ ಅತಿ ಪ್ರಮುಖವಾದದ್ದು, ೨೦೦೭ ರ ಸಾಲಿನ ಪ್ರತಿಷ್ಟಿತ, ’ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ. ರಾಷ್ಟ್ರಾಧ್ಯಕ್ಷೆ, ಶ್ರೀಮತಿ, ಪ್ರತಿಭಾ ಪಾಟೀಲ್, ಮನ್ನಾಡೆಯವರಿಗೆ, ಶಾಲುಹೊದಿಸಿ, ಚಿನ್ನದ ತಾವರೆಯನ್ನೂ, ೧೦ ಲಕ್ಷರೂಪಾಯಿಗಳ ನಗದು ಹಣವನ್ನೂ ನೀಡಿ ಗೌರವಿಸಿದರು.

ನಿಧನ

೯೪ ವರ್ಷದ ಪ್ರಾಯದ 'ಮನ್ನಾಡೆ'ಯವರು, ೨೦೧೩ ರ, ಅಕ್ಟೋಬರ್, ೨೪, ಗುರುವಾರದಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ಬಹಳ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹಲವು ಬಾರಿ ಆಸ್ಪತ್ರೆಗೆ ಸೇರಿಸಲ್ಪಟ್ಟು ಮತ್ತೆ ಮನೆಗೆ ವಾಪಸ್ಸಾಗಿದ್ದರು. ಆದರ ಈ ಬಾರಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮನ್ನಾಡೆಯವರ ಕಾಯಿಲೆ ಉಲ್ಬಣಿಸಿ, ಬೆಳಗಿನ ಜಾವ, ೩.೩೩ ಕ್ಕೆ ಕೊನೆಯುಸಿರೆಳೆದರು. ಮರಣದ ಸಮಯದಲ್ಲಿ ಅವರ ಪುತ್ರಿ,'ಶಮಿತಾ ದೇಬ್', ಮತ್ತು ಅಳಿಯ, 'ಜ್ಞಾನ್ ರಂಜನ್ ದೇಬ್' ಅವರ ಬಳಿ ಇದ್ದರು. ಪತ್ನಿ ಸುಲೋಚನ ಕ್ಯಾನ್ಸರ್ ನಿಂದಾಗಿ ೨೦೧೨ ರಲ್ಲಿ ನಿಧನರಾಗಿದ್ದರು. ಮನ್ನಾಡೆಯವರ ಅಂತಿಮ ಸಂಸ್ಕಾರವು, ಬೆಂಗಳೂರಿನ ಉಪನಗರವೊಂದಾದ ಹೆಬ್ಬಾಳದ ಸ್ಮಶಾನದಲ್ಲಿ ಸಕಲ ಗೌರವಗಳೊಂದಿಗೆ ೨೪ ರ, ಗುರುವಾರದ ದಿನದಂದೇ ನೆರವೇರಿತು.

ಕೊಂಡಿಗಳು

ಹೊರಗಿನ ಕೊಂಡಿಗಳು

Tags:

ಮನ್ನಾ ಡೆ ಕನ್ನಡ ಚಿತ್ರಗೀತೆ ಹಾಗು ಕರ್ನಾಟಕದ ನಂಟುಮನ್ನಾ ಡೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆಮನ್ನಾ ಡೆ ಮನ್ನಾಡೆಯವರ, ಜೀವನಚರಿತ್ರೆ ಕೆಲವು ಭಾಷೆಗಳಲ್ಲಿಮನ್ನಾ ಡೆ ಮನ್ನಾಡೆಯವರ ವೈವಾಹಿಕ ಜೀವನಮನ್ನಾ ಡೆ ಮನ್ನಾಡೆಯವರಿಗೆ, ’ದಾದಾ ಸಾಹೇಬ್ ಫಾಲ್ಕೆ ಗೌರವ’ಮನ್ನಾ ಡೆ ನಿಧನಮನ್ನಾ ಡೆ ಕೊಂಡಿಗಳುಮನ್ನಾ ಡೆ ಹೊರಗಿನ ಕೊಂಡಿಗಳುಮನ್ನಾ ಡೆಅಸ್ಸಾಮಿಭಾರತ

🔥 Trending searches on Wiki ಕನ್ನಡ:

ಗಾಳಿ/ವಾಯುಪೂನಾ ಒಪ್ಪಂದಭಾರತದಲ್ಲಿ ಪಂಚಾಯತ್ ರಾಜ್ಯೋಗ ಮತ್ತು ಅಧ್ಯಾತ್ಮಮಾನವನಲ್ಲಿ ನಿರ್ನಾಳ ಗ್ರಂಥಿಗಳುಸಂಪ್ರದಾಯಶ್ರೀ ರಾಮಾಯಣ ದರ್ಶನಂನಾಲ್ವಡಿ ಕೃಷ್ಣರಾಜ ಒಡೆಯರುಭಾರತದಲ್ಲಿನ ಚುನಾವಣೆಗಳುಮಂತ್ರಾಲಯಹಿಂದೂ ಧರ್ಮಲಗೋರಿಸುಭಾಷ್ ಚಂದ್ರ ಬೋಸ್ಶಿಶುಪಾಲಕನ್ನಡ ರಾಜ್ಯೋತ್ಸವಕರ್ನಾಟಕ ವಿಧಾನ ಸಭೆಹಾಗಲಕಾಯಿರಕ್ತದೊತ್ತಡಬೆಳ್ಳುಳ್ಳಿವ್ಯವಹಾರಭಾರತದಲ್ಲಿ ಬಡತನಪ್ರೇಮಾವಿದ್ಯಾರಣ್ಯಕನ್ನಡ ಸಾಹಿತ್ಯಗೋಪಾಲಕೃಷ್ಣ ಅಡಿಗಕರ್ನಾಟಕದ ಮುಖ್ಯಮಂತ್ರಿಗಳುಶ್ರೀನಿವಾಸ ರಾಮಾನುಜನ್ಡ್ರಾಮಾ (ಚಲನಚಿತ್ರ)ಒಂದನೆಯ ಮಹಾಯುದ್ಧನಾಮಪದರಮ್ಯಾಸ್ವಾಮಿ ವಿವೇಕಾನಂದಪ್ರಜಾವಾಣಿಸ್ಟಾರ್‌ಬಕ್ಸ್‌‌ಸಂಸ್ಕೃತ ಸಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ಆಧುನಿಕ ವಿಜ್ಞಾನಕೊಡಗಿನ ಗೌರಮ್ಮಸುದೀಪ್ಆದಿಚುಂಚನಗಿರಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಶಿವರಾಮ ಕಾರಂತಬಿ. ಶ್ರೀರಾಮುಲುಕರ್ನಾಟಕ ಲೋಕಾಯುಕ್ತಪಂಚ ವಾರ್ಷಿಕ ಯೋಜನೆಗಳುಕನ್ನಡ ಸಾಹಿತ್ಯ ಸಮ್ಮೇಳನಸಮಾಜಶಾಸ್ತ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಾಸನ ಜಿಲ್ಲೆದಿಕ್ಕುಬಿ.ಎಫ್. ಸ್ಕಿನ್ನರ್ನಿರ್ವಹಣೆ ಪರಿಚಯಜಿ.ಎಸ್.ಶಿವರುದ್ರಪ್ಪಜೋಗಪ್ರಜ್ವಲ್ ರೇವಣ್ಣಪ್ಯಾರಾಸಿಟಮಾಲ್ರೇಣುಕಉಪನಯನಭಾರತೀಯ ಅಂಚೆ ಸೇವೆವರ್ಗೀಯ ವ್ಯಂಜನಅಸಹಕಾರ ಚಳುವಳಿಮಾಧ್ಯಮವಿಕ್ರಮಾರ್ಜುನ ವಿಜಯಭಾರತೀಯ ಸ್ಟೇಟ್ ಬ್ಯಾಂಕ್ಮೋಳಿಗೆ ಮಾರಯ್ಯನಾಡ ಗೀತೆಶಿಕ್ಷಣಕೋಟ ಶ್ರೀನಿವಾಸ ಪೂಜಾರಿಭಾರತದ ಚುನಾವಣಾ ಆಯೋಗಗೂಬೆಕರ್ನಾಟಕ ಸ್ವಾತಂತ್ರ್ಯ ಚಳವಳಿಅಂಟುಕನ್ನಡ ಸಂಧಿಕರ್ನಾಟಕದ ಸಂಸ್ಕೃತಿಇಂಡೋನೇಷ್ಯಾಅಕ್ಕಮಹಾದೇವಿ🡆 More