ಭೂಶಿರ

ಭೂಗೋಳ ಶಾಸ್ತ್ರದಲ್ಲಿ, ಭೂಶಿರ ಎಂದರೆ ಒಂದು ಜಲಸಮೂಹದಲ್ಲಿ, ಸಾಮಾನ್ಯವಾಗಿ ಸಮುದ್ರದೊಳಗೆ ವಿಸ್ತರಿಸುವ ದೊಡ್ಡ ಗಾತ್ರದ ಭೂಚಾಚು ಅಥವಾ ಚಾಚುಭೂಮಿ.

ಭೂಶಿರವು ಸಾಮಾನ್ಯವಾಗಿ ಕಡಲ ತೀರರೇಖೆಯ ದಿಕ್ಕಿನಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಇದರಿಂದ ಇವು ಸವೆತದ ನೈಸರ್ಗಿಕ ರೂಪಗಳಿಗೆ, ಮುಖ್ಯವಾಗಿ ಭರತದ ಕ್ರಿಯೆಗಳಿಗೆ ಒಳಗಾಗುವಂತೆ ಮಾಡುತ್ತವೆ. ಆದ್ದರಿಂದ ಭೂಶಿರಗಳು ತುಲನಾತ್ಮಕವಾಗಿ ಲಘು ಭೌಗೋಳಿಕ ಜೀವಿತಾವಧಿಯನ್ನು ಹೊಂದಿರುತ್ತವೆ. ಭೂಶಿರಗಳು ಹಿಮನದಿಗಳು, ಜ್ವಾಲಾಮುಖಿಗಳು, ಮತ್ತು ಸಮುದ್ರ ಮಟ್ಟದಲ್ಲಿನ ಬದಲಾವಣೆಗಳಿಂದ ರೂಪಗೊಳ್ಳಬಹುದು. ಈ ಪ್ರತಿಯೊಂದು ರೂಪಗೊಳ್ಳುವಿಕೆಯ ವಿಧಾನಗಳಲ್ಲಿ ಸವೆತವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೆಲವು ಸುಪರಿಚಿತವಾದ ಭೂಶಿರಗಳೆಂದರೆ ಭಾರತದಲ್ಲಿನ ಕನ್ಯಾಕುಮಾರಿ (ಕೇಪ್ ಕಾಮೊರಿನ್) (ಭಾರತದ ಮುಖ್ಯಭೂಭಾಗದ ತುತ್ತತುದಿಯಾದ ಇದು, ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ, ಹಾಗೂ ಹಿಂದೂ ಮಹಾಸಾಗರಗಳ ತ್ರಿಸಂಗಮದಲ್ಲಿ ಸ್ಥಿತವಾಗಿದೆ), ಇಂದಿರಾ ಪಾಯಿಂಟ್ (ಭಾರತದ ದಕ್ಷಿಣತಮ ಬಿಂದು, ಅಂಡಮಾನ್‍ನಲ್ಲಿ ಸ್ಥಿತವಾಗಿದೆ), ದಕ್ಷಿಣ ಆಫ಼್ರಿಕಾದ ಗುಡ್‍ಹೋಪ್ ಭೂಶಿರ ಇತ್ಯಾದಿ.

ಭೂಶಿರ
ಕಾಡ್ ಭೂಶಿರ ಮತ್ತು ಮ್ಯಾಸಚೂಸಿಟ್ಸ್ ಕರಾವಳಿಗೆ ದೂರದಲ್ಲಿರುವ ದ್ವೀಪಗಳು, ಅಂತರಿಕ್ಷದಿಂದ ನೋಡಿದಾಗ

ಬಾಹ್ಯ ಸಂಪರ್ಕಗಳು

What is a cape? Archived 2019-10-02 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಕನ್ಯಾಕುಮಾರಿಸಮುದ್ರ

🔥 Trending searches on Wiki ಕನ್ನಡ:

ಡಿ.ವಿ.ಗುಂಡಪ್ಪಸಾದರ ಲಿಂಗಾಯತಪಾಕಿಸ್ತಾನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಋಗ್ವೇದಕಲಬುರಗಿಸೆಸ್ (ಮೇಲ್ತೆರಿಗೆ)ಮಾದಕ ವ್ಯಸನನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದಲ್ಲಿ ಬಡತನಕರ್ನಾಟಕಎಲೆಕ್ಟ್ರಾನಿಕ್ ಮತದಾನವಲ್ಲಭ್‌ಭಾಯಿ ಪಟೇಲ್ಗರ್ಭಧಾರಣೆಶ್ಯೆಕ್ಷಣಿಕ ತಂತ್ರಜ್ಞಾನಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿನಚಿಕೇತಮಂಡಲ ಹಾವುಭಾರತದ ನದಿಗಳುಈಸೂರುಸಾಹಿತ್ಯಗಾದೆಭಾರತೀಯ ಸಂಸ್ಕೃತಿಭಾರತೀಯ ಭಾಷೆಗಳುರಾಜಧಾನಿಗಳ ಪಟ್ಟಿಪ್ರಾಥಮಿಕ ಶಿಕ್ಷಣತತ್ಪುರುಷ ಸಮಾಸತೆಲುಗುಕ್ರಿಕೆಟ್ಖಗೋಳಶಾಸ್ತ್ರಚಪ್ಪಾಳೆಲೆಕ್ಕ ಬರಹ (ಬುಕ್ ಕೀಪಿಂಗ್)ಪು. ತಿ. ನರಸಿಂಹಾಚಾರ್ನಾಗಸ್ವರಚುನಾವಣೆನಗರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿದೇವನೂರು ಮಹಾದೇವಜಯಂತ ಕಾಯ್ಕಿಣಿಭೂಕಂಪಸಂಸ್ಕೃತಹಲ್ಮಿಡಿಅಧಿಕ ವರ್ಷಜ್ಞಾನಪೀಠ ಪ್ರಶಸ್ತಿದಿವ್ಯಾಂಕಾ ತ್ರಿಪಾಠಿಸುದೀಪ್ಸ್ವಚ್ಛ ಭಾರತ ಅಭಿಯಾನಕರ್ನಾಟಕದ ಹಬ್ಬಗಳುಸಂಯುಕ್ತ ಕರ್ನಾಟಕಮಾನಸಿಕ ಆರೋಗ್ಯಕೊಡಗುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಚಿತ್ರದುರ್ಗ ಕೋಟೆವ್ಯಾಪಾರಸಮುದ್ರಗುಪ್ತಬಳ್ಳಾರಿರಾಧೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುವಿನಾಯಕ ದಾಮೋದರ ಸಾವರ್ಕರ್ಮಳೆಸರ್ವಜ್ಞಮೌರ್ಯ ಸಾಮ್ರಾಜ್ಯಪಂಜುರ್ಲಿಶ್ರುತಿ (ನಟಿ)ಪಠ್ಯಪುಸ್ತಕವಾದಿರಾಜರುಕ್ಯಾರಿಕೇಚರುಗಳು, ಕಾರ್ಟೂನುಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶಬ್ದಸ್ತ್ರೀರಾವಣಹಾವಿನ ಹೆಡೆಶಿವಪ್ಪ ನಾಯಕಕೋಟ ಶ್ರೀನಿವಾಸ ಪೂಜಾರಿಶಬ್ದ ಮಾಲಿನ್ಯಭಾರತದ ಇತಿಹಾಸಸುಭಾಷ್ ಚಂದ್ರ ಬೋಸ್🡆 More