ಕುಸ್ತಿಪಟು ಪ್ರೇಮ್ ನಾಥ್

ಪ್ರೇಮ್ ನಾಥ್ ಅವರು ಒಬ್ಬ ಒಲಿಂಪಿಕ್ ಕುಸ್ತಿಪಟು, ನಿರ್ವಾಹಕ, ತೀರ್ಪುಗಾರ ಮತ್ತು ಆಡಳಿತಾಧಿಕಾರಿ.

ಇವರು ಜುಲೈ ೧, ೧೯೫೧ ರಂದು ದೆಹಲಿಯಲ್ಲಿ ಜನಿಸಿದರು. ಪ್ರೇಮ್ ನಾಥ್ ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. ಅವರು ೧೯೭೪ ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ರಾಷ್ಟ್ರಪತಿ ಪದಕ ವಿಜೇತರಾದ ದೆಹಲಿಯ ನಿವೃತ್ತ ಪೋಲಿಸ್ ಅಧಿಕಾರಿಯಾಗಿದ್ದರು ಮತ್ತು ದೆಹಲಿಯಲ್ಲಿ ಕುಸ್ತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು.

ಪ್ರೇಮ್ ನಾಥ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ನಾಗರಿಕತ್ವಭಾರತ
ಜನನ೧ ಜುಲೈ ೧೯೫೧
ಮರಣ1 June 2015(2015-06-01) (aged 63)
ನವ ದೆಹಲಿ
ನಿವಾಸದೆಹಲಿ
ಆಲ್ಮ ಮಾಟರ್ಹಂಸರಾಜ್ ಕಾಲೇಜು, ದೆಹಲಿ ವಿಶ್ವವಿದ್ಯಾಲಯ
ಉದ್ಯೋಗಕ್ರೀಡೆಗಳು
ಸಕ್ರಿಯವಾಗಿದ್ದ ವರ್ಷಗಳು೧೯೬೦-೨೦೧೦
ಇತರ ಆಸಕ್ತಿಗಳುಕುಸ್ತಿ
Sport
ದೇಶಭಾರತ
ಕ್ರೀಡೆಕುಸ್ತಿ
ತೂಕ ವಿಭಾಗ೫೭
ಸ್ಪರ್ಧೆಗಳು(ಗಳು)೧೯೭೪ ರಲ್ಲಿ ಕಾಮನ್‍ವೆಲ್ತ್ ಗೇಮ್ಸ್, ನ್ಯೂಜಿಲೆಂಡ್
ತಂಡಭಾರತೀಯ ಕುಸ್ತಿ ಒಕ್ಕೂಟ
ತರಬೇತುದಾರರುಗುರು ಹನುಮಾನ್
ನಿವೃತ್ತಿದೆಹಲಿ ಪೋಲಿಸ್
Achievements and titles
ಕಾಮನ್‌ವೆಲ್ತ್ ಫ಼ೈನಲ್‌ಗಳು೧೯೭೪ರ ಕಾಮನ್‌ವೆಲ್ತ್ ಗೇಮ್ಸ್, ನ್ಯೂಜಿಲೆಂಡ್‌ನಲ್ಲಿ ಚಿನ್ನದ ಪದಕ ವಿಜೇತ.
ಕುಸ್ತಿಪಟು ಪ್ರೇಮ್ ನಾಥ್

ವೈಯಕ್ತಿಕ ಜೀವನ

ಪ್ರೇಮ್ ನಾಥ್ ಅವರು, ತರಬೇತುದಾರರಾದ ಗುರು ಹನುಮಾನ್ ಅವರಿಂದ ತರಬೇತಿ ಪಡೆದಿದ್ದಾರೆ. ಇವರು ಜೂನ್ ೧, ೨೦೧೫ ರಂದು ೬೪ ನೇ ವಯಸ್ಸಿನಲ್ಲಿ ಹಠಾತ್ತನೆ ಹೃದಯಾಘಾತದಿಂದ ನಿಧನ ಹೊಂದಿದರು. ಅಂತೆಯೇ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಾಧನೆಗಳು ಹಾಗೂ ಪ್ರಶಸ್ತಿಗಳು

ಕುಸ್ತಿಪಟು ಪ್ರೇಮ್ ನಾಥ್ 

ಪ್ರೇಮ್ ನಾಥ್ ಅವರು ೧೯೬೯ ರಲ್ಲಿ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ಆಡಿ ಖ್ಯಾತಿ ಪಡೆದರು. ಅಲ್ಲಿ ಅವರು ಚಿನ್ನದ ಪದಕವನ್ನು ಗೆದ್ದರು ಮತ್ತು ೧೯೭೦ ರ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ಸಾಧನೆಗಳನ್ನು ಪುನರಾವರ್ತಿಸಿದರು. ಆಲ್ ಇಂಡಿಯಾ ಇಂಟರ್ - ಯೂನಿವರ್ಸಿಟಿ ವ್ರೆಸ್ಲಿಂಗ್ ಚಾಂಪಿಯನ್‍ ಶಿಪ್‍ನಲ್ಲಿ (೧೯೭೧) ಚಿನ್ನದ ಪದಕ ಗೆದ್ದರು. ೧೯೭೦ ರಲ್ಲಿ ಮಾಸ್ಕೋ ವರ್ಲ್ಡ್ ಯೂನಿವರ್ಸಿಟಿ ಗೇಮ್ (ಯೂನಿವರ್ಸಿಡ್ಯಾಡ್) ನಲ್ಲಿ ಭಾರತೀಯ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದರು. ೧೯೭೨ ರಲ್ಲಿ ಪ್ರೇಮ್ ನಾಥ್ ಅವರು, ವಾರಣಾಸಿಯಲ್ಲಿನ ಬಾಂಟಮ್ ವೇಟ್‍ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

ಟೊಕಿಯೊದಲ್ಲಿನ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್‍ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲು ಅವರನ್ನು ಆಯ್ಕೆ ಮಾಡಲಾಯಿತು. ಅವರು ಅಲ್ಲಿ ಆರನೇ ಸ್ಥಾನ ಸಾಧಿಸಿದರು. ನಂತರ ಅವರು ೧೯೭೨ ರಲ್ಲಿ ಮ್ಯೂನಿಕ್ ಒಲಿಂಪಿಕ್ ಗೇಮ್ಸ್ (ಜರ್ಮನಿ) ನಲ್ಲಿ ಪಾಲ್ಗೊಂಡು, ಬಾಂಟಮ್ ವೇಟ್‍ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದರು. ೧೯೭೪ ರಲ್ಲಿ ಕ್ರೈಸ್ಟ್ಚರ್ಚ್ (ನ್ಯೂಜಿಲೆಂಡ್) ನಲ್ಲಿ ನಡೆದ ೧೦ ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಬಾಂಟಮ್ ವೇಟ್‍ನಲ್ಲಿ ಚಿನ್ನದ ಪದಕವನ್ನು ಪಡೆದರು. ೧೯೯೪ ರಲ್ಲಿ ಪ್ರೆಸಿಡೆಂಟ್ ಪೋಲಿಸ್ ಮೆಡಲ್‍ನ ಗೌರವಿಸುವ ಮೂಲಕ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ೧೯೭೨ ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ವೃತ್ತಿಜೀವನ

ಅರ್ಹತೆ ಪಡೆದ ತರಬೇತುದಾರರಾದ ಪ್ರೇಮನಾಥ್ ರವರು , ೧೯೮೦-೮೧ ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್, ಡಿಪ್ಲೊಮಾವನ್ನು ಜಾರಿಗೊಳಿಸಿದರು. ಅವರು ಯು.ಎಸ್.ಎ , ಕೆನಡಾ ಮತ್ತು ರಷ್ಯಾದಲ್ಲಿ ಕೋಚಿಂಗ್ ಶಿಬಿರದಲ್ಲಿ ಭಾಗವಹಿಸಿದರು. ೧೯೮೧ ರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೬ ಚಿನ್ನದ ಪದಕಗಳನ್ನು ಮತ್ತು ಬೆಳ್ಳಿ ಪದಕವನ್ನು ಗೆದ್ದ ಭಾರತದ ತಂಡಕ್ಕೆ ಪ್ರೇಮ್ ನಾಥ್ ತರಬೇತಿ ನೀಡಿದರು. ಇವರು ೧೯೮೨ ರಲ್ಲಿ IX ಏಶಿಯನ್ ಗೇಮ್ಸ್ನಲ್ಲಿ, ಭಾರತೀಯ ತಂಡಕ್ಕೆ ತರಬೇತಿ ನೀಡಿದರು. ೧೯೮೯ ರಲ್ಲಿ ಮಾಲ್ಟಾದಲ್ಲಿ ನಡೆದ ಕಾಮನ್‍ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಭಾರತೀಯ ಕುಸ್ತಿ ತಂಡವು ತಂಡದ ಚಾಂಪಿಯನ್ಶಿಪ್ ಗೆದ್ದಿತು. ಆಗ ಇವರು ಆ ತಂಡದ ವ್ಯವಸ್ಥಾಪಕರಾಗಿದ್ದರು.

ಅವರು ಹಂಗೇರಿಯಲ್ಲಿರುವ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ಮತ್ತು ಇರಾನ್ನಲ್ಲಿರುವ ಇಂಟರ್ನ್ಯಾಷನಲ್ ವ್ರೆಸ್ಲಿಂಗ್ ಟೂರ್ನಮೆಂಟ್‍ಗೆ ತೀರ್ಪುಗಾರರಾಗಿ ಹೋದರು. ದೆಹಲಿಯ ಪೊಲೀಸ್ ಸಹಾಯಕ ಕಮೀಷನರ್ ಆಗಿರುವ ಪ್ರೇಮ್ ನಾಥ್ ರವರು, ನಂತರ ಅಲ್ಲಿಯ ದೆಹಲಿ ಪೊಲೀಸ್ ಠಾಣೆಯಲ್ಲಿ ನಿವೃತ್ತರಾದರು. ಇವರು ದೆಹಲಿಯಲ್ಲಿ ೧೯೮೨ ರ IX ಏಷ್ಯನ್ ಗೇಮ್ಸ್ನಲ್ಲಿ ವಿಶೇಷ ಡ್ಯೂಟಿ (ವ್ರೆಸ್ಲಿಂಗ್) ಅಧಿಕಾರಿಯಾಗಿದ್ದರು. ಅವರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಗೌರವಾನ್ವಿತ ಖಜಾಂಚಿಯಾಗಿದ್ದರು.


ಉಲ್ಲೇಖಗಳು

ಬಾಹ್ಯಕೊಂಡಿಗಳು

Tags:

ಕುಸ್ತಿಪಟು ಪ್ರೇಮ್ ನಾಥ್ ವೈಯಕ್ತಿಕ ಜೀವನಕುಸ್ತಿಪಟು ಪ್ರೇಮ್ ನಾಥ್ ಸಾಧನೆಗಳು ಹಾಗೂ ಪ್ರಶಸ್ತಿಗಳುಕುಸ್ತಿಪಟು ಪ್ರೇಮ್ ನಾಥ್ ವೃತ್ತಿಜೀವನಕುಸ್ತಿಪಟು ಪ್ರೇಮ್ ನಾಥ್ ಉಲ್ಲೇಖಗಳುಕುಸ್ತಿಪಟು ಪ್ರೇಮ್ ನಾಥ್ ಬಾಹ್ಯಕೊಂಡಿಗಳುಕುಸ್ತಿಪಟು ಪ್ರೇಮ್ ನಾಥ್en:Christchurchen:Commonwealth Wrestling Championshipsen:Freestyle wrestlingಒಲಂಪಿಕ್ ಕ್ರೀಡಾಕೂಟದೆಹಲಿ ಪೊಲೀಸ್‌

🔥 Trending searches on Wiki ಕನ್ನಡ:

ಬ್ರಹ್ಮಅ.ನ.ಕೃಷ್ಣರಾಯರಾಮಾಯಣಲೆಕ್ಕ ಬರಹ (ಬುಕ್ ಕೀಪಿಂಗ್)ಜಯಂತ ಕಾಯ್ಕಿಣಿಆರತಿಅಂತಿಮ ಸಂಸ್ಕಾರಮಿಥುನರಾಶಿ (ಕನ್ನಡ ಧಾರಾವಾಹಿ)ದುಶ್ಯಲಾಸೂರ್ಯ ಗ್ರಹಣಭಗವದ್ಗೀತೆದಶಾವತಾರಡ್ರಾಮಾ (ಚಲನಚಿತ್ರ)ಸಂಸ್ಕೃತ ಸಂಧಿಜೀನುಮೂಕಜ್ಜಿಯ ಕನಸುಗಳು (ಕಾದಂಬರಿ)ಅಮ್ಮಕರ್ನಾಟಕದ ಸಂಸ್ಕೃತಿಯಮಅಮೇರಿಕ ಸಂಯುಕ್ತ ಸಂಸ್ಥಾನಭಾರತ ರತ್ನಭಾರತದ ಉಪ ರಾಷ್ಟ್ರಪತಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಶಾಂತಲಾ ದೇವಿಗೊಮ್ಮಟೇಶ್ವರ ಪ್ರತಿಮೆಛಂದಸ್ಸುತಂತ್ರಜ್ಞಾನಫೇಸ್‌ಬುಕ್‌ದಾವಣಗೆರೆಮಹಾತ್ಮ ಗಾಂಧಿಉಚ್ಛಾರಣೆಶ್ರೀ ರಾಘವೇಂದ್ರ ಸ್ವಾಮಿಗಳುಕರ್ನಾಟಕ ಲೋಕಸೇವಾ ಆಯೋಗವೇಶ್ಯಾವೃತ್ತಿಸ್ತ್ರೀಕರಗ (ಹಬ್ಬ)ರೇಡಿಯೋಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹಳೇಬೀಡುಸ್ವಚ್ಛ ಭಾರತ ಅಭಿಯಾನಮಾನವನ ವಿಕಾಸಅಶ್ವತ್ಥಮರಉಪಯುಕ್ತತಾವಾದ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಮೂಢನಂಬಿಕೆಗಳುರಾಜ್ಯಸಭೆಸಾದರ ಲಿಂಗಾಯತಏಕರೂಪ ನಾಗರಿಕ ನೀತಿಸಂಹಿತೆಪಾಲಕ್ದ್ವಿರುಕ್ತಿಬಿಳಿಗಿರಿರಂಗನ ಬೆಟ್ಟಶಬ್ದಮಣಿದರ್ಪಣಸರಾಸರಿ೧೬೦೮ಬಿ. ಎಂ. ಶ್ರೀಕಂಠಯ್ಯಖ್ಯಾತ ಕರ್ನಾಟಕ ವೃತ್ತಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮತದಾನಸಂಸ್ಕೃತಕಲ್ಯಾಣ್ಕನ್ನಡ ಛಂದಸ್ಸುನ್ಯೂಟನ್‍ನ ಚಲನೆಯ ನಿಯಮಗಳುಪ್ರಿನ್ಸ್ (ಚಲನಚಿತ್ರ)ಕರ್ನಾಟಕ ಹೈ ಕೋರ್ಟ್ಮಾನವ ಅಭಿವೃದ್ಧಿ ಸೂಚ್ಯಂಕಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂಸಾಮಾಜಿಕ ಸಮಸ್ಯೆಗಳುಸಂವಿಧಾನಶಿರ್ಡಿ ಸಾಯಿ ಬಾಬಾಮಾದಕ ವ್ಯಸನಮಳೆನೀರು ಕೊಯ್ಲುಕೊಡಗಿನ ಗೌರಮ್ಮಕರ್ನಾಟಕದ ತಾಲೂಕುಗಳುಮಾನವ ಸಂಪನ್ಮೂಲ ನಿರ್ವಹಣೆಸ್ಯಾಮ್ ಪಿತ್ರೋಡಾಚಿನ್ನಮಾಸ್ತಿ ವೆಂಕಟೇಶ ಅಯ್ಯಂಗಾರ್🡆 More