ನಸುಗೆಂಪು

ನಸುಗೆಂಪು ಎಂದರೆ ತೆಳು ಕೆಂಪು ಬಣ್ಣ.

ಯೂರೋಪ್ ಮತ್ತು ಅಮೇರಿಕದಲ್ಲಿನ ಸಮೀಕ್ಷೆಗಳ ಪ್ರಕಾರ, ನಸುಗೆಂಪು ಬಣ್ಣವನ್ನು ಬಹುತೇಕವೇಳೆ ಲಾವಣ್ಯ, ವಿನಮ್ರತೆ, ಸೂಕ್ಷ್ಮತೆ, ಮೃದುತ್ವ, ಮಾಧುರ್ಯ, ಬಾಲ್ಯ, ಸ್ತ್ರೀತ್ವ ಮತ್ತು ಪ್ರಣಯ ಪ್ರವೃತ್ತಿಯೊಂದಿಗೆ ಸಂಬಂಧಿಸಲಾಗುತ್ತದೆ. ನಸುಗೆಂಪು ಮತ್ತು ಬಿಳಿ ಬಣ್ಣದ ಸಂಯೋಜನೆಯನ್ನು ಪವಿತ್ರತೆ ಮತ್ತು ಮುಗ್ಧತೆಯೊಂದಿಗೆ ಸಂಬಂಧಿಸಲಾಗುತ್ತದೆ, ಮತ್ತು ನಸುಗೆಂಪು ಹಾಗೂ ಕಪ್ಪು ಬಣ್ಣದ ಸಂಯೋಜನೆಯು ಕಾಮಪ್ರವೃತ್ತಿ ಮತ್ತು ಸೆಳೆತದೊಂದಿಗೆ ಸಂಬಂಧ ಹೊಂದಿದೆ.

ನಸುಗೆಂಪು

ಸೂರ್ಯನ ಬಿಳಿ ಬೆಳಕಿನ ಕಿರಣವು ವಾತಾವರಣದ ಮೂಲಕ ಚಲಿಸಿದಾಗ, ಕೆಲವು ಬಣ್ಣಗಳು ವಾಯು ಅಣುಗಳು ಮತ್ತು ವಾಯುಗಾಮಿ ಕಣಗಳಿಂದ ಕಿರಣದಿಂದ ಹೊರಗೆ ಚೆದುರಿಬಿಡುತ್ತವೆ. ಇದನ್ನು ರೇಲಿ ಚೆದುರುವಿಕೆ ಎಂದು ಕರೆಯಲಾಗುತ್ತದೆ. ನೀಲಿ ಮತ್ತು ಹಸಿರಿನಂತಹ ಕಡಿಮೆ ತರಂಗಾಂತರದ ಬಣ್ಣಗಳು ಹೆಚ್ಚು ಪ್ರಬಲವಾಗಿ ಚೆದುರುತ್ತವೆ ಮತ್ತು ಅಂತಿಮವಾಗಿ ಕಣ್ಣನ್ನು ತಲುಪುವ ಬೆಳಕಿನಿಂದ ತೆಗೆಯಲ್ಪಡುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ವಾತಾವರಣದ ಮೂಲಕ ಕಣ್ಣಿಗೆ ತಲುಪುವ ಸೂರ್ಯನ ಬೆಳಕಿನ ಮಾರ್ಗವು ಅತ್ಯಂತ ಉದ್ದವಾಗಿರುವಾಗ, ಕೆಂಪು ಮತ್ತು ಬಿಳಿ ಘಟಕಗಳು ಬಹುತೇಕ ಸಂಪೂರ್ಣವಾಗಿ ತೆಗೆಯಲ್ಪಡುತ್ತವೆ, ಮತ್ತು ಹೆಚ್ಚು ಉದ್ದನೆಯ ತರಂಗಾಂತರದ ಕಿತ್ತಳೆ, ಕೆಂಪು ಮತ್ತು ನಸುಗೆಂಪು ಬೆಳಕು ಉಳಿಯುತ್ತದೆ. ಉಳಿದಿರುವ ನಸುಗೆಂಪು ಸೂರ್ಯನ ಬೆಳಕು ಕೂಡ ಮೋಡದ ಹನಿಗಳು ಮತ್ತು ಇತರ ತುಲನಾತ್ಮಕವಾಗಿ ದೊಡ್ಡ ಕಣಗಳಿಂದ ಚೆದುರಲ್ಪಡಬಹುದು. ಇವು ದಿಗಂತದ ಮೇಲಿನ ಆಕಾಶಕ್ಕೆ ನಸುಗೆಂಪು ಅಥವಾ ಕೆಂಪು ಹೊಳಪನ್ನು ನೀಡುತ್ತದೆ.

ನಸುಗೆಂಪು ಹೂಗಳ ಅತ್ಯಂತ ಸಾಮಾನ್ಯ ಬಣ್ಣಗಳಲ್ಲಿ ಒಂದು; ಇದು ಪರಾಗಸ್ಪರ್ಶಕ್ಕೆ ಅಗತ್ಯವಾದ ಕೀಟಗಳು ಮತ್ತು ಪಕ್ಷಿಗಳನ್ನು ಆಕರ್ಷಿಸುವ ಮತ್ತು ಬಹುಶಃ ಪರಭಕ್ಷಕರನ್ನು ತಡೆಗಟ್ಟುವ ಕಾರ್ಯಮಾಡುತ್ತದೆ. ಈ ಬಣ್ಣವು ಆ್ಯಂಥೊಸೈಯನಿನ್‍ಗಳೆಂದು ಕರೆಯಲ್ಪಡುವ ನೈಸರ್ಗಿಕ ವರ್ಣದ್ರವ್ಯಗಳಿಂದ ಬರುತ್ತದೆ. ಇವು ರಾಸ್‍ಬೆರಿಗಳಿಗೆ ಕೂಡ ನಸುಗೆಂಪು ಬಣ್ಣವನ್ನು ಒದಗಿಸುತ್ತವೆ.

ಮುಂಚಿನ ನಸುಗೆಂಪು ಕಟ್ಟಡಗಳನ್ನು ಸಾಮಾನ್ಯವಾಗಿ ಇಟ್ಟಿಗೆ ಅಥವಾ ಮರಳುಗಲ್ಲಿನಿಂದ ಕಟ್ಟಲಾಗುತ್ತಿತ್ತು. ಮರಳುಗಲ್ಲು ತನ್ನ ತಿಳಿ ಗೆಂಪು ಬಣ್ಣವನ್ನು ಹೆಮಟೈಟ್ ಅಥವಾ ಕಬ್ಬಿಣದ ಅದಿರಿನಿಂದ ತೆಗೆದುಕೊಳ್ಳುತ್ತದೆ. ನಸುಗೆಂಪು ಮತ್ತು ಇತರ ಮಂದಪ್ರಕಾಶದ ಬಣ್ಣಗಳ ಸುವರ್ಣ ಯುಗವಾದ ೧೮ನೇ ಶತಮಾನದಲ್ಲಿ ಯೂರೋಪ್‍ನಾದ್ಯಂತ ನಸುಗೆಂಪು ಮಹಲುಗಳು ಮತ್ತು ಇಗರ್ಜಿಗಳನ್ನು ಕಟ್ಟಲಾಯಿತು. ಹೆಚ್ಚು ಆಧುನಿಕ ನಸುಗೆಂಪು ಕಟ್ಟಡಗಳು ಸಾಮಾನ್ಯವಾಗಿ ಪರದೇಶದ್ದಂತೆ ಕಾಣಲು ಅಥವಾ ಗಮನವನ್ನು ಸೆಳೆಯಲು ನಸುಗೆಂಪು ಬಣ್ಣವನ್ನು ಬಳಸುತ್ತವೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕಾಂತಾರ (ಚಲನಚಿತ್ರ)ಸಂವಹನಮೈಸೂರು ದಸರಾವಿಧಾನ ಸಭೆವಿಜ್ಞಾನಜಲ ಮಾಲಿನ್ಯಕರ್ನಾಟಕ ವಿಧಾನ ಪರಿಷತ್ಹೊಂಗೆ ಮರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತೀಯ ಸ್ಟೇಟ್ ಬ್ಯಾಂಕ್ಸಂಪ್ರದಾಯಶನಿನಾರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಫುಟ್ ಬಾಲ್ಶ್ಯೆಕ್ಷಣಿಕ ತಂತ್ರಜ್ಞಾನಬಿ. ಶ್ರೀರಾಮುಲುದಿಕ್ಸೂಚಿಚಿಂತಾಮಣಿಚಂದ್ರಶೇಖರ ಕಂಬಾರಹನುಮ ಜಯಂತಿಮಂಗಳೂರುಸ್ತ್ರೀದೇವರ/ಜೇಡರ ದಾಸಿಮಯ್ಯಕನ್ನಡಪ್ರಭತೆಲುಗುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಿಳಿ ರಕ್ತ ಕಣಗಳುವಸ್ತುಸಂಗ್ರಹಾಲಯಐಹೊಳೆಕೆ. ಅಣ್ಣಾಮಲೈಗುರುರಾಜ ಕರಜಗಿರಾಧೆಕೃಷ್ಣರಾಜಸಾಗರಜಯಂತ ಕಾಯ್ಕಿಣಿನೈಸರ್ಗಿಕ ಸಂಪನ್ಮೂಲವೇದರತ್ನತ್ರಯರುಭಾರತದ ಪ್ರಧಾನ ಮಂತ್ರಿಅಕ್ಷಾಂಶ ಮತ್ತು ರೇಖಾಂಶಭಾರತೀಯ ಸಂಸ್ಕೃತಿದಶಾವತಾರಸಚಿನ್ ತೆಂಡೂಲ್ಕರ್ಮೋಕ್ಷಗುಂಡಂ ವಿಶ್ವೇಶ್ವರಯ್ಯತುಳುಕಬ್ಬುವಿಕ್ರಮಾರ್ಜುನ ವಿಜಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತದ ಸಂವಿಧಾನಮುದ್ದಣಸಮಾಸಅಲ್ಲಮ ಪ್ರಭುಸಂಸ್ಕೃತಇತಿಹಾಸಮೌರ್ಯ ಸಾಮ್ರಾಜ್ಯಜೋಗಅಕ್ಬರ್ವ್ಯಂಜನಡಿ.ವಿ.ಗುಂಡಪ್ಪರಾಷ್ಟ್ರೀಯ ಶಿಕ್ಷಣ ನೀತಿಉಪನಯನಸಮಾಜ ವಿಜ್ಞಾನಕರ್ನಾಟಕಮಡಿವಾಳ ಮಾಚಿದೇವಕುದುರೆಕರ್ನಾಟಕದ ಅಣೆಕಟ್ಟುಗಳುಜೀವವೈವಿಧ್ಯಕರ್ನಾಟಕದ ಜಿಲ್ಲೆಗಳುವಿಚ್ಛೇದನಭಾರತದ ಉಪ ರಾಷ್ಟ್ರಪತಿಆದಿ ಶಂಕರಬಡತನಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಮಂಟೇಸ್ವಾಮಿಓಂ ನಮಃ ಶಿವಾಯಮಾದರ ಚೆನ್ನಯ್ಯತಾಜ್ ಮಹಲ್ಚುನಾವಣೆಭಾರತದಲ್ಲಿ ಪಂಚಾಯತ್ ರಾಜ್🡆 More