ದಂತಿದುರ್ಗ

ದಂತಿದುರ್ಗ (ಕ್ರಿ.ಶ.

೭೨೮ - ೭೫೮) ರಾಷ್ಟ್ರಕೂಟ ವಂಶದ ಮೂಲಪುರುಷನೆಂದು ಗುರುತಿಸಲ್ಪಡುತ್ತಾನೆ. ರಾಷ್ಟ್ರಕೂಟ ವಂಶದ ಮೂಲ ಇತಿಹಾಸ ಇನ್ನೂ ನಿಖರವಾಗಿ ಗುರುತಿಸಲ್ಪಟ್ಟಿಲ್ಲ. ಅಶೋಕನ ಕಾಲದ ರಥಿಕರೇ ರಾಷ್ಟ್ರಕೂಟರೆಂದು ಒಂದು ಐತಿಹ್ಯವಿದೆ . ಆದರೆ ಇದಕ್ಕೆ ಆಧಾರಗಳಿಲ್ಲ .ರಾಷ್ಟ್ರಕೂಟರು ಕನ್ನಡಿಗರೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಬುಂದೇಲಖಂಡದ ಶಾಸನ ಕನ್ನಡದಲ್ಲಿದೆ. ಕರ್ನಾಟಕದಲ್ಲಿ ರಾಷ್ಟ್ರಕೂಟರು ಅಥವಾ ರಟ್ಟರು ಎಂದು ಹೆಸರಾದ ಈ ರಾಜ ಮನೆತನ, ರಾಜಪುತಾನದಲ್ಲಿ ರಾಠಾರ್ ಎಂದು ಪ್ರಸಿದ್ದಿಗೆ ಬಂದಿತ್ತು .

ದಂತಿದುರ್ಗ
Rajadhiraja, Parameshvara

Founder of Rashtrakuta Empire
ಆಳ್ವಿಕೆ c. 735 – c. 756 CE
ಪೂರ್ವಾಧಿಕಾರಿ Indra II
ಉತ್ತರಾಧಿಕಾರಿ Krishna I
ಗಂಡ/ಹೆಂಡತಿ Shubhapradha
ತಂದೆ Indra II
ತಾಯಿ Bhavanaga
ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ದ್ರುವ ಧಾರಾವರ್ಷ (780 - 793)
ಗೋವಿಂದ III (793 - 814)
ಅಮೋಘವರ್ಷ (814 - 878)
ಕೃಷ್ಣ II (878 - 914)
ಇಂದ್ರ III (914 -929)
ಅಮೋಘವರ್ಷ II (929 - 930)
ಗೋವಿಂದ IV (930 – 936)
ಅಮೋಘವರ್ಷ III (936 – 939)
ಕೃಷ್ಣ III (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಕರ್ಕ II (972 – 973)
ಇಂದ್ರ IV (973 – 982)
Tailapa II
(Western Chalukyas)
(973-997)

ದಂತಿದುರ್ಗನ ತಂದೆ ಒಂದನೇ ಇಂದ್ರನು ಚಾಲುಕ್ಯಸಾಮಂತನಾಗಿದ್ದನು. ಚಾಲುಕ್ಯರಾಜಪುತ್ರಿ 'ಭಾವನಾಗ'ಳನ್ನು ಮದುವೆಯಾಗಿದ್ದನು. ಇವರಿಗೆ ಜನಿಸಿದ ಮಗನೇ ದಂತಿದುರ್ಗ. ದಂತಿದುರ್ಗನ ಕಾಲದಲ್ಲಿ ದಕ್ಷಿಣದಲ್ಲಿ ಚಾಲುಕ್ಯರು ಮತ್ತು ಪಲ್ಲವರು ಪ್ರಬಲರಾಗಿದ್ದರು. ಉತ್ತರದಲ್ಲಿ ಪ್ರಬಲ ರಾಜಮನೆತನಗಳಿರಲಿಲ್ಲ. ಇದು ದಂತಿದುರ್ಗನಿಗೆ ಅತ್ಯಂತ ಅನುಕೂಲ ಸಮಯವನ್ನೊದಗಿಸಿತು. ಅತ್ಯಂತ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದ (ಕೇವಲ ಮೂವತ್ತು ವರ್ಷ ಮಾತ್ರ ದಂತಿದುರ್ಗ ಬದುಕಿದ್ದನೆಂಬುದು ಇತಿಹಾಸಕಾರರ ಅಭಿಪ್ರಾಯ) ದಂತಿದುರ್ಗನ ಇಡೀ ಆಯುಷ್ಯ ಕಳೆದುದು ರಣ ರಂಗದಲ್ಲಿಯೇ.

ದಂತಿದುರ್ಗನ ತಂದೆ ಚಾಲುಕ್ಯರ ಮೇಲೆ ಯುದ್ದ ಘೋಷಿಸಿದ್ದನು. ದಂತಿದುರ್ಗನು ಬಾದಾಮಿಯ ಚಕ್ರವರ್ತಿ ಇಮ್ಮಡಿ ಕೀರ್ತಿವರ್ಮನನ್ನು ಯುದ್ದದಲ್ಲಿ ಸೋಲಿಸಿದನು. ಇದರಿಂದಾಗಿ ಚಾಲುಕ್ಯರ ಉತ್ತರದ ಪ್ರಾಂತ್ಯಗಳಾದ ಕೊಲ್ಲಾಪುರ, ಸತಾರಗಳು ಅವನ ಕೈವಶವಾದವು. ದಂತಿದುರ್ಗನು ಗುಜರಾತಿನ ಚಾಲುಕ್ಯರನ್ನು ಸೋಲಿಸುವುದರೊಂದಿಗೆ ಪಶ್ಚಿಮ ಭಾರತದ ಮೇಲೆ ತನ್ನ ಅಧಿಪತ್ಯವನ್ನು ಸ್ಠಾಪಿಸಿದನು. ನಿರಂತರ ಯುದ್ದಪರಂಪರೆಗಳಿಂದ ಅವನ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳಾದುವು. ಆದುದರಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅವನು ಸಾವನ್ನಪ್ಪಿದನು.

ಅವನ ಸಾಮ್ರಾಜ್ಯ ದಕ್ಷಿಣದಲ್ಲಿ ಬಾದಾಮಿಯವರೆಗೆ; ಪಶ್ಚಿಮ ಭಾರತದಿಂದ ಉಜ್ಜೈನಿಯವರೆಗೆ ವ್ಯಾಪಿಸಿತ್ತು. ರಾಷ್ಟ್ರಕೂಟರು ಸುಮಾರು ೨೨೫ವರ್ಷಗಳ ಕಾಲ ಕರ್ನಾಟಕದ ಪ್ರಬಲ ರಾಜಮನೆತನದವರಾಗಿ ಆಡಳಿತ ನಡೆಸಿದರು. ದಂತಿದುರ್ಗನ ವಿಷಯವಾಗಿ ೨ ಶಾಸನಗಳು ದೊರಕಿವೆ: ೧. ಸಾಮನ್‌ಗಡದ ತಾಮ್ರ ಶಾಸನ ೨. ಎಲ್ಲೋರದ ದಶಾವತಾರ ಗುಹೆಯಲ್ಲಿರುವ ಶಿಲಾಶಾಸನ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಅಶೋಕಮುಮ್ಮಡಿ ಕೃಷ್ಣರಾಷ್ಟ್ರಕೂಟ

🔥 Trending searches on Wiki ಕನ್ನಡ:

ಮಾನವ ಸಂಪನ್ಮೂಲ ನಿರ್ವಹಣೆಎಡ್ವಿನ್ ಮೊಂಟಾಗುಕನ್ನಡದಲ್ಲಿ ಸಣ್ಣ ಕಥೆಗಳುಮೂಲಧಾತುವಿಜಯದಾಸರುಪಾಲಕ್ಸ್ಟಾರ್‌ಬಕ್ಸ್‌‌ಸಂಧಿಚಂದ್ರಯಾನ-೩ಅಶ್ವಮೇಧಅಟಲ್ ಬಿಹಾರಿ ವಾಜಪೇಯಿಭಾರತೀಯ ಸಂಸ್ಕೃತಿಬಿಳಿ ರಕ್ತ ಕಣಗಳುಕರ್ನಾಟಕದ ಮುಖ್ಯಮಂತ್ರಿಗಳುಕರ್ನಾಟಕದ ಏಕೀಕರಣಭೂತಾರಾಧನೆಎ.ಪಿ.ಜೆ.ಅಬ್ದುಲ್ ಕಲಾಂಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಅಳಿಲುವಿಜಯನಗರಆಟಿಸಂಆದಿ ಗೋದ್ರೇಜ್ರಾಯಲ್ ಚಾಲೆಂಜರ್ಸ್ ಬೆಂಗಳೂರುಗುರುರಾಜ ಕರಜಗಿಆರ್ಥಿಕ ಬೆಳೆವಣಿಗೆವೆಂಕಟೇಶ್ವರ ದೇವಸ್ಥಾನಮಂಡ್ಯಸಾವಿತ್ರಿಬಾಯಿ ಫುಲೆಮಾಸ್ತಿ ವೆಂಕಟೇಶ ಅಯ್ಯಂಗಾರ್ಅಜವಾನಆಹಾರಪಕ್ಷಿಕರಗಭಾರತೀಯ ಧರ್ಮಗಳುಕೊಡಗುಕರ್ನಾಟಕದ ತಾಲೂಕುಗಳುಅರಣ್ಯನಾಶಮಧುಮೇಹದಿಕ್ಕುಸಂಪತ್ತಿನ ಸೋರಿಕೆಯ ಸಿದ್ಧಾಂತಅದ್ವೈತಅಂತರಜಾಲಸುಮಲತಾರಾಜಕುಮಾರ (ಚಲನಚಿತ್ರ)ಗುಣ ಸಂಧಿಸಾಕ್ಷಾತ್ಕಾರಜೇನು ಹುಳುಮುಖಮಲೈ ಮಹದೇಶ್ವರ ಬೆಟ್ಟಸೌರಮಂಡಲಕಾದಂಬರಿಬೆಂಡೆಗದಗಚನ್ನವೀರ ಕಣವಿಟಿಪ್ಪು ಸುಲ್ತಾನ್ಶಂಕರ್ ನಾಗ್ಬೆಳಗಾವಿಭಕ್ತ ಪ್ರಹ್ಲಾದಬಾರ್ಲಿವಿಜಯಾ ದಬ್ಬೆಭಗತ್ ಸಿಂಗ್ದಯಾನಂದ ಸರಸ್ವತಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುರಾಹುಲ್ ಗಾಂಧಿಮಾನಸಿಕ ಆರೋಗ್ಯವಾಯು ಮಾಲಿನ್ಯರೇಣುಕವಿರಾಟ್ ಕೊಹ್ಲಿಕ್ರಿಯಾಪದಕನ್ನಡ ಅಕ್ಷರಮಾಲೆಕಾಮಸೂತ್ರಮಹಾತ್ಮ ಗಾಂಧಿಮುಹಮ್ಮದ್ಅಯೋಧ್ಯೆಸೂರ್ಯವಂಶ (ಚಲನಚಿತ್ರ)ಕಾಲೆರಾ🡆 More