ತವನಿಧಿ ಹರಿಹರಪುರ

ಹರಿಹರಪುರದ ಸಂಕ್ಷಿಪ್ತ ಇತಿಹಾಸ: ವಿಜಯ ನಗರ ಸಾಮ್ರಾಜ್ಯವನ್ನು ಆಳುತ್ತಿದ್ದ ಎರಡನೇ ಹರಿಹರಮಹಾರಾಜನಿಗೆ ವೇದ ವಿದ್ವಾಂಸರನ್ನು ಕಂಡರೆ ಬಹಳ ಗೌರವ.

ಮಹಾರಾಜನು ಅವನ ಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ವೇದ ವಿದ್ವಾಂಸರನ್ನು ಗೌರವಿಸಿ ಅವರಿಗೆ ಗ್ರಾಮಗಳನ್ನೇ ಉಡುಗೊರೆಯಾಗಿ ನೀಡುತ್ತಿದ್ದ. ೧೩೯೬ ಜನವರಿ ೧೬ ಯುವ ನಾಮ ನಾಮಸಂವತ್ಸರದ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ಸೋಮವಾರ ದಂದು ಸೂರ್ಯದೇವನ ಕೃಪೆ ಗಳಿಸಲು ಹರಿಹರಮಹಾರಾಜನು ತುಂಗಾನದಿಯ ತೀರದ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ನಾರಸಿಂಹ ಪುರ ಸೀಮೆಗೆ ಸೇರಿದ [ಈಗಿನ ಹೊಳೇ ನರಸೀಪುರ] ತವನಿಧಿ [ಈಗಿನ ತವನಂದಿ] ಎಂಬ ಗ್ರಾಮವನ್ನು ಹರಿಹರಪುರವೆಂದು ಪುನರ್ನಾಮಕರಣ ಮಾಡಿ ಆತ್ರೇಯಸ ಗೋತ್ರಕ್ಕೆ ಸೇರಿದ ಕಲ್ಲುಮಾಳಿಗೆ ಕೇಶವರ ಮಗ ಮಾಧವಾಧ್ವರಿ ಎಂಬ ಶ್ರೇಷ್ಠ ವೇದ ವಿದ್ವಾಂಸನಿಗೆ ಅವನ ವಿದ್ಯೆಯನ್ನು ಗೌರವಿಸಿ ದಾನವಾಗಿ ನೀಡಿದನೆಂದು ಶಾಸನವು ತಿಳಿಸುತ್ತದೆ. ಬಹುಷ: ಆ ಸಮಯದಲ್ಲೇ ಮಾಧವಾಧ್ವರಿಯ ಹೆಸರು ಶಾಶ್ವತವಾಗಿ ನಿಲ್ಲುವಂತೆ ಮಾಧವ ಕೃಷ್ಣ ದೇವಾಲಯವನ್ನು ಕಟ್ಟಿರಬೇಕು. ಈ ದೇವಾಲಯದ ಮಾಧವ ಕೃಷ್ಣನ ಭವ್ಯವಾದ ಆಳೆತ್ತರದ ಮೂರ್ತಿಯನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಎದುರಿಗೆ ಸರಿಯಾಗಿ ರಾಜಬೀದಿ. ರಾಜಬೀದಿಯ ಕೊನೆಯ ತುದಿಯಲ್ಲಿ ನಿಂತು ನೋಡಿದರೂ ಕೃಷ್ಣನ ವಿಗ್ರಹ ಕಾಣುವಂತಿದೆ. ಆದರೆ ಗ್ರಾಮ ದೇವತೆ ಉಡುಸಲಮ್ಮನಿಗೆ ಏಳೂ ಹಳ್ಳಿಯ ಭಕ್ತರಲ್ಲದೆ ಸುತ್ತಮುತ್ತಲ ಹಳ್ಳಿಯಲ್ಲೂ ದೂರದ ಊರುಗಳಲ್ಲೂ ಭಕ್ತರಿದ್ದಾರೆ. ಉಡುಸಲಮ್ಮನ ಉದ್ಭವಮೂರ್ತಿಯ ಫೋಟೊಗಳನ್ನಿಟ್ಟುಕೊಂಡು ನಿತ್ಯವೂ ಪೂಜಿಸುವ ಸಹಸ್ರಾರು ಭಕ್ತರು ಹೊರ ಊರುಗಳಲ್ಲೂ ಇದ್ದಾರೆ. ಹರಿಹರಪುರದ ಜಾತ್ರೆಗೆ ಬರಲು ಸಾಧ್ಯವಾಗದವರು ಅಂದು ಅವರಿರುವ ಊರುಗಳಲ್ಲೇ ಉಡುಸಲಮ್ಮನ ಚಿತ್ರಕ್ಕೆ ಪೂಜೆ ಸಲ್ಲಿಸಿ ಹತ್ತಾರು ಜನರಿಗೆ ಪ್ರಸಾದ ಕೊಟ್ಟು ಕೃತಾರ್ಥರಾದೆವು ಎನ್ನುವ ಭಕ್ತರೂ ಇದ್ದಾರೆ. ಹರಿಹರಪುರದಲ್ಲಿರುವ ಮತ್ತುಂದು ದೇವಾಲಯ ಶ್ರೀ ಪ್ರಸನ್ನ ನಂಜುಂಡೇಶ್ವರ.ಹೆಚ್ಚಿನ ಮಾಹಿತಿಗಳು ಮತ್ತು ಚಿತ್ರಪುಟಕ್ಕಾಗಿ"ನಮ್ಮೂರು ನಮ್ maneಮನೆ ನಮ್ ಜನ " ಬ್ಲಾಗಿಗೆ ಭೇಟಿಕೊಡಿ.

Tags:

ನಗರರಾಜಸೂರ್ಯ

🔥 Trending searches on Wiki ಕನ್ನಡ:

ತಂತ್ರಜ್ಞಾನದ ಉಪಯೋಗಗಳುಡೊಳ್ಳು ಕುಣಿತಭಾರತದ ರಾಜಕೀಯ ಪಕ್ಷಗಳುವೇದವ್ಯಾಸಬಿ. ಎಂ. ಶ್ರೀಕಂಠಯ್ಯಪುಟ್ಟರಾಜ ಗವಾಯಿಕಿತ್ತೂರು ಚೆನ್ನಮ್ಮಕರ್ಬೂಜಕಲ್ಪನಾಕಲ್ಲಂಗಡಿಪಾಕಿಸ್ತಾನಭಾರತೀಯ ಧರ್ಮಗಳುಬಂಡಾಯ ಸಾಹಿತ್ಯಅನುರಾಧಾ ಧಾರೇಶ್ವರಆದೇಶ ಸಂಧಿಪಶ್ಚಿಮ ಘಟ್ಟಗಳುಕಲ್ಯಾಣಿಸರ್ವಜ್ಞಪರಮಾಣುಹನುಮಾನ್ ಚಾಲೀಸಅಳಿಲುಉಪ್ಪಿನ ಸತ್ಯಾಗ್ರಹಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬೀಚಿಯೋನಿಅಸಹಕಾರ ಚಳುವಳಿರಾಜಕೀಯ ವಿಜ್ಞಾನಗಾದೆಸಂಭೋಗವೇಶ್ಯಾವೃತ್ತಿಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ಚುತ್ವ ಸಂಧಿಕೊರೋನಾವೈರಸ್ಗುಡಿಸಲು ಕೈಗಾರಿಕೆಗಳುಹೈದರಾಬಾದ್‌, ತೆಲಂಗಾಣವಚನಕಾರರ ಅಂಕಿತ ನಾಮಗಳುಅಕ್ಬರ್ಐಹೊಳೆತಾಪಮಾನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕನ್ನಡಪ್ರಭಕಲಬುರಗಿಧರ್ಮಸ್ಥಳಮಲ್ಟಿಮೀಡಿಯಾಕರ್ನಾಟಕದ ತಾಲೂಕುಗಳುಸ್ವರಚಿತ್ರದುರ್ಗ ಕೋಟೆಕರ್ನಾಟಕದ ಮುಖ್ಯಮಂತ್ರಿಗಳುತಾಜ್ ಮಹಲ್ಅರ್ಜುನಭಾರತದ ಚುನಾವಣಾ ಆಯೋಗಪ್ರಜಾಪ್ರಭುತ್ವಬೌದ್ಧ ಧರ್ಮಅಶೋಕನ ಶಾಸನಗಳುಸಂವಹನಅಸ್ಪೃಶ್ಯತೆದಶಾವತಾರಹುಲಿಶಬ್ದಮಣಿದರ್ಪಣಕಲ್ಯಾಣ ಕರ್ನಾಟಕವ್ಯಂಜನಕಾದಂಬರಿಫಿರೋಝ್ ಗಾಂಧಿಭಾಷೆಚಪ್ಪಾಳೆಮಾನವ ಅಭಿವೃದ್ಧಿ ಸೂಚ್ಯಂಕಬಿ. ಆರ್. ಅಂಬೇಡ್ಕರ್ಸೌರಮಂಡಲದುಶ್ಯಲಾಸ್ಕೌಟ್ಸ್ ಮತ್ತು ಗೈಡ್ಸ್ಸಾವಿತ್ರಿಬಾಯಿ ಫುಲೆಉದಯವಾಣಿಜವಹರ್ ನವೋದಯ ವಿದ್ಯಾಲಯಇಮ್ಮಡಿ ಪುಲಿಕೇಶಿಭಾರತದಲ್ಲಿ ಮೀಸಲಾತಿಜಿ.ಎಸ್.ಶಿವರುದ್ರಪ್ಪಕೃಷಿ🡆 More