ತಡಸಲು

ತಡಸಲು ಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ.

ಗ್ರೀವಿಯ ಟೀಲಿಯಿಪೋಲಿಯ ಇದರ ವೈಜ್ಞಾನಿಕ ಹೆಸರು. ಹಿಮಾಲಯದ ತಪ್ಪಲಿನಲ್ಲೂ ಮಧ್ಯ ಪಶ್ಚಿಮ ಮತ್ತು ದಕ್ಷಿಣ ಭಾರತಗಳಲ್ಲೂ ಪರ್ಣಪಾತಿ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಬೆಳೆಯುವ ಈ ಮರ ಕಣಿವೆಗಳಲ್ಲೂ ದಕ್ಷಿಣ ಭಾರತದ ಬೆಟ್ಟಗಳ ಇಳಿಜಾರುಗಳಲ್ಲೂ ತುಂಬ ಹುಲುಸಾಗಿ ಬೆಳೆಯುತ್ತದೆ. ಇಂಥ ಪ್ರದೇಶಗಳಲ್ಲಿ ಇದರ ಮುಖ್ಯ ಕಾಂಡದ ಸುತ್ತಳತೆ ಸುಮಾರು 7 ಇರುವುದು ಕಾಂಡದ ಬಣ್ಣ ಬೂದಿ ಅಥವಾ ಕಡುಗಂದು. ಎಲೆಗಳು ಸರಳ ರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಅಂಡದಂತೆ: ಅಂಚುದಂತಿತ. ಹೂಗಳು ಚಿಕ್ಕವು. ಎಲೆಗಳ ಕಂಕುಳಲ್ಲಿ ಗುತ್ತವಾದ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿ ಅಷ್ಟಿಫಲ ಮಾದರಿಯದು: ಬಟಾಣಿ ಕಾಳಿನ ಗಾತ್ರಕ್ಕಿದೆ. ಇದರ ಬಣ್ಣ ಕಪ್ಪು. ಕಾಯಿ ತಿನ್ನಲು ಯೋಗ್ಯ. ತಡಸಲು ಮರದ ಚೌಬೀನೆ ಬಲುಗಟ್ಟಿ, ನಯ, ಭಾರ ಹಾಗೂ ನೇರಕಣಗಳೂಳ್ಳದ್ದು. ಇದಕ್ಕೆ ಹೊಸತೊಗಲಿನ ವಾಸನೆಯುಂಟು. ಇದನ್ನು ಸುಲಭವಾಗಿ ಸಂಸ್ಕರಿಸಬಹದು, ಕೊಯ್ಯಬಹುದು ಮತ್ತು ಮೆರುಗು ಕೊಡಬಹುದು, ಅಲ್ಲದೆ ಇದು ಬಹಳ ಕಾಲ ಬಾಳಿಕೆ ಬರುವಂಥದ್ದು ಇದರಿಂದಾಗಿ ಚೌಬೀನೆಯನ್ನು ಹಲವಾರು ಕೆಲಸಗಳಿಗೆ ಬಳಸುವರು. ತೊಲೆ ಕಂಬ, ಕೂವೆಕಂಬ, ದೋಣಿಯ ಹುಟ್ಟು, ಉಪಕರಣಗಳ ಹಿಡಿ, ಕೃಷಿ ಉಪಕರಣಗಳೂ, ಮೀನಿನಗಾಳ, ಲಾಳಿ, ಪುಟ್ಟಿಮರ (ನೇಮಿ) ಬಾಬಿನ್, ಗಾಲ್ಫಕ್ಲಬ್ಬು, ಬಿಲಿಯರ್ಡ್ ಕ್ಯೂಗಳನ್ನು ತಯಾರಿಸಲು ಈ ಮರವನ್ನು ಉಪಯೋಗಿಸುತ್ತಾರೆ. ಅಲ್ಲದೆ ತಡಸಲಿನ ತೊಗಟೆಯಿಂದ ನಾರನ್ನು ಪಡೆಯುವುದುಂಟು. ತಡಸಲಿನ ಎಲೆಗಳನ್ನು ದನಕರುಗಳ ಮೇವಾಗಿ ಉಪಯೋಗಿಸುತ್ತಾರೆ. ತೊಗಟೆಗೆ ಔಷಧೀಯ ಗುಣಗಳೂ ಉಂಟು. ಇದನ್ನು ಆಮಶಂಕೆಗೆ ಮದ್ದಾಗಿ ಬಳಸುವರು.

ತಡಸಲು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಹೊಯ್ಸಳೇಶ್ವರ ದೇವಸ್ಥಾನಬ್ಯಾಂಕ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಭಾರತೀಯ ಕಾವ್ಯ ಮೀಮಾಂಸೆಶ್ರೀ ರಾಮಾಯಣ ದರ್ಶನಂಸಿದ್ದರಾಮಯ್ಯಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಿಳಿಗಿರಿರಂಗನ ಬೆಟ್ಟಉಚ್ಛಾರಣೆಮಡಿವಾಳ ಮಾಚಿದೇವಪಂಪವಲ್ಲಭ್‌ಭಾಯಿ ಪಟೇಲ್ಮಂಗಳೂರುಬಿ.ಜಯಶ್ರೀತತ್ಸಮ-ತದ್ಭವತುಮಕೂರುಕವಿರಾಜಮಾರ್ಗಶಿಶುಪಾಲಕನಕದಾಸರುಬಿಳಿ ರಕ್ತ ಕಣಗಳುಹೆಸರುಭಾರತದಲ್ಲಿನ ಚುನಾವಣೆಗಳುಮಂಟೇಸ್ವಾಮಿಇಸ್ಲಾಂ ಧರ್ಮರಾಯಚೂರು ಜಿಲ್ಲೆಸೂರ್ಯಅಷ್ಟ ಮಠಗಳುಅಂಡವಾಯುಸಂಗೊಳ್ಳಿ ರಾಯಣ್ಣಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಪರಿಣಾಮಅತ್ತಿಮಬ್ಬೆಉಡುಪಿ ಜಿಲ್ಲೆಜಿ.ಎಸ್.ಶಿವರುದ್ರಪ್ಪಸ್ವರಾಜ್ಯಕೃಷ್ಣರಾಜನಗರಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕಲಿಯುಗಕನ್ನಡಪ್ರಭಭೂತಕೋಲಹೊಂಗೆ ಮರಪೆಟ್ರೋಮ್ಯಾಕ್ಸ್ (ಚಲನಚಿತ್ರ)ಸಂಸ್ಕಾರಪ್ರಜಾವಾಣಿಪಶ್ಚಿಮ ಘಟ್ಟಗಳುಶ್ಯೆಕ್ಷಣಿಕ ತಂತ್ರಜ್ಞಾನವ್ಯಾಸರಾಯರುಭಾರತೀಯ ಜನತಾ ಪಕ್ಷವಿಷ್ಣುವ್ಯವಸಾಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರಾಜಕುಮಾರ (ಚಲನಚಿತ್ರ)ಪ್ಯಾರಾಸಿಟಮಾಲ್ಅರಿಸ್ಟಾಟಲ್‌ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹುಲಿನಾಟಕಹೆಚ್.ಡಿ.ಕುಮಾರಸ್ವಾಮಿತ್ರಿವೇಣಿಮಡಿಕೇರಿಪ್ರೀತಿಕಾವೇರಿ ನದಿಸಂಭೋಗಸಂಖ್ಯಾಶಾಸ್ತ್ರತತ್ತ್ವಶಾಸ್ತ್ರರೈತವಾರಿ ಪದ್ಧತಿಎತ್ತಿನಹೊಳೆಯ ತಿರುವು ಯೋಜನೆಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಗೂಗಲ್ಭಾರತದಲ್ಲಿ ಬಡತನಹಾಸನಭಾರತೀಯ ಧರ್ಮಗಳುಭೋವಿಪಿ.ಲಂಕೇಶ್ಕರ್ಣಜಯಪ್ರಕಾಶ್ ಹೆಗ್ಡೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು🡆 More