ಚಕ್ಕುಲಿ

ಚಕ್ಕುಲಿ ಅಥವಾ ಚಕ್ಲಿ (ತಮಿಳು: முறுக்கு/Murukku, ತೆಲುಗು:మురుకులు/Murkoo, ಮರಾಠಿ: चकली/Chakali, ಗುಜರಾತಿ:ચકરી/Chakri) ಭಾರತ ಮತ್ತು ಶ್ರೀಲಂಕಾದ ಒಂದು ರುಚಿಯಾದ ತಿನಿಸು.

ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಫಿಜಿ ಮತ್ತು ಮಲೇಶಿಯ ದೇಶಗಳಲ್ಲೂ ಕೂಡ ಇದು ಪರಿಚಿತ. ಚಕ್ಕುಲಿ ಸಾಮಾನ್ಯವಾಗಿ ಸುರುಳಿಯಾಕಾರವಾಗಿದ್ದು ಒರಟಾದ ಮೇಲ್ಮೈ ಹೊಂದಿರುತ್ತದೆ.

ಚಕ್ಕುಲಿ
ಚಕ್ಕುಲಿ
ಮೂಲ
ಪರ್ಯಾಯ ಹೆಸರು(ಗಳು)ಚಕ್ಲಿ, ಮುರುಕ್ಕು
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಶ್ರೀಲಂಕಾ
ವಿವರಗಳು
ಮುಖ್ಯ ಘಟಕಾಂಶ(ಗಳು)ಅಕ್ಕಿಹಿಟ್ಟು, ಕಡಲೆಹಿಟ್ಟು, ಉದ್ದಿನಹಿಟ್ಟು

ಚಕ್ಕುಲಿ ದಕ್ಷಿಣ ಮತ್ತು ಪಶ್ಚಿಮ ಭಾರತ ಮೂಲದ ತಿನಿಸಾಗಿದೆ. ಇದರ ರುಚಿ ಮತ್ತು ಸುಲಭ ತಯಾರಿಕೆಯಿಂದಾಗಿ ಈಗ ಇದು ಎಲ್ಲಾ ಕಡೆಗಳಲ್ಲೂ ತಯಾರಾಗುವ ತಿಂಡಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ. ಇದು ಫಿಜಿ ಮತ್ತು ಉತ್ತರ ಅಮೆರಿಕಾದಲ್ಲಿರುವ ಭಾರತೀಯರಲ್ಲೂ ಜನಪ್ರಿಯವಾಗಿದೆ. ಚಕ್ಕುಲಿಯು ದೀಪಾವಳಿ ಹಬ್ಬದ ಒಂದು ಸಾಂಪ್ರದಾಯಿಕ ತಿನಿಸಾಗಿ ಬಳಸಲ್ಪಡುತ್ತದೆ. ಇತ್ತೀಚೆಗೆ ಚಕ್ಕುಲಿಯು ಉತ್ತರ ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಂ ಮಾರುಕಟ್ಟೆಯಲ್ಲೂ ಕೂಡ ಸಿಗುತ್ತಿದೆ.

ಪದಾರ್ಥಗಳು

ಸಾಮಾನ್ಯವಾಗಿ ಚಕ್ಕುಲಿಯು ಅಕ್ಕಿಹಿಟ್ಟು, ಕಡಲೆಹಿಟ್ಟು, ಉದ್ದಿನಹಿಟ್ಟುಗಳ ಮಿಶ್ರಣದಿಂದ ತಯಾರಾಗುತ್ತದೆ. ಜೊತೆಗೆ ಉಪ್ಪು ಮತ್ತಿತರ ಸಾಂಬಾರ ಪದಾರ್ಥಗಳಾದ ಮೆಣಸು, ಇಂಗು, ಅಜ್ವಾನ ಅಥವಾ ಜೀರಿಗೆಗಳನ್ನೂ ಒಳಗೊಂಡಿರುತ್ತದೆ.

ತಯಾರಿಕೆ

ಸ್ವಲ್ಪ ನೀರು ಮತ್ತು ಪದಾರ್ಥ ಮಿಶ್ರಣವನ್ನು ಹಿಟ್ಟನ್ನಾಗಿ ಕಲೆಸಿ ಅದನ್ನು ವೃತ್ತ ಮತ್ತು ಇನ್ನಿತರ ಆಕಾರಗಳಲ್ಲಿ ಸುತ್ತಲಾಗುತ್ತದೆ. ಅನಂತರ ಅದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಚಕ್ಕುಲಿಯನ್ನು ಚಪ್ಪಟೆಯಾಗಿ ರಿಬ್ಬನ್ನಿನಂತೆಯೂ ಮಾಡಬಹುದಾಗಿದೆ ಮತ್ತು ಕೈಯಿಂದಲೂ ಸುತ್ತಬಹುದಾಗಿದೆ. (ಕೈಚಕ್ಕುಲಿ) ಕೈಚಕ್ಕುಲಿಯನ್ನು ಹಿಟ್ಟನ್ನು ಕೈಯಿಂದಲೇ ಒಂದು ಎಳೆಯನ್ನಾಗಿ ತೆಗೆದುಕೊಳ್ಳುತ್ತಾ ಅದನ್ನು ತಿರುಚುತ್ತಾ ಮತ್ತು ಹಾಗೆಯೇ ಅದನ್ನು ಬಳೆಯಾಕಾರದಲ್ಲಿ ಸುತ್ತುತ್ತಾ ತಯಾರಿಸಲಾಗುತ್ತದೆ. ಇದಕ್ಕೆ ಕಷ್ಟದ ಕೆಲಸವಾಗಿದ್ದು ಅಪಾರ ತಾಳ್ಮೆ, ಅಭ್ಯಾಸ ಬೇಕಾಗುತ್ತದೆ.

ಚಕ್ಕುಲಿ 
ಸಿದ್ದಗೊಳ್ಳುತ್ತಿರುವ ಚಕ್ಕುಲಿ
ಚಕ್ಲಿ ತಯಾರಿಕೆ ವಿಡಿಯೋ

ಉಲ್ಲೇಖಗಳು

ಹೊರ ಕೊಂಡಿಗಳು

ಚಿತ್ರಗಳು

Tags:

ಚಕ್ಕುಲಿ ಪದಾರ್ಥಗಳುಚಕ್ಕುಲಿ ತಯಾರಿಕೆಚಕ್ಕುಲಿ ಉಲ್ಲೇಖಗಳುಚಕ್ಕುಲಿ ಹೊರ ಕೊಂಡಿಗಳುಚಕ್ಕುಲಿ ಚಿತ್ರಗಳುಚಕ್ಕುಲಿಫಿಜಿಭಾರತಮಲೇಶಿಯಶ್ರೀಲಂಕಾ

🔥 Trending searches on Wiki ಕನ್ನಡ:

ಜೈನ ಧರ್ಮದಿ ಪೆಂಟಗನ್ಬೇವುಕನ್ನಡ ಸಂಧಿಪ್ರವಾಸೋದ್ಯಮರಾಮ ಮಂದಿರ, ಅಯೋಧ್ಯೆಭಾರತದ ಬಂದರುಗಳುಕವಿರಾಜಮಾರ್ಗಪಿತ್ತಕೋಶಈಸ್ಟರ್ನೀನಾದೆ ನಾ (ಕನ್ನಡ ಧಾರಾವಾಹಿ)ರಂಗಭೂಮಿಹೃದಯಕರ್ನಾಟಕದಲ್ಲಿ ಪಂಚಾಯತ್ ರಾಜ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನವಗ್ರಹಗಳುಕಾರ್ಯಾಂಗಎಚ್.ಎಸ್.ವೆಂಕಟೇಶಮೂರ್ತಿನಾಲ್ವಡಿ ಕೃಷ್ಣರಾಜ ಒಡೆಯರುಸಂತಾನೋತ್ಪತ್ತಿಯ ವ್ಯವಸ್ಥೆಕೃಷಿಇಮ್ಮಡಿ ಬಿಜ್ಜಳಆವಕಾಡೊಜ್ಞಾನಪೀಠ ಪ್ರಶಸ್ತಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಟ್ಸ್ ಆಪ್ ಮೆಸ್ಸೆಂಜರ್ಅಡಿಕೆಆಯ್ದಕ್ಕಿ ಲಕ್ಕಮ್ಮಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಗ್ಗಶಿವರಾಮ ಕಾರಂತಉಡಸೇಂಟ್ ಲೂಷಿಯಕರ್ನಾಟಕದ ಜಿಲ್ಲೆಗಳುಪಾಲಕ್ಋತುಚಕ್ರರಾಮಕೃಷ್ಣ ಪರಮಹಂಸಗೋಪಾಲಕೃಷ್ಣ ಅಡಿಗಅಸಹಕಾರ ಚಳುವಳಿಭಾರತದ ನಿರ್ದಿಷ್ಟ ಕಾಲಮಾನಸುಮಲತಾಶ್ರೀಕೃಷ್ಣದೇವರಾಯಭಾರತೀಯ ಭಾಷೆಗಳುಟಿ.ಪಿ.ಕೈಲಾಸಂಹಣ್ಣುಪರಿಸರ ರಕ್ಷಣೆದಕ್ಷಿಣ ಭಾರತದ ನದಿಗಳುಶ್ಯೆಕ್ಷಣಿಕ ತಂತ್ರಜ್ಞಾನಕಾನೂನುರತನ್ ನಾವಲ್ ಟಾಟಾಶರಣಬಸವೇಶ್ವರ ದೇವಸ್ಥಾನ ಕಲಬುರಗಿಅರ್ಜುನಜಾಹೀರಾತುರಾಘವಾಂಕಭಾರತದಲ್ಲಿನ ಜಾತಿ ಪದ್ದತಿದ್ವೈತ ದರ್ಶನರಾಮಾನುಜಕರ್ಣಾಟ ಭಾರತ ಕಥಾಮಂಜರಿಫ್ರಾನ್ಸ್ಪ್ರಬಂಧ ರಚನೆಎನ್ ಸಿ ಸಿಶಾಸನಗಳುಋಗ್ವೇದಇತಿಹಾಸಹಣಕಾಸುಸ್ತ್ರೀವ್ಯವಹಾರ ನಿವ೯ಹಣೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜಾತಿಹಂಪೆಹನುಮಾನ್ ಚಾಲೀಸಬೇಡಿಕೆಯ ನಿಯಮವಾಯುಗೋಳಸಕಲೇಶಪುರಗರ್ಭಧಾರಣೆ🡆 More