ನರ್ತಕಿ ಚಂದ್ರಲೇಖಾ

ಚಂದ್ರಲೇಖಾ ಪ್ರಭುದಾಸ್ ಪಟೇಲ್ (೬ ಡಿಸೆಂಬರ್ ೧೯೨೮ - ೩೦ ಡಿಸೆಂಬರ್ ೨೦೦೬), ಇವರನ್ನುಸಾಮಾನ್ಯವಾಗಿ ಚಂದ್ರಲೇಖಾ ಎಂದು ಕರೆಯುತ್ತಾರೆ.

ಅವರು ಭಾರತದ ನರ್ತಕಿ ಮತ್ತು ನೃತ್ಯ ಸಂಯೋಜಕರಾಗಿದ್ದರು. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ವಲ್ಲಭಭಾಯಿ ಪಟೇಲ್ ಅವರ ಸೋದರ ಸೊಸೆಯಾದ ಇವರು ಭರತನಾಟ್ಯದ ಜೊತೆಗೆ ಯೋಗ ಮತ್ತು ಕಲರಿಪ್ಪಯಟ್ಟು ಮುಂತಾದ ಸಮರ ಕಲೆಗಳನ್ನು ಬೆಸೆಯುವ ಪ್ರದರ್ಶನಗಳ ಪ್ರತಿಪಾದಕರಾಗಿದ್ದರು.

ಚಂದ್ರಲೇಖಾ
Born(೧೯೨೮-೧೨-೦೬)೬ ಡಿಸೆಂಬರ್ ೧೯೨೮
ವಡಾ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
Died30 December 2006(2006-12-30) (aged 78)

ಅವರಿಗೆ ಸಂಗೀತ ನಾಟಕ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿ ಹಾಗೂ ಸಂಗೀತ, ನೃತ್ಯ ಮತ್ತು ನಾಟಕಕ್ಕಾಗಿ ಭಾರತದ ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿ ಹಾಗೂ ೨೦೦೪ ರಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ನೀಡಲಾಯಿತು.

ಆರಂಭಿಕ ಜೀವನ ಮತ್ತು ಶಿಕ್ಷಣ

ಅವರು ಮಹಾರಾಷ್ಟ್ರದ ವಡಾದಲ್ಲಿ ಅಜ್ಞೇಯತಾವಾದಿ ವೈದ್ಯ ತಂದೆ ಮತ್ತು ಧರ್ಮನಿಷ್ಠ ಹಿಂದೂ ತಾಯಿಗೆ ಜನಿಸಿದರು. ಅವರು ತಮ್ಮ ಬಾಲ್ಯವನ್ನು ತಮ್ಮ ಸ್ಥಳೀಯ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕಳೆದರು.

ವೃತ್ತಿ

ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ನಂತರ, ಚಂದ್ರಲೇಖಾರವರು ಕಾನೂನು ಅಧ್ಯಯನ ಮಾಡಿದರು, ಆದರೆ ನೃತ್ಯವನ್ನು ಕಲಿಯುವ ಸಲುವಾಗಿ ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು. ಅವರು ಎಲ್ಲಪ್ಪ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಭಾರತದ ದೇವಾಲಯದ ನೃತ್ಯಗಾರರು ಅಭ್ಯಾಸ ಮಾಡುವ ನೃತ್ಯದ ಒಂದು ರೂಪವಾದ ದಾಸಿ ಅಟ್ಟಂನೊಂದಿಗೆ ತಮ್ಮ ನೃತ್ಯವನ್ನು ಪ್ರಾರಂಭಿಸಿದರು. ಅವರು ತಮ್ಮ ನೃತ್ಯ ಶಿಕ್ಷಣದಲ್ಲಿ ಬಾಲಸರಸ್ವತಿ ಮತ್ತು ರುಕ್ಮಿಣಿ ದೇವಿ ಅರುಂಡೇಲ್‌ರಿಂದ ಪ್ರಭಾವಿತರಾಗಿದ್ದರು. ಆದರೆ ಇವರ ನೃತ್ಯ ಸಂಯೋಜನೆಯು ಹಿಂದಿನಿಂದಲೂ ಹೆಚ್ಚು ಪ್ರಭಾವಿತರಾಗಿದ್ದರು ಎಂದು ತೋರಿಸುತ್ತಿತ್ತು. ಚಂದ್ರಲೇಖಾ ಅವರು ಭರತನಾಟ್ಯದಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪಡೆದಿದ್ದರೂ, ಅವರ ಇತರ ನೃತ್ಯಗಳು, ಕಲರಿಪ್ಪಯಟ್ಟುಗಳಂತಹ ಸಮರ ಕಲೆಗಳು ಮತ್ತು ಪ್ರದರ್ಶನ ಕಲೆಗಳಿಂದ ಅಂಶಗಳನ್ನು ಒಳಗೊಂಡಿರುವ ಆಧುನಿಕೋತ್ತರ ಫ್ಯೂಷನ್ ನೃತ್ಯಗಳಿಗೆ ತಮ್ಮ ಗಮನವನ್ನು ಬದಲಾಯಿಸಿದರು. ಅವರ ಪ್ರಬಂಧ 'ಮಿಲಿಟೆಂಟ್ ಒರಿಜಿನ್ಸ್ ಆಫ್ ಇಂಡಿಯನ್ ಡ್ಯಾನ್ಸ್', ಮೂಲತಃ ೧೯೭೯ ರಲ್ಲಿ ಸೋಶಿಯಲ್ ಸೈಂಟಿಸ್ಟ್‌ನಲ್ಲಿ ಪ್ರಕಟವಾಯಿತು. ನಂತರ ತುಲಿಕಾ ಬುಕ್ಸ್ ಪ್ರಕಟಿಸಿದ ಇಂಡಿಯಾ ಸಿನ್ಸ್ ೯೦ ರ ಸರಣಿಯ ಭಾಗವಾದ ಇಂಪ್ರೊವೈಸ್ಡ್ ಫ್ಯೂಚರ್ಸ್: ಎನ್‌ಕೌಂಟರಿಂಗ್ ದಿ ಬಾಡಿ ಇನ್ ಪರ್ಫಾರ್ಮೆನ್ಸ್ ಸಂಪುಟದಲ್ಲಿ ಮರುಮುದ್ರಣ ಮಾಡಲಾಯಿತು.

ಪ್ರಶಸ್ತಿಗಳು ಮತ್ತು ಮನ್ನಣೆ

ಉಲ್ಲೇಖಗಳು

ಗ್ರಂಥಸೂಚಿ

ರುಸ್ತಂ ಬರುಚಾ. ಚಂದ್ರಲೇಖಾ: ಮಹಿಳೆ, ನೃತ್ಯ, ಪ್ರತಿರೋಧ. ಸಿಂಧೂ. ನವದೆಹಲಿ: ೧೯೯೫. ISBN 81-7223-168-7

ಬಾಹ್ಯ ಕೊಂಡಿಗಳು

Tags:

ನರ್ತಕಿ ಚಂದ್ರಲೇಖಾ ಆರಂಭಿಕ ಜೀವನ ಮತ್ತು ಶಿಕ್ಷಣನರ್ತಕಿ ಚಂದ್ರಲೇಖಾ ವೃತ್ತಿನರ್ತಕಿ ಚಂದ್ರಲೇಖಾ ಪ್ರಶಸ್ತಿಗಳು ಮತ್ತು ಮನ್ನಣೆನರ್ತಕಿ ಚಂದ್ರಲೇಖಾ ಉಲ್ಲೇಖಗಳುನರ್ತಕಿ ಚಂದ್ರಲೇಖಾ ಗ್ರಂಥಸೂಚಿನರ್ತಕಿ ಚಂದ್ರಲೇಖಾ ಬಾಹ್ಯ ಕೊಂಡಿಗಳುನರ್ತಕಿ ಚಂದ್ರಲೇಖಾಕಳರಿ ಪಯಟ್ಟುಭರತನಾಟ್ಯಭಾರತಯೋಗವಲ್ಲಭ್‌ಭಾಯಿ ಪಟೇಲ್

🔥 Trending searches on Wiki ಕನ್ನಡ:

ಮಲೈ ಮಹದೇಶ್ವರ ಬೆಟ್ಟಗಣೇಶಕನಕದಾಸರುಅಜಿಮ್ ಪ್ರೇಮ್‍ಜಿದಯಾನಂದ ಸರಸ್ವತಿಲೆಕ್ಕ ಪರಿಶೋಧನೆಕರ್ನಾಟಕದಲ್ಲಿ ಸಹಕಾರ ಚಳವಳಿಮೆಂತೆಹೊನೊಲುಲುಪ್ರಧಾನ ಖಿನ್ನತೆಯ ಅಸ್ವಸ್ಥತೆಮೈಸೂರುಆರೋಗ್ಯವೇದಹೂವುಕರ್ನಾಟಕ ಪೊಲೀಸ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪದ್ವೈತಅಭಿಮನ್ಯುಹುಡುಗಿಆಯ್ದಕ್ಕಿ ಲಕ್ಕಮ್ಮಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕ ಹೈ ಕೋರ್ಟ್ಕಲ್ಹಣನಾಗಮಂಡಲ (ಚಲನಚಿತ್ರ)ನೈಸರ್ಗಿಕ ಸಂಪನ್ಮೂಲನದಿಪಾಟಲಿಪುತ್ರಜಾತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಯುಗಾದಿಕನ್ನಡ ಸಾಹಿತ್ಯ ಪರಿಷತ್ತುರವಿಚಂದ್ರನ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಆತ್ಮಚರಿತ್ರೆಕಾವ್ಯಮೀಮಾಂಸೆಗಣಿತಶಾಲೆಮೇರಿ ಕೋಮ್ಒಂದನೆಯ ಮಹಾಯುದ್ಧಕೃಷಿಕಲಾವಿದಕಬೀರ್ದ್ರಾವಿಡ ಭಾಷೆಗಳುಕರ್ನಾಟಕದ ಮುಖ್ಯಮಂತ್ರಿಗಳುಬ್ರಿಟೀಷ್ ಸಾಮ್ರಾಜ್ಯಗ್ರಹವಾಯು ಮಾಲಿನ್ಯಸೇನಾ ದಿನ (ಭಾರತ)ರಾಜಸ್ಥಾನ್ ರಾಯಲ್ಸ್ಭಾರತ ಬಿಟ್ಟು ತೊಲಗಿ ಚಳುವಳಿಆರ್ಚ್ ಲಿನಕ್ಸ್ಹಗ್ಗಮಳೆಗಾಲಶಿಕ್ಷಣಕನ್ನಡ ಸಂಧಿಲೋಕಸಭೆಹೆಚ್.ಡಿ.ದೇವೇಗೌಡಸರ್ವಜ್ಞಪುನೀತ್ ರಾಜ್‍ಕುಮಾರ್ಕೇಂದ್ರಾಡಳಿತ ಪ್ರದೇಶಗಳುಉಡುಪಿ ಜಿಲ್ಲೆಕೋಲಾರ ಚಿನ್ನದ ಗಣಿ (ಪ್ರದೇಶ)ತುಮಕೂರುಆದೇಶ ಸಂಧಿಅರಿಸ್ಟಾಟಲ್‌ಪಾಕಿಸ್ತಾನರಾಮಕೃಷ್ಣ ಪರಮಹಂಸಕನ್ನಡಮಣ್ಣುರಾಮಪ್ರಬಂಧ ರಚನೆಹಬ್ಬಶೈಕ್ಷಣಿಕ ಮನೋವಿಜ್ಞಾನಗೋಕಾಕ ಜಲಪಾತಆರ್ಯ ಸಮಾಜ🡆 More