ಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು

ಗುಮ್ಮೆಗುತ್ತು ಬಸದಿಯ ಕಾರ್ಕಳ ತಾಲೂಕು ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾಳ್‌ಬೆಟ್ಟು ಗ್ರಾಮದಲ್ಲಿದೆ.

ಮಾರ್ಗ

ಬಸದಿಯ ಹತ್ತಿರ ಪ್ರಾಥಮಿಕ ಶಾಲೆ ಇದೆ. ಇದಕ್ಕೆ ೫ ಕಿ.ಮೀ. ವ್ಯಾಪ್ತಿಯಲ್ಲಿ ಮಾಗಣೆ ಬಸದಿ ನಾರಾವಿಯ ಶ್ರೀ ಧರ್ಮನಾಥ ಸ್ವಾಮಿ ಬಸದಿಯಿದೆ. ಗುಮ್ಮೆಗುತ್ತು ಬಸದಿಗೆ ಸುಮಾರು ೭೦ ಜೈನ ಕುಟುಂಬಗಳಿವೆ. ಬಸದಿಯು ಕಾರ್ಕಳದ ದಾನಶಾಲಾ ಮಠದ ವ್ಯಾಪ್ತಿಗೊಳಪಟ್ಟಿದೆ. ಇದು ಧರ್ಮಸ್ಥಳ- ಕಾರ್ಕಳ ರಸ್ತೆಯಲ್ಲಿ ಸಿಗುವ ಈದು ಕ್ರಾಸ್‌ನಿಂದ ೫ ಕಿ.ಮೀ ದೂರದಲ್ಲಿದೆ.

ಇತಿಹಾಸ

ಬಸದಿಯನ್ನು ಸುಮಾರು ೧೫೦ ವರ್ಷಗಳ ಹಿಂದೆ ನಾರ್ಣಪ್ಪ ಮಲ್ಲರು ಊರವರ ಸಹಕಾರದಿಂದ ಕಟ್ಟಿಸಿರುತ್ತಾರೆ ಎಂದು ತಿಳಿದುಬರುತ್ತದೆ. ಅವರು ಆಸ್ತಿ ಪರಾಭಾರೆ ಮಾಡಿ ಹೋಗಿರುವುದರಿಂದ ಅವರ ಸಂತತಿಯವರು ಈಗ ಇಲ್ಲಿ ಯಾರೂ ಇಲ್ಲ. ಸುಮಾರು ೧೫೦ ವರ್ಷಗಳ ಹಿಂದೆ ಧಾರ್ಮಿಕ ಆಚರಣೆಯಾದ ಅನಂತ ನೋಂಪಿ ನಿರ್ವಹಿಸುವಾಗ ಬಂದ ಸಂಘರ್ಷದಿಂದ ಈ ಪ್ರತ್ಯೇಕ ಬಸದಿ ರಚಿಸಲ್ಪಟ್ಟಿತ್ತು. ಬಸದಿಗೆ ಮೇಗಿನ ನೆಲೆ ಇದೆ. ಯಾವುದೇ ವಿಗ್ರಹಗಳಿಲ್ಲ.

ಆರಾಧನೆ ಮತ್ತು ರಚನೆ

ಪಾರ್ಶ್ವನಾಥಸ್ವಾಮಿ, ಸುಪಾರ್ಶ್ವನಾಥಸ್ವಾಮಿ, ಪದ್ಮಾವತಿಯಮ್ಮ, ಜ್ವಾಲಾಮಾಲಿನಿ, ಬ್ರಹ್ಮದೇವರು, ನಾಗದೇವರು ಇದ್ದಾರೆ. ಬಸದಿಗೆ ಮಾನಸ್ತಂಭವಿಲ್ಲ. ಬಸದಿಯ ಹಿಂಬದಿಯಲ್ಲಿ ಪಾರಿಜಾತ ಗಿಡವಿದೆ. ಬಸದಿಯ ಮುಂದುಗಡೆಯ ಗೋಪುರವನ್ನು ಎಲ್ಲಾ ಧಾರ್ಮಿಕ ಕೆಲಸಗಳಿಗೆ ಉಪಯೋಗಿಸುತ್ತಾರೆ.ಅಂಗಳದ ಎಡಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ನಾಗರಕಲ್ಲು ಇದೆ. ಬಸದಿಯ ಪ್ರಾಕಾರ ಗೋಡೆಯನ್ನು ಕರ್ಗಲ್ಲಿನಿಂದ ಕಟ್ಟಿದ್ದಾರೆ. ಪ್ರಾರ್ಥನಾ ಮಂಟಪದಲ್ಲಿ ೪ ಕಂಬಗಳಿವೆ. ಅಲ್ಲೇ ಘಂಟೆಯನ್ನು ತೂಗು ಹಾಕಲಾಗಿದೆ. ತೀರ್ಥ ಮಂಟಪ ಇದೆ. ಗಂಧಕುಟಿಯ ತೀರ್ಥಂಕರ ಮಂಟಪದಲ್ಲಿದೆ. ಮಾತೆ ಪದ್ಮಾವತಿಯ ಮೂರ್ತಿ ಇದ್ದು. ಅಮ್ಮನವರ ಮೂರ್ತಿ ಉತ್ತರಾಭಿಮುಖವಾಗಿದ್ದು, ಕುಕ್ಕುಟ ಸರ್ಪ ಇದೆ. ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮ ಇದೆ. ಇಲ್ಲಿರುವ ಜಿನಬಿಂಬಗಳ ಮೇಲೆ ಪ್ರಾಚೀನ ಬರವಣಿಗೆ ಕಾಣುವುದಿಲ್ಲ. ಬ್ರಹ್ಮದೇವರ ಸಾನ್ನಿಧ್ಯದಲ್ಲಿ ಶಿಲಾಶಾಸನವಿದೆ.

ಪೂಜೆ

ನಿತ್ಯ ಪೂಜೆ ನಡೆಯುತ್ತದೆ.ಪ್ರಾರ್ಥನೆ, ಹರಕೆಗಳನ್ನು ಪದ್ಮಾವತೀ ದೇವಿಯ ಸನ್ನಿಧಿಯಲ್ಲಿ ನಡೆಸಲಾಗುತ್ತದೆ. ಬಸದಿಯಲ್ಲಿ ದಿನಕ್ಕೆ ೨ ಬಾರಿ ಪೂಜೆ ನಡೆಯುತ್ತದೆ. ನವರಾತ್ರಿ ಪೂಜೆ, ಕ್ಷೀರಾಭಿಷೇಕ, ಪದ್ಮಾವತೀ ಅಮ್ಮನವರಲ್ಲಿ ವಾರ್ಷಿಕ ಮಹಾಪೂಜೆ ನಡೆಯುತ್ತದೆ. ಸರಕಾರದಿಂದ ಯಾವುದೇ ಧನಸಹಾಯವಿಲ್ಲ.

ಉಲ್ಲೇಖಗಳು

Tags:

ಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು ಮಾರ್ಗಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು ಇತಿಹಾಸಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು ಆರಾಧನೆ ಮತ್ತು ರಚನೆಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು ಪೂಜೆಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು ಉಲ್ಲೇಖಗಳುಚಂದ್ರನಾಥಸ್ವಾಮಿ ಗುಮ್ಮೆಗುತ್ತು ಬಸದಿ, ನೂರಾಳ್‌ಬೆಟ್ಟು

🔥 Trending searches on Wiki ಕನ್ನಡ:

ಜಾಹೀರಾತುಗರುಡ ಪುರಾಣಗ್ರಾಮ ಪಂಚಾಯತಿಆದಿ ಶಂಕರರು ಮತ್ತು ಅದ್ವೈತಕ್ರಿಸ್ತ ಶಕಮಕರ ಸಂಕ್ರಾಂತಿಸಿಂಹವಿಜಯಪುರ ಜಿಲ್ಲೆಸೂರ್ಯವ್ಯೂಹದ ಗ್ರಹಗಳುಗೌತಮಿಪುತ್ರ ಶಾತಕರ್ಣಿನಾಮಪದಏಡ್ಸ್ ರೋಗಭಾರತೀಯ ಸಂಸ್ಕೃತಿಪ್ರಜಾಪ್ರಭುತ್ವಅಣ್ಣಯ್ಯ (ಚಲನಚಿತ್ರ)ಸುಭಾಷ್ ಚಂದ್ರ ಬೋಸ್ಭಾರತದ ಸಂವಿಧಾನಪಂಚತಂತ್ರಭಾರತೀಯ ರಿಸರ್ವ್ ಬ್ಯಾಂಕ್ಫೀನಿಕ್ಸ್ ಪಕ್ಷಿವಿಜಯನಗರಕರ್ನಾಟಕ ಸರ್ಕಾರರಾಮನಗರವಿಜಯಪುರ ಜಿಲ್ಲೆಯ ತಾಲೂಕುಗಳುಸಂಧ್ಯಾವಂದನ ಪೂರ್ಣಪಾಠಭಾರತದ ಜನಸಂಖ್ಯೆಯ ಬೆಳವಣಿಗೆಖ್ಯಾತ ಕರ್ನಾಟಕ ವೃತ್ತಉಪನಯನಅರ್ಥಶಾಸ್ತ್ರಅಂತರಜಾಲಗೋಕರ್ಣದಿಕ್ಸೂಚಿಮಾಟ - ಮಂತ್ರಶಾಸಕಾಂಗದರ್ಶನ್ ತೂಗುದೀಪ್ಅವತಾರಸೂರ್ಯಉತ್ತರ ಪ್ರದೇಶಛಂದಸ್ಸುರೋಸ್‌ಮರಿಕರ್ನಾಟಕ ಐತಿಹಾಸಿಕ ಸ್ಥಳಗಳುಕನ್ನಡ ಸಂಧಿದಲಿತಗರ್ಭಕಂಠದ ಕ್ಯಾನ್ಸರ್‌ತತ್ಸಮ-ತದ್ಭವಗುಪ್ತ ಸಾಮ್ರಾಜ್ಯಭರತ-ಬಾಹುಬಲಿವಿ. ಕೃ. ಗೋಕಾಕತ್ರಿಪದಿಚಿಕ್ಕಮಗಳೂರುಗುಬ್ಬಚ್ಚಿಕಾಮಾಲೆಭರತನಾಟ್ಯಮುಖ್ಯ ಪುಟಕರ್ನಾಟಕದ ಶಾಸನಗಳುಅಮಿತ್ ಶಾಕರ್ನಾಟಕ ವಿಧಾನ ಪರಿಷತ್ಚಂಪೂಹೆಚ್.ಡಿ.ದೇವೇಗೌಡಪಂಪ ಪ್ರಶಸ್ತಿದುಂಡು ಮೇಜಿನ ಸಭೆ(ಭಾರತ)ಆದಿ ಶಂಕರ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಶ್ರೀ ರಾಘವೇಂದ್ರ ಸ್ವಾಮಿಗಳುಲಡಾಖ್ಬರಗೂರು ರಾಮಚಂದ್ರಪ್ಪಇಂದಿರಾ ಗಾಂಧಿಇಸ್ಲಾಂ ಧರ್ಮನವಣೆರಾಣೇಬೆನ್ನೂರುವೀಳ್ಯದೆಲೆಕನ್ನಡ ಅಕ್ಷರಮಾಲೆಕರ್ನಾಟಕ ವಿಧಾನಸಭೆ ಚುನಾವಣೆ, 2013ಜನಪದ ಆಭರಣಗಳುಸಂಸ್ಕಾರಸುಧಾ ಮೂರ್ತಿಹಾನಗಲ್ಜಾಗತಿಕ ತಾಪಮಾನಭಾರತೀಯ ಧರ್ಮಗಳು🡆 More