ಗೋಲ್ಡನ್ ರೆಟ್ರೀವರ್

ಗೋಲ್ಡನ್ ರೆಟ್ರೀವರ್ ಕೋವಿಶ್ವಾನಗಳಲ್ಲಿ ಒಂದು ದೊಡ್ದ ಗಾತ್ರದ ತಳಿಯಾಗಿದೆ.ಶೂಟ್ ಹಾನಿಯಾಗದೆ ಹಿಂಪಡೆಯಲು ತಮ್ಮ ಸಾಮರ್ಥ್ಯವನ್ನು ಬಳಸುತ್ತಾರೆ.

ಆದ್ದರಿಂದ ಇವುಗಳಿಗೆ ರೆಟ್ರೀವರ್ ಎಂದು ಹೆಸರಿಡಲಾಗಿದೆ.ಇವುಗಳು ನೀರನ್ನು ಹೆಚ್ಚು ಇಷ್ಟ ಪಡುತ್ತದೆ .ಹಾಗೆಯೆ ನೀರಿನಲ್ಲಿ ಇರಲು ಇಷ್ಟ ಪಡುತ್ತದೆ.ಇವುಗಳಿಗೆ ತರಬೇತಿಯನ್ನು ನೀಡಲು ಸುಲಭ,ಇವು ಲಾಗ್ ಲೇಪಿತ ತಳಿಗಳು.ಇವುಗಳ ಒಳ ಕೋಟ್ ಬಹಳ ದಟ್ಟವಾಗಿರುತ್ತದೆ.ಆದುದರಿಂದ ಇವುಗಳಿಗೆ ಚಳಿಯನ್ನು ತಡೆಯಲು ಸುಲಭ ಹಾಗು ಹೊರಾಂಗಣ ಉಷ್ಣತೆಯನ್ನು ತಡೆಯಲು ಸುಲಭವಾಗುತ್ತದೆ.ಇವುಗಳ ಹೊರ ಕೋಟ್ ತೆಳುವಾಗಿರುತ್ತದೆ.ಇದರಿಂದ ನೀರನ್ನು ಹಿಮ್ಮೆಟ್ಟಿಸುತ್ತದೆ.ಈ ನಾಯಿಗಳು ಉಪನಗರ ಮತ್ತು ದೇಶದ ಪರಿಸರದಲ್ಲಿ ಜೀವಿಸಲು ಸೂಕ್ತವಾಗಿದೆ.ಇವುಗಳಿಗೆ ಗಣನೀಯ ಹೊರಾಂಗಣ ವ್ಯಾಯಾಮ ಬೇಕಾಗುತ್ತದೆ.ಆದರೆ ಇವುಗಳಿಗೆ ಒಂದು ಬೇಲಿಯಿರುವ ಪ್ರದೇಶದಲ್ಲಿ ಜಾಗ ತಯಾರಿಸಬೇಕು ಏಕೆಂದರೆ ಇವುಗಳಿಗೆ ಓಡಾಟದ ಕಡೆಗೆ ಗಮನ ಹೆಚ್ಚು.ಅವುಗಳಿಗೆ ಆಗಾಗ ಒಂದು ತಕ್ಕ ಮಟ್ಟಿಗೆ ನಿಯಮಿತ ರೂಪುಗೊಳಿಸುವುದು ಅಗತ್ಯವಿದೆ. ಈ ತಳಿ ಸ್ವಚ್ಛ ನಯಿಯ ತಳಿಗೆ ಸೇರಿದೆ.ಈ ನಾಯಿಯು ಕುರುಡರಿಗೆ ಸಹಾಯಕವಾಗಿದೆ ಹಾಗೂ ಕಿವುಡರಿಗೆ ಹಿಯರಿಂಗ್ ನಾಯಿಯಾಗಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಬಿಟೆ ಆಡಿವ ತರಬೇತಿಯನ್ನು ಈ ನಾಯಿಗಳಿಗ್ರ್ ನೀಡಲಾಗುತ್ತದೆ.ಹಾಗೆಯೆ ಪತ್ತೆ ಹಚ್ಚುವ ಕೆಲಸವನ್ನು ಸಹ ಈ ನಾಯಿಯು ಮಾಡುತ್ತದೆ.ಹುಡುಕಾಟ ಮತ್ತು ಪಾರುಗಾಣಿಕೆ ತರಬೇತಿಯು ನೀಡಲಾಗುತ್ತದೆ.ಯೂ ಯೆಸ್ ನಲ್ಲಿ ಇವು ಅತ್ಯಂತ ಜನಪ್ರಿಯ ತಳಿಗಳಲ್ಲಿ ಮೂರನೆ ಸ್ಥಾನ ಹೊಂದಿದೆ. ದನೆ ಸ್ಥಾನ ,ಯೂ ಕೆನಲ್ಲಿ ಎಂಟನೆ ಸ್ಥಾನ ಪಡೆದುಕೊಂಡಿದೆ.ಇವು ಆಯ್ಕೆ ಮಾಡಿ ತಿನ್ನುವ ನಾಯಿಗಳು .ಇವುಗಳಿಗೆ ಹೆಚ್ಚಿನ ವ್ಯಾಯಾಮ ಬೇಕಾಗುತ್ತದೆ. ಇವುಗಳಿಗೆ ಆಟವಾಡುವ ಹುಚ್ಚು ಹೆಚ್ಚು,ಆದರೆ ಹೆಚ್ಚಿನ ತರಬೇತಿ ನೀಡಬೇಕಾಗುತ್ತದೆ. ಗೋಲ್ಡನ್ ರೆಟ್ರೀವರ್ ಒಂದು ದೈತ್ಯ ನಾಯಿಯ ತಳಿ.ದಟ್ಟವಾದ ,ನೀರನ್ನು ಹಿಮ್ಮೆಟ್ಟಿಸುವ ಕೋಟ್ ಹೊಂದಿದೆ.ಗೋಲ್ಡನ್ ರೆಟ್ರೀವರ್ ಗಳು ಹಳದಿ ಮತ್ತು ಚಿನ್ನದ ಬಣ್ಣದಲ್ಲಿರುತ್ತದೆ.ಇವುಗಳು ಚಾಣಾಕ್ಷತೆ ಇರುವ ನಾಯಿಗಳು.ಈ ನಾಯಿಗಳು ಪ್ರಾಮಾಣಿಕ ಹಾಗೂ ಸ್ನೇಹಿತರಂತೆ,ಸಾಕಿವವರ ಜೊತೆಗೆ ಇರುತ್ತದೆ. ಈ ತಳಿಗಲಳಲ್ಲಿ ಮೂರು ತರಹದ ನಾಯಿಗಳನ್ನು ಕಾಣಬಹುದು. ೧)ಬ್ರಿಟಿಷ್ ನಾಯಿ-ಇವುಗಳು ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡುಬರುತ್ತದೆ.ಇದರ ಸ್ಕಲ್ ಅಗಲವಾಗಿರುತ್ತದೆ,ಇದರ ಕೋಟ್ ಸಾಮಾನ್ಯವಾಗಿ ಹಗುರವಾಗಿರುತ್ತದೆ.ಗಂಡು ನಾಯಿ ಸುಮಾರು ೫೬-೬೧ ಹಾಗೆಯೇ ಹೆಣ್ಣು ನಾಯಿ ೫೧-೫೬ ಇರುತ್ತದೆ. ೨)ಅಮೇರಿಕನ್ ನಾಯಿ-ಇವುಗಳ ಸ್ವಲ್ಪ ಚಿಕ್ಕ ಗಾತ್ರದಲ್ಲಿ ಇರುತ್ತದೆ.ಅಷ್ಟು ದಷ್ಟವಾಗಿರುವುದಿಲ್ಲ.ಗಂಡು ನಾಯಿ ಸುಮಾರು ೫೮-೬೧ ಹಾಗೆಯೇ ಹೆಣ್ಣು ನಾಯಿ ೫೫-೫೮ ಉದ್ದವಿರುತ್ತದೆ‌.ಇವುಗಳ ಕೋಟ್ ಸಾಮಾನ್ಯವಾಗಿ ಕಡು ಬಣ್ಣಗಳಲ್ಲಿರುತ್ತವೆ ಮತ್ತು ಹಲವಾರು ಶೇಡ್ಸ್ ಗಳಲ್ಲಿ ಕಂಡುಬರುತ್ತದೆ. ೩)ಕೆನಡಾದ ನಾಯಿ-ಇವುಗಳ ಕೋಟ್ ಹಗುರವಾಗಿ ಮತ್ತು ಕಡು ಬಣ್ಣದಲ್ಲಿರುತ್ತದೆ.ಈ ನಾಯಿ ಬ್ರಿಟಿಷ್ ಮತ್ತು ಅಮೇರಿಕಾದ ನಾಯಿಗಳಿಗಿಂತ ಉದ್ದವಾಗಿರುತ್ತದೆ.ಗಂಡು ನಾಯಿ ೫೭-೬೨ ಹೆಣ್ಣು ನಾಯಿ ೫೫-೫೭ ಉದ್ದವಿರುತ್ತದೆ.

ಗೋಲ್ಡನ್ ರೆಟ್ರೀವರ್
ಗೋಲ್ಡನ್ ರೇಟ್ರೀವರ್

ಆರೋಗ್ಯ ಮತ್ತು ಆಯಸ್ಸು.

ಗೋಲ್ಡನ್ ರೆಟ್ರೀವರ್ ಗಳ ಆಯಸ್ಸು ಸುಮಾರು ೧0-೧೨ ವರ್ಷಗಳು. ವರ್ಷಕೋಮ್ಮೆ ವೈದ್ಯರ ಸಲಹೆ ಪಡೆಯಬೇಕು.ಇವುಗಳಿಗೆ ಜೆನೆಟಿಕ್ ತೊಂದರೆಗಳು ಹಾಗೂ ಇತರೆ ಅನಾರೋಗ್ಯದ ತೊಂದರೆಗಳು ಕಾಣಿಸಿಕೊಳ್ಳಬಹುದು.ಹಿಪ್ ಡಿಸ್ಪ್ಲಾಸಿಯ ಒಂದು ಸಹಜವಾಗಿ ಕಾಣಿಸಿಕೊಳ್ಳುವ ರೋಗವಾಗಿದೆ.ಬೊಜ್ಜು ಸಮಸ್ಯೆಯೂ ಸಹಜವಾಗಿ ಕಾಣಿಸಿಕೊಳ್ಳುತ್ತದೆ ಏಕೆಂದರೆ ಹೆಚ್ಚು ತಿನ್ನುವ ಸಮಸ್ಯೆ ಇರುತ್ತದೆ.ಚಿಕ್ಕ ನಾಯಿ ಮರಿ ೨-೩ ಕಪ್ ಆಹಾರ್ವನ್ನು ಸೇವಿಸುವುದಾದರೆ ದೊಡ್ದ ನಾಯಿ ೩-೫ ಕಪ್ ಆಹಾರ ಸೇವಿಸುತ್ತದೆ.ಈ ಆಹಾರ ಕ್ರಮವು ನಾಯಿಯಿಂದ ನಾಯಿಗೆ ಬದಲಾಗುತ್ತದೆ.ನಾಯಿಯು ಎಷ್ಟು ಉತ್ಸಾಹದಿಂದ ಇರುತ್ತದೆಯೋ ಎನ್ನುವುದರ ಮೇಲೆ ನಿರ್ದಾರವಾಗುತ್ತದೆ.

ಅನಾರೋಗ್ಯದ ಸಮಸ್ಯೆಗಳು

ಸಹಜವಾಗಿ ಈ ನಾಯಿಗಳಲ್ಲಿ ಕಾನ್ಸರ್ ಹೆಚ್ಚು ಕಾಣಿಸುತ್ತದೆ. ಗೋಲ್ಡನ್ ರೆಟ್ರೀವರ್ ಕ್ಲಬ್ ಆಫ್ ಅಮೇರಿಕಾ ೧೯೯೮ರಲ್ಲಿ ಈ ನಾಯಿಗಳ ಆರೋಗ್ಯ ಪರೀಕ್ಷೆ ಮಾಡಿದಾಗ ಶೇಕಡ ೬೧.೪% ಗೋಲ್ಡನ್ ರೆಟ್ರೀವರ್ ನಾಯಿಗಳು ಕಾನ್ಸರ್ ನಿಂದ ಸಾವನ್ನಪ್ಪಿದೆ ಎಂದು ಹೇಳಿದರು.ಆದರೂ ಮಾರುವುದ್ದಕ್ಕಿಂತ ಮುಂಚೆ ಈ ರೋಗವನ್ನು ಪರೀಕ್ಷೆ ಮಾಡಿ ತದನಂತರ ಮಾರಾಟ ಮಾಡುವುದುಂಟು.ಈ ತಳಿಗಳಲ್ಲಿ ಕಣ್ಣಿನ ಸಮಸ್ಯೆಯೂ ಕಂಡು ಬರುತ್ತದೆ.ಹೃದಯ ಸಮಸ್ಯೆಯೂ ಕಾಣಿಸಬಹುದು.ಚರ್ಮದ ಸಮಸ್ಯೆಯೂ ಕಾಣಿಸುತ್ತದೆ.ಕಿಡ್ನಿ ತೊಂದರೆಗಳು ಉಂಟಾಗುತ್ತದೆ.

ಗ್ರೂಮಿಂಗ್

ಇವುಗಳಿಗೆ ಆಗಾಗ ಸ್ನಾನ ಮಾಡಿಸಬೇಕು.ಎರಡು ತಿಂಗಳಿಗೊಮ್ಮೆ ಸ್ನಾನ ಮಾಡಿಸಬೇಕು‌.ಅವುಗಳ ಕಿವಿಗಳನ್ನು ಆಗಾಗ ಶುದ್ಧಗೊಳಿಸಬೇಕು ಇಲ್ಲವಾದರೆ ಕಿವಿ ರೋಗಗಳು ಕಾಣಿಸುತ್ತದೆ.

ಚಟುವಟಿಕೆಗಳು

ಇವುಗಳು ಈಜುಗಾರಿಕೆಯಲ್ಲಿ ಎತ್ತಿದ ಕಯ್ ಎಂದು ಹೇಳಬಹುದು.ಮೊದಲ ಮೂರು ಶಿಸ್ತಿನ ನಾಯಿಯ ಪಟ್ಟಿಯಲ್ಲಿ ಗೋಲ್ಡನ್ ರೆಟ್ರೀವರ್ ಗಳು ಮೊದಲನೆ ಸ್ಥಾನ ಪಡೆದುಕೊಂಡಿದೆ.ಅದರಲ್ಲೂ ಹೆಣ್ಣು ನಾಯಿಗಳು ಮೊದಲನೆ ಸ್ಥಾನ.

ಎಕೆಸಿ ವಿಧೇಯತೆ ಚಾಂಪಿಯನ್ ಪ್ರಶಸ್ತಿಯನ್ನು ಸಾಧಿಸಿದ ಮೊದಲ ಮೂರು ನಾಯಿಗಳು ಗೋಲ್ಡನ್ ರಿಟ್ರೈವರ್ಸ್; ಮೂವರಲ್ಲಿ ಮೊದಲನೆಯವನು 'ಚ. ಮೋರ್ಲ್ಯಾಂಡ್ಸ್ ಗೋಲ್ಡನ್ ಟೋಂಕಾ '.

ಗೋಲ್ಡನ್ ರಿಟ್ರೈವರ್‌ಗಳು ತುಂಬಾ ತರಬೇತಿ ಪಡೆಯಬಹುದಾದ ಕಾರಣ, ಅವುಗಳನ್ನು ವಿಮಾನ ನಿಲ್ದಾಣಗಳಲ್ಲಿ ಮಾದಕವಸ್ತು ಅಥವಾ ಬಾಂಬ್ ಸ್ನಿಫಿಂಗ್ ಅಥವಾ ಭೂಕಂಪಗಳು ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಜನರನ್ನು ರಕ್ಷಿಸಲು ಸಹಾಯ ಮಾಡುವಂತಹ ಅನೇಕ ಪ್ರಮುಖ ಉದ್ಯೋಗಗಳಿಗೆ ಬಳಸಲಾಗುತ್ತದೆ. ಈ ತಳಿಯನ್ನು ಲಿಯಾನ್ಬರ್ಗರ್, ನ್ಯೂಫೌಂಡ್ಲ್ಯಾಂಡ್ ಮತ್ತು ಲ್ಯಾಬ್ರಡಾರ್ ರಿಟ್ರೈವರ್ ನಾಯಿಗಳ ಜೊತೆಗೆ ನೀರಿನ ಪಾರುಗಾಣಿಕಾ / ಜೀವ ಉಳಿಸುವಿಕೆಯಲ್ಲಿಯೂ ಬಳಸಲಾಗುತ್ತದೆ.

ಉಲ್ಲೇಖಗಳು

Tags:

ಗೋಲ್ಡನ್ ರೆಟ್ರೀವರ್ ಆರೋಗ್ಯ ಮತ್ತು ಆಯಸ್ಸು.ಗೋಲ್ಡನ್ ರೆಟ್ರೀವರ್ ಅನಾರೋಗ್ಯದ ಸಮಸ್ಯೆಗಳುಗೋಲ್ಡನ್ ರೆಟ್ರೀವರ್ ಗ್ರೂಮಿಂಗ್ಗೋಲ್ಡನ್ ರೆಟ್ರೀವರ್ ಚಟುವಟಿಕೆಗಳುಗೋಲ್ಡನ್ ರೆಟ್ರೀವರ್ ಉಲ್ಲೇಖಗಳುಗೋಲ್ಡನ್ ರೆಟ್ರೀವರ್ಅಮೇರಿಕಾನಾಯಿ

🔥 Trending searches on Wiki ಕನ್ನಡ:

ತ್ಯಾಜ್ಯ ನಿರ್ವಹಣೆಚದುರಂಗ (ಆಟ)ಏಕಲವ್ಯಆಯ್ಕಕ್ಕಿ ಮಾರಯ್ಯಪೆರಿಯಾರ್ ರಾಮಸ್ವಾಮಿಒಟ್ಟೊ ವಾನ್ ಬಿಸ್ಮಾರ್ಕ್ಶಾಂತರಸ ಹೆಂಬೆರಳುಸಂವತ್ಸರಗಳುಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಅಂಟಾರ್ಕ್ಟಿಕಭಾರತದಲ್ಲಿನ ಚುನಾವಣೆಗಳುಕೆ ವಿ ನಾರಾಯಣರೆವರೆಂಡ್ ಎಫ್ ಕಿಟ್ಟೆಲ್ಜಾತ್ರೆಗೋತ್ರ ಮತ್ತು ಪ್ರವರಭಾರತದ ರಾಷ್ಟ್ರೀಯ ಚಿನ್ಹೆಗಳುಭಾರತೀಯ ಸಶಸ್ತ್ರ ಪಡೆಏಡ್ಸ್ ರೋಗಸಾಮಾಜಿಕ ಸಮಸ್ಯೆಗಳುಕರ್ನಾಟಕ ಪತ್ರಿಕೋದ್ಯಮ ಇತಿಹಾಸಅರ್ಥಶಾಸ್ತ್ರಗಣೇಶ್ (ನಟ)ವಿಶ್ವ ಮಹಿಳೆಯರ ದಿನಸೋಮೇಶ್ವರ ಶತಕಎಂ. ಎಂ. ಕಲಬುರ್ಗಿಶಾತವಾಹನರುಗೌರಿ ಹಬ್ಬಪಂಜೆ ಮಂಗೇಶರಾಯ್ನರಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನ್ಯೂಟನ್‍ನ ಚಲನೆಯ ನಿಯಮಗಳುಎರಡನೇ ಎಲಿಜಬೆಥ್ಚಿತ್ರದುರ್ಗ ಕೋಟೆಉಮಾಶ್ರೀರಾಮ ಮನೋಹರ ಲೋಹಿಯಾವಾಸ್ಕೋ ಡ ಗಾಮಇಂಕಾಧರ್ಮಕನ್ನಡದಲ್ಲಿ ಕಾದಂಬರಿ ಸಾಹಿತ್ಯಕರ್ನಾಟಕ ಪೊಲೀಸ್ಸನ್ನತಿರಂಗಭೂಮಿಕಣ್ಣುವಚನಕಾರರ ಅಂಕಿತ ನಾಮಗಳುಪಟ್ಟದಕಲ್ಲುಹಂಪೆಕಟ್ಟುಸಿರುವಿಧಾನ ಸಭೆವಿಧಾನಸೌಧನಾಟಕಆನಂದಕಂದ (ಬೆಟಗೇರಿ ಕೃಷ್ಣಶರ್ಮ)ರಾಣಿ ಅಬ್ಬಕ್ಕಕಳಿಂಗ ಯುದ್ದ ಕ್ರಿ.ಪೂ.261ಮನೋಜ್ ನೈಟ್ ಶ್ಯಾಮಲನ್ಕಂಪ್ಯೂಟರ್ಬಿ. ಎಂ. ಶ್ರೀಕಂಠಯ್ಯವೈದೇಹಿಮೂರನೇ ಮೈಸೂರು ಯುದ್ಧವಿಶ್ವ ಪರಿಸರ ದಿನಜಿ.ಎಸ್.ಶಿವರುದ್ರಪ್ಪಜಾಗತಿಕ ತಾಪಮಾನ ಏರಿಕೆಆವಕಾಡೊವಾಲ್ಮೀಕಿರಸ(ಕಾವ್ಯಮೀಮಾಂಸೆ)ಭಾರತದ ಸ್ವಾತಂತ್ರ್ಯ ದಿನಾಚರಣೆದಯಾನಂದ ಸರಸ್ವತಿಬೀದರ್ಮಂಡ್ಯತಂತ್ರಜ್ಞಾನಆದೇಶ ಸಂಧಿಗೋವಿಂದ ಪೈಕಾನೂನುಒಂದನೆಯ ಮಹಾಯುದ್ಧರಾಮ್ ಮೋಹನ್ ರಾಯ್ಹೊಯ್ಸಳ ವಿಷ್ಣುವರ್ಧನಸ್ವಾಮಿ ವಿವೇಕಾನಂದ🡆 More