ಗಿಡಿಗೆರೆ ರಾಮಕ್ಕ

ಶ್ರೀಮತಿ ರಾಮಕ್ಕ ಮುಗ್ಗೇರ್ತಿ ತುಳುನಾಡಿನ ಪಾಡ್ದನ ಕವಿ ಹಾಗು ಗಾಯಕಿ.

ಇವರು ತುಳು ಪಾಡ್ದನಗಳನ್ನು ಸಂಗ್ರಹಿಸುವುದಲ್ಲದೆ, ರಚನಾ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಮೂವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ದನ ಕಾವ್ಯಗಳನ್ನು ಹದಿನೈದಕ್ಕೂ ಹೆಚ್ಚು ' ಕಬಿತ ' ಗಳನ್ನೂ ಮಾನಸಿಕ ಪಠ್ಯ ರೂಪದಲ್ಲಿ ತಮ್ಮಲ್ಲಿ ದಾಖಲಿಸಿಕೊಂಡಿರುವರು.

ಜನನ, ಜೀವನ

ರಾಮಕ್ಕ ಮುಗ್ಗೇರ್ತಿ ಇವರು ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ ಜನಿಸಿದರು. ತಂದೆ ಕೂಕ್ರ ಮುಗ್ಗೇರ ಹಾಗು ತಾಯಿ ದುಗ್ಗಮ್ಮ. ತಮ್ಮ ೧೭ನೇ ವಯಸ್ಸಿನಲ್ಲಿ ಕಟೀಲಿನ ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಇವರನ್ನು ಮದುವೆಯಾದರು. ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು. ಇವರಿಗೆ ತುಳು ಕವಿತೆ, ಪಾಡ್ದನ ಮತ್ತು ಸಂಧಿಗಳು ತಮ್ಮ ಅಜ್ಜಿಯಿಂದ ಬಳುವಳಿಯಾಗಿ ಬಂದಿದೆ.

ಇತರೆ ವಿಷಯಗಳು

ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕನಡ,ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಹಾಗು ಶ್ರಮಿಕ ಸಂಸ್ಕ್ರತಿಯ ಸಂಧಿ- ಪಾಡ್ದನಗಳು ಇವರಿಗೆ ಕಂಠಪಾಠ. ಇವರು ದೀರ್ಘವಾಗಿ ಹಾಡಿರುವ ' ಸಿರಿ ಪಾಡ್ದನ ' ವು ಎ.ವಿ.ನಾವಡರ ಸಂಪಾದಕತ್ವದಲ್ಲಿ ' ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ ' ಎಂದು ಗ್ರಂಥರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ.

ಪ್ರಶಸ್ತಿಗಳು

  1. ೨೦೦೦ ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ' ಪಾಡ್ದನ ಕೋಗಿಲೆ ' ಬಿರುದು.
  2. ೨೦೦೧ ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ.
  3. ೨೦೧೫ ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ.
  4. ೨೦೦೪-೦೫ನೆ ಸಾಲಿನ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸದಸ್ಯತ್ವ.

ಉಲ್ಲೇಖಗಳು

Tags:

ಗಿಡಿಗೆರೆ ರಾಮಕ್ಕ ಜನನ, ಜೀವನಗಿಡಿಗೆರೆ ರಾಮಕ್ಕ ಇತರೆ ವಿಷಯಗಳುಗಿಡಿಗೆರೆ ರಾಮಕ್ಕ ಪ್ರಶಸ್ತಿಗಳುಗಿಡಿಗೆರೆ ರಾಮಕ್ಕ ಉಲ್ಲೇಖಗಳುಗಿಡಿಗೆರೆ ರಾಮಕ್ಕತುಳುನಾಡು

🔥 Trending searches on Wiki ಕನ್ನಡ:

ಸೀತೆನವೋದಯಗದಗಆದೇಶ ಸಂಧಿಹನುಮಂತಕವಿರಾಜಮಾರ್ಗಆಸ್ಟ್ರೇಲಿಯಾ ಕ್ರಿಕೆಟ್ ತಂಡಝೊಮ್ಯಾಟೊಶ್ಯೆಕ್ಷಣಿಕ ತಂತ್ರಜ್ಞಾನಹಿಂದೂ ಧರ್ಮಸಂಗೊಳ್ಳಿ ರಾಯಣ್ಣಮಂಡ್ಯದಿಯಾ (ಚಲನಚಿತ್ರ)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿಜಯಪುರಕನ್ನಡ ಜಾನಪದದೇವನೂರು ಮಹಾದೇವಏಡ್ಸ್ ರೋಗಬಾಂಗ್ಲಾದೇಶಬೆಂಗಳೂರು ಗ್ರಾಮಾಂತರ ಜಿಲ್ಲೆಸತ್ಯಾಗ್ರಹಕರ್ಬೂಜಸೂರ್ಯಗ್ರಂಥಾಲಯಗಳುರಾಷ್ಟ್ರೀಯ ಶಿಕ್ಷಣ ನೀತಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕನ್ನಡ ವ್ಯಾಕರಣಜಾಗತೀಕರಣಕರ್ನಾಟಕದ ಶಾಸನಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುತತ್ಪುರುಷ ಸಮಾಸತ. ರಾ. ಸುಬ್ಬರಾಯಕರ್ನಾಟಕದ ಅಣೆಕಟ್ಟುಗಳುಕೊತ್ತುಂಬರಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮಂತ್ರಾಲಯಎಂ. ಕೃಷ್ಣಪ್ಪಪ್ರಶಾಂತ್ ನೀಲ್ಕರ್ನಾಟಕ ವಿಧಾನ ಸಭೆಸಂತೋಷ್ ಆನಂದ್ ರಾಮ್ಕಿತ್ತೂರು ಚೆನ್ನಮ್ಮಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಆಭರಣಗಳುಸಂವಹನಅಂತರ್ಜಲಇಮ್ಮಡಿ ಪುಲಕೇಶಿಡಿ.ಎಲ್.ನರಸಿಂಹಾಚಾರ್ಚಾರ್ಲ್ಸ್ ಬ್ಯಾಬೇಜ್ಕಾರ್ಮಿಕರ ದಿನಾಚರಣೆಭಾರತೀಯ ಶಾಸ್ತ್ರೀಯ ಸಂಗೀತರಾಹುಲ್ ಗಾಂಧಿಹಣಗ್ರಹಕುಂಡಲಿಭಾರತೀಯ ಭೂಸೇನೆಮುಹಮ್ಮದ್ಭಾರತೀಯ ರೈಲ್ವೆಭಾಷೆಕರ್ಣಮಾಸ್ಕೋಇಸ್ಲಾಂ ಧರ್ಮಕಾಲೆರಾರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಾಲ್ಮೀಕಿಹೊಂಗೆ ಮರಅಕ್ಷಾಂಶ ಮತ್ತು ರೇಖಾಂಶಸಂಸ್ಕೃತವ್ಯವಸಾಯಅಯೋಧ್ಯೆಥಿಯೊಸೊಫಿಕಲ್ ಸೊಸೈಟಿಸಂಸ್ಕೃತ ಸಂಧಿಚದುರಂಗದ ನಿಯಮಗಳುಗಾಂಧಿ ಜಯಂತಿಒಂದನೆಯ ಮಹಾಯುದ್ಧ🡆 More