ಗಾಯತ್ರಿ ನಾವಡ

ಗಾಯತ್ರೀ ನಾವಡ ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು.ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ.

ಪರಿಚಯ

ಡಾ.ಗಾಯತ್ರಿ ನಾವಡ ಇವರು ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು. ಇವರು ತಮ್ಮ ಹೈಸ್ಕೂಲ್ ಮತ್ತು ಕಾಲೇಜು ಜೀವನದಲ್ಲಿರುವಾಗಲೇ 'ಜೀವಿ' ಎ೦ಬ ಕಾವ್ಯನಾಮದಲ್ಲಿ ಕತೆ, ಕವನ, ಲೇಖನ ಬರೆಯುತ್ತಿದ್ದರು. ಗಾಯತ್ರಿ ನಾವಡರ ಬರವಣಿಗೆಗಳು, ಅಧ್ಯಯನಗಳು ತುಂಬಾ ಆಳ ಮತ್ತು ತಾರ್ಕಿಕವಾಗಿವೆ.

ಜನನ, ಜೀವನ

೧೯೫೪ ಆಗಸ್ಟ್ ೭ರ೦ದು ಇವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಜನಿಸಿದರು. ಇವರ ತ೦ದೆ ಅನಂತ ಕೃಷ್ಣವರ್ಣ ಕೋಟೇಶ್ವರ ಮತ್ತು ಇವರ ತಾಯಿ ಕಮಲಮ್ಮ. ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಲ್ಲಿ ಗಾಯತ್ರಿಯವರು ಕೊನೆಯವರು. ಇವರು ೧೯೭೫ರಲ್ಲಿ ಜಾನಪದ ವಿದ್ವಾ೦ಸ, ಕನ್ನಡ ಸ೦ಶೋಧಕ, ಸ೦ಘಟಕರಾದ ಪ್ರೊ. ಎ. ವಿ. ನಾವಡರವರನ್ನು ವಿವಾಹವಾದರು. ಬಿ.ಎ. ಪದವಿ ಅನ೦ತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿ೦ದ ೧೯೮೮ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡ ಎಂ.ಎ. ಪದವಿಯ ನ೦ತರ ಎರಡು ಪಿ.ಎಚ್.ಡಿ. ಪದವಿಯನ್ನು ಪಡೆದರು. ಮೊದಲಿಗೆ 'ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು' ಎಂಬ ಮಹಾಪ್ರಬಂಧಕ್ಕೆ ೧೯೯೭ರಲ್ಲಿ [ಗುಲ್ಬರ್ಗಾ]] ವಿಶ್ವವಿದ್ಯಾಲಯದಿಂದ, ನ೦ತರ 'ಸಿರಿಪಂಥ: ಮಹಿಳಾ ಸಬಲೀಕರಣ - ಸಮಾಜೋ ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಡಾ.ಟಿ.ಎಂ.ಎ.ಪೈ ರಾಷ್ಟ್ರೀಯ ಫೆಲೋಷಿಪ್ ನಲ್ಲಿ ೨೦೦೪ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಪಡೆದರು.

ಕೃತಿಗಳು

ಮಹಾಪ್ರಬ೦ಧಗಳು

  • ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು
  • ಸಿರಿಪ೦ಥ:ಮಹಿಳಾ ಸಬಲೀಕರಣ -ಸಮಾಜೋ ಸಾ೦ಸೃತಿಕ ಅಧ್ಯಯನ

ಸ್ತ್ರೀವಾದಿ ವಿಮರ್ಶಾ ಕೃತಿಗಳು

  • ವಿರಚನೆ - ೧೯೯೭
  • ಭಾರತೀಯ ಸ್ತ್ರೀವಾದ: ಒಂದು ಸಂಕಥನ - ೨೦೦೦
  • ಮಹಿಳಾ ಸಂಕಥನ - ೨೦೦೩
  • ಸಿರಿಪಂಥ: ಮಹಿಳಾ ಸಾಂಸ್ಕೃತಿಕ ಸಬಲೀಕರಣದ ಮಾದರಿ

ಸಂಪಾದಿತ ಕೃತಿಗಳು

  1. ಮೂಕಜ್ಜಿ ಬದುಕು ಸಾಹಿತ್ಯ - ೧೯೮೮
  2. ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ - ೧೯೯೨
  3. ತೇರು -೧೯೯೩
  4. ಸಾವಿರ ಕೀರ್ತನೆಗಳು - ೨೦೦೦
  5. ಅಲೆಯೊಸಗೆ - ೨೦೦೧
  6. ಕರಾವಳಿಯ ಜನಪದ ಕತೆಗಳು
  7. ಕರಾವಳಿ ಮದುವೆ ಹಾಡುಗಳು

ಇತರ ಕೃತಿಗಳು

  • ಚಿತ್ತಾರ ಬರೆದ ಬದುಕು ೧೯೯೧
  • ನಮ್ಮ ಹೆಣ್ಣು ಮಗು ೧೯೯೨
  • ಭಾರತೀಯ ಸ್ತ್ರೀವಾದ:ಒ೦ದು ಸ೦ಕಥನ
  • ಅಧ್ಯಯನ ಗ್ರ೦ಥ-ನಮ್ಮ ಹೆಣ್ಣು ಮಗು
  • ಕಾದ೦ಬರಿ-ಅಲೈ ಓಶೈ
  • ಸಿರಿಕತೆ ೧೯೯೪

ಬಿಡಿ ಲೇಖನಗಳು

  • ಸಾಮೂಹಿಕ ವಿವಾಹ:ಒಂದು ಸಾಮಾಜಿಕ ಅಧ್ಯಯನ - ೧೯೯೨

ಸಂಶೋಧನಾ ಯೋಜನೆಗಳು

  • ಖಾರ್ವಿ ಸಮುದಾಯ ಆರ್ಥಿಕ - ಸಾಮಾಜಿಕ ಅಧ್ಯಯನ
  • ಕುಡುಬಿಯರು
  • ಕಾಡ್ಯನಾಟ
  • ಪಾಣರಾಟ
  • ಕೋಟ ಪರಿಸರದ ಜೀವನಾವರ್ತನ ಸಂಬಂಧಿ ಆಚರಣಾತ್ಮಕ ಹಾಡುಗಳು
  • ಸಾಕ್ಷ್ಯಚಿತ್ರ ನಿರ್ದೇಶನ

ಪ್ರಶಸ್ತಿಗಳು

  • 'ಮೂಕಜ್ಜಿ ಬದುಕು ಸಾಹಿತ್ಯ' ಅತ್ಯುತ್ತಮ ಕೃತಿಯೆಂಬುದಕ್ಕೆ ೧೯೯೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪೀಟರ್ ಜೆ.ಕ್ಲಾಸ್ 'ಮಹಿಳಾ ಜಾನಪದ ಪ್ರಶಸ್ತಿ'
  • 'ಚಿತ್ತಾರ ಬರೆದ ಬದುಕು' ಕೃತಿಗೆ ೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ 'ಉತ್ತಮ ಕೃತಿ' ಬಹುಮಾನ
  • ೧೯೯೨ರಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಪುರಸ್ಕಾರ
  • ೧೯೯೩ರಲ್ಲಿ 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಗ್ರಂಥಕ್ಕೆ ಗು೦ಡ್ಮಿ ಜಾನಪದ ಪ್ರಶಸ್ತಿ
  • ೧೯೯೪ರಲ್ಲಿ 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಗ್ರಂಥಕ್ಕೆ ಆರ್ಯಭಟ ಪ್ರಶಸ್ತಿ
  • ೧೯೯೪ರಲ್ಲಿ ಕಾಂತಾವರ ಕನ್ನಡ ಸಂಘದಿಂದ 'ಸಂಸ್ಕೃತಿ ಸಂಶೋಧಕಿ' ಪುರಸ್ಕಾರ

ಇತರ ಗೌರವಗಳು

  • 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಎಂಬ ಕೃತಿ ಇಂಗ್ಲಿಷ್ ಭಾಷೆಗೆ 'Kadayanata: Text and Performance' ಎಂದು ಅನುವಾದಗೊಂಡಿದೆ
  • ೧೯೯೨ ಮಹಿಳಾನಿಷ್ಠ ಜಾನಪದ ಕಮ್ಮಟದ, ಧರ್ಮಸ್ಥಳದಲ್ಲಿ ನಡೆದ ಮಹಿಳಾ ಜಾನಪದ ಕಲೆಗಳ ತರಬೇತಿ ಕಮ್ಮಟದ ಸಂಚಾಲಕಿಯಾಗಿ ಕಾರ್ಯನಿರ್ವಹಣೆ
  • ಸ್ತ್ರೀಸ್ವಾಸ್ಥ್ಯ ಕಮ್ಮಟದ ನಿರ್ದೇಶಕಿಯಾಗಿ ಕಾರ್ಯನಿರ್ವಹಣೆ
  • ಕುಂದಾಪುರದ ಸ್ಪಂದನ ಸಾಹಿತ್ಯಿಕ ಸಾಮಾಜಿಕ ವೇದಿಕೆಯ ಸ್ಥಾಪಕ ಕಾರ್ಯದರ್ಶಿ
  • ಕುಂದಾಪುರದ ಪ್ರಾದೇಶಿಕ ವ್ಯಾಸಾಂಗದ ಪ್ರಕಾಶಕಿ
  • ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಕುಂದಾಪುರ ತಾಲ್ಲೂಕು ಪ್ರತಿನಿಧಿ

ಉಲ್ಲೇಖ

Tags:

ಗಾಯತ್ರಿ ನಾವಡ ಪರಿಚಯಗಾಯತ್ರಿ ನಾವಡ ಜನನ, ಜೀವನಗಾಯತ್ರಿ ನಾವಡ ಕೃತಿಗಳುಗಾಯತ್ರಿ ನಾವಡ ಸಂಶೋಧನಾ ಯೋಜನೆಗಳುಗಾಯತ್ರಿ ನಾವಡ ಪ್ರಶಸ್ತಿಗಳುಗಾಯತ್ರಿ ನಾವಡ ಇತರ ಗೌರವಗಳುಗಾಯತ್ರಿ ನಾವಡ ಉಲ್ಲೇಖಗಾಯತ್ರಿ ನಾವಡಕನ್ನಡಜಾನಪದ ಸಾಹಿತ್ಯತುಳು

🔥 Trending searches on Wiki ಕನ್ನಡ:

ಅಂತಾರಾಷ್ಟ್ರೀಯ ಸಂಬಂಧಗಳುರಾಣಿ ಅಬ್ಬಕ್ಕರಾವಣಓಂ (ಚಲನಚಿತ್ರ)ಮಧ್ವಾಚಾರ್ಯಜಾಗತೀಕರಣಹ್ಯುಯೆನ್ ತ್ಸಾಂಗ್ಪರಿಸರ ರಕ್ಷಣೆಕಾರ್ಮಿಕ ಕಾನೂನುಗಳುಲಾವಂಚಭಾಮಿನೀ ಷಟ್ಪದಿನಾಲತವಾಡಭಾರತದ ಸ್ವಾತಂತ್ರ್ಯ ದಿನಾಚರಣೆಮಹಾಲಕ್ಷ್ಮಿ (ನಟಿ)ಎ.ಎನ್.ಮೂರ್ತಿರಾವ್ಆವಕಾಡೊಸೋಮನ ಕುಣಿತಮಸೂರ ಅವರೆಜೋಡು ನುಡಿಗಟ್ಟುಕನ್ನಡದಲ್ಲಿ ಮಹಿಳಾ ಸಾಹಿತ್ಯರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣವಿಕಿಪೀಡಿಯಭೋವಿಕ್ರೈಸ್ತ ಧರ್ಮಕೇಶಿರಾಜಪ್ರೀತಿಸಮಾಸರಾಧೆಹಾಸಿಗೆಕರ್ನಾಟಕದ ಅಣೆಕಟ್ಟುಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಬಾವಲಿಟೊಮೇಟೊನವ್ಯವಾಣಿಜ್ಯ(ವ್ಯಾಪಾರ)ಚಾಣಕ್ಯಸಂಧಿಕನ್ನಡದಲ್ಲಿ ಸಣ್ಣ ಕಥೆಗಳುಬಳ್ಳಿಗಾವೆಹದಿಹರೆಯಕರ್ಕಾಟಕ ರಾಶಿರೋಸ್‌ಮರಿಕ್ರೀಡೆಗಳುಪಾಲಕ್ಗಾಂಧಿ ಮತ್ತು ಅಹಿಂಸೆಕೊಡವರುಎ.ಕೆ.ರಾಮಾನುಜನ್ಲೋಕಸಭೆನೈಸರ್ಗಿಕ ಸಂಪನ್ಮೂಲಮದುವೆಹಣದುಬ್ಬರನೇಮಿಚಂದ್ರ (ಲೇಖಕಿ)ಪಶ್ಚಿಮ ಘಟ್ಟಗಳುಚದುರಂಗ (ಆಟ)ಕೃತಕ ಬುದ್ಧಿಮತ್ತೆಪಂಜೆ ಮಂಗೇಶರಾಯ್ಪಂಚಾಂಗಗುಣ ಸಂಧಿಮೂಕಜ್ಜಿಯ ಕನಸುಗಳು (ಕಾದಂಬರಿ)ಹಸ್ತ ಮೈಥುನಉಡಕರ್ನಾಟಕದ ಏಕೀಕರಣಕಿರಣ್‌ ಬೇಡಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಪ್ರಬಂಧಗಿರೀಶ್ ಕಾರ್ನಾಡ್ಭಾರತೀಯ ಕಾವ್ಯ ಮೀಮಾಂಸೆಅಂತರ್ಜಲವಿಜ್ಞಾನಮಳೆನೀರು ಕೊಯ್ಲುಕವಿರಾಜಮಾರ್ಗಭರತನಾಟ್ಯತ್ರಿಪದಿಭಾರತ ಸಂವಿಧಾನದ ಪೀಠಿಕೆಕಲ್ಯಾಣಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)🡆 More