ಕರ್ನೂಲು ಸ್ತೋಮ

ಕರ್ನೂಲು ಸ್ತೋಮ: ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ಕಡಪ ಶಿಲಾಸ್ತೋಮದ ಮೇಲೆ ಅನನುರೂಪವಾಗಿ ನಿಕ್ಷೇಪವಾಗಿರುವ ಶಿಲಾರಾಶಿ (ಕರ್ನೂಲ್ ಸಿಸ್ಟಂ).

ಕುಂದೈರ್ ಕೊಳ್ಳದಲ್ಲೂ (ಇದು ಕೃಷ್ಣಾನದಿಯ ವರೆಗೂ ಹರಡಿದೆ) ಪಲ್ನಾಡ್ ಪ್ರದೇಶದಲ್ಲೂ ಈ ಶಿಲಾವರ್ಗ ಇದೆ. ಇದು ಪಶ್ಚಿಮದಲ್ಲಿ ಸುಮಾರು ೩೬೬ ಮೀ ಮಂದವಾಗಿದೆ; ಪಲ್ನಾಡ್ ಕಡೆಗೆ ಹೋದಂತೆ ಈ ದಪ್ಪ ಹೆಚ್ಚುತ್ತದೆ. ಪೂರ್ವದ ಕಡೆ ಈ ಸ್ತೋಮ ಭೂಚಲನೆಯಿಂದ ಸ್ವಲ್ಪ ಅಸ್ತವ್ಯಸ್ತಗೊಂಡಿದೆ. ಆದರೂ ಕಡಪ ಶಿಲಾಸ್ತೋಮಗಳಷ್ಟು ಮಡಿಕೆ ಬಿದ್ದಿಲ್ಲ. ಕರ್ನೂಲ್ ಸ್ತೋಮ ಕೆಳಗಿನ ವಿಂಧ್ಯನ್ ಶಿಲಾಸ್ತೋಮಕ್ಕೆ ಸಮಕಾಲೀನವಾದದ್ದು.

ಕರ್ನೂಲ್ ಸ್ತೋಮದಲ್ಲಿ ನಾಲ್ಕು ವಿಧದ ಶಿಲಾಶ್ರೇಣಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸುಣ್ಣಶಿಲೆ ಮುಖ್ಯವಾಗಿದ್ದರೂ ಜೇಡು ಮತ್ತು ಮರಳು ಶಿಲೆಗಳಿಗೆ ಏನೂ ಕಡಿಮೆ ಇಲ್ಲ. ವಿವರ ಮುಂದೆ ಬರೆದಿದೆ.

  • ಕುಂದೈರ್ ನಂದ್ಯಾಲ್ ಜೇಡುಶಿಲೆಗಳು ಕೋಯಿಲ್ಕುಂಟ್ಲಾ ಸುಣ್ಣ ಶಿಲೆಗಳು
  • ಪನಿಯಮ್ಪಿನ್ನಕ್ಲೆಡ್ ಬೆಣಚುಶಿಲೆ ಪ್ಲೇಟೋ ಬೆಣಚುಶಿಲೆ
  • ಜಮ್ಮಲಮಡಗುಆಕ್ ಮರಳುಶಿಲೆನರ್ಜಿ ಸುಣ್ಣಶಿಲೆ
  • ಬಂಗನಪಲ್ಲಿಬಂಗನಪಲ್ಲಿ ಮರಳುಶಿಲೆ

ಬಂಗನಪಲ್ಲಿ ಶಿಲೆಗಳು ಸಾಮಾನ್ಯವಾಗಿ ದಪ್ಪ ಮರಳಿನಿಂದ ಕೂಡಿವೆ. ಇವುಗಳಲ್ಲಿ ಕೆಲವು ಕಡೆ ಜೇಡು ಮತ್ತು ಕಬ್ಬಿಣಾಂಶ ಸಹ ಇದೆ. ಈ ಶಿಲೆಗಳ ಬಣ್ಣ ಬೂದು ಮತ್ತು ಕಂದು. ಇಲ್ಲಿರುವ ಬೆಣಚು, ಜಾಸ್ಪರ್, ಚರ್ಟ್ ಮತ್ತು ಸ್ಲೇಟಿನ ಉರುಟು ಕಲ್ಲುಗಳು ಶೆಯ್ಯಾರ್ ಶ್ರೇಣಿಯಿಂದ ಬಂದಿವೆ. ಬಂಗನಪಲ್ಲಿ ಶ್ರೇಣಿ ಮುಖ್ಯವಾಗಿ ವಜ್ರಗಳ ತವರುಮನೆ. ೧೮೪೦ರ ವರೆಗೆ ಇಲ್ಲಿ ವಜ್ರಗಳನ್ನು ತೆಗೆಯುವ ಉದ್ಯಮ ನಡೆಯುತ್ತಿತ್ತು. ಈಚೆಗೆ ಪುನಃ ಶೋಧನೆ ನಡೆಯುತ್ತಿದೆ. ಜಮ್ಮಲಮಡಗು ಶಿಲಾಶ್ರೇಣಿ ಬಂಗನಪಲ್ಲಿ ಶ್ರೇಣಿಯ ಮೇಲೆ ನಿಕ್ಷೇಪಗೊಂಡಿದೆ. ಇದರ ಕೆಳಗಿನ ಸ್ತರಗಳಲ್ಲಿ ಸುಣ್ಣ ಶಿಲೆಗಳಿವೆ; ಬಣ್ಣ ನೀಲಿ, ಬೂದು ಮತ್ತು ಕಂದು. ನರ್ಜಿ ಸುಣ್ಣದ ಶಿಲೆ ಎಂದು ಈ ಶಿಲೆಗಳ ಹೆಸರು. ಇವನ್ನು ಕಟ್ಟಡದ ಕಲ್ಲಿಗಾಗಿ ತೆಗೆಯುತ್ತಾರೆ. ಈ ಶಿಲೆಯ ಮೇಲೆ ಕಂದು ಮತ್ತು ನೇರಿಳೆ ಬಣ್ಣದ ಆಕ್ ಜೇಡುಶಿಲೆ ಸಂಚಿತವಾಗಿದೆ. ಇದರ ಮೇಲಿರುವ ಪಾನ್ಯಂ ಶಿಲಾಶ್ರೇಣಿ ಪಾನ್ಯಂ ಮತ್ತು ಉಂಡುಟ್ಲಗಳ ಸುತ್ತಮುತ್ತ ಚೆನ್ನಾಗಿ ರೂಪುಗೊಂಡಿದೆ. ಇವುಗಳಲ್ಲಿ ಮರಳುಶಿಲೆ ಮತ್ತು ಬೆಣಚುಶಿಲೆಗಳೇ ಮುಖ್ಯ. ಇವುಗಳ ಮೇಲೆ ನಿಕ್ಷೇಪಗೊಂಡಿರುವ ಶಿಲೆಗಳು, ಕುಂದೈಕ ನದಿಯ ಪಾತ್ರದಲ್ಲಿ ಚೆನ್ನಾಗಿ ರೂಪುಗೊಂಡಿರುವುದರಿಂದ ಅವುಗಳಿಗೆ ಕುಂದೈರ್ ಶಿಲಾಶ್ರೇಣಿಗಳೆಂದು ಹೆಸರು ಬಂದಿದೆ. ಇದರಲ್ಲಿ ಕೆಳಗಿನ ಮೂರನೆಯ ಒಂದು ಭಾಗ ಸೂಕ್ಷ್ಮ ಕಣದ ಗಟ್ಟಿಶಿಲೆಯಿಂದಲೂ ಮೇಲ್ಭಾಗ ಸುಣ್ಣ ಮಿಶ್ರ ಜೇಡು ಮತ್ತು ಅಶುದ್ಧ ಸುಣ್ಣಶಿಲೆಯಿಂದಲೂ ಕೂಡಿದೆ. ಇವು ಕೋಯಿಲ್ಕುಂಟ್ಲ ಮತ್ತು ನಂದ್ಯಾಲ್ ಎಂಬ ಸ್ಥಳಗಳಲ್ಲಿ ಚೆನ್ನಾಗಿ ನಿಕ್ಷೇಪಗೊಂಡಿವೆ. ಆದ್ದರಿಂದ ಇವುಗಳಿಗೆ ಕೋಯಿಲ್ಕುಂಟ್ಲ ಸುಣ್ಣಶಿಲೆ ಮತ್ತು ನಂದ್ಯಾಲ್ ಜೇಡುಶಿಲೆಗಳೆಂಬ ಹೆಸರುಗಳಿವೆ. ಕಡಪ ಕೊಳ್ಳದ ಈಶಾನ್ಯಕ್ಕಿರುವ ಕೃಷ್ಣಾನದಿಯ ಎರಡು ದಡಗಳಲ್ಲಿ ಆವರಿಸಿ ಪಲ್ನಾಡಿನ ಸುತ್ತಮುತ್ತ ರೂಪುಗೊಂಡಿರುವ. ಕಡಪ ಶಿಲಾಸ್ತೋಮದ ಮೇಲೆ ಅನನುರೂಪವಾಗಿ ಶೇಖರವಾಗಿರುವ ಕರ್ನೂಲ್ ಸ್ತೋಮಕ್ಕೆ ಪಲ್ನಾಡ್ ಶಿಲಾಶ್ರೇಣಿ ಎಂದು ಹೆಸರು. ಈ ಸ್ತೋಮದಲ್ಲಿ ಸುಣ್ಣ ಮತ್ತು ಜೇಡುಶಿಲೆಗಳಿವೆ.(ಎಂ.ಎಸ್.ಎಸ್.)

Tags:

ಆಂಧ್ರ ಪ್ರದೇಶ

🔥 Trending searches on Wiki ಕನ್ನಡ:

ಮೈಸೂರುಸಂಶೋಧನೆಕರ್ನಾಟಕದ ಅಣೆಕಟ್ಟುಗಳುರೋಸ್‌ಮರಿಜವಹರ್ ನವೋದಯ ವಿದ್ಯಾಲಯದ್ವೈತಪುರಾತತ್ತ್ವ ಶಾಸ್ತ್ರವಿಜಯದಾಸರುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಪ್ರಲೋಭನೆಮೊದಲನೇ ಕೃಷ್ಣರಾಮಾನುಜಭಾರತದಲ್ಲಿ ತುರ್ತು ಪರಿಸ್ಥಿತಿಹಾಸನ ಜಿಲ್ಲೆಶನಿಸದಾನಂದ ಮಾವಜಿರಾಷ್ಟ್ರೀಯ ಶಿಕ್ಷಣ ನೀತಿತ್ರಿಕೋನಮಿತಿಯ ಇತಿಹಾಸಭಾರತದ ರಾಷ್ಟ್ರೀಯ ಚಿಹ್ನೆಮಳೆಗಾಲಹಲ್ಮಿಡಿಕರ್ನಾಟಕದ ಜಿಲ್ಲೆಗಳುಗುಪ್ತಗಾಮಿನಿ (ಧಾರಾವಾಹಿ)ತತ್ಸಮ-ತದ್ಭವಛತ್ರಪತಿ ಶಿವಾಜಿಕೊಡವರುಕನ್ನಡಿಗರಾಷ್ಟ್ರೀಯ ವರಮಾನಕನ್ನಡ ಅಕ್ಷರಮಾಲೆಅರ್ಥ ವ್ಯವಸ್ಥೆಮುದ್ದಣಪ್ರವಾಸೋದ್ಯಮನೀನಾದೆ ನಾ (ಕನ್ನಡ ಧಾರಾವಾಹಿ)ಭೂಶಾಖದ ಶಕ್ತಿಅವರ್ಗೀಯ ವ್ಯಂಜನಭಾರತಕೆ. ಎಸ್. ನರಸಿಂಹಸ್ವಾಮಿಕುವೆಂಪುಭಾರತದಲ್ಲಿ ಕೃಷಿಕದಂಬ ರಾಜವಂಶಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ನಾಟಕದ ನದಿಗಳುಭಾರತದ ಮಾನವ ಹಕ್ಕುಗಳುಓಂ ನಮಃ ಶಿವಾಯಬೃಂದಾವನ (ಕನ್ನಡ ಧಾರಾವಾಹಿ)ಕಲ್ಲಂಗಡಿಹೊಂಗೆ ಮರಕ್ಯಾರಿಕೇಚರುಗಳು, ಕಾರ್ಟೂನುಗಳುಕೃಷ್ಣಸೂಳೆಕೆರೆ (ಶಾಂತಿ ಸಾಗರ)ಹಲ್ಮಿಡಿ ಶಾಸನಕಾನೂನುಅಪಕೃತ್ಯಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಟಿ.ಪಿ.ಕೈಲಾಸಂಕನ್ನಡ ಅಂಕಿ-ಸಂಖ್ಯೆಗಳುಪುರಾಣಗಳುಪ್ರಜಾಪ್ರಭುತ್ವದ ವಿಧಗಳುಸಂವಹನಹಯಗ್ರೀವಭಾರತದ ಸಂವಿಧಾನದ ಏಳನೇ ಅನುಸೂಚಿಗೃಹರಕ್ಷಕ ದಳಸರ್ ಐಸಾಕ್ ನ್ಯೂಟನ್ಮೂಲಭೂತ ಕರ್ತವ್ಯಗಳುಕೃಷ್ಣರಾಜಸಾಗರಎಸ್.ಎಲ್. ಭೈರಪ್ಪನೀತಿ ಆಯೋಗಪಾಲುದಾರಿಕೆ ಸಂಸ್ಥೆಗಳುಟ್ಯಾಕ್ಸಾನಮಿವರ್ಣಕೋಶ(ಕ್ರೋಮಟೊಫೋರ್)ಆಧುನಿಕ ವಿಜ್ಞಾನಜಾರಿ ನಿರ್ದೇಶನಾಲಯಆಯ್ದಕ್ಕಿ ಲಕ್ಕಮ್ಮರಂಗಭೂಮಿದಿಕ್ಸೂಚಿಝೆನಾನ್ಕರ್ನಾಟಕ ಸಂಗೀತ🡆 More