ಕಮರ

ಕಮರಇದು ಮಧ್ಯಮ ಪ್ರಮಾಣದಿಂದ ದೊಡ್ಡ ಪ್ರಮಾಣದವರೆಗೂ ಬೆಳೆಯುವ ಮರ.

ಕಮರ
ಕಮರ
New leaves of an Anjan tree at Chinawal, India
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Fabales
ಕುಟುಂಬ:
Fabaceae
ಉಪಕುಟುಂಬ:
Caesalpinioideae
ಪಂಗಡ:
Detarieae
ಕುಲ:
Hardwickia

Roxb.

ವಾಣಿಜ್ಯ ಪ್ರಪಂಚದಲ್ಲಿ ಇದನ್ನು ಅಂಜನ್ ಎಂದು ಕರೆಯುವರು.

ವೈಜ್ಞಾನಿಕ ಹೆಸರು

ಫ್ಯಾಂಬೇಸೀ (ಲೆಗ್ಯೂಮಿನೋಸೀ) ಕುಟುಂಬದ ಸೀಸಾಲ್ಪಿನಿಯಾಯ್ಡೀ ಹಾರ್ಡ್‍ವಿಕಿಯ ಬೈನೇಟ ಎಂಬ ವೈಜ್ಞಾನಿಕ ಹೆಸರು ಇದಕ್ಕಿದೆ.ಇದರ ಹೆಸರನ್ನು ಸಸ್ಯ ವಿಜ್ಞಾನಿ ಥಾಮಸ್ ಹಾರ್ಡ್‍ವಿಕ್ ನೆನಪಿಗೆ ಇಡಲಾಗಿದೆ.

ಲಕ್ಷಣಗಳು

ಎಳೆಯ ಗಿಡದಲ್ಲಿ ಇದರ ಹಂದರ ಶಂಖುವಿನಾಕಾರದಲ್ಲಿದ್ದು ದೊಡ್ಡದಾದಂತೆ ಹರಡಿಕೊಳ್ಳುವುದು. ಎಲೆಗಳು ಗೊರಸಿನಾಕಾರ, ಶುಷ್ಕತೆಯಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುವುದು. ಚಿತ್ರದುರ್ಗ ಜಿಲ್ಲೆಯ ಕಮರಾಕಾವಲ್ ಇದಕ್ಕೆ ಹೆಸರಾದುದು. ಬೆಂಗಳೂರು, ತುಮಕೂರು, ಕೊಳ್ಳೇಗಾಲ, ಬೆಳಗಾಂವಿ, ಧಾರವಾಡ ಜಿಲ್ಲೆಗಳಲ್ಲೂ ಇದರ ವ್ಯಾಪನೆಯಿದೆ. ದೀರ್ಘಕಾಲದ ಶುಷ್ಕತೆಯನ್ನು ತಡೆದುಕೊಳ್ಳಬಲ್ಲ ಇದರಲ್ಲಿ ಫೆಬ್ರವರಿ-ಮಾರ್ಚ್ ತಿಂಗಳ ಸುಮಾರಿಗೆ ಎಲೆಗಳು ಉದುರಿ ಕೆಂಪು ಛಾಯೆಯ ಹೊಸ ಚಿಗುರು ಏಪ್ರಿಲ್ ತಿಂಗಳಲ್ಲಿ ಬರುವುದು. ಹಳದಿಮಿಶ್ರಿತ ಹಸಿರು ಛಾಯೆಯ ಸಣ್ಣ ಹೂಗೊಂಚಲುಗಳು ಜುಲೈಯಿಂದ ಸೆಪ್ಟೆಂಬರ್ ವರೆಗೂ ಮೂಡಿ, ಕಾಯಿಗಳು ಏಪ್ರಿಲ್ ತಿಂಗಳ ಸುಮಾರಿಗೆ ಬಲಿಯುತ್ತವೆ. ಚಪ್ಪಟೆಯಾದ ಕಾಯಿಗಳು ಗಾಳಿಯಲ್ಲಿ ಸ್ವಲ್ಪ ದೂರ ತೂರಿಹೋಗಬಲ್ಲವು-3-5 ವರ್ಷಗಳಿಗೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಿಟ್ಟು ಮಿಕ್ಕ ವರ್ಷಗಳಲ್ಲಿ ಸಾಧಾರಣವಾಗಿ ಫಲ ಬಿಡುತ್ತದೆ. ಇದರ ಸಸಿಗಳು ಗಟ್ಟಿ ನೆಲದಲ್ಲಿಯೂ ತಾಯಿಬೇರನ್ನು ಆಳವಾಗಿ ಇಳಿಸಬಲ್ಲವು. ಇದರಿಂದಲೇ ಇವು ಶುಷ್ಕತೆಯ ಪ್ರದೇಶಗಳಲ್ಲಿಯೂ ಬೆಳೆಯುವ ಶಕ್ತಿ ಪಡೆದಿರುವುದು. ಬುಡ ಕತ್ತರಿಸಿದಾಗ ಕಾಂಡ ಚಿಗುರದಿದ್ದರೂ ರೆಂಬೆಗಳನ್ನು ಕತ್ತರಿಸಿದರೆ ಚೆನ್ನಾಗಿ ಚಿಗುರುತ್ತದೆ. ದನ, ಮೇಕೆ, ಜಿಂಕೆಗಳಿಗೆ ಇದರ ಎಲೆ ಬಹಳ ಇಷ್ಟ. ಎಳೆಯ ಸಸಿಗಳಿಗೆ ಬೆಂಕಿ ಬಹು ಅಪಾಯಕಾರಿ. ಈ ಸಸ್ಯಗಳ ಸ್ವಾಭಾವಿಕ ಪುನರುತ್ಪತ್ತಿಗೆ ಬೆಂಕಿ, ಜಾನುವಾರುಗಳ ಉಪಟಳ ಹಾಗೂ ಹುಲ್ಲು, ಕಳೆ ಮಾರಕವಾಗಿ ಪರಿಣಮಿಸುತ್ತವೆ. ಆದ್ದರಿಂದ ಬೀಜ ಬಿತ್ತಿ ಬೆಳೆಸುವಾಗ ಎಳೆಯದರಲ್ಲಿ ಬೆಂಕಿ ಜಾನುವಾರುಗಳಿಂದ ಕಾಪಾಡಬೇಕು. ಅರಣ್ಯಶಾಖೆಯವರು ಮೈದಾನಪ್ರದೇಶಗಳಲ್ಲಿ ಬೆಳೆಸುವ ತೋಪುಗಳ ಕಾರ್ಯಕ್ರಮದಲ್ಲಿ ಬಳಸುವ ಮರಗಳಲ್ಲಿ ಇದೂ ಒಂದು ಮುಖ್ಯ ಜಾತಿ.

ಚೌಬೀನೆ

ಇದರ ಚೌಬೀನೆ ಕೆಂಪುಮಿಶ್ರಿತ ಕಂದುಬಣ್ಣದ್ದು. ಭಾರವಾಗಿಯೂ ಗಡುಸಾಗಿಯೂ ಬಲಯುತವಾಗಿಯೂ ಇರುವುದರಿಂದ ಇದನ್ನು ಹದಮಾಡುವುದು ಕಷ್ಟ. ಹಸಿಯ ಮರವನ್ನೇ ಕೊಯ್ದು ನಿಧಾನವಾಗಿ ಆರಲು ಬಿಡಬೇಕು. ಗೆದ್ದಲು ಹತ್ತುವುದಾಗಲೀ ಕೊಳೆಯುವುದಾಗಲೀ ಬಹು ವಿರಳ. ಕೊರೆಯುವ ಹುಳುಗಳಿಂದ ಸ್ವಲ್ಪ ಹಾನಿ ಉಂಟು. ಒಣಮರವನ್ನು ಕೊಯ್ಯುವುದು ಕಷ್ಟವಾದರೂ ಹಸಿಯದರಲ್ಲಿ ಮರಗೆಲಸ ಸುಲಭ.

ಉಪಯೋಗಗಳು

ಗಡುಸು ಮರವಾದುದರಿಂದ ಗಾಡಿಯ ಗುಂಭ, ಒನಕೆ, ನೇಗಿಲು, ಯಂತ್ರಘರ್ಷಣಾ ಭಾಗಗಳಿಗೂ (ಬೇರಿಂಗ್ಸ್‌) ಗಣಿಗಳ ಊರುಗಂಧ ತೊಲೆಗಳು, ನೆಲಹಾಸುಗಳು ಇತ್ಯಾದಿಗಳಿಗೆ ಬಳಸುವರು.

ಉಲ್ಲೇಖಗಳು

ಕಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮರ

Tags:

ಕಮರ ವೈಜ್ಞಾನಿಕ ಹೆಸರುಕಮರ ಲಕ್ಷಣಗಳುಕಮರ ಚೌಬೀನೆಕಮರ ಉಪಯೋಗಗಳುಕಮರ ಉಲ್ಲೇಖಗಳುಕಮರ

🔥 Trending searches on Wiki ಕನ್ನಡ:

ಶಬ್ದಮಣಿದರ್ಪಣಮಧ್ವಾಚಾರ್ಯಹನುಮಂತನಾಡ ಗೀತೆಮಾಟ - ಮಂತ್ರಭಾರತೀಯ ಸಂಸ್ಕೃತಿಬಾದಾಮಿ ಗುಹಾಲಯಗಳುಮೂಲಧಾತುಅಹಲ್ಯೆವಂದೇ ಮಾತರಮ್ಬಂಗಾರದ ಮನುಷ್ಯ (ಚಲನಚಿತ್ರ)ಶಿವಮೊಗ್ಗಡಿ.ಎಸ್.ಕರ್ಕಿಕೇದರನಾಥ ದೇವಾಲಯಹೆಚ್.ಡಿ.ದೇವೇಗೌಡಭಾರತದ ಚಲನಚಿತ್ರೋದ್ಯಮಕ್ಯುಆರ್ ಕೋಡ್ಪೂರ್ಣಚಂದ್ರ ತೇಜಸ್ವಿಜಯಮಾಲಾದೇವತಾರ್ಚನ ವಿಧಿಕವಿಗಳ ಕಾವ್ಯನಾಮವ್ಯವಹಾರಗೂಬೆರಾಸಾಯನಿಕ ಗೊಬ್ಬರಮಲ್ಲಿಗೆಕರ್ಣಾಟ ಭಾರತ ಕಥಾಮಂಜರಿಲಡಾಖ್ಕನ್ನಡ ಸಾಹಿತ್ಯ ಪರಿಷತ್ತುಕಾನೂನುಶಬರಿಸಿದ್ದರಾಮಯ್ಯಅರ್ಜುನಜಗನ್ನಾಥ ದೇವಾಲಯಹೆಳವನಕಟ್ಟೆ ಗಿರಿಯಮ್ಮಜನತಾ ದಳ (ಜಾತ್ಯಾತೀತ)ಮಲ್ಲಿಕಾರ್ಜುನ ಜ್ಯೋತಿರ್ಲಿಂಗಮೊರಾರ್ಜಿ ದೇಸಾಯಿಭೋವಿಬೆಳಗಾವಿರಾಮಾನುಜಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕ ರತ್ನಭೂಕಂಪ೨೦೧೬ಕೇಂದ್ರ ಸಾಹಿತ್ಯ ಅಕಾಡೆಮಿಕರ್ನಾಟಕದ ತಾಲೂಕುಗಳುತೇಜಸ್ವಿ ಸೂರ್ಯಭಾರತದ ಸಂವಿಧಾನದ ಏಳನೇ ಅನುಸೂಚಿಆಲಿವ್ಜಾನಪದಅನ್ವಿತಾ ಸಾಗರ್ (ನಟಿ)ಲೋಕಸಭೆಕರ್ನಾಟಕ ಸಂಗೀತಭಾರತದಲ್ಲಿನ ಜಾತಿ ಪದ್ದತಿಗೌತಮ ಬುದ್ಧದ.ರಾ.ಬೇಂದ್ರೆಭಾರತದಲ್ಲಿ ತುರ್ತು ಪರಿಸ್ಥಿತಿಸಮಾಜಶಾಸ್ತ್ರಕೃಷಿಅಮಿತ್ ಶಾಮಾವುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಮಾಜ ಸೇವೆಕೊತ್ತುಂಬರಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕನ್ನಡಪ್ರಭಒಂದನೆಯ ಮಹಾಯುದ್ಧಗ್ರಹಕನ್ನಡದಲ್ಲಿ ಸಣ್ಣ ಕಥೆಗಳುಖ್ಯಾತ ಕರ್ನಾಟಕ ವೃತ್ತಹಂಪೆರಾಷ್ಟ್ರೀಯ ಸ್ವಯಂಸೇವಕ ಸಂಘಆದಿ ಶಂಕರಭಾರತೀಯ ಕಾವ್ಯ ಮೀಮಾಂಸೆಟೈಗರ್ ಪ್ರಭಾಕರ್ಭಾರತೀಯ ಸಂವಿಧಾನದ ತಿದ್ದುಪಡಿಹಿಂದೂ ಧರ್ಮಬಸವೇಶ್ವರತೆಲುಗು🡆 More