ಕಪಿಲ

ಕಪಿಲ ಋಷಿ ತತ್ತ್ವಶಾಸ್ತ್ರದ ಸಾಂಖ್ಯ ಪರಂಪರೆಯ ಸ್ಥಾಪಕರಲ್ಲಿ ಒಬ್ಬನೆಂದು ನಂಬಲಾಗಿರುವ ಒಬ್ಬ ವೈದಿಕ ಋಷಿಯಾಗಿದ್ದನು.

ಅವನು ಸಾಂಖ್ಯ ತತ್ತ್ವಶಾಸ್ತ್ರದ ಆಸ್ತಿಕ ಆವೃತ್ತಿಯನ್ನು ಹೊಂದಿರುವ ಭಾಗವತ ಪುರಾಣದಲ್ಲಿ ಪ್ರಧಾನವಾಗಿ ಕಂಡುಬರುತ್ತಾನೆ. ಸಾಂಪ್ರದಾಯಿಕ ಹಿಂದೂ ಮೂಲಗಳು ಅವನನ್ನು ಮನುವಿನ ವಂಶಜನೆಂದು ವಿವರಿಸುತ್ತವೆ.

ಕಪಿಲ

ಕಾಲ

ಕಾಲ ಯಾವುದೆಂದು ತೀರ್ಮಾನವಾಗಿಲ್ಲ ಐತಿಹಾಸಿಕ ವ್ಯಕ್ತಿಯೋ ಅಥವಾ ಕೇವಲ ಪೌರಾಣಿಕ ವ್ಯಕ್ತಿಯೋ ಹೇಳಲು ಸಾಧ್ಯವಿಲ್ಲ ಅಂತೂ ವೈದಿಕ ಋಷಿಗಳ ಪರಂಪರೆಯಲ್ಲಿ ಯಾರೂ ಇವನನ್ನು ಸ್ಮರಿಸಿಲ್ಲ, ಭಾಗವತ ಪುರಾಣದ ಪ್ರಕಾರ ಕಪಿಲ ಮಹಾವಿಷ್ಣುವಿನ ಅವತಾರ. ಸಿದ್ಧರಲ್ಲಿ ತಾನು ಕಪಿಲನೆಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಸಗರಪುತ್ರರನ್ನು ತನ್ನ ತಪಃ ಪ್ರಭಾವದಿಂದ ಸುಟ್ಟವ ಈತನೇ ಇರಬಹುದೆಂದು, ಹಲವರ ಮತ. ಅಂತೂ ಕಪಿಲ ಸಾಂಖ್ಯಮತ ಪ್ರವರ್ತಕನೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಗ್ರಂಥಗಳು

ವಿದ್ವಾಂಸರ ಅಭಿಪ್ರಾಯದ ಪ್ರಕಾರ ಕಪಿಲಸೂತ್ರ ಅಥವಾ ಸಾಂಖ್ಯಸೂತ್ರವೆಂಬ ಗ್ರಂಥ 12ನೆಯ ಶತಮಾನದ್ದು. ಬಹುಶಃ ಈ ಸೂತ್ರಗ್ರಂಥ ಕಪಿಲ ಋಷಿಯ ಸ್ವಂತಕೃತಿಯಲ್ಲ. ತತ್ತ್ವಸಮಾಸ ಎಂಬ ಸಾಂಖ್ಯಗ್ರಂಥದ ಪ್ರಸ್ತಾವನೆಯಲ್ಲಿ ಈತ ಆಸುರಿ ಎನ್ನುವವನಿಗೆ ಪ್ರತ್ಯಕ್ಷನಾಗಿ ತತ್ತ್ವ ಸಮಾಸವನ್ನು ಬೋಧಿಸಿದ ವಿವರಣೆಯುಂಟು. ಬಹುಶಃ ಗಾತ್ರದಲ್ಲಿ ಬಹು ಚಿಕ್ಕದಾದ ತತ್ತ್ವಸಮಾಸವೇ ಸಾಂಖ್ಯದರ್ಶನದ ಆದಿಯಾಗಿರಬಹುದು. ಈ ದರ್ಶನದ ಅತ್ಯುತ್ತಮ ಹಾಗೂ ಶಾಸ್ತ್ರಯುಕ್ತವಾದ ಗ್ರಂಥ ಈಶ್ವರಕೃಷ್ಣನೆಂಬಾತ ಬರೆದ ಸಾಂಖ್ಯಕಾರಿಕಾ. ಈ ಗ್ರಂಥದ ಕೊನೆಯಲ್ಲಿ ಸಾಂಖ್ಯದರ್ಶನ ಕಪಿಲ ಮುನಿಯಿಂದ ಬೋಧಿಸಲ್ಪಟ್ಟು ಆಸುರಿ, ಪಂಚಶಿಖಾದಿಗಳಿಂದ ವಿಸ್ತೃತವಾಗಿ ಶಿಷ್ಯಪರಪಂಪರಾನುಗತವಾಗಿ ತನ್ನವರೆಗೆ ಬಂದು ತಾನು ಕಾರಿಕಾರೂಪದಲ್ಲಿ ತನ್ನ ಸಾಂಖ್ಯಕಾರಿಕಾ ಗ್ರಂಥವನ್ನು ಬರೆದೆನೆಂದು ಈಶ್ವರಕೃಷ್ಣ ಹೇಳುತ್ತಾನೆ

ಬಾಹ್ಯ ಸಂಪರ್ಕಗಳು

ಕಪಿಲ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಋಷಿಐತಿಹಾಸಿಕ ವೈದಿಕ ಧರ್ಮಭಾಗವತ ಪುರಾಣಮನುಸಾಂಖ್ಯಹಿಂದೂ

🔥 Trending searches on Wiki ಕನ್ನಡ:

ಅಮೃತಬಳ್ಳಿಟಿಪ್ಪು ಸುಲ್ತಾನ್ಜಾತ್ಯತೀತತೆಮೈಸೂರು ದಸರಾಕನ್ನಡ ಛಂದಸ್ಸುಮಂಟೇಸ್ವಾಮಿಹಿಪಪಾಟಮಸ್ಜೀವಕೋಶಎಸ್.ಎಲ್. ಭೈರಪ್ಪಪಾಂಡವರುಕುರುಬಸೀಬೆಸಾರಾ ಅಬೂಬಕ್ಕರ್ಸೀತೆವಸ್ತುಸಂಗ್ರಹಾಲಯಯುಧಿಷ್ಠಿರಝಾನ್ಸಿ ರಾಣಿ ಲಕ್ಷ್ಮೀಬಾಯಿವಾಲ್ಮೀಕಿಒಲಂಪಿಕ್ ಕ್ರೀಡಾಕೂಟಸಜ್ಜೆಅಮೃತಧಾರೆ (ಕನ್ನಡ ಧಾರಾವಾಹಿ)ಪರಿಣಾಮಸಂಯುಕ್ತ ರಾಷ್ಟ್ರ ಸಂಸ್ಥೆಹುಚ್ಚೆಳ್ಳು ಎಣ್ಣೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರಮ್ಯಾವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪಾಲಕ್ವರದಿಸೂರ್ಯಹದಿಬದೆಯ ಧರ್ಮಧರ್ಮಸ್ಥಳಪುಸ್ತಕಬಿಜು ಜನತಾ ದಳಮಲೇರಿಯಾಹಿಂದುಸ್ತಾನಿ ಶಾಸ್ತ್ರೀಯ ಸಂಗೀತಎಚ್.ಎಸ್.ಶಿವಪ್ರಕಾಶ್ಕಾಮಸೂತ್ರರಾಯಲ್ ಚಾಲೆಂಜರ್ಸ್ ಬೆಂಗಳೂರುಮಹಾಜನಪದಗಳುಮಾನವನ ವಿಕಾಸಪ್ರಕಾಶ್ ರೈಯು.ಆರ್.ಅನಂತಮೂರ್ತಿಫಿರೋಝ್ ಗಾಂಧಿಆರೋಗ್ಯಯಜಮಾನ (ಚಲನಚಿತ್ರ)ಕರ್ನಾಟಕ ವಿಧಾನ ಸಭೆಗ್ರಹಪ್ರಾಥಮಿಕ ಶಿಕ್ಷಣಜಾಗತಿಕ ತಾಪಮಾನರನ್ನಕಿತ್ತಳೆಮಧುಮೇಹತ. ರಾ. ಸುಬ್ಬರಾಯಕನ್ನಡದಲ್ಲಿ ವಚನ ಸಾಹಿತ್ಯಸೆಸ್ (ಮೇಲ್ತೆರಿಗೆ)ತೆಂಗಿನಕಾಯಿ ಮರಮಳೆನೀರು ಕೊಯ್ಲುಕಂದಸಾವಿತ್ರಿಬಾಯಿ ಫುಲೆಗ್ರಂಥ ಸಂಪಾದನೆವ್ಯಂಜನಭತ್ತಪ್ಯಾರಾಸಿಟಮಾಲ್ಕಾರ್ಮಿಕರ ದಿನಾಚರಣೆಯುವರತ್ನ (ಚಲನಚಿತ್ರ)ದೀಪಾವಳಿಡಾ ಬ್ರೋಕಲೆತೆರಿಗೆಯೋನಿಕನ್ನಡ ರಂಗಭೂಮಿಕರ್ನಾಟಕ ಸಂಗೀತಮರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನಗರೀಕರಣ🡆 More