ವಿಪತ್ತು

ವಿಪತ್ತು ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆ.

ಆದ ನಷ್ಟವು ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ನಿಭಾಯಿಸುವ ಬಾಧಿತ ಸಮುದಾಯ ಅಥವಾ ಸಮಾಜದ ಸಾಮರ್ಥ್ಯವನ್ನು ಮೀರುತ್ತದೆ.

ವಿಪತ್ತು
೧೯೦೬ರ ಸ್ಯಾನ್ ಫ಼್ರ್ಯಾನ್ಸಿಸ್ಕೊ ಭೂಕಂಪದ ಅವಶೇಷಗಳು

ಸಮಕಾಲೀನ ಶೈಕ್ಷಣಿಕ ಸಮುದಾಯದಲ್ಲಿ, ವಿಪತ್ತುಗಳನ್ನು ಅಸಮಂಜಸವಾಗಿ ನಿರ್ವಹಿಸಲಾದ ಅಪಾಯದ ಪರಿಣಾಮವೆಂದು ಕಾಣಲಾಗುತ್ತದೆ. ಈ ಅಪಾಯಗಳು ಸಂಭವಗಳು ಮತ್ತು ಈಡಾಗುವಿಕೆ ಎರಡರ ಸಂಯೋಜನೆಯ ಫಲವಾಗಿವೆ. ಕಡಿಮೆ ಈಡಾಗುವಿಕೆಯ ಪ್ರದೇಶಗಳಲ್ಲಿ ಸಂಭವಿಸುವ ಅಪಾಯಗಳು, ಉದಾಹರಣೆಗೆ ನಿರ್ಜನ ಪ್ರದೇಶಗಳಲ್ಲಿ, ಎಂದಿಗೂ ವಿಪತ್ತುಗಳಾಗುವುದಿಲ್ಲ.

ಅಭಿವೃದ್ಧಿಶೀಲ ದೇಶಗಳು ವಿಪತ್ತು ಸಂಭವಿಸಿದಾಗ ಅತ್ಯಧಿಕ ವೆಚ್ಚಗಳನ್ನು ಅನುಭವಿಸುತ್ತವೆ – ಅಪಾಯಗಳಿಂದ ಉಂಟಾಗುವ ಎಲ್ಲ ಸಾವುಗಳಲ್ಲಿ ಶೇಕಡ ೯೫ ಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ದೇಶಗಳಲ್ಲಿ ಆಗುತ್ತವೆ, ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಾಕೃತಿಕ ಅಪಾಯಗಳಿಂದ ಉಂಟಾದ ನಷ್ಟಗಳು ಕೈಗಾರೀಕೃತ ದೇಶಗಳಿಗಿಂತ ೨೦ ಪಟ್ಟು ಹೆಚ್ಚಾಗಿವೆ (ಜಿಡಿಪಿಯ ಶೇಕಡಾವಾರು).

ಸಂಶೋಧಕರು ಶತಮಾನಕ್ಕಿಂತ ಹೆಚ್ಚು ಕಾಲದಿಂದ ವಿಪತ್ತುಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಮತ್ತು ವಿಪತ್ತು ಸಂಶೋಧನೆಯನ್ನು ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ. ಎಲ್ಲ ವಿಪತ್ತುಗಳು ಮಾನವ ರಚಿತವೆಂದು ಕಾಣಬಹುದೆಂದು ಅಧ್ಯಯನಗಳು ವಾದಿಸಿದಾಗ ಅವು ಒಂದು ಸಾಮಾನ್ಯ ಅಭಿಪ್ರಾಯವನ್ನು ಪ್ರಕಟಗೊಳಿಸುತ್ತವೆ. ಅವುಗಳ ವಾದವೇನೆಂದರೆ ಅಪಾಯದ ಸಂಭವಕ್ಕೆ ಮುಂಚಿನ ಮಾನವ ಕ್ರಿಯೆಗಳು ಅಪಾಯವು ವಿಪತ್ತಾಗಿ ಬೆಳೆಯುವುದನ್ನು ತಡೆಗಟ್ಟಬಹುದು. ಹಾಗಾಗಿ, ಎಲ್ಲ ವಿಪತ್ತುಗಳು ಸೂಕ್ತ ವಿಪತ್ತು ನಿರ್ವಹಣಾ ಕ್ರಮಗಳನ್ನು ಪರಿಚಯಿಸುವ ಮಾನವ ವೈಫಲ್ಯದ ಪರಿಣಾಮವಾಗಿವೆ. ಅಪಾಯಗಳನ್ನು ವಾಡಿಕೆಯಂತೆ ನೈಸರ್ಗಿಕ ಅಥವಾ ಮಾನವ ನಿರ್ಮಿತ ಎಂದು ವಿಭಜಿಸಲಾಗುತ್ತದೆ, ಆದರೆ ಏಕ ಮೂಲ ಕಾರಣವಿರದ ಸಂಕೀರ್ಣ ವಿಪತ್ತುಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಒಂದು ನಿರ್ದಿಷ್ಟ ವಿಪತ್ತು ಪರಿಣಾಮವನ್ನು ಹೆಚ್ಚಿಸುವ ದ್ವಿತೀಯ ವಿಪತ್ತನ್ನು ಉತ್ಪತ್ತಿ ಮಾಡಬಹುದು. ಒಂದು ಉತ್ಕೃಷ್ಟ ಉದಾಹರಣೆಯೆಂದರೆ ಭೂಕಂಪವು ಸುನಾಮಿಯನ್ನು ಉಂಟುಮಾಡುತ್ತದೆ, ಪರಿಣಾಮವಾಗಿ ಕರಾವಳಿ ಪ್ರವಾಹ ಆಗುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಸಾಗುವಾನಿಗುಣ ಸಂಧಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುರಾಮಕೃಷ್ಣ ಪರಮಹಂಸಸುಮಲತಾವಿದ್ಯಾರಣ್ಯಹಾಸನಕನ್ನಡ ಜಾನಪದವೀರಗಾಸೆಸವದತ್ತಿಹಕ್ಕ-ಬುಕ್ಕಭಾರತೀಯ ಸ್ಟೇಟ್ ಬ್ಯಾಂಕ್ಟಿಪ್ಪು ಸುಲ್ತಾನ್ರಮ್ಯಾಎಸ್.ಎಲ್. ಭೈರಪ್ಪಜೀವವೈವಿಧ್ಯಪ್ರವಾಸ ಸಾಹಿತ್ಯದೇವಸ್ಥಾನಅರಣ್ಯನಾಶಮೂಲಭೂತ ಕರ್ತವ್ಯಗಳುಖಾತೆ ಪುಸ್ತಕಉತ್ತರ ಕನ್ನಡಜಂತುಹುಳುಕುತುಬ್ ಮಿನಾರ್ಒಡೆಯರ್ಡಿ.ವಿ.ಗುಂಡಪ್ಪಸಂಕಲ್ಪಚದುರಂಗದ ನಿಯಮಗಳುದಿಕ್ಕುಅಶ್ವತ್ಥಮರಅನುಶ್ರೀಕ್ರಿಕೆಟ್ಹೈದರಾಬಾದ್‌, ತೆಲಂಗಾಣದಾವಣಗೆರೆವಿಚ್ಛೇದನರಾಷ್ತ್ರೀಯ ಐಕ್ಯತೆಶ್ರೀನಿವಾಸ ರಾಮಾನುಜನ್ಕಾರ್ಮಿಕರ ದಿನಾಚರಣೆಸರ್ಕಾರೇತರ ಸಂಸ್ಥೆರಾಮಾಯಣಯಕ್ಷಗಾನತೆಂಗಿನಕಾಯಿ ಮರಭಾರತದ ಪ್ರಧಾನ ಮಂತ್ರಿಜೈಪುರಶಿವಮೊಗ್ಗಖಂಡಕಾವ್ಯಸಣ್ಣ ಕೊಕ್ಕರೆಶ್ರವಣಬೆಳಗೊಳಊಳಿಗಮಾನ ಪದ್ಧತಿತುಮಕೂರುಬಾರ್ಲಿಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಮಧ್ವಾಚಾರ್ಯಶಿಕ್ಷಣ ಮಾಧ್ಯಮಸಂಶೋಧನೆಫೇಸ್‌ಬುಕ್‌ಪಠ್ಯಪುಸ್ತಕಕರ್ಮಧಾರಯ ಸಮಾಸಹೊಯ್ಸಳಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಯೋಗಇಂಡಿಯನ್ ಪ್ರೀಮಿಯರ್ ಲೀಗ್ಊಟಮೋಕ್ಷಗುಂಡಂ ವಿಶ್ವೇಶ್ವರಯ್ಯರೇಣುಕಭಾಮಿನೀ ಷಟ್ಪದಿರಾಜಕೀಯ ಪಕ್ಷಚಂಡಮಾರುತಕಮಲಪರಿಸರ ಶಿಕ್ಷಣಕನ್ನಡ ಗುಣಿತಾಕ್ಷರಗಳುಭಾರತದಲ್ಲಿ ತುರ್ತು ಪರಿಸ್ಥಿತಿಕನ್ನಡದಲ್ಲಿ ಸಣ್ಣ ಕಥೆಗಳುಭಾರತೀಯ ಆಡಳಿತಾತ್ಮಕ ಸೇವೆಗಳುಪ್ರಾರ್ಥನಾ ಸಮಾಜಪ್ರಜಾವಾಣಿ🡆 More