ಔರಾದ ವಿಧಾನಸಭಾ ಕ್ಷೇತ್ರ

ಔರಾದ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೫೨) ಬೀದರ್ ಜಿಲ್ಲೆಯಲ್ಲಿರುವ ೬ ಕ್ಷೇತ್ರಗಳ ಪೈಕಿ ಒಂದು.

ಇದು ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)ದ ಭಾಗವಗಿಯೂ ಗುರುತಿಸಿಕೊಂಡಿದೆ. ೨೦೦೮ರ ನಂತರ ಈ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಗಿದೆ. ಭಾಲ್ಕಿ ಮತ್ತು ಬೀದರ್, ಔರಾದ ವಿಧಾನಸಭಾ ಕ್ಷೇತ್ರದ ಮಗ್ಗುಲಿಗೆ ಇರುವ ವಿಧಾನಸಭಾ ಕ್ಷೇತ್ರಗಳಾಗಿವೆ.

ಔರಾದ ವಿಧಾನಸಭಾ ಕ್ಷೇತ್ರ
ಬೀದರ್ ಜಿಲ್ಲೆಯ ನಕ್ಷೆ (ಔರಾದ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ಚುನಾವಣಾ ಇತಿಹಾಸ

ಧಾರ್ಮಿಕ ಮತ್ತು ವಾಸ್ತುಶಿಲ್ಪ ಪ್ರಾಮುಖ್ಯತೆಗೆ ಹೆಸರು ಪಡೆದಿರುವ ಔರಾದ್ ಕರ್ನಾಟಕದ ಕಿರೀಟಪ್ರಾಯ ಕ್ಷೇತ್ರ. ಮಹತ್ವವೆನ್ನಬಹುದಾದ ಉದ್ದಿಮೆ ಇಲ್ಲಿ ಇಲ್ಲದಿರುವ ಕಾರಣ ಇಲ್ಲಿನ ಬಹುತೇಕ ಮಂದಿ ಉದ್ಯ್ಯೋಗವನ್ನು ಅರಸಿಕೊಂಡು ಪಕ್ಕದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಕ್ಷೇತ್ರದಲ್ಲಿ ಹರಿಯುವ ಮಾಂಜ್ರಾ ನದಿಪಾತ್ರದ ಗ್ರಾಮಗಳನ್ನು ಬಿಟ್ಟರೆ, ಉಳಿದ ಕಡೆ ನೀರಾವರಿ ಸೌಲಭ್ಯವಿಲ್ಲ. ಹಾಗಾಗಿ ಇಲ್ಲಿನ ಮಂದಿ ಒಣಬೇಸಾಯ ಪದ್ಧತಿಯನ್ನು ಅನುಸರಿಸುತ್ತಾರೆ.

ಔರಾದ ಕ್ಷೇತ್ರಕ್ಕೆ ಮೊದಲ ಬಾರಿಗೆ ೧೯೫೧ರಲ್ಲಿ ಚುನಾವಣೆ ನಡೆಯಿತು. ಆಗ ಇದಕ್ಕೆ ಹುಳ್ಸೂರು ಕ್ಷೇತ್ರ ಎಂಬ ಹೆಸರಿತ್ತು ಮತ್ತು ಹೈದರಾಬಾದ್ ಸಂಸ್ಥಾನದಲ್ಲಿ ಇದ್ದ ಕ್ಷೇತ್ರವಾಗಿತ್ತು. ಅಂದಿನಿಂದ ೨೦೨೩ರವರೆಗೆ ಒಟ್ಟು ೧೬ ಬಾರಿ ಚುನಾವಣೆಗಳು ನಡೆದಿವೆ. ಒಟ್ಟು ೬ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು, ೫ ಬಾರಿ ಬಿಜೆಪಿ ಅಭ್ಯರ್ಥಿಗಳು, ೩ ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ೧ ಬಾರಿ ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ಜಯ ಸಾಧಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೪ ಅವಧಿಗೆ ಇಬ್ಬರು ಅಭ್ಯರ್ಥಿಗಳು ಶಾಸಕರಾಗಿರುವುದು ವಿಶೇಷ. ಗುರುಪಾದಪ್ಪ ನಾಗಮಾರಪಲ್ಲಿ ಅವರು ೧೯೮೫, ೧೯೮೯, ೧೯೯೪ರ ಸಾಲಿನಲ್ಲಿ ಜನತಾ ಪಕ್ಷದಿಂದಲೂ ಮತ್ತು ೨೦೦೪ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅದೇ ರೀತಿ ೨೦೦೮, ೨೦೧೩, ೨೦೧೮, ೨೦೨೩ರಲ್ಲಿ ಪ್ರಭು ಚೌಹಾಣ್ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.

ಮತದಾರರು

ಅಂಕಿ ಅಂಶ

ಔರಾದ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨,೧೯,೨೧೦

  • ಪುರುಷ ಮತದಾರರು-೧,೧೩,೯೫೬
  • ಮಹಿಳಾ ಮತದಾರರು-೧,೦೫,೨೫೪

ಜಾತಿವಾರು

ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ, ಮರಾಠ ಮತ್ತು ಲಂಬಾಣಿ(ಬಂಜಾರ) ಸಮುದಾಯದ ಮತದಾರು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದಾರೆ. ಹಾಗಾಗಿಯೆ ಈ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಪ್ರಭು ಚೌಹಾಣ್ ಸತತವಾಗಿ ಗೆಲುವು ಸಾಧಿಸುತ್ತಿದ್ದಾರೆ ಎನ್ನಬಹುದು.

ಇವನ್ನೂ ಓದಿ

ಉಲ್ಲೇಖಗಳು

Tags:

ಔರಾದ ವಿಧಾನಸಭಾ ಕ್ಷೇತ್ರ ಚುನಾವಣಾ ಇತಿಹಾಸಔರಾದ ವಿಧಾನಸಭಾ ಕ್ಷೇತ್ರ ಮತದಾರರುಔರಾದ ವಿಧಾನಸಭಾ ಕ್ಷೇತ್ರ ಇವನ್ನೂ ಓದಿಔರಾದ ವಿಧಾನಸಭಾ ಕ್ಷೇತ್ರ ಉಲ್ಲೇಖಗಳುಔರಾದ ವಿಧಾನಸಭಾ ಕ್ಷೇತ್ರಬೀದರ್ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)

🔥 Trending searches on Wiki ಕನ್ನಡ:

ಇಸ್ಲಾಂ ಧರ್ಮಕಲ್ಯಾಣ ಕರ್ನಾಟಕಭಾರತದ ಸಂವಿಧಾನ ರಚನಾ ಸಭೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರ್ನಾಟಕ ಆಡಳಿತ ಸೇವೆದೇವನೂರು ಮಹಾದೇವಸಂಯುಕ್ತ ಕರ್ನಾಟಕವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪರಶುರಾಮಋತುಹನಿ ನೀರಾವರಿನಿರ್ಮಲಾ ಸೀತಾರಾಮನ್ಗುಬ್ಬಚ್ಚಿಆಲದ ಮರಕೊರೋನಾವೈರಸ್ವಾಯು ಮಾಲಿನ್ಯಪುಟ್ಟರಾಜ ಗವಾಯಿದೇವರಾಜ್‌ಕಾಂತಾರ (ಚಲನಚಿತ್ರ)ಭಾರತೀಯ ಜನತಾ ಪಕ್ಷಶ್ರೀ ರಾಮಾಯಣ ದರ್ಶನಂಬಾಲ್ಯ ವಿವಾಹಶ್ರೀ ಸಿದ್ದೇಶ್ವರ ಸ್ವಾಮಿಜಿಗಳು೧೮೬೨ಕರ್ಬೂಜಮಾಧ್ಯಮಅರವಿಂದ ಘೋಷ್ಭಯೋತ್ಪಾದನೆಓಝೋನ್ ಪದರಶ್ರುತಿ (ನಟಿ)ಶನಿಭಾರತಹೊಂಗೆ ಮರಕ್ಷತ್ರಿಯಕೃಷಿಸಿ ಎನ್ ಮಂಜುನಾಥ್ತಂತ್ರಜ್ಞಾನಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕಬ್ಬುಜಯಮಾಲಾಭಾಮಿನೀ ಷಟ್ಪದಿರಾಯಲ್ ಚಾಲೆಂಜರ್ಸ್ ಬೆಂಗಳೂರುಭಾರತದ ಜನಸಂಖ್ಯೆಯ ಬೆಳವಣಿಗೆಶಬ್ದ ಮಾಲಿನ್ಯಭಾರತೀಯ ರೈಲ್ವೆಚಾರ್ಲಿ ಚಾಪ್ಲಿನ್ಅನುಶ್ರೀದೇವರ/ಜೇಡರ ದಾಸಿಮಯ್ಯಹಸ್ತ ಮೈಥುನಸಂವಹನನಯನತಾರವಿಜಯದಾಸರುಭೂಕಂಪಮಾಹಿತಿ ತಂತ್ರಜ್ಞಾನವರ್ಗೀಯ ವ್ಯಂಜನಗಿರೀಶ್ ಕಾರ್ನಾಡ್ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಹಣತತ್ತ್ವಶಾಸ್ತ್ರಮನರಂಜನೆಕಬ್ಬಿಣಕಲಿಯುಗಕರ್ನಾಟಕದ ಮುಖ್ಯಮಂತ್ರಿಗಳುಗೋವಿಂದ ಪೈಜಿ.ಎಸ್.ಶಿವರುದ್ರಪ್ಪಶೃಂಗೇರಿಹಲ್ಮಿಡಿ ಶಾಸನಪಂಪಜ್ಞಾನಪೀಠ ಪ್ರಶಸ್ತಿಅಕ್ಷಾಂಶ ಮತ್ತು ರೇಖಾಂಶಫೇಸ್‌ಬುಕ್‌ನಾಲ್ವಡಿ ಕೃಷ್ಣರಾಜ ಒಡೆಯರುಪ್ರವಾಹದಂತಿದುರ್ಗಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶಬ್ದವೇಧಿ (ಚಲನಚಿತ್ರ)ಪಿತ್ತಕೋಶಚದುರಂಗದ ನಿಯಮಗಳು🡆 More