ಏಣಿ

ಏಣಿಯು(ladder) ಲಂಬ ಅಥವಾ ಬಾಗಿದ ಮೆಟ್ಟಿಲುಗಳ ಸಮೂಹ.

ಎರಡು ಬಗೆಯ ಏಣಿಗಳಿವೆ: ಬಾಗದ ಏಣಿಗಳು - ಇವು ಸ್ವತಃ ಆಧಾರವಾಗಿರುತ್ತವೆ ಅಥವಾ ಇವನ್ನು ಗೋಡೆಯಂತಹ ಲಂಬ ಮೇಲ್ಮೈಗೆ ವಾಲಿಸಿ ಇಡಬಹುದು, ಇನ್ನೊಂದು ಬಗೆಯೆಂದರೆ ಸುತ್ತಿಕೊಳ್ಳಬಲ್ಲ ಏಣಿಗಳು, ಉದಾಹರಣೆಗೆ ಹಗ್ಗ ಅಥವಾ ಅಲ್ಯುಮಿನಿಯಂನಿಂದ ತಯಾರಿಸಿದಂಥವು. ಇವನ್ನು ಮೇಲಿನಿಂದ ಜೋತು ಬಿಡಬಹುದು. ಒಂದು ಬಾಗದ ಏಣಿಯ ಲಂಬ ಅಂಗಗಳನ್ನು ಲಂಬತೊಲೆಗಳು/ದೂಲಗಳು ಅಥವಾ ಲಂಬಕಂಬಿಗಳು ಅಥವಾ ಲಂಬಪಟ್ಟಿಗಳು ಎಂದು ಕರೆಯಲಾಗುತ್ತದೆ. ಬಾಗದ ಏಣಿಗಳನ್ನು ಸಾಮಾನ್ಯವಾಗಿ ಸಾಗಿಸಬಹುದು, ಆದರೆ ಕೆಲವು ಬಗೆಗಳು ಒಂದು ರಚನೆ, ಕಟ್ಟಡ, ಅಥವಾ ಉಪಕರಣಕ್ಕೆ ಶಾಶ್ವತವಾಗಿ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಸಾಮಾನ್ಯವಾಗಿ ಲೋಹ, ಕಟ್ಟಿಗೆ, ಅಥವಾ ನಾರುಗಾಜಿನಿಂದ ತಯಾರಿಸಲಾಗುತ್ತದೆ, ಆದರೆ ಗಟ್ಟಿಯಾದ ಪ್ಲಾಸ್ಟಿಕ್‍ನಿಂದ ತಯಾರಿಸಿದ ಏಣಿಗಳು ಪರಿಚಿತವಿವೆ.

ಏಣಿ

ಬಾಗದ ಏಣಿಗಳು ಅನೇಕ ರೂಪಗಳಲ್ಲಿ ಲಭ್ಯವಿವೆ. ಜೋಡಿಸಿದ ಏಣಿಯಲ್ಲಿ ಎರಡು ಪಾರ್ಶ್ವದ ಅಂಗಗಳನ್ನು ಹಲವಾರು ಮೆಟ್ಟಿಲುಗಳಿಂದ ಜೋಡಿಸಲಾಗಿರುತ್ತದೆ; ಇವನ್ನು ರಚನೆಗೆ ಲಗತ್ತಿಸಲಾಗಿರುತ್ತದೆ ಮತ್ತು ಯಾವುದೇ ಚಲಿಸುವ ಭಾಗಗಳಿರುವುದಿಲ್ಲ. ವಿಸ್ತರಣಾ ಏಣಿ ಅಥವಾ ದೂರದರ್ಶಕ ಏಣಿ - ಇದು ಒಂದು ಸ್ಥಿರ ಏಣಿಯಾಗಿದ್ದು, ಅನುಕೂಲಕರ ಸಂಗ್ರಹಣೆಗಾಗಿ ಇದನ್ನು ಎರಡು ಅಥವಾ ಹೆಚ್ಚು ಲಂಬಗಳಾಗಿ ವಿಭಜಿಸಲಾಗಿರುತ್ತದೆ; ಶೇಖರಣೆಗಾಗಿ ಲಂಬಗಳನ್ನು ಒಟ್ಟಾಗಿ ಜಾರಿಸಬಹುದು ಅಥವಾ ಏಣಿಯ ಉದ್ದವನ್ನು ವಿಸ್ತರಿಸಲು ಬೇರೆಯಾಗುವಂತೆ ಜಾರಿಸಬಹುದು; ಏಣಿಯನ್ನು ಸುಲಭವಾಗಿ ವಿಸ್ತರಿಸಲು ರಾಟೆ ವ್ಯವಸ್ಥೆಯನ್ನು ಜೋಡಿಸಬಹುದು. ಹೀಗೆ ಇದನ್ನು ನೆಲದ ಮೇಲಿರುವ ನಿರ್ವಾಹಕನು ನಿಭಾಯಿಸಬಹುದು. ಕೆಲಸವಾದ ನಂತರ ಏಣಿಯನ್ನು ಅದರ ಜಾಗದಲ್ಲಿ ಬಿಗಿಣಿಗಳು ಮತ್ತು ತಡೆಗೂಟಗಳನ್ನು ಬಳಸಿ ಬೀಗ ಹಾಕಿ ಇಡಬಹುದು. ಅಗ್ನಿಶಾಮಕ ಸೇವೆಯ ೬೫ ಅಡಿ, ೫೦ ಅಡಿ, ಮತ್ತು ಕೆಲವು ೩೫ ಅಡಿಯ ವಿಸ್ತರಣಾ ಏಣಿಗಳು ಏರಿಸುವುದು, ಆಧಾರ ಗೂಟ ಒದಗಿಸುವಲ್ಲಿ, ವಿಸ್ತರಿಸುವಲ್ಲಿ, ಸ್ಥಾಪಿಸುವಲ್ಲಿ, ಹಿಂತೆಗೆದುಕೊಳ್ಳುವಲ್ಲಿ ಮತ್ತು ಕೆಳಗಿಳಿಸುವಲ್ಲಿ ನೆರವಾಗಲು ಬ್ಯಾಂಗರ್ ಕೋಲುಗಳು, ನಿಲ್ಲು ಕೋಲುಗಳನ್ನು ಬಳಸುತ್ತವೆ. ಇದಕ್ಕೆ ಕಾರಣ ಅದರ ಭಾರದ ತೂಕ. ಕ್ರಿಸ್ಮಸ್ ಮರ ಏಣಿ - ಧುಮುಕುವವರಿಗೆ ಒಂದು ಬಗೆಯ ಹತ್ತುವ ಏಣಿಯಾಗಿದೆ. ಇದು ಒಂದು ಒಂಟಿ ಕೇಂದ್ರ ಲಂಬಪಟ್ಟಿಯನ್ನು ಹೊಂದಿರುತ್ತದೆ ಮತ್ತು ಧುಮುಕುವವನಿಗೆ ಈಜುರೆಕ್ಕೆಗಳನ್ನು ಧರಿಸಿಯೇ ಏಣಿಯನ್ನು ಹತ್ತುವ ಸಲುವಾಗಿ ಅನುಮತಿ ನೀಡಲು ಪಾರ್ಶ್ವಗಳಲ್ಲಿ ತೆರೆದಿರುತ್ತದೆ. ಸೇತುವೆ ಏಣಿ - ಇಳಿವಿನಿಂದ ಬೇರ್ಪಟ್ಟ ಎರಡು ಬಿಂದುಗಳ ನಡುವೆ ಸಾಗುಮಾರ್ಗವಾಗಿ ಕಾರ್ಯನಿರ್ವಹಿಸಲು ಅಡ್ಡವಾಗಿ ಇರಿಸಲಾದ ಒಂದು ಬಗೆಯ ಏಣಿ. ದಾಳಿ ಏಣಿ - ಗೋಡೆಗಳನ್ನು ಏರಲು ಮತ್ತು ಕಂದಕಗಳನ್ನು ದಾಟಲು ನೆರವಾಗಲು ಮುತ್ತಿಗೆ ಯುದ್ಧದಲ್ಲಿ ಇದನ್ನು ಬಳಸಲಾಗುತ್ತದೆ. ಮೇಲಟ್ಟದ ಏಣಿ - ಮೇಲಟ್ಟ ಅಥವಾ ಮೇಲಂತಸ್ತಿಗೆ ಪ್ರವೇಶ ನೀಡಲು ಒಳತಾರಸಿಯಿಂದ ಕೆಳಗೆ ಎಳೆಯಲಾಗುತ್ತದೆ.

Tags:

🔥 Trending searches on Wiki ಕನ್ನಡ:

ಗುರುತತ್ಸಮ-ತದ್ಭವಮುಹಮ್ಮದ್ಗೋಳಕಲ್ಯಾಣಿದೇವನೂರು ಮಹಾದೇವಹಿಮನದಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶಬ್ದ ಮಾಲಿನ್ಯಅಂತರಜಾಲಬ್ಲಾಗ್ಬರಗೂರು ರಾಮಚಂದ್ರಪ್ಪಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ಣಾಟ ಭಾರತ ಕಥಾಮಂಜರಿಪರಿಸರ ವ್ಯವಸ್ಥೆದ್ವೈತ ದರ್ಶನಶಾಂತರಸ ಹೆಂಬೆರಳುತೆಲುಗುಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಜಿಲ್ಲೆಗಳುಗ್ರಹಹದಿಬದೆಯ ಧರ್ಮದಾಳಿಂಬೆತ್ಯಾಜ್ಯ ನಿರ್ವಹಣೆಸರ್ ಐಸಾಕ್ ನ್ಯೂಟನ್ಜಾಗತಿಕ ತಾಪಮಾನ ಏರಿಕೆಕನ್ನಡದಲ್ಲಿ ವಚನ ಸಾಹಿತ್ಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಹಯಗ್ರೀವಉಪನಯನಜಾಹೀರಾತುವಿಕ್ರಮಾರ್ಜುನ ವಿಜಯಆಂಡಯ್ಯಅಭಿಮನ್ಯುಶಂಕರದೇವನೈಸರ್ಗಿಕ ವಿಕೋಪಅಮೆರಿಕಅಲೆಕ್ಸಾಂಡರ್ಕ್ರಿಕೆಟ್‌ ಪರಿಭಾಷೆಪ್ಯಾರಾಸಿಟಮಾಲ್ಕೂದಲುಕ್ರಿಸ್ ಇವಾನ್ಸ್ (ನಟ)ಧೀರೂಭಾಯಿ ಅಂಬಾನಿಚಂದ್ರಯಾನ-೩ಬಾಸ್ಟನ್ಹಬ್ಬಹಂಪೆಹನುಮಾನ್ ಚಾಲೀಸಸ್ತ್ರೀಇಟಲಿಪುರಾಣಗಳುಭಾರತದಲ್ಲಿ ಪಂಚಾಯತ್ ರಾಜ್ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಟೈಗರ್ ಪ್ರಭಾಕರ್ಕರ್ನಾಟಕ ಐತಿಹಾಸಿಕ ಸ್ಥಳಗಳುಕದಂಬ ರಾಜವಂಶಮಹಿಳೆ ಮತ್ತು ಭಾರತಉದ್ಯಮಿವಿಭಕ್ತಿ ಪ್ರತ್ಯಯಗಳುಕೊಡಗುಅದ್ವೈತಲಕ್ಷದ್ವೀಪತೇಜಸ್ವಿನಿ ಗೌಡಗುವಾಮ್‌‌‌‌ವಿಶ್ವಕೋಶಗಳುಪನಾಮ ಕಾಲುವೆಚಪಾತಿವಿದುರಾಶ್ವತ್ಥಕಾನೂನುಭಂಗ ಚಳವಳಿಡಬ್ಲಿನ್ಭಾರತದ ವಿಜ್ಞಾನಿಗಳುಪಂಚ ವಾರ್ಷಿಕ ಯೋಜನೆಗಳುರಾಷ್ತ್ರೀಯ ಐಕ್ಯತೆಭಾರತದ ಸಂವಿಧಾನ🡆 More