ಎಡ್ವರ್ಡ್ ಜೆನ್ನರ್

ಎಡ್ವರ್ಡ್ ಎಂಥೋನಿ ಜೆನ್ನರ್ (17 ಮೇ 1749 - 26 ಜನೆವರಿ 1823) ಒಬ್ಬ ಆಂಗ್ಲ ವಿಜ್ಞಾನಿಯಾಗಿದ್ದು, ಅವರು ಬರ್ಕ್ಲಿ, ಗ್ಲೌಸೆಸ್ಟರ್‌ಶೈರ್‌ನಲ್ಲಿ ತಮ್ಮ ಸುತ್ತಮುತ್ತಣ ನೈಸರ್ಗಿಕ ಪರಿಸರವನ್ನು ಅಭ್ಯಸಿಸಿದರು.

ಜೆನ್ನರ್ ಅವರು ಸಿಡುಬಿನ ಲಸಿಕೆಯ ಅನ್ವೇಷಣೆಯಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಕೆಲವೊಮ್ಮೆ 'ಪ್ರತಿರೋಧಶಾಸ್ತ್ರದ ಪಿತಾಮಹ’ ಎಂದೂ ಕರೆಯಲ್ಪಡುವರು. ಜೆನ್ನರ್ ಅವರ ಸಂಶೋಧನೆಯು, ಬೇರೆ ಯಾರಿಂದಲೂ ಸಾಧ್ಯವಾಗದಷ್ಟು ಅಧಿಕ ಜೀವಗಳನ್ನು ಉಳಿಸಿದೆ.

Edward Jenner
ಎಡ್ವರ್ಡ್ ಜೆನ್ನರ್
Jenner in the prime of his studies
ಜನನ17 May 1749
Berkeley, Gloucestershire
ಮರಣ26 January 1823(1823-01-26) (aged 73)
Berkeley, Gloucestershire
ವಾಸಸ್ಥಳBerkeley, Gloucestershire
ರಾಷ್ಟ್ರೀಯತೆUnited Kingdom
ಕಾರ್ಯಕ್ಷೇತ್ರMicrobiology
ಅಭ್ಯಸಿಸಿದ ವಿದ್ಯಾಪೀಠSt George's, University of London
ಡಾಕ್ಟರೇಟ್ ಸಲಹೆಗಾರರುJohn Hunter
ಪ್ರಸಿದ್ಧಿಗೆ ಕಾರಣsmallpox vaccine

ಆರಂಭಿಕ ಬದುಕು

ಎಡ್ವರ್ಡ್ ಜೆನ್ನರ್ ಹುಟ್ಟಿದ್ದು ಬರ್ಕ್ಲಿಯಲ್ಲಿ 17 ಮೇ 1749ರಲ್ಲಿ (ಪುರಾತನ ಕಾಲಮಾಪಕದ ಪ್ರಕಾರ 6 ಮೇ). ನಂತರ ಜೆನ್ನರ್ ಅವರು, ದಕ್ಷಿಣ ಗ್ಲೌಸೆಸ್ಟರ್‌ಶೈರ್‌‍ನ ಚಿಪ್ಪಿಂಗ್ ಸೋದ್‌ಬರಿಯಲ್ಲಿ ಡೇನಿಯಲ್ ಲಡ್‌ಲೋ ಎಂಬ ಶಸ್ತ್ರ ಚಿಕಿತ್ಸಕರ ಕೆಳಗೆ, ತಮ್ಮ 14ನೇ ವಯಸ್ಸಿನಿಂದ ಎಂಟು ವರ್ಷಗಳ ಕಾಲ ಶಿಷ್ಯರಾಗಿದ್ದರು. 1770ರಲ್ಲಿ ಜೆನ್ನರ್,ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಜಾನ್ ಹಂಟರ್ ಮತ್ತು ಇತರರ ಬಳಿ ಶಸ್ತ್ರಕ್ರಿಯೆ ಹಾಗೂ ಅಂಗರಚನಾಶಾಸ್ತ್ರ ಕಲಿಯಲು ಪ್ರಾರಂಭಿಸಿದರು.

    ವಿಲಿಯಮ್ ಒಸ್ಲೆರ್ ಪ್ರಕಾರ ಜೆನ್ನೆರ್ ಹಂಟರ್ ಬಳಿ ವಿದ್ಯಾರ್ಥಿಯಾಗಿದ್ದಾಗ ಅವನಿಗೆ ವಿಲಿಯಮ್ ಹಾರ್ವೇಯ ’ಡೋಂಟ್ ಥಿಂಕ್ ಟ್ರೈ’ ಎಂಬ ಸಲಹೆಯನ್ನು ಪದೇ ಪದೆ ಬೋಧನೆ ಮಾಡುತ್ತಿದ್ದನು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಸಿದ್ಧಿಯಲ್ಲಿರುವ ನುಡಿಗಟ್ಟು ಆಗಿದೆ. ಜೆನ್ನೆರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಅದಾಗಲೇ ಶಸ್ತ್ರಚಿಕಿತ್ಸೆಯ ಪದ್ಧತಿ ಮತ್ತು ಸಂಸ್ಥೆಗಳನ್ನು ಬೆಳೆಸುತ್ತಿರುವ ಜನಪ್ರಿಯ ವ್ಯಕ್ತಿಗಳ ವಲಯದಲ್ಲಿ ಗುರುತಿಸಲ್ಪಟ್ಟನು. ಹಂಟರ್ ಅವರು ನೈಸರ್ಗಿಕ ಇತಿಹಾಸದ ಕುರಿತು ಜೆನ್ನರ್‌ರೊಂದಿಗೆ ಯಾವಾಗಲೂ ಸಂಪರ್ಕದಲ್ಲಿದ್ದರು. ಅವರೇ ಜೆನ್ನರ್‌ರನ್ನು ರಾಯಲ್ ಸೊಸೈಟಿಗೆ ಶಿಫಾರಸು ಮಾಡಿದರು. 1773ರಲ್ಲಿ ಅವರು ತಮ್ಮ ಹಳ್ಳಿಗೆ ವಾಪಸ್ಸಾಗಿ, ಬರ್ಕ್ಲಿಯಲ್ಲಿ ಉದ್ದೇಶ ಪೂರಿತ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಯಶಸ್ವಿ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರೆನಿಸಿದರು.
    ಜೆನ್ನರ್ ಮತ್ತು ಕೆಲವರು ಸೇರಿ ಗ್ಲೌಸೆಸ್ಟರ್‌ಶೈರ್‌‌‌ನ, ರೋಡ್‌ಬರೊಹ್‌ನಲ್ಲಿ ಒಂದು ವೈದ್ಯಕೀಯ ಸಂಘವನ್ನು ಸ್ಥಾಪಿಸಿದರು. ಅಲ್ಲಿ ವೈದ್ಯಕೀಯ ವಿಷಯದ ಕುರಿತು ಪ್ರಕಟವಾಗುವ ಪತ್ರಿಕೆಗಳನ್ನು ಓದಿ ಚರ್ಚಿಸುತ್ತ ಒಟ್ಟಾಗಿ ಭೋಜನ ಮಾಡುತ್ತಿದ್ದರು. ಜೆನ್ನೆರ್ ಗಂಟಲೂತದ ಮೇಲೆ ವರದಿಗಳನ್ನು ಬರೆದಿದ್ದರು. ಇಲ್ಲಿಯ
    ವೈದ್ಯಕೀಯ ಸಂಘವೇ ಫ್ಲೀಸ್ ವೈದ್ಯಕೀಯ ಸಮಾಜ ಅಥವಾ ಗ್ಲೌಸೆಸ್ಟರ್‌ಶೈರ್ ವೈದ್ಯಕೀಯ ಸಮಾಜವಾಗಿತ್ತು. ಇದು ರೊದ್‌ಬೊರೊದ ಫ್ಲೀಸ್ ಇನ್ ಪಾರ್ಲರ್‌ನಲ್ಲಿ ಇತ್ತು ಎಂದು ಹೇಳಲಾಗುತ್ತದೆ.

ಸಿಡುಬು

    ಈ ವೇಳೆಯಲ್ಲಿ ಸಿಡುಬಿನ ಭೀತಿ ಅತಿಯಾಗಿ ಕಾಡತೊಡಗಿತು. ರೋಗ ತಗುಲಿದ ಮೂರು ಜನರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದರು ಮತ್ತು ಅವರಲ್ಲಿ ಬದುಕುಳಿದವರು ಅತಿಯಾಗಿ ವಿರೂಪಗೊಳ್ಳುತ್ತಿದ್ದರು. ಲೇಡಿ ಮೇರಿ ವರ್ಟ್ಲೆ ಮಾಂಟೆಗು ಇಸ್ತಾನ್‌ಬುಲ್‌ನಲ್ಲಿ, ತಮ್ಮ ನಿಗದಿತ ಅವಧಿಯಲ್ಲಿ ಅಂದರೆ 1716-1718ರಲ್ಲಿ, ಆಟಮನ್ ರಾಜವಂಶದ ಚುಚ್ಚುಮದ್ದು ಹಾಕಿಸುವ ತತ್ವವನ್ನು ಕಂಡುಕೊಂಡರು ಮತ್ತು ಈ ವಿಚಾರವನ್ನು ಬ್ರಿಟನ್‌ಗೆ ಕೂಡ ತಂದರು. ನಂತರ ಕೆಲವು ವರ್ಷಗಳ ಮೇಲೆ ವಾಲ್ಟೇರ್ ಅವರು, 60% ರಷ್ಟು ಜನರು ಸಿಡುಬಿನ ರೋಗಕ್ಕೆ ತುತ್ತಾದರು, ಅವರಲ್ಲಿ 20% ಜನರು ಸಾವನ್ನಪ್ಪಿದರು ಎಂದು ದಾಖಲಿಸಿದರು. 1770ರವರೆಗೆ ವರ್ಷಗಳಲ್ಲಿ ಕಡಿಮೆ ಎಂದರೂ ಆರು ಜನರು (ಸೆವೆಲ್, ಜೆನ್ಸೆನ್, ಜೆಸ್ಟಿ 1774, ರೆಂಡೆಲ್, ಪ್ಲೆಟ್ 1791) ಇಂಗ್ಲೆಂಡ್ ಹಾಗೂ ಜರ್ಮನಿಗಳಲ್ಲಿ ಯಶಸ್ವಿಯಾಗಿ ಕೌಪಾಕ್ಸ್ (ಸಿಡುಬಿನ ವಿರುದ್ಧ ಬಳಸುವ ವೈರಸ್) ಲಸಿಕೆಯನ್ನು ಸಿಡುಬಿಗೆ ಪ್ರತಿರೋಧವಾಗಿ ಮನುಷ್ಯರಲ್ಲಿ ಬಳಸುವ ಸಾಧ್ಯತೆಯನ್ನು ಪರೀಕ್ಷಿಸಿದರು. ಉದಾಹರಣೆಗೆ, 1774ರ ಸಿಡುಬಿನ ಸಾಂಕ್ರಾಮಿಕ ರೋಗದ ವೇಳೆ ಡೋರ್‌ಸೆಟ್‌ನ ವ್ಯವಸಾಯಗಾರ ಬೆಂಜಮಿನ್ ಜೆಸ್ಟಿ, ಯಶಸ್ವಿಯಾಗಿ ತಮ್ಮ ಪತ್ನಿಗೆ ಹಾಗೂ ಎರಡು ಮಕ್ಕಳಿಗೆ ಕೌಪಾಕ್ಸ್ ಚುಚ್ಚುಮದ್ದನ್ನು ನೀಡಿದರು ಮತ್ತು ಪ್ರತಿರೋಧಕವನ್ನು ಹೆಚ್ಚಿಸಿದರು, ಆದರೆ ಈ ವಿಧಾನವು ಜೆನ್ನರ್ ಅವರ ಕಾರ್ಯದ ನಂತರ ಅಂದರೆ ಸುಮಾರು ಇಪ್ಪತ್ತು ವರ್ಷಗಳ ನಂತರವಷ್ಟೆ ವ್ಯಾಪಕವಾಗಿ ಪರಿಚಯಿಸಲ್ಪಟ್ಟಿತು. ವಾಸ್ತವದಲ್ಲಿ, ಜೆನ್ನರ್ ಅವರು ಜೆಸ್ಟಿಯವರ ಕಾರ್ಯವಿಧಾನ ಮತ್ತು ಯಶಸ್ಸನ್ನು ಅರಿತವರಾಗಿದ್ದರು.
ಜೆನ್ನರ್ ಅವರ ಮೊದಲ ಸಿದ್ಧಾಂತ:
ರೋಗದ ಸೋಂಕಿನ ಮೂಲವು ಕುದುರೆಗಳ ವ್ಯಾಧಿಯಿಂದ ಬಂದದ್ದಾಗಿದ್ದು, "ದಿ ಗ್ರೀಸ್" ಎಂದು ಕರೆಯಲ್ಪಡುವಂತದ್ದು, ಮತ್ತು ಇದು ತೋಟದ ಕೆಲಸಗಾರರಿಂದ ಹಸುಗಳಿಗೆ ವರ್ಗಾಯಿಸಲ್ಪಟ್ಟು, ನಂತರ ಪರಿವರ್ತನೆಯಾಗಿ ಕೌಪಾಕ್ಸ್ ಎಂಬ ಹೆಸರನ್ನು ಪಡೆದಿದೆ.
    ಸಾಮಾನ್ಯವಾಗಿ ಅವಲೋಕಿಸಿದಾಗ, ಹೈನುಗಾರರು ಹೆಚ್ಚಾಗಿ ಸಿಡುಬು ರೋಗಕ್ಕೆ ತುತ್ತಾಗುತ್ತಿರಲಿಲ್ಲ. ಜೆನ್ನರ್ ಅಭಿಪ್ರಾಯದಂತೆ ಕೌಪಾಕ್ಸ್ ನ (ಸಿಡುಬನ್ನು ಹೋಲುವಂತಹುದೇ ರೋಗ, ಆದರೆ ಕಡಿಮೆ ಪರಿಣಾಮನ್ನುಂಟುಮಾಡುವಂತದ್ದು) ಬೊಕ್ಕೆಯಿಂದ ಉಂಟಾದ ಕೀವು ಹೈನುಗಾರರ ಸಂಪರ್ಕಕ್ಕೆ ಪದೇ ಪದೇ ಬರುವುದರಿಂದ ಅವರ ದೇಹದಲ್ಲಿ ಉಂಟಾಗುವ ರೋಗ ನಿರೋಧಕ ಶಕ್ತಿಯಿಂದಾಗಿ ಅವರು ರೋಗದಿಂದ ರಕ್ಷಿಸಲ್ಪಡುತ್ತಿದ್ದರು ಎಂದು ತಿಳಿದುಕೊಳ್ಳಲಾಯಿತು. ಜೆನ್ನರ್ ಅವರು ಬೆಂಜಮಿನ್ ಜೆಸ್ಟೀಸ್‌ರವರ ಮತ್ತು ಇತರೆ ಕೆಲವು ಕುಟುಂಬದವರು ತಮ್ಮ ಕುಟುಂಬದವರಿಗೆ ಉದ್ದೇಶಪೂರ್ವಕವಾಗಿ ಕೌಪಾಕ್ಸ್ ರೋಗದ ಸೋಂಕು ತಗಕುವಂತೆ ಮಾಡುವ ಪ್ರಯತ್ನದ ಮೂಲಕ ಅವರಲ್ಲಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದ್ದರು ಹಾಗೂ ಅವರಿಗೆ ಸಿಡುಬು ರೋಗ ಉಂಟಾಗುವ ಸಂಭಾವ್ಯತೆ ಕಡಿಮೆ ಇತ್ತು ಎಂಬುದನ್ನು ಗುರುತಿಸಿದರು.
    14 ಮೇ 1796ರಲ್ಲಿ, ಜೆನ್ನರ್ ತಮ್ಮ ಸಿದ್ಧಾಂತವನ್ನು, 8 ವರ್ಷದ ಬಾಲಕ ಜೇಮ್ಸ್ ಫಿಪ್ಸ್ (ಜೆನ್ನರ್ ಅವರ ಮಾಲಿಯ ಮಗ) ಎನ್ನುವವನಿಗೆ, ಬ್ಲಾಸಮ್ ಎನ್ನುವ ಹಸುವಿನಿಂದ, ಕೌಪಾಕ್ಸ್ ತಗುಲಿದ ಸಾರಾ ನೇಮ್ಸ್ ಎನ್ನುವ ಹೈನುಗಾರ್ತಿಯ ಕೈನಲ್ಲಾದ ಕೌಪಾಕ್ಸ್ ಬೊಕ್ಕೆಯಿಂದ ತೆಗೆದ ರೋಗಾಣು ಚುಚ್ಚುಮದ್ದನ್ನು ನೀಡಿದರು. ಸೇಂಟ್ ಜಾರ್ಜ್ ವೈದ್ಯಕೀಯ ಶಾಲೆಯ ಗ್ರಂಥಾಲಯದ ಗೋಡೆಯ ಮೇಲೆ ಈ ಹಸುವಿನ ತೊಗಲನ್ನು ತೂಗುಹಾಕಲಾಗಿದೆ (ಈಗ ಇದು ಟೂಟಿಂಗ್‌ನಲ್ಲಿದೆ). ಇದು ಈ ವೈದ್ಯಕೀಯ ಶಾಲೆಯ ಪ್ರತಿಷ್ಟೆಯ ವಿಷಯಗಳಲ್ಲೊಂದಾಗಿದೆ. ಜೆನ್ನರ್ ಅವರು ಲಸಿಕೆಯ ಕುರಿತು ಲೇಖನದಲ್ಲಿ ಉಲ್ಲೇಖಿಸಿದ 17ನೆ ಪ್ರಕರಣ ಫಿಪ್ಸ್ ಅವರದ್ದಾಗಿದೆ.
    ಜೆನ್ನರ್ ಅವರು ಒಂದೇ ದಿನ ಫಿಪ್ಸ್‌ನ ಎರಡೂ ತೋಳುಗಳಿಗೆ ಕೌಪಾಕ್ಸ್ ಕೀವಿನ ರೋಗಾಣು ಚುಚ್ಚುಮದ್ದನ್ನು ನೀಡಿದರು. ನೇಮ್ಸ್ ಅವರ ಬೊಕ್ಕೆಯಿಂದಾದ ಕೀವನ್ನು ತೆಗೆದು ಮರದ ತುಂಡಿನ ಮೇಲೆ ಇಟ್ಟು ನಂತರ ಅದನ್ನು ಫಿಪ್ಸ್ ಅವರ ತೋಳುಗಳಿಗೆ ವರ್ಗಾಯಿಸಿ ರೋಗಾಣು ಚುಚ್ಚುವ ಕಾರ್ಯವನ್ನು ಪೂರ್ತಿಗೊಳಿಸಿದರು. ಇದು ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಅಹಿತವನ್ನುಂಟುಮಾಡಿತಾದರೂ ಯಾವುದೇ ಹೆಚ್ಚಿನ ಅನಾರೋಗ್ಯವನ್ನುಂಟುಮಾಡಲಿಲ್ಲ. ನಂತರ, ಅವರು ಫಿಪ್ಸ್‌ನಿಗೆ ಆ ಕಾಲದಲ್ಲಿ ಪ್ರತಿರೋಧಕವನ್ನು ಹೆಚ್ಚಿಸಲು ನೀಡುವ ಹಲವಾರು ದ್ರವ್ಯಗಳನ್ನು ನೀಡಿದರು. ಯಾವುದೇ ರೋಗವೂ ಅವನನ್ನು ಕಾಡಲಿಲ್ಲ. ನಂತರ ಮತ್ತೆ ಈ ಬಾಲಕನು ಅನೇಕ ದ್ರವ್ಯಗಳಿಂದ ಪರೀಕ್ಷೆಗೊಳಪಟ್ಟನು ಹಾಗೂ ಯಾವುದೇ ಸೋಂಕಿನ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ಜೆನ್ನರ್ ವರದಿ ಮಾಡಿದರು.
ತಿಳಿದಿರುವಂತದ್ದು
ಸಿಡುಬು, ರೋಗಾಣು ಚುಚ್ಚುಮದ್ದು ಹಾಕಿ ಉಂಟಾಗುವ ಅನಾರೋಗ್ಯಕ್ಕಿಂತ ಹೆಚ್ಚು ಅಪಾಯಕಾರಿಯಾದಂತದ್ದು ಮತ್ತು ಇದಕ್ಕಿಂತ ಕೌಪಾಕ್ಸ್ ಕಡಿಮೆ ಅಪಾಯಕಾರಿಯಾದಂತದ್ದು.
ಸಿದ್ಧಾಂತ
ಕೌಪಾಕ್ಸ್ ಸೋಂಕು ಸಿಡುಬಿಗೆ ನಿರೋಧಕವಾಗಿ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ.
ಪರೀಕ್ಷೆ
ಕೌಪಾಕ್ಸ್ ಸೋಂಕು ತಗುಲಿದ ನಂತರ ರೋಗಾಣು ಚುಚ್ಚುಮದ್ದು ಪಡೆದು, ಅದು ಸಿಡುಬಿನ ಸೋಂಕು ಉತ್ಪತ್ತಿ ಮಾಡುವಲ್ಲಿ ಅಸಫಲವಾದರೆ, ಸಿಡುಬಿನ ಪ್ರತಿರೋಧಕ ಶಕ್ತಿಯು ಹೆಚ್ಚಿದಂತೆಯೆ.
ಫಲಿತಾಂಶ:
ರೋಗಾಣು ಚುಚ್ಚುಮದ್ದು ನೀಡುವುದಕ್ಕಿಂತ ಹೆಚ್ಚು ಸುರಕ್ಷಿತವಾಗಿ ಸಿಡುಬಿನ ಪ್ರತಿರೋಧಕವನ್ನು ನೀಡಲಾಗುತ್ತಿತ್ತು.
    ರೊನಾಲ್ಡ್ ಹಾಪ್‌ಕಿನ್ಸ್ ಹೇಳುತ್ತಾರೆ: "ಜೆನ್ನರ್ ಅವರ ಅದ್ವಿತೀಯ ಕೊಡುಗೆಯೆಂದರೆ ಅವರು ಕೆಲವರಿಗೆ ಕೌಪಾಕ್ಸ್ ರೋಗಾಣು ಚುಚ್ಚುಮದ್ದು ನೀಡಿದರು ಎನ್ನುವುದಲ್ಲ. ಬದಲಾಗಿ ನಂತರ ಅವರು ಅದು ಸಿಡುಬಿನ ಪ್ರತಿರೋಧಕ ಎನ್ನುವುದನ್ನು ಸಾಬೀತುಪಡಿಸಿದರು ಎನ್ನುವುದು. ಅದಕ್ಕಿಂತ ಹೆಚ್ಚಾಗಿ, ಅವರು ರಕ್ಷಿಸಲ್ಪಟ್ಟ ಕೌಪಾಕ್ಸ್‌ ಅನ್ನು ಕೇವಲ ಹಸುವಿನ ನೇರ ಸಂಪರ್ಕದಿಂದಲ್ಲದೆ, ಮನುಷ್ಯರಿಂದ ಮನುಷ್ಯರಿಗೆ ಕೂಡ ಸಕ್ರಿಯವಾಗಿ ರಕ್ತದೊಳಕ್ಕೆ ತೂರಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ಜೊತೆಗೆ, ತಮ್ಮ ಸಿದ್ಧಾಂತಗಳನ್ನು 23 ವಿಷಯಗಳ ಒಂದು ಸರಣಿಯಂತೆ ಪರೀಕ್ಷೆಗೊಳಪಡಿಸಿದರು. ಈ ರೀತಿಯ ಸಂಶೋಧನಾ ಪ್ರಕಾರವು ಅವರ ಪುರಾವೆಗಳ ಊರ್ಜಿತತ್ವವನ್ನು ಹೆಚ್ಚಿಸಿತು.
    ಅವರು ತಮ್ಮ ಸಂಶೋಧನೆಯನ್ನು ಮುಂದುವರೆಸಿದರು ಮತ್ತು ಅವರ ಮೊದಲ ವರದಿಯನ್ನು ರಾಯಲ್ ಸೊಸೈಟಿಗೆ ನೀಡುತ್ತಿದ್ದರು ಆದರೆ ತಮ್ಮ ಪ್ರಾಥಮಿಕ ಪ್ರಯೋಗದ ವಿಷಯವನ್ನು ಅವರು ಪ್ರಕಟಿಸಲಿಲ್ಲ. ಸುಧಾರಣೆಯ ಮತ್ತು ಹೆಚ್ಚಿನ ಕೆಲಸದ ನಂತರ, ಅವರು ಇಪ್ಪತ್ಮೂರು ಪ್ರಕರಣಗಳ ಒಂದು ವರದಿಯನ್ನು ಪ್ರಕಟಿಸಿದರು. ಅವರ ಕೆಲವು ತೀರ್ಮಾನಗಳು ಸರಿಯಾಗಿದ್ದವು ಮತ್ತು ಕೆಲವೊಂದು ತಪ್ಪಾಗಿದ್ದವು– ಇದರ ಪುನರಾವರ್ತನೆಗೆ ಆಧುನಿಕ ಸೂಕ್ಷ್ಮ ಜೀವವಿಜ್ಞಾನ ಮತ್ತು ಸೂಕ್ಷ್ಮದರ್ಶಕೀಯ ವಿಧಾನದಿಂದ ಸುಲಭ ಸಾಧ್ಯವಾಗುತ್ತಿತ್ತು. ಈಗಿರುವಂತೆ ಆಗ ಕೂಡ ವೈದ್ಯಕೀಯ ಬೆಳವಣಿಗೆಯನ್ನು ಮುಂಜಾಗೃತೆಯಿಂದ ನೋಡಲಾಗುತ್ತಿತ್ತು. ಅವನ ಸಂಶೋಧನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಮುಂಚೆ ಅವುಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಅಂತಿಮವಾಗಿ ಲಸಿಕೆ ನೀಡುವುದನ್ನು ಅಂಗೀಕರಿಸಲಾಯಿತು, ಹಾಗೂ 1840ರಲ್ಲಿ ಬ್ರಿಟಿಷ್ ಸರ್ಕಾರವು ಸಿಡುಬಿನದ್ದೇ– ರೋಗಾಣು ಚುಚ್ಚುಮದ್ದು– ನೀಡುವುದನ್ನು ನಿಷೇಧಿಸಿತು ಮತ್ತು ಉಚಿತವಾಗಿ ಕೌಪಾಕ್ಸ್– ಬಳಸಿ ಲಸಿಕೆ–ಯನ್ನು ಒದಗಿಸಿತು. (ಲಸಿಕೆಯ ಕಾಯ್ದೆಗಳನ್ನು ನೋಡಿರಿ)
ಎಡ್ವರ್ಡ್ ಜೆನ್ನರ್ 
1802ರ ಎಡ್ವರ್ಡ್ ಜೆನ್ನರ್ ಕುರಿತಾದ ವ್ಯ್‌ಂಗ್ಯ ಭಾವಚಿತ್ರದಲ್ಲಿ ಜೆನ್ನೆರ್ ರೋಗಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾನೆ. ಅವರೆಲ್ಲ ತಮಗೆ ಆಕಳಿನಂತೆ ಕೊಂಬು ಬರಬಹುದೇನೋ ಎಂಬ ಭಯದಲ್ಲಿರುವುದನ್ನು ಚಿತ್ರಿಸಲಾಗಿದೆ.
    ಜೆನ್ನರ್ ಅವರ ಲಸಿಕೆಯ ಕಾರ್ಯವು ಮುಂದುವರೆದಂತೆ, ಅದು ಅವರ ಸಾಮಾನ್ಯ ವೈದ್ಯಕೀಯ ವೃತ್ತಿಗೆ ತಡೆಯನ್ನೊಡ್ಡಿತು. ಅವರು ಸಹವರ್ತಿಗಳಿಂದ ಬೆಂಬಲವನ್ನು ಪಡೆದರು ಮತ್ತು ರಾಜನು ಸಂವಿಧಾನದಲ್ಲಿ ಅವರ ಲಸಿಕೆಯ ಕಾರ್ಯಕ್ಕಾಗಿ £10,000 ನ್ನು ಬಿಡುಗಡೆಗೊಳಿಸಿದನು. 1806ರಲ್ಲಿ ಅವರ ಮುಂದುವರಿದ ಕೆಲಸಕ್ಕಾಗಿ ಮತ್ತೂ £20,000 ನ್ನು ಬಿಡುಗಡೆಗೊಳಿಸಲಾಯಿತು.
    1803ರಲ್ಲಿ ಲಂಡನ್ನಿನಲ್ಲಿ ಇವರು ಸಿಡುಬನ್ನು ಬುಡಸಮೇತ ನಿರ್ಮೂಲನೆ ಮಾಡಲು ಲಸಿಕೆಯ ಕುರಿತು ಪ್ರಚಾರ ಮಾಡುವ ಒಂದು ಸಮಾಜ, ಜೆನೇರಿಯನ್ ಸಂಸ್ಥೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1808ರಲ್ಲಿ, ಸರ್ಕಾರದ ಬೆಂಬಲದೊಂದಿಗೆ, ಈ ಸಮಾಜವು ರಾಷ್ಟ್ರೀಯ ಲಸಿಕಾ ಸಂಸ್ಥೆ ಎನಿಸಿತು. ಜೆನ್ನರ್ ಅವರು 1805ರಲ್ಲಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಂಘದ ಪ್ರತಿಷ್ಠಾನದಲ್ಲಿ ಸದಸ್ಯರಾದರು ಹಾಗೂ ನಂತರದ ದಿನಗಳಲ್ಲಿ ಅವರಿಗೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಒದಗಿಸಿದರು. ಈಗ ಅದು ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಎಂದಾಗಿದೆ. 1806ರಲ್ಲಿ ಇವರು ಸ್ವಿಡಿಶ್ ರಾಜವಂಶದ ವಿಜ್ಞಾನ ಅಕಾಡೆಮಿಯಲ್ಲಿ ವಿದೇಶಿ ಸದಸ್ಯರಾಗಿ ಚುನಾಯಿತರಾದರು.
    1811ರಲ್ಲಿ ಲಂಡನ್ನಿಗೆ ವಾಪಸ್ಸಾದ ಮೇಲೆ ಇವರು, ಲಸಿಕೆ ಹಾಕಿದ ನಂತರವೂ ಸಿಡುಬು ಕಾಣಿಸಿದ ಹಲವಾರು ಪ್ರಮುಖ ಪ್ರಕರಣಗಳನ್ನು ಗಮನಿಸಿದರು. ಈ ಪ್ರಕರಣಗಳಲ್ಲಿ ವ್ಯಾಧಿಯು, ಹಿಂದಿನ ಲಸಿಕೆಯಿಂದ ಸಂಪೂರ್ಣವಾಗಿ ಕಡಿಮೆಯಾಗಲಿಲ್ಲವೆಂಬುದನ್ನು ಇವರು ಕಂಡುಕೊಂಡರು. 1821ರಲ್ಲಿ ಇವರು ಕಿಂಗ್ ಜಾರ್ಜ್ IV ಅವರಿಗೆ ವಿಶೇಷ ವೈದ್ಯರಾಗಿ ನೇಮಕಗೊಂಡರು, ಇದು ಒಂದು ಮಹತ್ತಾದ ರಾಷ್ಠ್ರೀಯ ಗೌರವ ಹಾಗೂ ಇವರನ್ನು ಬರ್ಕ್ಲಿಯ ಮಹಾಪೌರ ಮತ್ತು ಶಾಂತಿಯ ನ್ಯಾಯಮೂರ್ತಿಯೆಂದು ಕರೆಯಲಾಯಿತು. ಇವರು ನೈಸರ್ಗಿಕ ಚರಿತ್ರೆಯಲ್ಲಿ ತಮಗಿರುವ ಆಸಕ್ತಿಯನ್ನು ಮುಂದುವರೆಸಿದರು. 1823ರಲ್ಲಿ, ತಮ್ಮ ಜೀವನದ ಕೊನೆಯ ವರ್ಷದಲ್ಲಿ, ಇವರು ತಮ್ಮ ಒಬ್ಸರ್ವೇಷನ್ಸ್ ಆನ್ ದಿ ಮೈಗ್ರೇಷನ್ ಆಫ್ ಬರ್ಡ್ಸ್ ನ್ನು ರಾಯಲ್ ಸೊಸೈಟಿಗೆ ಕೊಡುಗೆಯಾಗಿ ನೀಡಿದರು.
    ಜೆನ್ನರ್ ಅವರು 1823 ಜನೆವರಿ 25ರಂದು ಲಕ್ವದಿಂದ ಜರ್ಜರಿತರಾದರು ಇದರಿಂದ ತಮ್ಮ ದೇಹದ ಬಲಬಾಗದ ಸಂಪೂರ್ಣ ಹಿಡಿತವನ್ನು ಕಳೆದುಕೊಂಡರು. ಇವರು ಇದರಿಂದ ಎಂದಿಗೂ ಸಂಪೂರ್ಣವಾಗಿ ಗುಣಮುಖರಾಗಲಿಲ್ಲ. 26 ಜನೆವರಿ 1823ರಲ್ಲಿ, ತಮ್ಮ 73ನೇ ವರ್ಷದಲ್ಲಿ ಮತ್ತೊಮ್ಮೆ ಪಾರ್ಶ್ವವಾಯು ಹೊಡೆತದಿಂದ ಕೊನೆಯುಸಿರೆಳೆದರು. ಇವರು ಒಬ್ಬ ಮಗ ಹಾಗೂ ಮಗಳನ್ನು ಹೊಂದಿದ್ದರು, ಇವರ ಹಿರಿಯ ಮಗ 21ನೆ ವಯಸ್ಸಿನಲ್ಲಿ ಕ್ಷಯರೋಗದಿಂದ ಸಾವನ್ನಪ್ಪಿದ್ದನು.
ಎಡ್ವರ್ಡ್ ಜೆನ್ನರ್ 
ಅವನ ಮೂಲ ವರದಿಯು ಶಸ್ತ್ರಚಿಕಿತ್ಸಕರ ರಾಯಲ್ ಕಾಲೇಜ್‌(ಲಂಡನ್)ನಲ್ಲಿದೆ

ಮೊದಲ ಸಮುದಾಯ ಲಸಿಕೆ ಹಾಕಿಸುವಿಕೆ

    1796 ಡಿಸೆಂಬರ್ 1ರಂದು, ಟ್ರಿಂಟಿಯಲ್ಲಿ ವೈದ್ಯ ಪ್ರಚಾರಕ ಮತ್ತು ನ್ಯೂಫೌಂಡ್‌ಲ್ಯಾಂಡಿನಲ್ಲಿ ಎರಡನೆಯ ಅತಿ ದೊಡ್ಡ ಒಪ್ಪಂದಕ ಡಾ. ಜಾನ್ ಕ್ಲಿಂಚ್ ಅವರು ಗ್ಲೌಸೆಸ್ಟರ್‌ಶೈರ್‌ನ ಡಾ.ಎಡ್ವರ್ಡ್ ಜೆನ್ನರ್ ಅವರಿಗೆ ಒಂದು ಪತ್ರವನ್ನು ಕಳುಹಿಸಿದರು. ಕ್ಲಿಂಚ್ ಅವರು ಸಿಡುಬಿಗೆ ಪ್ರತಿರೋಧಕವಾಗಿ ಕೌಪಾಕ್ಸ್ ಬೊಕ್ಕೆಯನ್ನು ಲಸಿಕೆಯಾಗಿ ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕೋರಿದರು. ಜೆನ್ನರ್ ಅವರು 6 ತಿಂಗಳ ಮುಂಚೆಯಷ್ಟೆ ತಮ್ಮ ಮೊದಲ ರೋಗಿಗೆ ಲಸಿಕೆಯನ್ನು ನೀಡಿದ್ದರು. 1800 ಜೂನ್‌ನಲ್ಲಿ, ಜೆನ್ನರ್ ಅವರು 23 ರೋಗಿಗಳ ಮೇಲೆ ತಾವು ನಡೆಸಿದ ಲಸಿಕೆ ನೀಡುವ ಪ್ರಯೋಗವನ್ನು ತಿಳಿಸುವ, ಸಿಡುಬಿನ ಲಸಿಕೆಗೆ ಕಾರಣಗಳು ಮತ್ತು ಪರಿಣಾಮಗಳ ಕುರಿತು ಒಂದು ಶೋಧನೆ ಎಂಬ ಪ್ರಸಿದ್ಧ ಕಿರುಹೊತ್ತಿಗೆ ಪ್ರಕಟಗೊಳ್ಳುವ ಒಂದು ವರ್ಷ ಅಥವಾ ಇನ್ನೂ ಮುಂಚೆ ಬಹುಶಃ ಕ್ಲಿಂಚ್ ಅವರು ನ್ಯೂಫೌಂಡ್‌ಲ್ಯಾಂಡಿನಲ್ಲಿ ಜನರಿಗೆ ಲಸಿಕೆಯನ್ನು ನೀಡುತ್ತಿದ್ದರು.
    ಜೆನ್ನರ್ ಮತ್ತು ಕ್ಲಿಂಚ್, ಇಬ್ಬರೂ 1749ರಲ್ಲಿ ಜನಿಸಿದವರು, ಇವರು ಗ್ಲೌಸೆಸ್ಟರ್‌ಶೈರ್‌ನ, ಸಿರೆನ್‌ಸಿಸ್ಟರ್‌ನಲ್ಲಿ ಪೂಜ್ಯ ಡಾ.ವಾಶ್‌ಬೌರ್ನ್ಸ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಲಂಡನ್ನಿಗೆ ಹೋಗುವ ಮುಂಚೆ ಹೆಸರುವಾಸಿ ಶಸ್ತ್ರಚಿಕಿತ್ಸಕ ಜಾನ್ ಹಂಟರ್ ಅವರ ವಿದ್ಯಾರ್ಥಿಗಳಾಗಿದ್ದರು. ಜೆನ್ನರ್ ಅವರು ತಮ್ಮ ಸ್ವಸ್ಥಳಕ್ಕೆ ಮರಳಿದರು. ಆದರೆ ಕ್ಲೆಂಚ್ ಅವರು ನ್ಯೂಫೌಂಡ್‌ಲ್ಯಾಂಡ್‌ನ ಮುಖ್ಯ ಬಂದರು ಪೂಲ್ ಹತ್ತಿರ ಡೋರ್‌ಸೆಟ್‌ನಲ್ಲಿ 3 ವರ್ಷಗಳ ಕಾಲ ಅಭ್ಯಾಸ ನಡೆಸಿದರು. 1775ರಲ್ಲಿ ಬೊನಾವಿಸ್ತಾದಲ್ಲಿ ವೃತ್ತಿ ನಡೆಸಲು ಕ್ಲೆಂಚ್ ಅವರು ನ್ಯೂಫೌಂಡ್‌ಲ್ಯಾಂಡ್‌ಗೆ ತೆರಳಿದರು. 8 ವರ್ಷಗಳ ನಂತರ ಅವರು ಟ್ರಿನಿಟಿಗೆ ನಡೆದರು, ಅಲ್ಲಿ ಅವರು ಭಾನುವಾರ ಧರ್ಮೋಪನ್ಯಾಸಕರಿಗೆ ಧರ್ಮ ಭೋದನೆ ಮಾಡಿದರು. ಜೆನ್ನರ್ ಅವರ ಸೋದರಳಿಯ, ಅದೇ ಚರ್ಚನ ಉದ್ದೇಶವನ್ನಿಟ್ಟುಕೊಂಡ-ವೈದ್ಯ ವೃತ್ತಿಯ ಜಾರ್ಜ್ ಜೆನ್ನರ್, ತಮ್ಮ ವೈದ್ಯಕೀಯ ಶಿಕ್ಷಣವನ್ನು 1789ರಲ್ಲಿ ಟ್ರಿನಿಟಿಯಲ್ಲಿ ಕ್ಲೆಂಚ್ ಕೆಳಗೆ ಪ್ರಾರಂಭಿಸಿದರು.
    1800 ಜುಲೈ 15ರಂದು, ಎಡ್ವರ್ಡ್ ಜೆನ್ನರ್‌ರಿಂದ ಲಸಿಕೆಯ ಎರಡನೆ ಸರಕು ಕ್ಲೆಂಚ್ ಅವರನ್ನು ತಲುಪಿತು; ಎರಡು ಸರಕಿನಲ್ಲಿ ಮೊದಲನೆಯದಂತೆಯೆ ಇದು ಕೂಡ ಟ್ರಿನಿಟಿ ಮತ್ತು ಸೇಂಟ್. ಜಾನ್ಸ್ ಮಧ್ಯದ ದ್ವೀಪ, ಹರ್ಬರ್ ಗ್ರೇಸ್‌ಗೆ ಜಾರ್ಜ್ ಜೆನ್ನರ್ ಅವರ ಮೂಲಕ, ನಂತರ ಧರ್ಮೋಪನ್ಯಾಸಕ ಮಂತ್ರಿಯ ಮೂಲಕ ಬಂದು ತಲುಪಿತು. 1800ರ ಅಕ್ಟೋಬರ್ ಮೊದಲ ವಾರದಲ್ಲಿ ಕ್ಲೆಂಚ್ ಅವರು ಪಕ್ಕದ ಸೆಂಟ್. ಜಾನ್ಸ್ ಮತ್ತು ಪೊರ್ಚುಗಲ್ ಕೋವ್‌ನ ಒಪ್ಪಂದಕ್ಕಿಂತ ಹೆಚ್ಚುವರಿ ಜನರಿಗೆ ಲಸಿಕೆಯನ್ನು ಹಾಕಿದರು ಹಾಗೂ 1801ರ ಕೊನೆಯ ವೇಳೆಗೆ ಅವರು 700 ಜನರಿಗೆ ಲಸಿಕೆ ಹಾಕಿದ್ದರು.
    ವಿಲಿಯಮ್ ಆರ್. ಲೆಫಾನು ಅವರು ಜೆನ್ನರ್ ಕುರಿತ ನಿರ್ಧಾರಕ ಗ್ರಂಥಸೂಚಿಯಲ್ಲಿ ಉತ್ತರ ಅಮೇರಿಕಾದಲ್ಲಿ 1800 ಜುಲೈನಲ್ಲಿ ತಮ್ಮ ಸ್ವಂತ ಮಕ್ಕಳಿಗೆ ಚುಚ್ಚುಮದ್ದು ನೀಡಿ ನಂತರ ಬೋಸ್ಟನ್ನಿನಲ್ಲಿ ಲಸಿಕೆಯನ್ನು ಪ್ರಚಾರಪಡಿಸಿದ. ಬೆಂಜಮಿನ್ ವಾಟರ್‌ಹೌಸ್‌ಗಿಂತ ಮೊದಲು ಚುಚ್ಚುಮದ್ದುಗಾರರೆನಿಸಿದ ಶ್ರೇಯಸ್ಸು ಕ್ಲೆಂಚ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ. ದುಃಖವೆಂದರೆ, ನಿರ್ಣಾಯಕ ದಾಖಲೆಗೆ ಅವರು ನೀಡಿದ ಮೊದಲ ಲಸಿಕೆಯ ಖಚಿತ ತಾರೀಖು ದೊರಕದೆ ಇರುವುದು. ಕ್ಲೆಂಚ್ ಅವರು ಟ್ರಿನಿಟಿಯಲ್ಲಿ ಸ್ಮಾರಕ ಫಲಕದಿಂದ ಗೌರವಿಸಲ್ಪಟ್ಟರು. (ಈ ವಿಭಾಗವು ಜಾನ್ ಡಬ್ಲು.ಆರ್. ಮ್ಯಾಕ್‌ಇಂಟೈರ್, ಎಮ್‌ಬಿ ಬಿಎಸ್ ಇವರಿಂದ ಪುನರ್‌ಪ್ರಕಟಣೆ ಮಾಡಲ್ಪಟ್ಟಿತು; ಸಿ. ಸ್ಟೌರ್ಟ್ ಹೌಸ್ಟನ್, ಎಮ್‌ಡಿ ಇವರು ’ಕೆನಡಾದಲ್ಲಿ ಸಿಡುಬು ಮತ್ತು ಅದರ ನಿಯಂತ್ರಣ’ ವರದಿಯನ್ನು ಪ್ರಕಟಿಸಿದರು. ಸಿಎಮ್‌ಎಜೆ 14ನೇ ಡಿಸೆಂಬರ್ 1999)

ಪರಂಪರೆ

    1979ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಸಿಡುಬು ನಿರ್ಮೂಲನೆಗೊಂಡ ರೋಗ ಎಂದು ಘೋಷಿಸಿತು. ಇದು ಸಾರ್ವಜನಿಕ ಆರೋಗ್ಯಕ್ಕಾಗಿ ಹಲವು ಜನರ ಸಂಘಟಿತ ಪ್ರಯತ್ನದ ಫಲ, ಆದರೆ ಲಸಿಕೆ ಹಾಕಿಸುವುದು ಅತ್ಯವಶ್ಯಕ ಅಂಶವಾಗಿದೆ. ಹಾಗೂ ಇದು ಬುಡಸಮೇತ ನಿರ್ಮೂಲನೆಗೊಂಡಿದೆ ಎಂದು ಘೋಷಿಸಲ್ಪಟ್ಟರೂ , ಕೆಲವು ನಿದರ್ಶನಗಳು ಈಗಲೂ ಪ್ರಯೋಗಾಲಯಗಳಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಅಟ್ಲಾಂಟಾ, ಜಾರ್ಜಿಯಾ ಸಂಯುಕ್ತ ರಾಷ್ಟ್ರ, ಹಾಗೂ ರಷ್ಯಾದ ನೋವೊಸಬಿರ್ಸ್ಕ್ ಆಬ್ಲಾಸ್ಟ್‌‍ನ ಕೋಲ್ಟ್ ಸೋವ್‌ ಸ್ಟೇಟ್‌ ರಿಸರ್ಚ್‌ ಸೆಂಟರ್ ಆಫ್ ವೈರಾಲಜಿ ಆಂಡ್ ಬೈಯೋಟೆಕ್ನಾಲಜಿ VECTORಗಳಲ್ಲಿ ಉಳಿದುಕೊಂಡಿದೆ.
    ಅವರ ಕೆಲಸದ ಪ್ರಾಮುಖ್ಯತೆಯು ಇಲ್ಲಿಗೆ ನಿಲ್ಲುವುದಿಲ್ಲ. ಇವರ ಲಸಿಕೆಯು ಆಧುನಿಕ-ದಿನಗಳ ಪ್ರತಿರೋಧಕಶಾಸ್ತ್ರದ ಸಂಶೋಧನೆಗೆ ಮೂಲಾಧಾರವಾಗಿದೆ ಮತ್ತು ಇವರು ಆರಂಭಿಸಿದ ಮಾರ್ಗವು ಒಂದು ದಿನ ಸಂಧಿವಾತ, ಏಡ್ಸ್ ಹಾಗೂ ಇನ್ನೂ ಹಲವು ರೋಗಗಳ ಔಷಧಿಗೆ ಕಾರಣವಾಗಬಹುದು.

ಸ್ಮಾರಕ

ಚಿತ್ರ:Jenner-statue-by-lachlan-mvc-006f.jpg
ಕೆನ್ಸಿಂಗ್‌ಟನ್ ಗಾರ್ಡನ್ಸ್‌ನಲ್ಲಿನ ಕಂಚಿನ ಶಿಲ್ಪ
ಎಡ್ವರ್ಡ್ ಜೆನ್ನರ್ 
ಟೋಕಿಯೊದಲ್ಲಿರುವ ಸ್ಮಾರಕ
  • ಈಗ ಜೆನ್ನರ್ ಅವರ ಮನೆ ಬ್ಲಾಸಮ್ ಹಸುವಿನ ಕೊಂಬು ಹಾಗೂ ಇತರ ವಸ್ತುಗಳನ್ನು ಹೊಂದಿದ ಒಂದು ಸಣ್ಣ ವಸ್ತು ಸಂಗ್ರಹಾಲಯವಾಗಿದೆ. ಇದು ಗ್ಲೌಸೆಸ್ಟರ್‌ಶೈರ್‌, ಬರ್ಕ್ಲಿ ಪಟ್ಟಣದ ಹಳ್ಳಿಯಲ್ಲಿ ನೆಲೆಸಿದೆ.
  • ಜೆನ್ನರ್ ಅವರನ್ನು ಬರ್ಕ್ಲಿಯ ಪ್ಯಾರಿಶ್ ಚರ್ಚಿನ ಪವಿತ್ರ ಸ್ಥಳದಲ್ಲಿ ಮಣ್ಣುಮಾಡಲಾಯಿತು[ಸೂಕ್ತ ಉಲ್ಲೇಖನ ಬೇಕು].
  • ಗ್ಲೊಸಿಸ್ಟೀರ್ ಕ್ಯಾಥೆಡ್ರಲ್‌ನ ಮಧ್ಯಭಾಗದಲ್ಲಿ, ರಾಬರ್ಟ್ ವಿಲಿಯಮ್ ಸೀವಿಯರ್ ಕೆತ್ತಿದ ಜೆನ್ನರ್ ಅವರ ಪ್ರತಿಮೆಯನ್ನು ನಿಲ್ಲಿಸಲಾಯಿತು.
  • ಟ್ರಫಲ್‌ಗರ್ ಚೌಕಿಯಲ್ಲಿ ಒಂದು ಪ್ರತಿಮೆಯನ್ನು ನಿಲ್ಲಿಸಲಾಗಿತ್ತು, ನಂತರ ಇದನ್ನು ಕೆನ್ಸಿಂಗ್ಟನ್ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು.
  • ಯುಲೇಯ ಬಳಿಯಿರುವ ಸಣ್ಣ ಗ್ಲೌಸೆಸ್ಟೆರ್‌ಶೈರ್ ಗ್ರಾಮ ಡೌನ್‌ಹ್ಯಾಮ್ ಹಿಲ್ ಇದು ಸ್ಥಳೀಯವಾಗಿ ’ಸ್ಮಾಲ್‌ಪೊಕ್ಸ್ ಹಿಲ್’ ಎಂದು ಕರೆಯಲ್ಪಡುತ್ತದೆ. ಇದು ಕಾಯಿಲೆಯ ಜೊತೆಗಿನ ಜೆನ್ನೆರ್‌ನ ಸ್ಥಳೀಯ ಕೆಲಸಕ್ಕೆ ಒಂದು ಸಂಭಾವ್ಯ ಸಂಯೋಜನವನ್ನು ಒದಗಿಸುತ್ತದೆ.
  • ಸೇಂಟ್ ಜಾರ್ಜ್‌ನ, ಲಂಡನ್‌ನ ವಿಶ್ವವಿದ್ಯಾಲಯವು ಜೆನ್ನರ್ ಹೆಸರಿನಲ್ಲಿ ಒಂದು ವಿಭಾಗವನ್ನೇ ಹೊಂದಿದ್ದು. ಅವರ ಎದೆಮಟ್ಟದ ಪ್ರತಿಮೆಯನ್ನು ಹೊಂದಿದೆ.
  • ಸಂಯುಕ್ತ ರಾಷ್ಟ್ರದ, ಪೆನ್ಸಿಲ್ವೇನಿಯಾ ರಾಜ್ಯದ, ಸೋಮರ್‌ಸೆಟ್ ಕಂಟ್ರಿಯಲ್ಲಿರುವ ಹಳ್ಳಿಗಳ ಒಂದು ಸಣ್ಣ ಗುಂಪು, 19ನೆ ಶತಮಾನದ ಪೂರ್ವದಲ್ಲಿ ಇಂಗ್ಲಿಷ್ ವಸಾಹತುಗಾರರಿಂದ ಜೆನ್ನರ್ ಅವರ ಗೌರವಾರ್ಪಣೆಗೆ ಈಗಿನ ಜೆನ್ನರ್ ಪಟ್ಟಣಗಳನ್ನೂ ಒಳಗೊಂಡು, ಜೆನ್ನರ್ ಪಟ್ಟಣ ನಿವೇಶನ, ಜೆನ್ನರ್ ಅಡ್ಡರಸ್ತೆ ಮತ್ತು ಜೆನ್ನರ್‌ನಗರ,ಪೆನ್ಸಿಲ್ವೇನಿಯಾ ಎಂದು ನಾಮಕರಣ ಮಾಡಿದರು.
  • ಗ್ಲೌಸೆಸ್ಟರ್‌ಶೈರ್‌ ರಾಯಲ್ ಆಸ್ಪತ್ರೆಯಲ್ಲಿಯ ರಕ್ತಪಡೆಯುವ ವಿಭಾಗವನ್ನು ಎಡ್ವರ್ಡ್ ಜೆನ್ನರ್ ವಾರ್ಡ್ ಎಂದು ಕರೆಯಲ್ಪಡುತ್ತದೆ.
  • ಹಾಗೆಯೇ ನಾರ್ತ್ ವಿಕ್ ಪಾರ್ಕ್ ಆಸ್ಪತ್ರೆಯ ಒಂದು ಕೊಠಡಿಗೂ ಜೆನ್ನರ್ ವಾರ್ಡ್ ಎಂದು ಕರೆಯುವರು.

ಪ್ರಕಟಣೆಗಳು

  • 1798 ಸಿಡುಬಿನ ಲಸಿಕೆಯ ಕಾರಣಗಳು ಮತ್ತು ಪರಿಣಾಮಗಳ ಬಗೆಗೆ ಒಂದು ಪರಿಶೀಲನೆ
  • 1799 ಸಿಡುಬಿನ ಲಸಿಕೆಯ ಬಗೆಗಿನ ಇನ್ನೂ ಹೆಚ್ಚಿನ ಅವಲೋಕನಗಳು
  • 1800 ಸಿಡುಬಿನ ಲಸಿಕೆಗೆ ಸಂಬಂಧಿಸಿದ ಸತ್ಯಗಳು ಮತ್ತು ಅವಲೋಕನಗಳ ಒಂದು ನಿರಂತರತೆ 40pgs
  • 1801 ಲಸಿಕೆಯ ರೋಗಾಣು ಚುಚ್ಚಿಕೆಯ ಮೂಲ 12pgs

ಇದನ್ನೂ ನೋಡಿ

ಆಕರಗಳು

ಹೆಚ್ಚಿನ ಓದಿಗಾಗಿ

  • ಭೌತಶಾಸ್ತ್ರಜ್ಞರ ರಾಯಲ್ ಕಾಲೇಜಿನಲ್ಲಿನ ವರದಿಗಳು Archived 7 November 2017[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  • ಬ್ಯಾರೊನ್, ಜಾನ್ ಎಮ್.ಡಿ. ಎಫ್.ಆರ್.ಎಸ್., "ಎಡ್ವರ್ಡ್ ಜೆನ್ನೆರ್‌ ಎಮ್‌ಡಿ ಎಲ್‌ಎಲ್‌ಡಿ ಎಫ್‌ಆರ್‌ಎಸ್‌ ಜೀವನ", ಹೆನ್ರಿ ಕೊಲ್‌ಬರ್ನ್, ಲಂಡನ್, 1827.
  • ಬ್ಯಾರೊನ್, ಜಾನ್, "ಎಡ್ವರ್ಡ್ ಜೆನ್ನೆರ್‌ನ ಪತ್ರ ವ್ಯವಹಾರಗಳ ಮೂಲಕ ಅವನ ಸಿದ್ಧಾಂತ ಮತ್ತು ಆಯ್ಕೆಗಳ ಉದಾಹರಣೆಗಳ ಜೊತೆಗೆ ಅವನ ಜೀವನ". ಎರಡು ಸಂಪುಟಗಳು. (ಲಂಡನ್ ) 1902.
  • ಎಡ್ವರ್ಡ್ ಜೆನ್ನೆರ್, ವ್ಯಕ್ತಿ ಮತ್ತು ಅವನ ಕಾರ್ಯ. ಬಿಎಮ್‌ಜೆ 1949 ಇ ಅಶ್ವೋರ್ತ್ ಅಂಡರ್‌ವುಡ್
  • ಫಿಷರ್, ರಿಚರ್ಡ್ ಬಿ., "ಎಡ್ವರ್ಡ್ ಜೆನ್ನೆರ್ 1749-1823," ಆಂಡ್ರೆ ಡೊಯೆಚ್, ಲಂಡನ್, 1991.
  • Cartwright K (2005). "From Jenner to modern smallpox vaccines". Occupational Medicine. 55 (7): 563. doi:10.1093/occmed/kqi163. PMID 16251374.
  • Riedel S (2005). "Edward Jenner and the history of smallpox and vaccination". Proceedings. 18 (1): 21–5. PMC 1200696. PMID 16200144.
  • Tan SY (2004). "Edward Jenner (1749-1823): conqueror of smallpox" (PDF). Singapore Medical Journal. 45 (11): 507–8. PMID 15510320. Archived from the original (PDF) on 26 ಡಿಸೆಂಬರ್ 2010. Retrieved 31 ಜುಲೈ 2010.
  • van Oss CJ (2000). "Inoculation against smallpox as the precursor to vaccination". Immunological Investigations. 29 (4): 443–6. PMID 11130785.
  • Gross CP, Sepkowitz KA (1998). "The myth of the medical breakthrough: smallpox, vaccination, and Jenner reconsidered". International Journal of Infectious Diseases. 3 (1): 54–60. doi:10.1016/S1201-9712(98)90096-0. PMID 9831677.
  • Willis NJ (1997). "Edward Jenner and the eradication of smallpox". Scottish Medical Journal. 42 (4): 118–21. PMID 9507590.
  • Theves G (1997). "Smallpox: an historical review". Bulletin De La Société Des Sciences Médicales Du Grand-Duché De Luxembourg (in German). 134 (1): 31–51. PMID 9303824. CS1 maint: unrecognized language (link)
  • Kempa ME (1996). "Edward Jenner (1749-1823)--benefactor to mankind (100th anniversary of the first vaccination against smallpox)". Polski Merkuriusz Lekarski (in Polish). 1 (6): 433–4. PMID 9273243. ; CS1 maint: unrecognized language (link)
  • Baxby D (1996). "The Jenner bicentenary: the introduction and early distribution of smallpox vaccine". FEMS Immunology and Medical Microbiology. 16 (1): 1–10. doi:10.1111/j.1574-695X.1996.tb00105.x. PMID 8954347.
  • Larner AJ (1996). "Smallpox". The New England Journal of Medicine. 335 (12): 901, author reply 902. PMID 8778627.
  • Aly A, Aly S (1996). "Smallpox". The New England Journal of Medicine. 335 (12): 900–1, author reply 902. doi:10.1056/NEJM199609193351217. PMID 8778626.
  • Magner J (1996). "Smallpox". The New England Journal of Medicine. 335 (12): 900. doi:10.1056/NEJM199609193351217. PMID 8778624.
  • Kumate-Rodríguez J (1996). "Bicentennial of smallpox vaccine: experiences and lessons". Salud Pública De México (in Spanish). 38 (5): 379–85. PMID 9092091. CS1 maint: unrecognized language (link)
  • Budai J (1996). "200th anniversary of the Jenner smallpox vaccine". Orvosi Hetilap (in Hungarian). 137 (34): 1875–7. PMID 8927342. ; CS1 maint: unrecognized language (link)
  • Rathbone J (1996). "Lady Mary Wortley Montague's contribution to the eradication of smallpox". Lancet. 347 (9014): 1566. doi:10.1016/S0140-6736(96)90724-2. PMID 8684145.
  • Baxby D (1996). "The Jenner bicentenary; still uses for smallpox vaccine". Epidemiology and Infection. 116 (3): 231–4. doi:10.1017/S0950268800052523. PMC 2271423. PMID 8666065.
  • Cook GC (1996). "Dr William Woodville (1752-1805) and the St Pancras Smallpox Hospital". Journal of Medical Biography. 4 (2): 71–8. PMID 11616267.
  • Baxby D (1996). "Jenner and the control of smallpox". Transactions of the Medical Society of London. 113: 18–22. PMID 10326082.
  • Dunn PM (1996). "Dr Edward Jenner (1749-1823) of Berkeley, and vaccination against smallpox". Archives of Disease in Childhood. 74 (1): F77–8. PMC 2528332. PMID 8653442.
  • Meynell E (1995). "French reactions to Jenner's discovery of smallpox vaccination: the primary sources". Social History of Medicine. 8 (2): 285–303. doi:10.1093/shm/8.2.285. PMID 11639810.
  • Bloch H (1993). "Edward Jenner (1749-1823). The history and effects of smallpox, inoculation, and vaccination". American Journal of Diseases of Children. 147 (7): 772–4. PMID 8322750.
  • Roses DF (1992). "From Hunter and the Great Pox to Jenner and smallpox". Surgery, Gynecology & Obstetrics. 175 (4): 365–72. PMID 1411896.
  • Turk JL, Allen E (1990). "The influence of John Hunter's inoculation practice on Edward Jenner's discovery of vaccination against smallpox". Journal of the Royal Society of Medicine. 83 (4): 266–7. PMC 1292617. PMID 2187990.
  • Poliakov VE (1985). "Edward Jenner and vaccination against smallpox". Medit͡sinskai͡a Sestra (in Russian). 44 (12): 49–51. PMID 3912642. ; CS1 maint: unrecognized language (link)
  • Hammarsten JF, Tattersall W, Hammarsten JE (1979). "Who discovered smallpox vaccination? Edward Jenner or Benjamin Jesty?". Transactions of the American Clinical and Climatological Association. 90: 44–55. PMC 2279376. PMID 390826.{{cite journal}}: CS1 maint: multiple names: authors list (link)
  • Rodrigues BA (1975). "Smallpox eradication in the Americas". Bulletin of the Pan American Health Organization. 9 (1): 53–68. PMID 167890.
  • Wynder EL (1974). "A corner of history: Jenner and his smallpox vaccine". Preventive Medicine. 3 (1): 173–5. doi:10.1016/0091-7435(74)90074-7. PMID 4592685.
  • Andreae H (1973). "Edward Jenner, initiator of cowpox vaccination against human smallpox, died 150 years ago". Das Offentliche Gesundheitswesen (in German). 35 (6): 366–7. PMID 4269783. ; CS1 maint: unrecognized language (link)
  • Friedrich I (1973). "A cure for smallpox. On the 150th anniversary of Edward Jenner's death". Orvosi Hetilap (in Hungarian). 114 (6): 336–8. PMID 4567814. ; CS1 maint: unrecognized language (link)
  • MacNalty AS (1968). "The prevention of smallpox: from Edward Jenner to Monckton Copeman". Medical History. 12 (1): 1–18. PMC 1033768. PMID 4867646.
  • Udovitskaia EF (1966). "Edward Jenner and the history of his scientific achievement. (On the 170th anniversary of the discovery of smallpox vaccination)". Vrachebnoe Delo (in Russian). 11: 111–5. PMID 4885910. ; CS1 maint: unrecognized language (link)
  • Voigt K (1964). "THE PHARMACY DISPLAY WINDOW. EDWARD JENNER DISCOVERED SMALLPOX VACCINATION". Pharmazeutische Praxis (in German). 106: 88–9. PMID 14237138. CS1 maint: unrecognized language (link)
  • ಸಿಡುಬು ರೋಗಕ್ಕೆ ಉಲ್ಲೇಖವನ್ನು ನೀಡುತ್ತಿರುವ ಆರ್ಡನ್ಸ್ ಸರ್ವೇಯ ಅವಲೋಕನ: http://explore.ordnancesurvey.co.uk/os_routes/show/1539 Archived 3 February 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  • 1970 ಡೇವಿಸ್ ಜೆಡಬ್ಲು. ಕೆನಡಾದ ಮೊದಲ ಚುಚ್ಚುಮದ್ದುಗಾರ ರೆವೆರೆಂಡ್ ಜಾನ್ ಕ್ಲಿಂಚ್ ಬಗೆಗಿನ ಒಂಸು ಐತಿಹಾಸಿಕ ವರದಿ. ಸಿಎಮ್‌ಎಜೆ 1970;102:957-61.
  • 1970 ರಾಬರ್ಟ್ಸ್ ಕೆಬಿ. ಸಿಡುಬು: ಒಂದು ಐತಿಹಾಸಿಕ ರೋಗ. ನ್ಯೂಫೌಂಡ್‌ಲ್ಯಾಂಡ್ ಒಕಾಸ್ ಸ್ಮಾರಕ ವಿಶ್ವವಿದ್ಯಾಲಯದ ವರದಿಗಳು Med Hist 1978;1:31-9.
  • 1951 ಲಿಫಾನು ಡಬ್ಲುಆರ್. ಎಡ್ವರ್ಡ್ ಜೆನ್ನೆರ್‌ನ ಒಂದು ಜೈವಿಕ-ಗ್ರಂಥಗಳ ವಿವರಣೆ ಪಟ್ಟಿ, 1749–1823. ಲಂಡನ್ (ಯುಕೆ): ಹಾರ್ವೆ ಮತ್ತು ಬ್ಲೈಥ್; 1951. ಪುಟ 103-8.

ಬಾಹ್ಯ ಕೊಂಡಿಗಳು

Tags:

ಎಡ್ವರ್ಡ್ ಜೆನ್ನರ್ ಆರಂಭಿಕ ಬದುಕುಎಡ್ವರ್ಡ್ ಜೆನ್ನರ್ ಸಿಡುಬುಎಡ್ವರ್ಡ್ ಜೆನ್ನರ್ ಮೊದಲ ಸಮುದಾಯ ಲಸಿಕೆ ಹಾಕಿಸುವಿಕೆಎಡ್ವರ್ಡ್ ಜೆನ್ನರ್ ಪರಂಪರೆಎಡ್ವರ್ಡ್ ಜೆನ್ನರ್ ಸ್ಮಾರಕಎಡ್ವರ್ಡ್ ಜೆನ್ನರ್ ಪ್ರಕಟಣೆಗಳುಎಡ್ವರ್ಡ್ ಜೆನ್ನರ್ ಇದನ್ನೂ ನೋಡಿಎಡ್ವರ್ಡ್ ಜೆನ್ನರ್ ಆಕರಗಳುಎಡ್ವರ್ಡ್ ಜೆನ್ನರ್ ಹೆಚ್ಚಿನ ಓದಿಗಾಗಿಎಡ್ವರ್ಡ್ ಜೆನ್ನರ್ ಬಾಹ್ಯ ಕೊಂಡಿಗಳುಎಡ್ವರ್ಡ್ ಜೆನ್ನರ್ಆಂಗ್ಲ

🔥 Trending searches on Wiki ಕನ್ನಡ:

ಪಂಪ ಪ್ರಶಸ್ತಿಕನ್ನಡ ಛಂದಸ್ಸುಕಾಂತಾರ (ಚಲನಚಿತ್ರ)ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಾದರ ಚೆನ್ನಯ್ಯಬಿ.ಎಫ್. ಸ್ಕಿನ್ನರ್ಇ-ಕಾಮರ್ಸ್ತಾಜ್ ಮಹಲ್ದ್ರೌಪದಿ ಮುರ್ಮುಅವರ್ಗೀಯ ವ್ಯಂಜನಗಾಳಿ/ವಾಯುಭೋವಿರಾಮ ಮಂದಿರ, ಅಯೋಧ್ಯೆನಿರುದ್ಯೋಗಸೌರಮಂಡಲದ್ವಿಗು ಸಮಾಸಗಾಂಧಿ- ಇರ್ವಿನ್ ಒಪ್ಪಂದಭಾರತದ ಭೌಗೋಳಿಕತೆಹೆಸರುಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ಸಂವಿಧಾನದ ೩೭೦ನೇ ವಿಧಿಪ್ರೇಮಾರೇಣುಕಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಅರಿಸ್ಟಾಟಲ್‌ತಾಪಮಾನಮಲ್ಲಿಗೆಯಮಅಂಟುಬಸವ ಜಯಂತಿದಿಕ್ಕುವಿರಾಟವಿರಾಮ ಚಿಹ್ನೆದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕೋಟ ಶ್ರೀನಿವಾಸ ಪೂಜಾರಿಬೆಳಕುನರೇಂದ್ರ ಮೋದಿಮಾದಕ ವ್ಯಸನಕರ್ನಾಟಕ ಲೋಕಸಭಾ ಚುನಾವಣೆ, 2019ಆದಿವಾಸಿಗಳುಜನಪದ ಕಲೆಗಳುಮೈಗ್ರೇನ್‌ (ಅರೆತಲೆ ನೋವು)ಸಂವಹನಸಮುಚ್ಚಯ ಪದಗಳುಸಾವಿತ್ರಿಬಾಯಿ ಫುಲೆಬಿ. ಶ್ರೀರಾಮುಲುಊಳಿಗಮಾನ ಪದ್ಧತಿಬಡ್ಡಿ ದರರಾಶಿಸಂಯುಕ್ತ ರಾಷ್ಟ್ರ ಸಂಸ್ಥೆಆಂಧ್ರ ಪ್ರದೇಶಪಠ್ಯಪುಸ್ತಕಪಂಚತಂತ್ರಅಂತರಜಾಲಶ್ರೀಧರ ಸ್ವಾಮಿಗಳುಧರ್ಮಸ್ಥಳರಗಳೆಕುಕ್ಕೆ ಸುಬ್ರಹ್ಮಣ್ಯ ದೇವಾಲಯನೀತಿ ಆಯೋಗಕನ್ನಡ ಸಂಧಿಶ್ಚುತ್ವ ಸಂಧಿಮಾನವ ಹಕ್ಕುಗಳುರಾಮಾಯಣಭಗವದ್ಗೀತೆಪಪ್ಪಾಯಿಕಲ್ಯಾಣ ಕರ್ನಾಟಕಅಮೇರಿಕ ಸಂಯುಕ್ತ ಸಂಸ್ಥಾನಎಸ್.ಎಲ್. ಭೈರಪ್ಪಗೊರೂರು ರಾಮಸ್ವಾಮಿ ಅಯ್ಯಂಗಾರ್ಬಾಹುಬಲಿಮಲೆಗಳಲ್ಲಿ ಮದುಮಗಳುಕರ್ಮಕವಿನುಗ್ಗೆಕಾಯಿಇಮ್ಮಡಿ ಪುಲಕೇಶಿಜನ್ನಭಾರತ ಸಂವಿಧಾನದ ಪೀಠಿಕೆಮೈಸೂರು🡆 More