ಉರಗಪಕ್ಷಿ

ಉರಗಪಕ್ಷಿ: ಉರಗವರ್ಗದ ಡೈಆಪ್ಸಿಡ ಉಪವರ್ಗದ ಟೀರೋಸಾರಿಯ ಗಣದ ಗತವಂಶೀ ಪ್ರಾಣಿಗಳು (ಟಿರೋಡಾಕ್ಟೈಲ್).

ಹಾರುವ ಉರಗ, ಪಕ್ಷಾಂಗುಲಿ-ಪರ್ಯಾಯ ನಾಮಗಳು. ಕೆಳ ಜುರಾಸಿಕ್ ಯುಗದಲ್ಲಿ ಆರಂಭವಾದ ಈ ಪ್ರಾಣಿಗಳು ಮೀಸೋಜೋಯಿಕ್ ಕಲ್ಪ ಕೊನೆಯವರೆಗೂ ಬಾಳಿದ್ದುದಕ್ಕೆ ಆಧಾರಗಳಿವೆ (ಸುಮಾರು 170-65 ದ. ಲ. ವ. ಪ್ರಾಚೀನಕಾಲ). ವಾಸ ಬೆಟ್ಟಗುಡ್ಡಗಳಲ್ಲಿ. ಇವನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದು ಗುಂಪಿನ ಉರಗಪಕ್ಷಿಗಳಿಗೆ ಉದ್ದವಾದ ಬಾಲ ಮತ್ತು ತುದಿಯಲ್ಲಿ ಸಮಾನಾಂತರವಾದ ರೆಕ್ಕೆ ಇದೆ. ಮತ್ತೊಂದು ಗುಂಪಿನವಕ್ಕೆ ಬಾಲವೂ ಇಲ್ಲ, ರೆಕ್ಕೆಯೂ ಇಲ್ಲ. ರ್ಹ್ಯಾಂಫೊರಿಂಕಸ್ ಟೀರೋಸಾರಿಯ ಗಣದ ಒಂದು ಜಾತಿ. ಇದರ ಜೀವಾವಶೇಷ ಇಂಗ್ಲೆಂಡಿನಲ್ಲಿ ಸಿಕ್ಕಿದೆ; ಚಿಕ್ಕದೇಹ-ಉದ್ದ 10 ಸೆಂ. ಮೀ. ಸುತ್ತಳತೆ 3.7 ಸೆಂ.ಮೀ. ತಲೆಯ ಉದ್ದ 8 ಸೆಂ.ಮೀ. ದೊಡ್ಡ ಬಾಯಿ ಅದರೊಳಗೆ ಉದ್ದ, ದಪ್ಪ ಮತ್ತು ಚೂಪು ಹಲ್ಲುಗಳು. ಕೆಳದವಡೆ ಕೂಡುವ ಸ್ಥಳದಿಂದ ಸ್ವಲ್ಪ ಮೇಲ್ಭಾಗದಲ್ಲಿ ಒಂದೊಂದು ದೊಡ್ಡ ಕಣ್ಣು ಇದೆ. ಅವುಗಳ ಸುತ್ತಲೂ ಪಕ್ಷಿಗಳಿಗಿರುವ ಹಾಗೆ ಸರದಂತೆ ಜೋಡಿಸಿದ ಎಲುಬಿನ ತಟ್ಟೆಗಳಿವೆ. ಕಣ್ಣುಗಳಿಗೆ ಸ್ವಲ್ಪ ದೂರದಲ್ಲಿ ಎರಡು ನಾಸಿಕ ರಂಧ್ರಗಳಿವೆ. 40 ಸೆಂ.ಮೀ. ಉದ್ದವುಳ್ಳ ಕತ್ತು ತಲೆಯನ್ನು ಇಕ್ಕೆಲಕ್ಕೂ ಬಾಗಿಸಲು ಅನುಕೂಲವಾಗಿತ್ತೆನ್ನಬಹುದು. ಉರಗಪಕ್ಷಿಯ ಬಾಲ ಮಾತ್ರ 40 ಸೆಂ.ಮೀ. ಉದ್ದವಿದ್ದು ಅನೇಕ ಅಸ್ಥಿ, ಸ್ನಾಯುಗಳ ಜೋಡಣೆಯಿಂದ ಗಡುಸಾಗಿತ್ತು. ಆದ್ದರಿಂದ ಇಡೀ ಬಾಲವೇ ಚಲಿಸಿರಬೇಕು ಎಂದು ಊಹಿಸಬಹುದು. ಚರ್ಮದ ಮಡಿಕೆಗಳಿಂದಾದ ಚಾಚಿದ ಪದರಗಳೇ ರೆಕ್ಕೆಗಳಾಗಿ ಮಾರ್ಪಟ್ಟಿದ್ದವು. ಇವು ಅತಿ ಉದ್ದನಾದ ಮುಂಗಾಲುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿವೆ. ಹರಡಿಕೊಂಡಾಗ ರೆಕ್ಕೆಗಳು 70 ಸೆಂ.ಮೀ ಗಳಷ್ಟು ಅಗಲವಾಗುತ್ತಿದ್ದವು. ರೆಕ್ಕೆಯ ಮುಂಭಾಗದ ಅಂಚಿನಲ್ಲಿ ಒಂದು ಬೆರಳು ಇದೆ. ರೆಕ್ಕೆಯ ಪದರ ಸುಮಾರು 5 ಸೆಂ.ಮೀ. ಅದಕ್ಕೆ ಮುಂಗಾಲಿನಿಂದ ಹಿಂಗಾಲಿನವರೆಗೂ ಶರೀರದ ಜೊತೆ ಸಂಬಂಧ ಇದೆ. ಬಾಲದ ತುದಿಯಲ್ಲಿ ಸಮಾನಂತರವಾದ ಒಂದು ಪದರವಿದೆ. ಮೊದಲ ಮೂರ ಕೈ ಬೆರಳುಗಳು ಬಿಡಿ ಬಿಡಿಯಾಗಿವೆಯಲ್ಲದೆ ಅವಕ್ಕೆ ಉದ್ದನಾದ ಉಗುರುಗಳಿವೆ. ಇವು ರೆಕ್ಕೆಯ ಮುಂಭಾಗದ ಹೊರಪಾಶರ್ವ್‌ದಲ್ಲಿದ್ದು ಆಹಾರ ಹಿಡಿಯಲು ಅಥವಾ ಹಾರಾಟದಿಂದ ಕೆಳಗೆ ಇಳಿಯಲು ಸಹಾಯ ಆಗಿದ್ದಿರಬೇಕು. ಮಂಡಿಯ ಚಿಪ್ಪು ದೇಹದಿಂದ ಹೊರಕ್ಕೆ ಚಾಚಿದೆ. ಉದ್ದನಾದ ಮೊಣಕಾಲಿನಲ್ಲಿ 5 ಕಾಲ್ಬೆರಳುಗಳಿವೆ. ಅವುಗಳಲ್ಲಿ ಒಂದು ಮಾತ್ರ ಯಾವಾಗಲೂ ಒಳಪಾಶರ್ವ್‌ಕ್ಕೂ ಕೆಳಕ್ಕೂ ಬಾಗಿರುತ್ತದೆ. ಉಳಿದ 4 ಬೆರಳುಗಳೂ ಪದರದಿಂದ ಬಂಧಿಸಲ್ಪಟ್ಟಿವೆ. ರ್ಹ್ಯಾಂಫೊರಿಂಕನ ದೇಹದ ಮೇಲೆ ಮೃದುವಾದ ಫಲಕರಹಿತ ಚರ್ಮದ ಹೊದಿಕೆ ಇದೆ. ಆದರೆ ತಲೆಯ ನೆತ್ತಿಯ ಮೇಲೆ ಗೊಂಚಲು ಕೂದಲಿನಂತಹ ಗಂಟುಗಳಿವೆ.

Pterosaurs
Temporal range: Late Triassic–Late Cretaceous, 228–66 Ma
PreꞒ
O
S
D
C
P
T
J
K
Pg
N
ಉರಗಪಕ್ಷಿ
Replica Geosternbergia sternbergi skeletons, female (left) and male (right)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಏಕಮೂಲ ವರ್ಗ: Ornithodira
ಏಕಮೂಲ ವರ್ಗ: Pterosauromorpha
Padian, 1997
ಗಣ: Pterosauria
Kaup, 1834
Subgroups
  • Preondactylus
  • Austriadactylus
  • Peteinosaurus
  • Eudimorphodontidae
  • Macronychoptera
    • Dimorphodon
    • Parapsicephalus
    • Novialoidea
ಉರಗಪಕ್ಷಿ
Restoration of two Scleromochlus on a tree

ಜೂರಾಸಿಕ್ ಕಲ್ಪದ ಗುಬ್ಬಚ್ಚಿಗಿಂಗಲೂ ದೊಡ್ಡವಲ್ಲದ ಪಕ್ಷಾಂಗುಲಿಗಳು ಬಾಲವಿಲ್ಲದ ಗುಂಪಿಗೆ ಸೇರಿವೆ. ಕ್ರಿಟೀಷಿಯಸ್ ಕಲ್ಪದಲ್ಲಿ ಬಾಲವುಳ್ಳ ಪಕ್ಷಾಂಗುಲಿ ವಂಶ ನಾಶವಾದರೂ ಅದರ ಸಂತತಿ ಮುಂದುವರಿದು ಅತ್ಯಧಿಕ ಗಾತ್ರವನ್ನು ತಾಳಿತು. ಇದೇ ಕಾನ್ಸಾಸ್ ಜಾಕಿನಲ್ಲಿ ಸಿಕ್ಕಿದ ಟಿರಾನೊಡಾನ್ (ಟೀರೋಸಾರಿನ ಒಂದ ಜಾತಿ). ಈ ಪ್ರಾಣಿಗೆ 18" ಉದ್ದದ ರೆಕ್ಕೆಯಿತ್ತು. ಅದರ ತಲೆಯ ಉದ್ದ 4". ಬಹುಶಃ ಪಕ್ಷಾಂಗುಲಿಗಳ ಪೈಕಿ ಇದೇ ಅತ್ಯಂತ ದೊಡ್ಡ ಪ್ರಾಣಿಯಾಗಿದ್ದಿರಬೇಕು. ದೇಹ ದೊಡ್ಡದಿದದರೂ ಶರೀರ ಮಾತ್ರ ಹಗುರವಾಗಿತ್ತು. ರೆಕ್ಕೆಯ ಎಲುಬುಗಳು ಬಲು ತೆಳುವಾದ ಪದರದಿಂದ ಕೂಡಿದ್ದುವು. ಅಲ್ಲದೆ ಅವಕ್ಕೆ 1"ನಷ್ಟು ವ್ಯಾಸದ ಗಾಳಿ ಅವಕಾಶವೂ ಇತ್ತು. ಕಾನ್ಸಾಸ್ ಮತ್ತು ಇಂಗ್ಲಿಷ್ ಚಾಕುಗಳಲ್ಲಿ ಸಿಕ್ಕಿರುವ ಪಳೆಯುಳಿಕೆಗಳ ಆಧಾರದ ಮೇರೆಗೆ ಅವು ಭೂಮಿಯಿಂದ ಸುಮಾರು ನೂರಾರು ಮೈಲಿದೂರ ಹಾರಿರಲು ಸಾಧ್ಯ ಎಂದು ಊಹಿಸಬಹುದು. ಈ ಪ್ರಾಣಿಯ ಮಿದುಳು ಪಕ್ಷಿಯ ಮಿದುಳಿನಷ್ಟಿತ್ತು. ಘ್ರಾಣೀಂದ್ರಿಯವಿರಲಿಲ್ಲವಾದ್ದರಿಂದ ದೃಷ್ಟಿಯ ಮೂಲಕವೇ ಅದು ಆಹಾರವನ್ನು ಗುರುತಿಸುತ್ತಿತ್ತೆನ್ನಬಹುದು .

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

ಉರಗಪಕ್ಷಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರಗಪಕ್ಷಿ

Tags:

🔥 Trending searches on Wiki ಕನ್ನಡ:

ಸಂಖ್ಯೆಜಾತ್ರೆರಾವಣಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಿದ್ಧಾಂತಸ್ವಾಮಿ ವಿವೇಕಾನಂದದ್ರಾವಿಡ ಭಾಷೆಗಳುರಾಮಾಯಣಇಮ್ಮಡಿ ಪುಲಿಕೇಶಿಸಮಾಜ ವಿಜ್ಞಾನಜೈಪುರಭಾರತದ ಮುಖ್ಯ ನ್ಯಾಯಾಧೀಶರುಬೆಳಗಾವಿಬಯಕೆಸುಕನ್ಯಾ ಮಾರುತಿಬಹುರಾಷ್ಟ್ರೀಯ ನಿಗಮಗಳುಎಸ್.ಎಲ್. ಭೈರಪ್ಪಸಮಾಜಶಾಸ್ತ್ರನಾಲತವಾಡಮೋಕ್ಷಗುಂಡಂ ವಿಶ್ವೇಶ್ವರಯ್ಯಪು. ತಿ. ನರಸಿಂಹಾಚಾರ್ಸಹಕಾರಿ ಸಂಘಗಳುಪುನೀತ್ ರಾಜ್‍ಕುಮಾರ್ಭೂತಾರಾಧನೆಉಡತ. ರಾ. ಸುಬ್ಬರಾಯದ್ವಿಮುಖಿ ಪದಗಳುವಾಯು ಮಾಲಿನ್ಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಗೋಲ ಗುಮ್ಮಟಬಳ್ಳಿಗಾವೆಕಬ್ಬುಇತಿಹಾಸಕರ್ನಾಟಕ ಹೈ ಕೋರ್ಟ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪರಿಸರ ವ್ಯವಸ್ಥೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಜೋಳಕಾಂತಾರ (ಚಲನಚಿತ್ರ)ಮದುವೆಮಾನ್ವಿತಾ ಕಾಮತ್ಭಾರತದಲ್ಲಿನ ಶಿಕ್ಷಣಇಂದಿರಾ ಗಾಂಧಿಹಣ್ಣುಭಾರತದ ಆರ್ಥಿಕ ವ್ಯವಸ್ಥೆಭರತನಾಟ್ಯಹ್ಯುಯೆನ್ ತ್ಸಾಂಗ್ಸಿಂಧೂತಟದ ನಾಗರೀಕತೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದುರ್ಗಸಿಂಹಕ್ರೈಸ್ತ ಧರ್ಮಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕನ್ನಡದಲ್ಲಿ ವಚನ ಸಾಹಿತ್ಯಕೂಲಿಚಂದ್ರಶೇಖರ ಕಂಬಾರಕನ್ನಡ ಕಾಗುಣಿತರಾಜ್ಯಸಭೆಜೋಗಗರ್ಭಪಾತಕಳಿಂಗ ಯುದ್ದ ಕ್ರಿ.ಪೂ.261ವೀರಗಾಸೆಚಾಣಕ್ಯಸೂರ್ಯ (ದೇವ)ಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕ ಸ್ವಾತಂತ್ರ್ಯ ಚಳವಳಿಶಿಶುನಾಳ ಶರೀಫರುಲಸಿಕೆಖ್ಯಾತ ಕರ್ನಾಟಕ ವೃತ್ತಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಇಂಡಿಯನ್ ಪ್ರೀಮಿಯರ್ ಲೀಗ್ಕನ್ನಡ ಸಂಧಿಚದುರಂಗದ ನಿಯಮಗಳುಭಾರತದ ಚುನಾವಣಾ ಆಯೋಗವಿಜಯ ಕರ್ನಾಟಕದ.ರಾ.ಬೇಂದ್ರೆಚಂದ್ರಮಲ್ಟಿಮೀಡಿಯಾ🡆 More