ಆಕಾರ

ಆಕಾರವು ಒಂದು ವಸ್ತುವಿನ ರೂಪ ಅಥವಾ ಅದರ ಬಾಹ್ಯ ಎಲ್ಲೆ, ಬಾಹ್ಯರೇಖೆ, ಅಥವಾ ಬಾಹ್ಯ ಮೇಲ್ಮೈ.

ಇದು ಬಣ್ಣ, ರಚನೆ, ಅಥವಾ ಭೌತಿಕ ಸಂಯೋಜನೆಯಂತಹ ಇತರ ಗುಣಲಕ್ಷಣಗಳಿಗೆ ವಿರುದ್ಧವಾಗಿದೆ.

ಆಕಾರ
ಆಕಾರದ ಭಿನ್ನ ವ್ಯಾಖ್ಯಾನಗಳ ಒಂದು ಉದಾಹರಣೆ

ಮಾನವರು ಮನಸ್ಸಿನಲ್ಲಿ ಚಿತ್ರಗಳನ್ನು ಜಿಯಾನ್‍ಗಳೆಂದು ಕರೆಯಲ್ಪಡುವ ಸರಳ ಜ್ಯಾಮಿತೀಯ ಆಕಾರಗಳಾಗಿ ವಿಭಜಿಸುತ್ತಾರೆ ಎಂದು ಮನೋವಿಜ್ಞಾನಿಗಳು ಸಿದ್ಧಾಂತಿಸಿದ್ದಾರೆ. ಜಿಯಾನ್‍ಗಳ ಉದಾಹರಣೆಗಳಲ್ಲಿ ಶಂಕುಗಳು ಮತ್ತು ಗೋಳಗಳು ಸೇರಿವೆ.

ಕೆಲವು ಸರಳ ಆಕಾರಗಳನ್ನು ವಿಶಾಲ ವರ್ಗಗಳಲ್ಲಿ ಇರಿಸಬಹುದು. ಉದಾಹರಣೆಗೆ, ಬಹುಭುಜಾಕೃತಿಗಳನ್ನು ಅವುಗಳ ಅಂಚುಗಳ ಸಂಖ್ಯೆಯ ಪ್ರಕಾರ ತ್ರಿಕೋನಗಳು, ಚತುರ್ಭುಜಗಳು, ಪಂಚಭುಜಗಳು, ಇತ್ಯಾದಿ ಎಂದು ವರ್ಗೀಕರಿಸಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದನ್ನು ಹೆಚ್ಚು ಚಿಕ್ಕ ವರ್ಗಗಳಾಗಿ ವಿಭಜಿಸಲಾಗುತ್ತದೆ. ತ್ರಿಕೋನಗಳು ಸಮಬಾಹು, ಸಮದ್ವಿಬಾಹು, ವಿಶಾಲ, ತೀವ್ರ, ಅಸಮಬಾಹು, ಇತ್ಯಾದಿ ಇರಬಹುದು. ಚತುರ್ಭುಜಗಳು ಆಯಾಕಾರಗಳು, ರಾಂಬಸ್‍ಗಳು, ವಿಷಮ ಚತುರಸ್ರಗಳು, ಚತುಷ್ಕೋನಗಳು, ಇತ್ಯಾದಿ ಇರಬಹುದು.

ಇತರ ಸಾಮಾನ್ಯ ಆಕಾರಗಳೆಂದರೆ ಬಿಂದುಗಳು, ರೇಖೆಗಳು, ಸಮತಲಗಳು ಮತ್ತು ದೀರ್ಘವೃತ್ತಗಳು, ವೃತ್ತಗಳು, ಮತ್ತು ಪರವಲಯಗಳಂತಹ ಶಂಕುಚ್ಛೇದಗಳು.

ಅತ್ಯಂತ ಸಾಮಾನ್ಯ ಮೂರು ಆಯಾಮದ ಆಕಾರಗಳಲ್ಲಿ ಸಮತಲ ಮುಖಗಳಿರುವ ಆಕಾರಗಳಾದ ಬಹುಮುಖ ಘನಾಕೃತಿಗಳು, ಅಂಡಾಕಾರದ ಅಥವಾ ಗೋಳಾಕಾರದ ವಸ್ತುಗಳಾದ ಅಂಡಾಭಗಳು, ಸಿಲಿಂಡರ್‍ಗಳು ಮತ್ತು ಶಂಕುಗಳು ಸೇರಿವೆ.

ಒಂದು ವಸ್ತುವು ಈ ವರ್ಗಗಳ ಪೈಕಿ ಒಂದರಲ್ಲಿ ನಿಖರವಾಗಿ ಅಥವಾ ಸರಿಸುಮಾರಾಗಿ ಕೂಡ ವರ್ಗೀಕರಿಸಲ್ಪಡುವುದಾದರೆ, ನಾವು ಅದನ್ನು ವಸ್ತುವಿನ ಆಕಾರವನ್ನು ವರ್ಣಿಸಲು ಬಳಸಬಹುದು. ಹೀಗೆ, ಆಳುಗುಂಡಿಯ ಮುಚ್ಚಳದ ಆಕಾರ ಡಿಸ್ಕ್ ಎಂದು ಹೇಳುತ್ತೇವೆ, ಏಕೆಂದರೆ ಅದು ಸರಿಸುಮಾರಾಗಿ ಒಂದು ವಾಸ್ತವಿಕ ಜ್ಯಾಮಿತೀಯ ಡಿಸ್ಕ್‌ಗೆ ಸಮಾನವಾದ ಜ್ಯಾಮಿತೀಯ ವಸ್ತುವಾಗಿದೆ.

ಎರಡು ವಸ್ತುಗಳ ಆಕಾರಗಳನ್ನು ಹೋಲಿಕೆ ಮಾಡಲು ಹಲವಾರು ಬಗೆಗಳಿವೆ: ಅನುರೂಪತೆ, ಸಮಾನರೂಪತೆ ಮತ್ತು ಸಮಸ್ಥಾನಿಕತೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಬಾದಾಮಿ ಶಾಸನಸಾಹಿತ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮಹಾಭಾರತಕರ್ಬೂಜಅರವಿಂದ ಘೋಷ್ಗೌತಮ ಬುದ್ಧಪ್ರಜ್ವಲ್ ರೇವಣ್ಣಟಿಪ್ಪು ಸುಲ್ತಾನ್ಕನ್ನಡದಲ್ಲಿ ಸಣ್ಣ ಕಥೆಗಳುಕರ್ನಾಟಕದ ತಾಲೂಕುಗಳುಜೈನ ಧರ್ಮಉತ್ತರ ಪ್ರದೇಶತತ್ತ್ವಶಾಸ್ತ್ರನರೇಂದ್ರ ಮೋದಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಯಕೃತ್ತುಪೂರ್ಣಚಂದ್ರ ತೇಜಸ್ವಿನಾಗಸ್ವರಶ್ರೀವಿಜಯಕಂಸಾಳೆಸಾವಿತ್ರಿಬಾಯಿ ಫುಲೆಕಾವ್ಯಮೀಮಾಂಸೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಲ್ಲಮ ಪ್ರಭುಚೆನ್ನಕೇಶವ ದೇವಾಲಯ, ಬೇಲೂರುತೆಲುಗುಮಂಗಳ (ಗ್ರಹ)ಶಿಕ್ಷಣಕೃಷ್ಣದೇವರಾಯರವಿಕೆದಾಸ ಸಾಹಿತ್ಯಭಾರತದ ಸ್ವಾತಂತ್ರ್ಯ ಚಳುವಳಿಭಾರತದಲ್ಲಿನ ಶಿಕ್ಷಣದ್ಯುತಿಸಂಶ್ಲೇಷಣೆಹುಲಿಬಿಳಿ ರಕ್ತ ಕಣಗಳುಸನ್ನಿ ಲಿಯೋನ್ಗಾದೆ ಮಾತುಕನ್ನಡ ಸಾಹಿತ್ಯ ಸಮ್ಮೇಳನನೀರುಅವರ್ಗೀಯ ವ್ಯಂಜನಗುಪ್ತ ಸಾಮ್ರಾಜ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಎಲೆಕ್ಟ್ರಾನಿಕ್ ಮತದಾನಆಟಿಸಂದಾವಣಗೆರೆಮುಖ್ಯ ಪುಟಬ್ಯಾಂಕ್ಕಲ್ಲಂಗಡಿಹಾಸನಕನ್ನಡದಲ್ಲಿ ಮಹಿಳಾ ಸಾಹಿತ್ಯಚಿತ್ರದುರ್ಗಕಲಿಯುಗನದಿಜಯಪ್ರಕಾಶ ನಾರಾಯಣಅಳತೆ, ತೂಕ, ಎಣಿಕೆಶಾಂತರಸ ಹೆಂಬೆರಳುಅಶ್ವತ್ಥಮರಕರ್ನಾಟಕದ ಶಾಸನಗಳುಸೀಮೆ ಹುಣಸೆಬಡತನಪಂಜುರ್ಲಿವಚನ ಸಾಹಿತ್ಯಕನ್ನಡ ಸಾಹಿತ್ಯ ಪರಿಷತ್ತುನವಿಲುಗೂಬೆಎಸ್.ಎಲ್. ಭೈರಪ್ಪಚದುರಂಗದ ನಿಯಮಗಳುಎ.ಎನ್.ಮೂರ್ತಿರಾವ್ಕನ್ನಡ ಅಕ್ಷರಮಾಲೆಎತ್ತಿನಹೊಳೆಯ ತಿರುವು ಯೋಜನೆಮಧ್ವಾಚಾರ್ಯಗೋವಿಂದ ಪೈರವೀಂದ್ರನಾಥ ಠಾಗೋರ್ದೇವರ/ಜೇಡರ ದಾಸಿಮಯ್ಯ🡆 More