ಅವಹಟ್ಠ ಭಾಷೆ

ಅವಹಟ್ಠ ಭಾಷೆ ಮಧ್ಯಕಾಲೀನ ಇಂಡೋ-ಆರ್ಯನ್ ಕೊನೆಯ ಹಂತವಾದ ಅಪಭ್ರಂಶಕ್ಕೆ ಪರ್ಯಾಯನಾಮ.

ಈ ಭಾಷೆ ಮತ್ತಷ್ಟು ಪ್ರಾಚೀನ ರೂಪವನ್ನು ಪ್ರತಿನಿಧಿಸುವ ಪ್ರಾಕೃತಗಳಂತಲ್ಲದೆ ಅಪಭ್ರಂಶ ಸಾಹಿತ್ಯ ಸ್ವರೂಪವನ್ನು ಪಡೆದಿತ್ತು. ಪುರ್ವದಲ್ಲಿ ಗಡಿಯಂಚಿನ ಕೆಲವು ಭೇದಗಳೊಡನೆ ಬಂಗಾಳದಿಂದ ಹಿಡಿದು ಪಶ್ಚಿಮದಲ್ಲಿ ಗುಜರಾತಿನವರೆಗೆ ಈ ಭಾಷೆಯನ್ನು ಬಳಸಲಾಗುತ್ತಿತ್ತು. ಸಂಸ್ಕೃತ ವಿದ್ಯಾವಂತರ ಸಾಹಿತ್ಯ ಭಾಷೆಯಾಗಿದ್ದರೆ ಅಪಭ್ರಂಶ ಅಕ್ಷರಸ್ಥರ (ಅಂತೆಯೇ ಅನಕ್ಷರಸ್ಥರ) ಸಾಹಿತ್ಯ ಭಾಷೆಯಾಗಿತ್ತು.

ಇತಿವೃತ್ತ

  • ಅಪಭ್ರಂಶದಲ್ಲಿ ಈ ಸಾಹಿತ್ಯ ಪರಂಪರೆ ಇದ್ದುದರಿಂದಲೇ ಆಧುನಿಕ ಇಂಡೋ-ಆರ್ಯನ್ ಭಾಷೆಗಳ (ಉತ್ತರ ಭಾರತದ ಆಧುನಿಕ ಭಾಷೆಗಳ) ಉಗಮದ ಅನಂತರವೂ ಅದು ಕೊನೆಯುಸಿರನ್ನೆಳೆಯಲಿಲ್ಲ. ಆದರೆ ಈ ಇಂಡೋ-ಆರ್ಯನ್ ಭಾಷೆಗಳ ಶಬ್ದರೂಪಗಳೂ ನುಡಿಗಟ್ಟುಗಳೂ ಈಚಿನ (1000-1500) ಅಪಭ್ರಂಶ ಕೃತಿಗಳಲ್ಲಿ ತಲೆದೋರಿವೆ: ಈ ಮಿಶ್ರ ಸಾಹಿತ್ಯ ಭಾಷೆಯನ್ನೇ ಅವಹಟ್ಠ ಎಂದು ಕೆಲವು ಲೇಖಕರು ಕರೆದಿದ್ದಾರೆ. ಸಂಸ್ಕೃತದ ಅಪಭ್ರಷ್ಟ (ಬಿದ್ದ ಎಂದು ಅರ್ಥ) ಎಂಬ ಶಬ್ದವೇ ಇದಕ್ಕೆ ಮೂಲ. ಅಪಭ್ರಂಶ ಎಂಬುದಕ್ಕೆ ಇದು ಪರ್ಯಾಯ ಶಬ್ದ.
  • ರಹಸ್ಯ ಧಾರ್ಮಿಕ ಪಂಥಗಳ (ಗೂಢ ಬೌದ್ಧ ಧರ್ಮ ಮತ್ತು ತಾಂತ್ರಿಕ ಶೈವಧರ್ಮ) ಕೆಲವು ಆಚಾರ್ಯರು ಹಾಡುಗಳನ್ನು, ಉಪದೇಶಾತ್ಮಕ ಪದಗಳನ್ನು ಅವಹಟ್ಠ ಭಾಷೆಯಲ್ಲಿ ರಚಿಸಿದ್ದಾರೆ. ಸರಹನ (1000) ದೋಹಾಕೋಶ ಮತ್ತು ಕಹ್ನ (1200 ಕ್ಕಿಂತಲೂ ಹಿಂದೆ) ಮತ್ತು ಪಹುದ ದೋಹಗಳಲ್ಲಿ (1400) ಇವು ಕಂಡುಬರುತ್ತವೆ. ಪ್ರೇಮಚಂದ್ರನ ಪ್ರಾಕೃತ ವ್ಯಾಕರಣದ ಕೊನೆಯ ಅಧ್ಯಾಯದಲ್ಲಿ ಧಾರ್ಮಿಕ ಆಶಯವನ್ನುಳ್ಳ ಹಲವಾರು ಪದ್ಯಗಳು ಉದಾಹೃತವಾಗಿವೆ.
  • 15ನೆಯ ಶತಮಾನದಲ್ಲಿ ರಚಿತವಾದ ಅವಹಟ್ಠ ಛಂದೋ ರೂಪಗಳ ಸಂಕಲನ ಗ್ರಂಥವಾದ ಪ್ರಾಕೃತ ಪೈಂಗಳದಲ್ಲಿ ನಾನಾ ಪ್ರಕಾರದ ಅವಹಟ್ಠ ಕಾವ್ಯದ ಉತ್ತಮ ಸಂಗ್ರಹ ಕಾಣದೊರೆಯುತ್ತದೆ. ಅವಹಟ್ಠ ಭಾಷೆಯಲ್ಲಿ ರಚಿತವಾದ ಕೊನೆಯ ಪ್ರಮುಖ ಕೃತಿ ವಿದ್ಯಾಪತಿಯ ಕೀರ್ತಿಲತಾ ಚಂಪುರೂಪದಲ್ಲಿ ಬರೆದ ಇತಿಹಾಸ ಕಾವ್ಯ; ಲೇಖಕ ಮಿಥಿಲಾ ಪ್ರಾಂತ್ಯದ ಪ್ರಖ್ಯಾತನಾದೊಬ್ಬ ಕವಿ (15ನೆಯ ಶತಮಾನ). ಆತ ತನ್ನ ಸಂಸ್ಕೃತ ಭಾಷಾಪಾಂಡಿತ್ಯದಿಂದ ಪ್ರಾಂತೀಯ ಭಾಷೆಯಾದ ಮೈಥಿಲಿಯಲ್ಲಿ ರಚಿಸಿದ್ದ ಗೀತೆಗಳಿಂದಾಗಿ ಅತ್ಯಂತ ಪ್ರಖ್ಯಾತನಾಗಿದ್ದ.

ಬಾಹ್ಯ ಸಂಪರ್ಕಗಳು

ಅವಹಟ್ಠ ಭಾಷೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಪ್ರಾಕೃತಬಂಗಾಳಸಂಸ್ಕೃತ

🔥 Trending searches on Wiki ಕನ್ನಡ:

ಹಿಪ್ಪಲಿರಾಗಿಕ್ಯಾನ್ಸರ್ಕಮಲಮಂತ್ರಾಲಯನಾಟಕಪ್ರಬಂಧಕಪ್ಪೆ ಅರಭಟ್ಟಶಾಸಕಾಂಗಶುಕ್ರಜಿ.ಪಿ.ರಾಜರತ್ನಂಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಾಣಕ್ಯಕಾರ್ಯಾಂಗಅಸ್ಪೃಶ್ಯತೆಭಾರತದ ಮುಖ್ಯಮಂತ್ರಿಗಳುಮೈಸೂರು ಸಂಸ್ಥಾನನವಿಲುಕೋಸುಗೋಲ ಗುಮ್ಮಟನೆಲ್ಸನ್ ಮಂಡೇಲಾಅಂಗವಿಕಲತೆಶೂದ್ರ ತಪಸ್ವಿಚಂಪೂಗೋವಿಂದ ಪೈಸಮುಚ್ಚಯ ಪದಗಳುಕರ್ನಾಟಕದ ಜಾನಪದ ಕಲೆಗಳುಸೂರ್ಯತಿಪಟೂರುಗುರುನಾನಕ್ಟೊಮೇಟೊಭಾರತದಲ್ಲಿ ಪರಮಾಣು ವಿದ್ಯುತ್ದೇವನೂರು ಮಹಾದೇವಅಂಜೂರಎಸ್.ಜಿ.ಸಿದ್ದರಾಮಯ್ಯಬಾರ್ಬಿಕನ್ನಡ ಸಾಹಿತ್ಯಹೆಚ್.ಡಿ.ದೇವೇಗೌಡಮೊದಲನೆಯ ಕೆಂಪೇಗೌಡಚನ್ನವೀರ ಕಣವಿಪತ್ರಿಕೋದ್ಯಮಕಾಡ್ಗಿಚ್ಚುಚೋಳ ವಂಶಸಾರಾ ಅಬೂಬಕ್ಕರ್ಸಾಮವೇದವಿಷ್ಣುಕಾಗೆಸಂಸ್ಕೃತಿನಿಜಗುಣ ಶಿವಯೋಗಿಪುರಾತತ್ತ್ವ ಶಾಸ್ತ್ರಕನ್ನಡ ವ್ಯಾಕರಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕುರಿನ್ಯೂಟನ್‍ನ ಚಲನೆಯ ನಿಯಮಗಳುಎ.ಪಿ.ಜೆ.ಅಬ್ದುಲ್ ಕಲಾಂಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಸಂವಿಧಾನ ರಚನಾ ಸಭೆಸಂಖ್ಯಾಶಾಸ್ತ್ರಚೀನಾದ ಇತಿಹಾಸಭಾರತದಲ್ಲಿನ ಶಿಕ್ಷಣಮುಮ್ಮಡಿ ಕೃಷ್ಣರಾಜ ಒಡೆಯರುವಿಧಾನ ಪರಿಷತ್ತುಮಹಾವೀರಕನ್ನಡ ಗುಣಿತಾಕ್ಷರಗಳುಎಚ್ ನರಸಿಂಹಯ್ಯಕಂದಸಂಶೋಧನೆಚಂದ್ರಗುಪ್ತ ಮೌರ್ಯಕನ್ನಡ ಸಂಧಿಪ್ಯಾರಿಸ್ತತ್ಸಮದೇವರ/ಜೇಡರ ದಾಸಿಮಯ್ಯವಿರಾಮ ಚಿಹ್ನೆಬಿ. ಜಿ. ಎಲ್. ಸ್ವಾಮಿಮರಜಲ ಚಕ್ರಶಿವನ ಸಮುದ್ರ ಜಲಪಾತಧ್ವನಿಶಾಸ್ತ್ರಮಾನವ ಸಂಪನ್ಮೂಲ ನಿರ್ವಹಣೆಮಗುವಿನ ಬೆಳವಣಿಗೆಯ ಹಂತಗಳು🡆 More